ಕೊಲಂಬೊ: ಪ್ರತಿಷ್ಠಿತ ಏಷ್ಯಾಕಪ್ ಫೈನಲ್(Asia Cup 2023 final) ಪಂದ್ಯಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಫೈನಲ್ ಕದನದಲ್ಲಿ ಭಾರತ ಮತ್ತು ಲಂಕಾ(India vs Sri Lanka) ಪ್ರಶಸ್ತಿಗಾಗಿ ಕಾದಾಡಲಿದೆ. ಆದರೆ ಭಾರತ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಅವರು ಶುಭಮನ್ ಗಿಲ್ಗೆ(Shubman Gill) ನಿನಗೇನು ಹುಚ್ಚು ಹಿಡಿದಿದೆಯಾ? ಇದು ಅಸಾಧ್ಯ ಎಂದು ಬಹಿರಂಗವಾಗಿಯೇ ಬೈದಿರುವ ವಿಡಿಯೊ ವೈರಲ್(Viral Video) ಆಗಿದೆ.
ಇತ್ತಂಡಗಳ ನಡುವಣ ಫೈನಲ್ ಪಂದ್ಯ ಕೊಲಂಬೊದ ಆರ್.ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೂ ಮುನ್ನ ರೋಹಿತ್ ಅವರು ಶುಭಮನ್ ಗಿಲ್ಗೆ ಬೈದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲಾರಂಭಿಸಿದೆ. ನಿನಗೆ ಹುಚ್ಚು ಹಿಡಿದಿದೆಯಾ, ಹೀಗೆ ಮಾಡಲು ಸಾಧ್ಯವಿಲ್ಲ. ಸುಮ್ಮನಿರು ಎಂದು ರೋಹಿತ್ ಅವರು ಬೈದಿದ್ದಾರೆ. ರೋಹಿತ್ ಅವರು ಈ ರೀತಿ ತಾಳ್ಮೆ ಕಳೆದುಕೊಂಡು ಬೈಯಲು ಕಾರಣ ಏನು?, ಅಷ್ಟಕ್ಕೂ ಗಿಲ್ ಮಾಡಿರುವ ತಪ್ಪೇನು ಎಂದು ತಿಳಿದುಬಂದಿಲ್ಲ.
ವಿಶ್ವಕಪ್ಗೂ ಮುನ್ನ ರೋಹಿತ್ಗೆ ಅಗ್ನಿಪರೀಕ್ಷೆ
ವಿಶ್ವಕಪ್ಗೆ ಇನ್ನೇನು ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿವೆ. ಹೀಗಾಗಿ ರೋಹಿತ್ ಶರ್ಮ ಅವರ ನಾಯಕತ್ವಕ್ಕೆ ಇದೊಂದು ಅಗ್ನಿಪರೀಕ್ಷೆ ಎಂದರು ತಪ್ಪಾಗಲಾರದು. ರೋಹಿತ್ ಶರ್ಮಾ(Rohit Sharma) ಈಗಾಗಲೇ ಭಾರತ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ಗೆದ್ದರೆ ಎರಡನೇ ಪ್ರಶಸ್ತಿಯಾಗಲಿದೆ. 2018ರಲ್ಲಿ ಯುಎಇಯಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಈ ಬಾರಿಯೂ ಅವರ ನಾಯಕತ್ವದಲ್ಲಿ ಏಷ್ಯಾಕಪ್ ಗೆದ್ದರೆ ವಿಶ್ವ ಕಪ್ನಲ್ಲಿ ಭಾರತ ತಂಡದ ಮೇಲೆ ನಿರಿಕ್ಷೆಯೊಂದನ್ನು ಮಾಡಬಹುದಾಗಿದೆ.
Rohit Sharma: Merese nhi hoga, pagal hai kya 😅
— CricWatcher (@CricWatcher11) September 16, 2023
What did Gill ask Rohit Sharma to do?#RohitSharma | #AsiaCup | #CricketTwitter pic.twitter.com/FuoWxvnsoT
ರೋಹಿತ್ ಅವರ ನಾಯಕತ್ವದಲ್ಲಿ 2018ರಲ್ಲಿ ಭಾರತ ಏಷ್ಯಾ ಕಪ್ ಗೆದ್ದ ಬಳಿಕ ಯಾವುದೇ ಮಹತ್ವದ ಟೂರ್ನಿಯಲ್ಲಿ ಕಪ್ ಗೆದ್ದಿಲ್ಲ. ಹೀಗಾಗಿ ಅವರ ನಾಯಕತ್ವದಲ್ಲಿ 5 ವರ್ಷಗಳ ಬಳಿಕ ಭಾರತ ಮತ್ತೆ ಕಪ್ ಗೆದ್ದು ಪ್ರಶಸ್ತಿ ಭರ ನೀಗಿಸಲಿ ಎನ್ನುವುದು ಟೀಮ್ ಇಂಡಿಯಾ ಅಭಿಮಾನಿಗಳ ಆಶಯವಾಗಿದೆ. 2019ರ ಏಕದಿನ ವಿಶ್ವಕಪ್ ಹಾಗೂ 2022ರ ಟಿ20 ವಿಶ್ವಕಪ್ 2021-2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಸೋಲು ಕಂಡಿತ್ತು. ಇದೀಗ ಭಾರತದ ಆತಿಥ್ಯದಲ್ಲೇ ನಡೆಯುವ ಏಕದಿನ ವಿಶ್ವಕಪ್ಗೂ ಮುನ್ನ ಏಷ್ಯಾಕಪ್ ಗೆದ್ದು ತಂಡದ ಆತ್ಮವಿಶ್ವಾಸ ಹೆಚ್ಚಿಸುವ ಹೊಣೆ ರೋಹಿತ್ ಅವರ ಹೆಗಲ ಮೇಲಿದೆ.
ಇದನ್ನೂ ಓದಿ India vs Sri Lanka Final: ಫೈನಲ್ ಪಂದ್ಯಕ್ಕೆ ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆ ಖಚಿತ
ಕಳೆದ 15 ಆವೃತ್ತಿಯ ಇತಿಹಾಸದಲ್ಲಿ(Asia Cup history) ಭಾರತ ತಂಡವೇ ಪಾರುಪತ್ಯ ಸಾಧಿಸಿದೆ. ಒಟ್ಟು 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಶ್ರೀಲಂಕಾ 6 ಬಾರಿ ಗೆದ್ದಿದೆ. ಉಭಯ ತಂಡಗಳು ಏಷ್ಯಾಕಪ್ ಇತಿಹಾಸದಲ್ಲಿ ಒಟ್ಟು 7 ಬಾರಿ ಫೈನಲ್ ಮುಖಾಮುಖಿಯಾಗಿವೆ. ಭಾರತ 4 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ. ಶ್ರೀಲಂಕಾ 3 ಬಾರಿ ಗೆದ್ದು ಬೀಗಿದೆ. ಭಾರತ ಚೊಚ್ಚಲ ಏಷ್ಯಾಕಪ್ ಗೆದ್ದಿದ್ದು ಕೂಡ ಲಂಕಾ ವಿರುದ್ಧವೇ. ಯುಎಇಯಲ್ಲಿ ನಡೆದ 1984ರ ಈ ಫೈನಲ್ನಲ್ಲಿ ಭಾರತ ಸುನೀಲ್ ಗಾವಸ್ಕರ್ ನಾಯಕತ್ವದಲ್ಲಿ ಕಪ್ ಗೆದ್ದಿತ್ತು.