Women's IPL | ಮಹಿಳೆಯರ ಐಪಿಎಲ್​ನಲ್ಲಿ ಐದು ವಿದೇಶಿ ಆಟಗಾರರಿಗೆ ಅವಕಾಶ ನೀಡಿದ ಬಿಸಿಸಿಐ - Vistara News

ಕ್ರಿಕೆಟ್

Women’s IPL | ಮಹಿಳೆಯರ ಐಪಿಎಲ್​ನಲ್ಲಿ ಐದು ವಿದೇಶಿ ಆಟಗಾರರಿಗೆ ಅವಕಾಶ ನೀಡಿದ ಬಿಸಿಸಿಐ

ಉದ್ಘಾಟನಾ ಅವೃತ್ತಿಯ ಮಹಿಳೆಯರ ಐಪಿಎಲ್​ನ (Women’s IPL) ಚಾಂಪಿಯನ್ ತಂಡಕ್ಕೆ 6 ಕೋಟಿ ರೂಪಾಯಿ ಬಹುಮಾನ ದೊರೆಯಲಿದೆ.

VISTARANEWS.COM


on

IPLw
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ : ಉದ್ಘಾಟನಾ ಆವೃತ್ತಿಯ ಮಹಿಳೆಯರ ಐಪಿಎಲ್​ನ ತಂಡವೊಂದರಲ್ಲಿ ಐದು ವಿದೇಶಿ ಆಟಗಾರರಿಗೆ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಪುರುಷರ ಐಪಿಎಲ್​ನಲ್ಲಿ ನಾಲ್ಕು ಆಟಗಾರರಿಗೆ ಮಾತ್ರ ಅವಕಾಶ ಇದ್ದು, ಮಹಿಳೆಯರ ತಂಡಕ್ಕೆ ಈ ವಿಚಾರದಲ್ಲಿ ಸ್ವಲ್ಪ ವಿನಾಯಿತಿ ನೀಡಲಾಗಿದೆ ಎಂಬುದಾಗಿ ವರದಿಯಾಗಿದೆ.

ತಂಡವೊಂದು ಆಟಗಾರರ ಖರೀದಿಗೆ ಹಾಲಿ ಆವೃತ್ತಿಯಲ್ಲಿ ಗರಿಷ್ಠ 12 ಕೋಟಿ ರೂಪಾಯಿ ವಿನಿಯೋಗ ಮಾಡಬಹುದು. ಮುಂದಿನ ಐದು ವರ್ಷಗಳ ಕಾಲ ವರ್ಷದಲ್ಲಿ 1.5 ಕೋಟಿ ರೂಪಾಯಿ ಗರಿಷ್ಠ 18 ಕೋಟಿ ರೂಪಾಯಿ ತನಕ ಏರಿಕೆ ಮಾಡಲು ಅವಕಾಶ ನೀಡಲಾಗಿದೆ.

ಐದು ವಿದೇಶಿ ಆಟಗಾರರು ಏಕಕಾಲಕ್ಕೆ ತಂಡವೊಂದರಲ್ಲಿ ಆಡಬಹುದಾಗಿದ್ದರೂ, ಐದನೇ ಆಟಗಾರ್ತಿ ಬಿಸಿಸಿಐ ನ ಸಹಯೋಗ ಸಂಸ್ಥೆಯ ಸದಸ್ಯರಾಗಿರಬೇಕಾಗುತ್ತದೆ. ಬಿಸಿಸಿಐ ಇತ್ತೀಚೆಗೆ ಮಹಿಳೆಯರ ಐಪಿಎಲ್​ನ ನೇರ ಪ್ರಸಾರದ ಹಕ್ಕನ್ನು 950 ಕೋಟಿ ರೂಪಾಇಗೆ ವಾಕಾಮ್​ ಸಂಸ್ಗೆ ಮಾರಾಡ ಮಾಡಿತ್ತು.

ಈ ಬಾರಿ ಪಿಎಲ್​ಗೆ ಒಟ್ಟು 10 ಕೋಟಿ ರೂಪಾಇ ಬಹುಮಾನ ಮೊ ನಿಗದಿ ಮಾಡಲಾಗಿದೆ. ಚಾಂಪಿಯನ್​ ತಂಡಕ್ಕೆ 6 ಕೋಟಿ ರೂಪಾಯಿ, ರನ್ನರ್​ ಅಪ್​ಗೆ 3 ಕೋಟಿ ರೂಪಾಯಿ ಹಾಗೂ ಮೂರನೇ ತಂಡಕ್ಕೆ 1 ಕೋಟಿ ರೂಪಾಯಿ ಸಿಗಲಿದೆ.

ಇದನ್ನೂ ಓದಿ | Women’s IPL | ಚೊಚ್ಚಲ ಆವೃತ್ತಿಯ ಮಹಿಳೆಯರ ಐಪಿಎಲ್​ ಆಡುವ ನಿರೀಕ್ಷೆಯಲ್ಲಿ ಮಿಥಾಲಿ ರಾಜ್​, ಜೂಲನ್ ಗೋಸ್ವಾಮಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Sportsmanship : ಭಾರತದವರನ್ನೇ ಸೋಲಿಸಿ ತ್ರಿವರ್ಣ ಧ್ವಜವನ್ನೂ ಎತ್ತಿ ಹಿಡಿದ ಪಾಕ್ ಕರಾಟೆ ಪಟು!

