ಇಸ್ಲಾಮಾಬಾದ್ : ವಿರಾಟ್ ಕೊಹ್ಲಿಯನ್ನು (Virat Kohli) ಟ್ರೋಲ್ ಮಾಡಲು ಹೋದ ತನ್ನದೇ ದೇಶದ ಪತ್ರಕರ್ತನೊಬ್ಬನಿಗೆ ಪಾಕಿಸ್ತಾನದ ಕ್ರಿಕೆಟರ್ ಮಾರ್ಮಿಕ ಉತ್ತರ ನೀಡುವ ಮೂಲಕ ಬಾಯಿ ಮುಚ್ಚಿಸಿದ್ದಾರೆ. ಅಲ್ಲದೆ, ನಿನ್ನ ಬುದ್ಧಿ ಇನಷ್ಟು ಬೆಳೆಯಬೇಕಾಗಿದೆ ಎಂದು ಹೇಳುವ ಮೂಲಕ ಕ್ರಿಕೆಟರ್ಗಳ ಬಗ್ಗೆ ವಿಶ್ಲೇಷಣೆ ಮಾಡುವ ತಾಕತ್ತು ನಿನಗೆ ಇಲ್ಲ ಎಂಬುದಾಗಿ ಹೇಳಿದ್ದಾರೆ.
ಪಾಕಿಸ್ತಾನದ ಪತ್ರಕರ್ತ ಫರೀದ್ ಖಾನ್ ಎಂಬುವರು ಟ್ವೀಟ್ ಮಾಡಿ, ವಿರಾಟ್ ಕೊಹ್ಲಿ ಯಾವುದೇ ಒತ್ತಡ ಇಲ್ಲದ ಅವಧಿಯಲ್ಲಿ ಚೆನ್ನಾಗಿ ಆಡುತ್ತಾರೆ. ಸರಣಿಯಲ್ಲಿ ಗೆದ್ದಾದ ಬಳಿಕ ಪಿಚ್ ಬ್ಯಾಟಿಂಗ್ಗೆ ಅನುಕೂಲಕರವಾಗಿರುವಾಗ ಅವರು ಶತಕ ಬಾರಿಸುತ್ತಾರೆ. ಇದರಿಂದ ಅವರ ವಿಶ್ವಾಸ ಹೆಚ್ಚಾಗದು. ಅವರು ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬಂದಾಗ ಟೆಸ್ಟ್ ಪಂದ್ಯದಲ್ಲೂ ಶತಕ ಬಾರಿಸಬೇಕು ಎಂದು ಬರೆದುಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ 110 ಎಸೆತಗಳಲ್ಲಿ 166 ರನ್ ಬಾರಿಸಿರುವುದನ್ನು ಉಲ್ಲೇಖಿಸಿ ಅವರು ಈ ಟ್ವೀಟ್ ಮಾಡಿದ್ದರು.
ಪತ್ರಕರ್ತನ ಟ್ವೀಟ್ನಿಂದ ಕೆಂಡಾಮಂಡಲರಾದ ಕ್ರಿಕೆಟರ್ ಶೋಯೆಬ್ ಮಕ್ಸೂದ್, ಇಂಥದ್ದೊಂದು ಹೇಳಿಕೆ ನೀಡುವ ಮೂದಲು ವಿರಾಟ್ ಕೊಹ್ಲಿಯ ಆಟದ ಬಗ್ಗೆ ನಿಮಗೆ ಗೊತ್ತಿರಬೇಕಿತ್ತು. ಅವರು ಒತ್ತಡದಲ್ಲಿ ಆಡುವುದಿಲ್ಲೆ ಎಂಬುದನ್ನು ನೀವು ಒಪ್ಪಿಕೊಳ್ಳುವಿರೇ? ಸ್ವಲ್ಪ ಬುದ್ಧಿ ಬಳಸಿ ಮಾತನಾಡಿ. ಎರಡು ತಪ್ಪುಗಳನ್ನು ಮಾಡಲು ಸರಿಯಾಗಿರುವುದನ್ನು ಒಂದನ್ನು ಮಾಡಬೇಡಿ ಎಂದು ಬರೆದುಕೊಂಡಿದ್ದಾರೆ.
ಮುಂದುವರಿದ ಅವರು ವಿರಾಟ್ ಕೊಹ್ಲಿ ಯಾವ ದೇಶದಲ್ಲಿ ಆಡಿಲ್ಲ ಹಾಗೂ ಯಾವ ಪಿಚ್ನಲ್ಲಿ ಉತ್ತಮವಾಗಿ ಆಡಿಲ್ಲ ಎಂಬದನ್ನು ಹೇಳಿ. ಬಾಬರ್ ಅಜಮ್ ಕೂಡ ಅದೇ ರೀತಿಯ ಆಟಗಾರ. ಅವರನ್ನೂ ಟ್ರೋಲ್ ಮಾಡುತ್ತೀರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ | Babar Azam | ಲೀಕ್ ಆಗಿರುವ ವಿಡಿಯೊ ನನ್ನದಲ್ಲ, ನಾನವನಲ್ಲ ಎಂದ ಪಾಕ್ ತಂಡದ ನಾಯಕ ಬಾಬರ್ ಅಜಮ್