Site icon Vistara News

Women’s IPL | ಮಹಿಳೆಯರ ಐಪಿಎಲ್​ನಲ್ಲಿ ಐದು ವಿದೇಶಿ ಆಟಗಾರರಿಗೆ ಅವಕಾಶ ನೀಡಿದ ಬಿಸಿಸಿಐ

IPLw

ಮುಂಬಯಿ : ಉದ್ಘಾಟನಾ ಆವೃತ್ತಿಯ ಮಹಿಳೆಯರ ಐಪಿಎಲ್​ನ ತಂಡವೊಂದರಲ್ಲಿ ಐದು ವಿದೇಶಿ ಆಟಗಾರರಿಗೆ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಪುರುಷರ ಐಪಿಎಲ್​ನಲ್ಲಿ ನಾಲ್ಕು ಆಟಗಾರರಿಗೆ ಮಾತ್ರ ಅವಕಾಶ ಇದ್ದು, ಮಹಿಳೆಯರ ತಂಡಕ್ಕೆ ಈ ವಿಚಾರದಲ್ಲಿ ಸ್ವಲ್ಪ ವಿನಾಯಿತಿ ನೀಡಲಾಗಿದೆ ಎಂಬುದಾಗಿ ವರದಿಯಾಗಿದೆ.

ತಂಡವೊಂದು ಆಟಗಾರರ ಖರೀದಿಗೆ ಹಾಲಿ ಆವೃತ್ತಿಯಲ್ಲಿ ಗರಿಷ್ಠ 12 ಕೋಟಿ ರೂಪಾಯಿ ವಿನಿಯೋಗ ಮಾಡಬಹುದು. ಮುಂದಿನ ಐದು ವರ್ಷಗಳ ಕಾಲ ವರ್ಷದಲ್ಲಿ 1.5 ಕೋಟಿ ರೂಪಾಯಿ ಗರಿಷ್ಠ 18 ಕೋಟಿ ರೂಪಾಯಿ ತನಕ ಏರಿಕೆ ಮಾಡಲು ಅವಕಾಶ ನೀಡಲಾಗಿದೆ.

ಐದು ವಿದೇಶಿ ಆಟಗಾರರು ಏಕಕಾಲಕ್ಕೆ ತಂಡವೊಂದರಲ್ಲಿ ಆಡಬಹುದಾಗಿದ್ದರೂ, ಐದನೇ ಆಟಗಾರ್ತಿ ಬಿಸಿಸಿಐ ನ ಸಹಯೋಗ ಸಂಸ್ಥೆಯ ಸದಸ್ಯರಾಗಿರಬೇಕಾಗುತ್ತದೆ. ಬಿಸಿಸಿಐ ಇತ್ತೀಚೆಗೆ ಮಹಿಳೆಯರ ಐಪಿಎಲ್​ನ ನೇರ ಪ್ರಸಾರದ ಹಕ್ಕನ್ನು 950 ಕೋಟಿ ರೂಪಾಇಗೆ ವಾಕಾಮ್​ ಸಂಸ್ಗೆ ಮಾರಾಡ ಮಾಡಿತ್ತು.

ಈ ಬಾರಿ ಪಿಎಲ್​ಗೆ ಒಟ್ಟು 10 ಕೋಟಿ ರೂಪಾಇ ಬಹುಮಾನ ಮೊ ನಿಗದಿ ಮಾಡಲಾಗಿದೆ. ಚಾಂಪಿಯನ್​ ತಂಡಕ್ಕೆ 6 ಕೋಟಿ ರೂಪಾಯಿ, ರನ್ನರ್​ ಅಪ್​ಗೆ 3 ಕೋಟಿ ರೂಪಾಯಿ ಹಾಗೂ ಮೂರನೇ ತಂಡಕ್ಕೆ 1 ಕೋಟಿ ರೂಪಾಯಿ ಸಿಗಲಿದೆ.

ಇದನ್ನೂ ಓದಿ | Women’s IPL | ಚೊಚ್ಚಲ ಆವೃತ್ತಿಯ ಮಹಿಳೆಯರ ಐಪಿಎಲ್​ ಆಡುವ ನಿರೀಕ್ಷೆಯಲ್ಲಿ ಮಿಥಾಲಿ ರಾಜ್​, ಜೂಲನ್ ಗೋಸ್ವಾಮಿ!

Exit mobile version