Sportsmanship: ಈ ಸ್ಪರ್ಧೆಗಿಂತ ಹೆಚ್ಚಾಗಿ, ಶಹಜೈಬ್ ಅವರ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆ ವಿಷಯವಾಯಿತು. ಯಾಕೆಂದರೆ ತಾವು ಗೆದ್ದ ಬಳಿಕ ಅವರು ತಮ್ಮ ದೇಶದ್ದು ಮಾತ್ರವಲ್ಲದೆ ಭಾರತದ ತ್ರಿವರ್ಣಧ್ವಜವನ್ನೂ ಎತ್ತಿ ಹಿಡಿದಿದ್ದರು. ಇದು ಅಲ್ಲಿದ್ದವರೆಲ್ಲರನ್ನೂ ಅಚ್ಚರಿಗೆ ಒಳಗಾಗಿಸಿತು. ಪಂದ್ಯದ ನಿರೂಪಕ ಕೂಡ ಅವರ ನಡೆಯ ಹಿಂದಿನ ಕಾರಣವನ್ನು ಕೇಳದೆ ಇರಲು ಸಾಧ್ಯವಾಗಲಿಲ್ಲ.

VISTARANEWS.COM


on

Sportsmanship
Koo

ಬೆಂಗಳೂರು: ಕ್ರೀಡಾ ವೇದಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಸರ್ಧೆಗಳು ಅಪರೂಪ. ಆದರೆ ಉಭಯ ರಾಷ್ಟ್ರಗಳ ಕ್ರೀಡಾಪಟುಗಳು ಪರಸ್ಪರ ಭೇಟಿಯಾದಾಗಲೆಲ್ಲಾ ತೀವ್ರ ಸ್ಪರ್ಧೆ ಏರ್ಪಡುತ್ತದೆ. ಶನಿವಾರ ನಡೆದ ಕರಾಟೆ ಸ್ಪರ್ಧೆಯಲ್ಲಿ ಭಾರತದ ರಾಣಾ ಸಿಂಗ್ ಮತ್ತು ಪಾಕಿಸ್ತಾನದ ಶಹಜೈಬ್ ರಿಂಧ್ ಪರಸ್ಪರ ಮುಖಾಮುಖಿಯಾದಾಗ ಇದೇ ಸನ್ನಿವೇಶವಿತ್ತು. ತೀವ್ರವಾದ ಹೋರಾಟದಲ್ಲಿ ಪಾಕಿಸ್ತಾನದ ಅಥ್ಲೀಟ್ 2-1 ಅಂತರದಿಂದ ವಿಜಯಶಾಲಿಯಾಗಿ ಹೊರಹೊಮ್ಮಿದರು. ಗೆಲುವಿನ ಬಳಿಕ ಗೆದ್ದವರು ಸಂಭ್ರಮಿಸುವುದು ಮಾಮೂಲಿ. ಅದಲ್ಲೂ ಇಂಥ ಸ್ಪರ್ಧೆಗಳಲ್ಲಿ ಇನ್ನಷಟು ಜಿದ್ದು ಇರುತ್ತದೆ. ಆದರೆ ಈ ಪಂದ್ಯದ ಬಳಿಕ ಕ್ರೀಡಾಸ್ಫೂರ್ತಿಯ (Sportsmanship)ಪ್ರಸಂಗ ನಡೆಯಿತು.

ಈ ಸ್ಪರ್ಧೆಗಿಂತ ಹೆಚ್ಚಾಗಿ, ಶಹಜೈಬ್ ಅವರ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆ ವಿಷಯವಾಯಿತು. ಯಾಕೆಂದರೆ ತಾವು ಗೆದ್ದ ಬಳಿಕ ಅವರು ತಮ್ಮ ದೇಶದ್ದು ಮಾತ್ರವಲ್ಲದೆ ಭಾರತದ ತ್ರಿವರ್ಣಧ್ವಜವನ್ನೂ ಎತ್ತಿ ಹಿಡಿದಿದ್ದರು. ಇದು ಅಲ್ಲಿದ್ದವರೆಲ್ಲರನ್ನೂ ಅಚ್ಚರಿಗೆ ಒಳಗಾಗಿಸಿತು. ಪಂದ್ಯದ ನಿರೂಪಕ ಕೂಡ ಅವರ ನಡೆಯ ಹಿಂದಿನ ಕಾರಣವನ್ನು ಕೇಳದೆ ಇರಲು ಸಾಧ್ಯವಾಗಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಹಜೈಬ್, “ಈ ಸ್ಪರ್ಧೆಯು ಶಾಂತಿಗಾಗಿತ್ತು. ನಾವು ಶತ್ರುಗಳಲ್ಲ, ಒಟ್ಟಿಗೆ ಇದ್ದೇವೆ. ಒಟ್ಟಾಗಿ ನಾವು ಏನು ಬೇಕಾದರೂ ಮಾಡಬಹುದು. ಈ ಹೋರಾಟವು ಪಾಕಿಸ್ತಾನ ಮತ್ತು ಭಾರತದ ಸ್ನೇಹಕ್ಕಾಗಿ ಮತ್ತು ಹತ್ತಿರವಾಗಲು” ಎಂದು ಅವರು ಹೇಳಿದ್ದರು.

