Site icon Vistara News

IND vs AUS T20: ಸುದ್ದಿಗೋಷ್ಠಿಯಲ್ಲಿ ಸೂರ್ಯಕುಮಾರ್​ಗೆ ಭಾರಿ ಮುಜುಗರ

suryakumar yadav press conference

ವಿಶಾಖಪಟ್ಟಣ: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ(IND vs AUS T20) ಟಿ20 ಸರಣಿಯ ಮೊದಲ ಪಂದ್ಯ(India vs Australia, 1st T20I) ಇಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾದ ಹಂಗಾಮಿ ನಾಯಕ ಸೂರ್ಯಕುಮಾರ್​ ಯಾದವ್​ಗೆ(Suryakumar Yadav) ಭಾರಿ ಮುಜುಗರ ಉಂಟಾಗಿದೆ. ಸುದ್ದಿಗೋಷ್ಠಿಯಲ್ಲಿ(Press Conference) ಕೇವಲ 2 ಮಂದಿ ಮಾತ್ರ ಪತ್ರಕರ್ತರು ಹಾಜರಿದ್ದರು. ಇದರಿಂದ ಸೂರ್ಯಕುಮಾರ್​ಗೆ ಮುಜುಗರವಾಗಿದೆ.

ಪಂದ್ಯ ಆರಂಭಕ್ಕೂ ಮುನ್ನ ತಂಡದ ನಾಯಕ ಸೂರ್ಯಕುಮಾರ್​ ಅವರು ಈ ಸರಣಿಯ ಸಿದ್ಧತೆ ಮತ್ತು ತಂಡದ ಬಗ್ಗೆ ಮಾತನಾಡಲು ಸುದ್ದಿಗೋಷ್ಠಿಗೆ ಬಂದಿದ್ದರು. ಆದರೆ, ಇಲ್ಲಿ ಬಂದು ನೋಡಿದರೆ ಕೇವಲ 2 ಮಂದಿ ಪತ್ರಕರ್ತರು ಮಾತ್ರ ಪಾಲ್ಗೊಂಡಿದ್ದರು. ಇದನ್ನು ಕಂಡ ಸೂರ್ಯ ಒಂದು ಕ್ಷಣ ಮುಜುಗರಕ್ಕೆ ಒಳಗಾದರು. ಆದರೂ ಕೂಡ ಸುದ್ದಿಗೋಷ್ಠಿಯಲ್ಲಿ ಕೆಲ ಪ್ರಶ್ನೆಗೆ ಉತ್ತರಿಸಿದರು.

ಈ ಸುದ್ದಿಗೋಷ್ಠಿಗೆ ಕೇವಲ 2 ಮಂದಿ ಪತ್ರಕರ್ತರು ಬಂದ ವಿಚಾರವನ್ನು ಹಿರಿಯ ಪತ್ರಕರ್ತರಾದ ವಿಮಲ್ ಕುಮಾರ್ ಅವರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಸೂರ್ಯಕುಮಾರ್​ ಅವರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ಫೋಟೊವನ್ನು ಹಾಕಿ, ”ವಿಶ್ವಕಪ್ ಸಮಯದಲ್ಲಿ 200ಕ್ಕೂ ಅಧಿಕ ಮಾಧ್ಯಮಗಳು ಭಾರತದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದವು. ಆದರೆ, ಇಲ್ಲಿ ಕೇವಲ ಇಬ್ಬರು ಪತ್ರಕರ್ತರು ಮಾತ್ರ ಇದ್ದಾರೆ. ಸೂರ್ಯಕುಮಾರ್ ನಾಯಕನಾಗಿ ಅವರ ಮೊದಲ ಸುದ್ದಿಗೋಷ್ಠಿಯಲ್ಲಿ ಇದನ್ನು ಊಹಿಸಿರಲಿಲ್ಲ. ಇದು ಟೀಮ್ ಇಂಡಿಯಾ ಪತ್ರಿಕಾಗೋಷ್ಠಿಗೆ ಅತಿ ಕಡಿಮೆ ಪತ್ರಕರ್ತರು ಬಂದ ದಾಖಲೆಯೇ?, ನಾನು ನೋಡಿದ ಹಾಗೆ ಇದು ಹೌದು ಎನಿಸುತ್ತದೆ” ಎಂದು ವಿಮಲ್ ಕುಮಾರ್ ಬರೆದಿದ್ದಾರೆ.

ಇದನ್ನೂ ಓದಿ IND vs AUS T20: ವಿಶ್ವ ಚಾಂಪಿಯನ್ನರಿಗೆ ಸವಾಲೊಡ್ಡೀತೇ ಯಂಗ್​ ಟೀಮ್ ಇಂಡಿಯಾ?

ಸುದ್ದಿಗೋಷ್ಠಿಯಲ್ಲಿ ಹೆಚ್ಚಿನ ಪತ್ರಕರ್ತರು ಪಾಲ್ಗೊಳ್ಳದಿರಲು ಕಾರಣವೂ ಇದೆ. ಮೊದಲನೆಯದಾಗಿ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲು ಕಂಡದ್ದು., ಇನ್ನೊಂದು ಕಾರಣ ಈ ಸರಣಿಯಲ್ಲಿ ಯಾವುದೇ ಸ್ಟಾರ್​ ಆಟಗಾರರು ಭಾರತ ತಂಡದಲ್ಲಿ ಇರದೇ ಇರುವುದು. ಮತ್ತು ಅಭಿಮಾನಿಗಳಿಗೂ ಯಾವುದೇ ಜೋಶ್​ ಇಲ್ಲ. ಜತೆಗೆ ಈ ಸರಣಿ ಅಷ್ಟೊಂದು ಮಹತ್ವ ಪಡೆದಿಲ್ಲ. ಇದೇ ಕಾರಣಕ್ಕೆ ಪತ್ರಕರ್ತರು ಪಾಲ್ಗೊಳ್ಳದಿರಲು ಕಾರಣವಿರಬಹುದು.

ವಿಶ್ವಕಪ್​ ಸೋಲಿನಿಂದ ಹೊರಬರಲು ಸಮಯ ಬೇಕು

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್​, ವಿಶ್ವಕಪ್‌ ಸೋಲಿನಿಂದ ಹೊರಬರುಲು ಸಮಯ ಬೇಕು. ಸದ್ಯಕ್ಕೆ ಹೊಸ ತಂಡ ಮುನ್ನಡೆಸಲು ನಾನು ಉತ್ಸುಕನಾಗಿದ್ದೇನೆ. ಯುವ ಆಟಗಾರರಿಗೆ ಈ ಸರಣಿಯಲ್ಲಿ ಒತ್ತಡರಹಿತವಾಗಿ ಮತ್ತು ಧೈರ್ಯದಿಂದ ಕ್ರಿಕೆಟ್ ಆಡುವಂತೆ ಕಿವಿಮಾತು ಹೇಳಿದ್ದೇನೆ. ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ನಾವು ಉತ್ತಮ ಕ್ರಿಕಟ್​ ಆಡಲು ಪ್ರಯತ್ನಿಸುತ್ತೇವೆ” ಎಂದು ಹೇಳಿದರು.

Exit mobile version