ಇದನ್ನೂ ಓದಿ: IPL 2024 : ಕೆಕೆಆರ್​ ವಿರುದ್ಧ ಆರ್​​ಸಿಬಿ ವೀರೋಚಿತ 1 ರನ್​ ಸೋಲು; ಫಾಫ್​ ಬಳಗಕ್ಕೆ ಏಳನೇ ಮುಖಭಂಗ

ಇಲ್ಲಿಗೆ ಇಲ್ಲಿಗೆ ಬಂದಿದ್ದಕ್ಕಾಗಿ ನಾನು ಸಲ್ಮಾನ್ ಖಾನ್ ಅವರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನ್ನ ಸೂಪರ್ ಸ್ಟಾರ್. ನಾನು ಬಾಲ್ಯದಿಂದಲೂ ನಿಮ್ಮ ಚಲನಚಿತ್ರಗಳನ್ನು ನೋಡುತ್ತಿದ್ದೇನೆ. ನಿಮ್ಮ ಮುಂದೆ ಹೋರಾಡಲು ಸಂತೋಷವಾಗಿದೆ. ಧನ್ಯವಾದಗಳು, “ಎಂದು ಅವರು ಹೇಳಿದರು. ಈ ಸ್ಪರ್ಧೆಯ ವೇಳೆ ಸಲ್ಮಾನ್ ಖಾನ್ ಅಲ್ಲಿ ಹಾಜರಿದ್ದರು.

ನಂತರ ಶಹಜೈಬ್ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ಮಾತುಕತೆ ನಡೆಸುವ ಅವಕಾಶವನ್ನು ಪಡೆದರು. ಅವರು ಕ್ರೀಡಾಪಟುವಿನ ಅದ್ಭುತ ನಡೆಗಾಗಿ ಅವರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

IPL 2024 : ಕೆಕೆಆರ್​ ವಿರುದ್ಧ ಆರ್​​ಸಿಬಿ ವೀರೋಚಿತ 1 ರನ್​ ಸೋಲು; ಫಾಫ್​ ಬಳಗಕ್ಕೆ ಏಳನೇ ಮುಖಭಂಗ

IPL 2024 : ಮೊದಲು ಬ್ಯಾಟ್ ಮಾಡಿದ ಕೆಕೆಆರ್​ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 222 ರನ್ ಬಾರಿಸಿತು. ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಆರ್​ಸಿಬಿ ತಂಡ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 221 ರನ್​ಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಕೆಕೆಆರ್ ತಂಡ ಗೆಲುವಿನ ಹಳಿಗೆ ಮರಳಿತು.

VISTARANEWS.COM


on

IPL 2024
Koo

ಕೋಲ್ಕೊತಾ: ಮತ್ತೊಂದು ಬಾರಿ ಎಲ್ಲ ಹಂತದಲ್ಲೂ ಕಳಪೆ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್​ 17ನೇ ಆವೃತ್ತಿಯ 36ನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ವಿರುದ್ಧ ವೀರೋಚಿತ 1 ರನ್​ ಸೋಲಿಗೆ ಒಳಗಾಗಿದೆ. ಒಂದು ಹಂತದಲ್ಲಿ ಗೆಲುವಿನ ಕಡೆಗೆ ಮುನ್ನುಗ್ಗುತ್ತಿದ್ದ ಆರ್​ಸಿಬಿ ತಂಡ ತನ್ನ ಬ್ಯಾಟರ್​ಗಳ ಉಡಾಳತನದಿಂದಾಗಿ ಕೆಕೆಆರ್​ ತಂಡಕ್ಕೆ ತಲೆ ಬಾಗಿತು. ಇದು ಹಾಲಿ ಆವೃತ್ತಿಯಲ್ಲಿ ಆರ್​ಸಿಬಿ ತಂಡಕ್ಕೆ ಏಳನೇ ಸೋಲಾಗಿದೆ. ತನ್ನ ಕಳಪೆ ಪ್ರದರ್ಶನವನ್ನು ಮತ್ತೊಂದು ಬಾರಿ ಮುಂದುವರಿಸಿ ಅಪಾರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತು.

ಇಲ್ಲಿನ ಐತಿಹಾಸಿ ಈಡನ್​ಗಾರ್ಡನ್ಸ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಆರ್​ಸಿಬಿ ಬಗಳ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 222 ರನ್ ಬಾರಿಸಿತು. ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಆರ್​ಸಿಬಿ ತಂಡ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 221 ರನ್​ಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಕೆಕೆಆರ್ ತಂಡ ಗೆಲುವಿನ ಹಳಿಗೆ ಮರಳಿತು.

ಮತ್ತೆ ಬ್ಯಾಟಿಂಗ್ ವೈಫಲ್ಯ

ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ವಿರಾಟ್​ ಕೊಹ್ಲಿ 18 ರನ್ ಬಾರಿಸಿ ವಿವಾದಾತ್ಮಕವಾಗಿ ಔಟಾದರೆ, ಫಾಫ್ ಡು ಪ್ಲೆಸಿಸ್​ 7 ಎಸೆತಕ್ಕೆ 7 ರನ್ ಮಾಡಿ ಸುಲಭ ಕ್ಯಾಚ್ ನೀಡಿ ಔಟಾದರು. ಆ ಬಳಿಕ ವಿಲ್ ಜ್ಯಾಕ್ಸ್​ 32 ಎಸೆತಕ್ಕೆ 55 ರನ್ ಬಾರಿಸಿದರೆ ರಜತ್ ಪಾಟೀದಾರ್​ 23 ಎಸೆತಕ್ಕೆ 52 ರನ್​ ತಂದುಕೊಟ್ಟರು. ಈ ಜೋಡಿ ಮೂರನೇ ವಿಕೆಟ್​ಗೆ 103 ರನ್​ಗಳ ಜತೆಯಾಟವಾಡುವ ಮೂಲಕ ಆರ್​​ಸಿಬಿಗೆ ಚೈತನ್ಯ ದೊರಕಿತು. ಜಾಕ್ಸ್ ಔಟಾದ ಬಳಿಕ ಆರ್​ಸಿಬಿಯ ಪೇಚಾಟ ಶುರುವಾಯಿತು.

ಇದನ್ನೂ ಓದಿ: Virat Kohli : ಕೊಹ್ಲಿಗೆ ಮತ್ತೆ ಮೋಸ, ನೋ ಬಾಲ್​ಗೆ ಔಟ್ ಕೊಟ್ಟರೇ ಮೂರನೇ ಅಂಪೈರ್​?

12ನೇ ಓವರ್​ ಎಸೆದ ಆ್ಯಂಡ್ರೆ ರಸೆಲ್ ಹಾಗೂ 13ನೇ ಓವರ್ ಎಸೆದ ಸುನೀಲ್​ ನರೈನ್​ಗೆ ವಿಲ್ ಜಾಕ್ಸ್​, ರಜತ್ ಪಾಟೀದಾರ್​, ಮಹಿಪಾಲ್ ಲಾಮ್ರೋರ್ (4) ಹಾಗೂ ಕ್ಯಾಮೆರಾನ್ ಗ್ರೀನ್​ (6) ವಿಕೆಟ್​ ಒಪ್ಪಿಸಿದರು. ಎರಡು ಓವರ್​ಗಳ ಒಳಗೆ ನಾಲ್ಕು ವಿಕೆಟ್​ ಬಿದ್ದದ್ದು ಆರ್​ಸಿಬಿಗೆ ಹೊರೆಯಾಯಿತು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲು ಬಂದ ಸುಯಾಶ್ ಪ್ರಭ್​ದೇಸಾಯಿ ಕಷ್ಟಪಟ್ಟು 24 ರನ್ ಬಾರಿಸಿದರು. ಈ ವೇಳೆ ದಿನೇಶ್​ ಕಾರ್ತಿಕ್ ಆಡಲು ಇಳಿದು ಫಿನಿಶರ್ ಆಗುವ ಪ್ರಯತ್ನ ಮಾಡಿದರು. ವಿಕೆಟ್​ಗಳ ಪತನದ ಹಿನ್ನೆಲೆಯಲ್ಲಿ ಒತ್ತಡ ತಂದುಕೊಂಡ ಆರ್​​ಸಿಬಿ 25 ರನ್​ಗಳಿಗೆ ಔಟಾದರು.

ರೋಚಕ ಕೊನೇ ಓವರ್​

ಕೊನೇ ಓವರ್​ನಲ್ಲಿ ಆರ್​​ಸಿಬಿಗೆ ಹೀಗಾಗಿ ಆರ್​ಸಿಬಿ ಸೋಲು ಖಚಿತವಾಗಿತ್ತು. ಆದರೆ ಎಡಗೈ ಬ್ಯಾಟರ್​​ ಕರಣ್​ ಶರ್ಮಾ ಸ್ಟಾರ್ಕ್​ ಓವರ್​ನ 1, 3 ಮತ್ತು 4ನೇ ಎಸೆತಕ್ಕೆ ಸಿಕ್ಸರ್ ಬಾರಿಸಿದರು. ಈ ವೇಲೆ 3 ಎಸೆತಕ್ಕೆ 3 ರನ್​ಗಳು ಗೆಲುವಿಗೆ ಬೇಕಾಯಿತು. ಇದರಿಂದಾಗಿ ಆರ್​ಸಿಬಿ ಗೆಲ್ಲುವುದೆಂದರೆ ಅಭಿಮಾನಿಗಳು ನಿರೀಕ್ಷಿಸಿದರು. ಆದರೆ ಐದನೇ ಎಸೆತದಲ್ಲಿ ಕರಣ್​ ರಿಟರ್ನ್​ ಕ್ಯಾಚ್ ನೀಡಿ ಔಟಾದರು. ಅಲ್ಲದೇ ಆರನೇ ಎಸೆತದಲ್ಲಿ ಒಂದೇ ಒಂದು ರನ್ ಬಾರಿಸಲು ಮಾತ್ರ ಫರ್ಗ್ಯೂಸನ್​ಗೆ ಸಾಧ್ಯವಾಯಿತು. ಹೀಗಾಗಿ ಆರ್​ಸಿಬಿ ಒಂದು ರನ್​ ನಿಂದ ಸೋತಿತು.

ಕೆಕೆಆರ್​ ಉತ್ತಮ ಮೊತ್ತ

ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ ತಂಡ ಮತ್ತೊಂದು ಬಾರಿ ಆರ್​ಸಿಬಿ ಬೌಲರ್​ಗಳನ್ನು ದಂಡಿಸಿದರು. ಆರಂಭಿಕ ಬ್ಯಾಟರ್​ ಫಿಲ್​​ ಸಾಲ್ಟ್​​ 18 ಎಸೆತಕ್ಕೆ 48 ರನ್ ಬಾರಿಸಿದರೆ ಸುನೀಲ್ ನರೈನ್ 10 ರನ್​ಗೆ ಔಟಾದರು. ಅಂಗ್ ಕ್ರಿಶ್​ ರಘುವಂಶಿ 3 ರನ್​ಗೆ ಸೀಮಿತಗೊಂಡರೆ ವೆಂಕಟೇಶ್ ಅಯ್ಯರ್ 16 ರನ್ ಬಾರಿಸಿದರು. ಆದರೆ ಶ್ರೇಯಸ್​ ಅಯ್ಯರ್​ ಅರ್ಧ ಶತಕ ಬಾರಿಸಿ ತಂಡವನ್ನು ಮೇಲಕ್ಕೆತ್ತಿದರು. ರಿಂಕು ಸಿಂಗ್​ 24 ರನ್​, ರಸೆಲ್​ 27 ರನ್​ ಹಾಗೂ ಕೊನೆಯಲ್ಲಿ ರಮಣ್​ದೀಪ್​ ಸಿಂಗ್​ 9 ಎಸೆತಕ್ಕೆ 24 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು.

Continue Reading

ಪ್ರಮುಖ ಸುದ್ದಿ

Virat Kohli : ಕೊಹ್ಲಿಗೆ ಮತ್ತೆ ಮೋಸ, ನೋ ಬಾಲ್​ಗೆ ಔಟ್ ಕೊಟ್ಟರೇ ಮೂರನೇ ಅಂಪೈರ್​?

Virat Kohli: ಕೊಹ್ಲಿಯ ವಿಮರ್ಶೆಯ ಹೊರತಾಗಿಯೂ ಅವರು ಕ್ರೀಸ್​ಗಿಂತ ಹೊರಗೆ ಬ್ಯಾಟ್ ಮಾಡುತ್ತಿರುವು ಕಾಣಿಸಿಕೊಂಡಿತು. ಚೆಂಡಿನ ಪಥವು ಸೊಂಟದ ಕೆಳಗೆ ಇದೆ ಎಂದು ದೃಢಪಡಿಸಿತು. ಹೀಗಾಗಿ ಅಂಪೈರ್ ಔಟ್ ಕೊಟ್ಟರು. ಆದರೆ, ಕೊಹ್ಲಿಗೆ ಅದು ಸಮಾಧಾನವಾಗಿಲ್ಲ. ಅವರು ಅಲ್ಲಿಯೇ ಅಂಪೈರ್​ಗಳ ಜತೆ ಜಗಳವಾಡಿ ಹೊರಗೆ ನಡೆದರು. ಅಲ್ಲದೆ, ಡಗ್ಔಟ್​ಗೆ ನಡೆದ ಬಳಿಕೂ ಕೊಹ್ಲಿ ಅಸಮಾಧಾನಗೊಂಡಿದ್ದರು.

VISTARANEWS.COM


on

Virat kohli
Koo

ಕೋಲ್ಕತ್ತಾ : ಈಡನ್ ಗಾರ್ಡನ್ಸ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. 2024ರ ಋತುವಿನಲ್ಲಿ ಎರಡನೇ ಗೆಲುವಿಗಾಗಿ ಪ್ರವಾಸಿ ತಂಡ 223 ರನ್​ಗಳ ಕಠಿಣ ಗುರಿಯನ್ನು ಬೆನ್ನಟ್ಟಿದೆ. ಈ ಪಂದ್ಯದಲ್ಲಿ, ಎರಡನೇ ಓವರ್​ನಲ್ಲಿ ಆರ್​ಸಿಬಿ ಚೇಸಿಂಗ್ ಸಮಯದಲ್ಲಿ ನಾಟಕೀಯ ಕ್ಷಣವೊಂದು ಅನಾವರಣಗೊಂಡಿತು.

ವಿರಾಟ್ ಕೊಹ್ಲಿಯನ್ನು ಔಟ್ ಮಾಡಲಾಗಿದ್ದು, ಇದು ವಿವಾದಾತ್ಮಕ ಕ್ಷಣ ಕಾರಣವಾಯಿತು. ಮೈದಾನದಿಂದ ಹೊರಡುವ ಮೊದಲು ಕೊಹ್ಲಿ ಅಂಪೈರ್ ವಿರುದ್ಧ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದರು. 7 ಎಸೆತಕ್ಕೆ 18 ರನ್ ಬಾರಿಸಿ ಬ್ಯಾಟಿಂಗ ಮಾಡುತ್ತಿದ್ದ ಕೊಹ್ಲಿಗೆ ನಿತೀಶ್ ರಾಣಾ ಎಸೆತ ದೊಡ್ಡ ಫುಲ್​ಟಾಸ್ ಎಸೆತವನ್ನು ಹೊಡೆಲು ಮುಂದಾದರು. ಮಧ್ಯದ ಬ್ಯಾಟ್​ಗೆ ತಗುಲಿ ಅದು ರಿಟರ್ನ್​ ಕ್ಯಾಚ್ ಆಗಿ ಪರಿವರ್ತನೆಗೊಂಡಿತು. ಅದು ಎಸೆತ ಎತ್ತರದಲ್ಲಿದ್ದ ಕಾರಣ ಫೀಲ್ಡಿಂಗ್ ಅಂಪೈರ್​ಗಳು ನೊ ಬಾಲ್ ಪರಿಶೀಲನೆಗೆ ಮುಂದಾದರು.

ಕೊಹ್ಲಿಯ ವಿಮರ್ಶೆಯ ಹೊರತಾಗಿಯೂ ಅವರು ಕ್ರೀಸ್​ಗಿಂತ ಹೊರಗೆ ಬ್ಯಾಟ್ ಮಾಡುತ್ತಿರುವುದು ಕಾಣಿಸಿಕೊಂಡಿತು. ಚೆಂಡಿನ ಪಥವು ಸೊಂಟದ ಕೆಳಗೆ ಇದೆ ಎಂದು ದೃಢಪಡಿಸಿತು. ಹೀಗಾಗಿ ಅಂಪೈರ್ ಔಟ್ ಕೊಟ್ಟರು. ಆದರೆ, ಕೊಹ್ಲಿಗೆ ಅದು ಸಮಾಧಾನವಾಗಿಲ್ಲ. ಅವರು ಅಲ್ಲಿಯೇ ಅಂಪೈರ್​ಗಳ ಜತೆ ಜಗಳವಾಡಿ ಹೊರಗೆ ನಡೆದರು. ಅಲ್ಲದೆ, ಡಗ್ಔಟ್​ಗೆ ನಡೆದ ಬಳಿಕೂ ಕೊಹ್ಲಿ ಅಸಮಾಧಾನಗೊಂಡಿದ್ದರು.

ಮೊದಲ ಓವರ್ ಬೌಲಿಂಗ್ ಮಾಡುವಂತೆ ನಟಿಸಿ ಪ್ರೇಕ್ಷಕರನ್ನು ಖುಷಿಪಡಿಸಿದ ಕೊಹ್ಲಿ, ಇಲ್ಲಿದೆ ವಿಡಿಯೊ

ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳು ಮುಖಾಮುಖಿಯಾಗಿವೆ. ಪಂದ್ಯ ಆರಂಭವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ (Virat Kohli) ಮಾಡಿದ ವಿಭಿನ್ನ ದೃಶ್ಯವೊಂದು ಮೈದಾನದಲ್ಲಿ ಪ್ರೇಕ್ಷಕರ ಮತ್ತು ಕ್ಯಾಮೆರಾಮ್ಯಾನ್​ಗಳ ಗಮನ ಸೆಳೆಯಿತು.

ಇದನ್ನೂ ಓದಿ: Womens Cricket : ಕೌರ್​ ಕೋಪಕ್ಕೆ ಗುರಿಯಾಗಿದ್ದ ಅಂಪೈರ್​ ತನ್ವೀರ್​ ಗೆ ಮುಂಬರುವ ಸರಣಿಯಲ್ಲಿ ಇಲ್ಲ ಚಾನ್ಸ್​

ಮೊದಲ ಇನ್ನಿಂಗ್ಸ್ ಪ್ರಾರಂಭವಾಗುವ ಮೊದಲು ವಿರಾಟ್ ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಂಡರು. ತಮ್ಮ ಕ್ಯಾಪ್ ಅನ್ನು ತೆಗೆದು ಅಂಪೈರ್ಕ ಕೈಗೆ ಕೊಟ್ಟರು. ಈ ವೇಳೆ ಅವರು ಮೊದಲ ಓವರ್​ ಬೌಲಿಂಗ್​ ಮಾಡುವರೆಂದು ಎಲ್ಲರೂ ನಂಬಿದ್ದರು. ಆದರೆ, ಅವರಿಗೆ ನಾಯಕ ಬೌಲಿಂಗ್ ಕೊಟ್ಟಿರಲಿಲ್ಲ. ಸುಮ್ಮನೆ ಆ ರೀತಿ ಮಾಡುವ ಮೂಲಕ ಪ್ರೇಕ್ಷಕರನ್ನು ಗೇಲಿ ಮಾಡಿದ್ದರು. ಸಿರಾಜ್ ಮೊದಲ ಓವರ್​ ಎಸೆದಿದ್ದರು. ಈ ತಮಾಷೆಯ ವೀಡಿಯೊ ತಕ್ಷಣವೇ ಇಂಟರ್ನೆಟ್​ನಲ್ಲಿ ಜೋರು ಹರಿದಾಡಿದವು.

ಟಾಸ್ ಗೆದ್ದ ಆರ್​ಸಿಬಿ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಗ್ರೀನ್, ಸಿರಾಜ್ ಮತ್ತು ಕರಣ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ತಮ್ಮ ಪ್ಲೇಯಿಂಗ್ ಇಲೆವೆನ್ನಲ್ಲಿ ಮೂರು ಬದಲಾವಣೆಗಳನ್ನು ಮಾಡಿದೆ. ಪಂದ್ಯ ಆರಂಭಕ್ಕೂ ಮುನ್ನ ಆರ್​​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಚೇಸಿಂಗ್​ಗೆ ಆದ್ಯತೆ ನೀಡಿದ್ದರು. ಸಾಮಾನ್ಯವಾಗಿ ಬಿಸಿ ಪರಿಸ್ಥಿತಿಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಆದ್ಯತೆ ನೀಡಿದ್ದರೂ, ಹಿಂದಿನ ದಿನ ತಾಪಮಾನದಲ್ಲಿ ಕುಸಿತವನ್ನು ಅವರು ಗಮನಿಸಿದ್ದರು. ಅವರ ಬಲವಾದ ಬ್ಯಾಟಿಂಗ್ ಲೈನ್ಅಪ್ ಮತ್ತು ಪ್ರಮುಖ ಆಟಗಾರರ ಮರಳುವಿಕೆಯ ಬಗ್ಗೆ ವಿಶ್ವಾಸದೊಂದಿಗೆ, ಚೇಸಿಂಗ್ ಆಯ್ಕೆ ಮಾಡಿಕೊಂಡಿದ್ದರು.

Continue Reading

ಪ್ರಮುಖ ಸುದ್ದಿ

Virat Kohli : ಮೊದಲ ಓವರ್ ಬೌಲಿಂಗ್ ಮಾಡುವಂತೆ ನಟಿಸಿ ಪ್ರೇಕ್ಷಕರನ್ನು ಖುಷಿಪಡಿಸಿದ ಕೊಹ್ಲಿ, ಇಲ್ಲಿದೆ ವಿಡಿಯೊ

Virat Kohli: ಟಾಸ್ ಗೆದ್ದ ಆರ್​ಸಿಬಿ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಗ್ರೀನ್, ಸಿರಾಜ್ ಮತ್ತು ಕರಣ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ತಮ್ಮ ಪ್ಲೇಯಿಂಗ್ ಇಲೆವೆನ್ನಲ್ಲಿ ಮೂರು ಬದಲಾವಣೆಗಳನ್ನು ಮಾಡಿದೆ. ಪಂದ್ಯ ಆರಂಭಕ್ಕೂ ಮುನ್ನ ಆರ್​​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಚೇಸಿಂಗ್​ಗೆ ಆದ್ಯತೆ ನೀಡಿದ್ದರು.

VISTARANEWS.COM


on

Virat kohli
Koo

ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳು ಮುಖಾಮುಖಿಯಾಗಿವೆ. ಪಂದ್ಯ ಆರಂಭವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ (Virat Kohli) ಮಾಡಿದ ವಿಭಿನ್ನ ದೃಶ್ಯವೊಂದು ಮೈದಾನದಲ್ಲಿ ಪ್ರೇಕ್ಷಕರ ಮತ್ತು ಕ್ಯಾಮೆರಾಮ್ಯಾನ್​ಗಳ ಗಮನ ಸೆಳೆಯಿತು.

ಮೊದಲ ಇನ್ನಿಂಗ್ಸ್ ಪ್ರಾರಂಭವಾಗುವ ಮೊದಲು ವಿರಾಟ್ ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಂಡರು. ತಮ್ಮ ಕ್ಯಾಪ್ ಅನ್ನು ತೆಗೆದು ಅಂಪೈರ್ಕ ಕೈಗೆ ಕೊಟ್ಟರು. ಈ ವೇಳೆ ಅವರು ಮೊದಲ ಓವರ್​ ಬೌಲಿಂಗ್​ ಮಾಡುವರೆಂದು ಎಲ್ಲರೂ ನಂಬಿದ್ದರು. ಆದರೆ, ಅವರಿಗೆ ನಾಯಕ ಬೌಲಿಂಗ್ ಕೊಟ್ಟಿರಲಿಲ್ಲ. ಸುಮ್ಮನೆ ಆ ರೀತಿ ಮಾಡುವ ಮೂಲಕ ಪ್ರೇಕ್ಷಕರನ್ನು ಗೇಲಿ ಮಾಡಿದ್ದರು. ಸಿರಾಜ್ ಮೊದಲ ಓವರ್​ ಎಸೆದಿದ್ದರು. ಈ ತಮಾಷೆಯ ವೀಡಿಯೊ ತಕ್ಷಣವೇ ಇಂಟರ್ನೆಟ್​ನಲ್ಲಿ ಜೋರು ಹರಿದಾಡಿದವು.

ಟಾಸ್ ಗೆದ್ದ ಆರ್​ಸಿಬಿ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಗ್ರೀನ್, ಸಿರಾಜ್ ಮತ್ತು ಕರಣ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ತಮ್ಮ ಪ್ಲೇಯಿಂಗ್ ಇಲೆವೆನ್ನಲ್ಲಿ ಮೂರು ಬದಲಾವಣೆಗಳನ್ನು ಮಾಡಿದೆ. ಪಂದ್ಯ ಆರಂಭಕ್ಕೂ ಮುನ್ನ ಆರ್​​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಚೇಸಿಂಗ್​ಗೆ ಆದ್ಯತೆ ನೀಡಿದ್ದರು. ಸಾಮಾನ್ಯವಾಗಿ ಬಿಸಿ ಪರಿಸ್ಥಿತಿಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಆದ್ಯತೆ ನೀಡಿದ್ದರೂ, ಹಿಂದಿನ ದಿನ ತಾಪಮಾನದಲ್ಲಿ ಕುಸಿತವನ್ನು ಅವರು ಗಮನಿಸಿದ್ದರು. ಅವರ ಬಲವಾದ ಬ್ಯಾಟಿಂಗ್ ಲೈನ್ಅಪ್ ಮತ್ತು ಪ್ರಮುಖ ಆಟಗಾರರ ಮರಳುವಿಕೆಯ ಬಗ್ಗೆ ವಿಶ್ವಾಸದೊಂದಿಗೆ, ಚೇಸಿಂಗ್ ಆಯ್ಕೆ ಮಾಡಿಕೊಂಡಿದ್ದರು.

ಚೇಸಿಂಗ್ ಮೈದಾನ

“ನಾವು ಬೆನ್ನಟ್ಟುತ್ತೇವೆ. ಇದು ಬಹುಶಃ ಚೇಸಿಂಗ್ ಮೈದಾನವಾಗಿದೆ. ನಾನು ವಾತಾವರಣ ಬಿಸಿಯಾಗಿರುವಾಗ ಮೊದಲು ಬ್ಯಾಟಿಂಗ್ ಮಾಡುವ ಅಭಿಮಾನಿಯಾಗಿದ್ದೇನೆ. ಆದರೆ ಮುಂಬೈ ಅಥವಾ ಚೆನ್ನೈಗಿಂತ ಭಿನ್ನವಾಗಿ ನಿನ್ನೆ ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯದ ನಂತರ ತಾಪಮಾನವು ಇಳಿಯಿತು. ಬ್ಯಾಟಿಂಗ್ ಎಷ್ಟು ಪ್ರಬಲವಾಗಿದೆಯೆಂದರೆ ಬ್ಯಾಟಿಂಗ್ ಪವರ್​ಪ್ಲೇ ಸಮಯದಲ್ಲಿ ಸಾಮಾನ್ಯ ಸ್ಕೋರ್ ಅಥವಾ 60-70 ಅನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ನಾವು ಕೆಲವು ಕೆಲಸಗಳನ್ನು ಮರಳಿ ಮಾಡಿದರೆ ಪರಿಸ್ಥಿತಿ ಸುಧಾರಣೆಯಾಗಬಹುದು ಎಂದು ಫಾಪ್​ ಡು ಪ್ಲೆಸಿಸ್ ಹೇಳಿದ್ದಾರೆ.

ಇದನ್ನೂ ಓದಿ: Womens Cricket : ಕೌರ್​ ಕೋಪಕ್ಕೆ ಗುರಿಯಾಗಿದ್ದ ಅಂಪೈರ್​ ತನ್ವೀರ್​ ಗೆ ಮುಂಬರುವ ಸರಣಿಯಲ್ಲಿ ಇಲ್ಲ ಚಾನ್ಸ್​

ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್​ಸಿಬಿ ತಂಡ ಆಡಿರುವ 7 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆಲುವು ಸಾಧಿಸಿದ್ದು, 6ರಲ್ಲಿ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದಕ್ಕೆ ವಿರುದ್ಧವಾಗಿ, ಕೆಕೆಆರ್ ತನ್ನ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲಿನ ಹೊರತಾಗಿಯೂ ಉತ್ತಮ ಫಾರ್ಮ್​ನಲ್ಲಿದೆ. ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

Continue Reading
Advertisement
Sportsmanship
ಕ್ರೀಡೆ7 mins ago

Sportsmanship : ಭಾರತದವರನ್ನೇ ಸೋಲಿಸಿ ತ್ರಿವರ್ಣ ಧ್ವಜವನ್ನೂ ಎತ್ತಿ ಹಿಡಿದ ಪಾಕ್ ಕರಾಟೆ ಪಟು!

DK Suresh
ಬೆಂಗಳೂರು29 mins ago

DK Suresh: ಬೆಲೆ ಏರಿಕೆ, ಜಿಎಸ್‌ಟಿ ಹೊರೆಯೇ ಮೋದಿ ಗ್ಯಾರಂಟಿ: ಡಿ.ಕೆ. ಸುರೇಶ್

soil
ಕೃಷಿ36 mins ago

ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳ ನಿವಾರಣೆಗೆ ‘ಕೃಷಿ ಸುಣ್ಣ’ ರಾಮಬಾಣ!

Narendra modi
ದೇಶ58 mins ago

Narendra Modi : ಹೆಚ್ಚು ಮಕ್ಕಳಿದ್ದವರಿಗೆ ಕಾಂಗ್ರೆಸ್​ನಿಂದ ಸಂಪತ್ತು ವಿತರಣೆ; ಮೋದಿ ಹೇಳಿಕೆಗೆ ಕೈ ಪಕ್ಷದ ಆಕ್ಷೇಪ

Bulldozer Justice
ದೇಶ1 hour ago

Bulldozer Justice Video: ಅತ್ಯಾಚಾರ ಎಸಗಿ ಕ್ರೂರಹಿಂಸೆ; ಆರೋಪಿ ಅಯಾನ್‌ ಪಠಾಣ್‌ ಮನೆ ಧ್ವಂಸಗೊಳಿಸಿದ ಬುಲ್ಡೋಜರ್‌!

ಕರ್ನಾಟಕ1 hour ago

Lok Sabha Election 2024: ಭ್ರಷ್ಟಾಚಾರ ನಿರ್ಮೂಲನೆಗೆ ಮೋದಿ ಸರ್ಕಾರ ಪಣ: ಸಚಿವ ಪ್ರಲ್ಹಾದ್‌ ಜೋಶಿ

Car Crash
ಕ್ರೀಡೆ2 hours ago

Car Accident : ರೇಸ್ ವೇಳೆ ಪ್ರೇಕ್ಷಕರ ಮೇಲೆ ಹರಿದ ಕಾರು; 7 ಮಂದಿ ಸಾವು; ವಿಡಿಯೊ ಇದೆ

Yuva Rajkumar
ಸಿನಿಮಾ2 hours ago

Yuva Rajkumar: ಯುವ ಅಭಿಮಾನಿಗಳಿಗೆ ನಿರಾಸೆ; ಹುಟ್ಟುಹಬ್ಬ ಆಚರಣೆಗೆ ಬ್ರೇಕ್‌

Lok Sabha Election 2024 Bengaluru Rural Lok Sabha constituency is the most sensitive Election Commission deploys paramilitary forces
Lok Sabha Election 20243 hours ago

Lok Sabha Election 2024: ಬೆಂಗಳೂರು ಗ್ರಾಮಾಂತರ ಕ್ಷೇತ್ರವೀಗ ಅತಿ ಸೂಕ್ಷ್ಮ; ಅರೆ ಸೇನಾ ಪಡೆ ನಿಯೋಜಿಸಿದ ಚುನಾವಣಾ ಆಯೋಗ

JP Nadda
ಕರ್ನಾಟಕ3 hours ago

Neha Murder Case: ನೇಹಾ ನಿವಾಸಕ್ಕೆ ಜೆ.ಪಿ.ನಡ್ಡಾ, ರಾಧಾ ಮೋಹನ್ ದಾಸ್ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ18 hours ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ1 day ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20241 day ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20241 day ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ1 day ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ1 day ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ2 days ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ3 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ5 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

ಟ್ರೆಂಡಿಂಗ್‌