Site icon Vistara News

Sportsmanship : ಭಾರತದವರನ್ನೇ ಸೋಲಿಸಿ ತ್ರಿವರ್ಣ ಧ್ವಜವನ್ನೂ ಎತ್ತಿ ಹಿಡಿದ ಪಾಕ್ ಕರಾಟೆ ಪಟು!

Sportsmanship

ಬೆಂಗಳೂರು: ಕ್ರೀಡಾ ವೇದಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಸರ್ಧೆಗಳು ಅಪರೂಪ. ಆದರೆ ಉಭಯ ರಾಷ್ಟ್ರಗಳ ಕ್ರೀಡಾಪಟುಗಳು ಪರಸ್ಪರ ಭೇಟಿಯಾದಾಗಲೆಲ್ಲಾ ತೀವ್ರ ಸ್ಪರ್ಧೆ ಏರ್ಪಡುತ್ತದೆ. ಶನಿವಾರ ನಡೆದ ಕರಾಟೆ ಸ್ಪರ್ಧೆಯಲ್ಲಿ ಭಾರತದ ರಾಣಾ ಸಿಂಗ್ ಮತ್ತು ಪಾಕಿಸ್ತಾನದ ಶಹಜೈಬ್ ರಿಂಧ್ ಪರಸ್ಪರ ಮುಖಾಮುಖಿಯಾದಾಗ ಇದೇ ಸನ್ನಿವೇಶವಿತ್ತು. ತೀವ್ರವಾದ ಹೋರಾಟದಲ್ಲಿ ಪಾಕಿಸ್ತಾನದ ಅಥ್ಲೀಟ್ 2-1 ಅಂತರದಿಂದ ವಿಜಯಶಾಲಿಯಾಗಿ ಹೊರಹೊಮ್ಮಿದರು. ಗೆಲುವಿನ ಬಳಿಕ ಗೆದ್ದವರು ಸಂಭ್ರಮಿಸುವುದು ಮಾಮೂಲಿ. ಅದಲ್ಲೂ ಇಂಥ ಸ್ಪರ್ಧೆಗಳಲ್ಲಿ ಇನ್ನಷಟು ಜಿದ್ದು ಇರುತ್ತದೆ. ಆದರೆ ಈ ಪಂದ್ಯದ ಬಳಿಕ ಕ್ರೀಡಾಸ್ಫೂರ್ತಿಯ (Sportsmanship)ಪ್ರಸಂಗ ನಡೆಯಿತು.

ಈ ಸ್ಪರ್ಧೆಗಿಂತ ಹೆಚ್ಚಾಗಿ, ಶಹಜೈಬ್ ಅವರ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆ ವಿಷಯವಾಯಿತು. ಯಾಕೆಂದರೆ ತಾವು ಗೆದ್ದ ಬಳಿಕ ಅವರು ತಮ್ಮ ದೇಶದ್ದು ಮಾತ್ರವಲ್ಲದೆ ಭಾರತದ ತ್ರಿವರ್ಣಧ್ವಜವನ್ನೂ ಎತ್ತಿ ಹಿಡಿದಿದ್ದರು. ಇದು ಅಲ್ಲಿದ್ದವರೆಲ್ಲರನ್ನೂ ಅಚ್ಚರಿಗೆ ಒಳಗಾಗಿಸಿತು. ಪಂದ್ಯದ ನಿರೂಪಕ ಕೂಡ ಅವರ ನಡೆಯ ಹಿಂದಿನ ಕಾರಣವನ್ನು ಕೇಳದೆ ಇರಲು ಸಾಧ್ಯವಾಗಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಹಜೈಬ್, “ಈ ಸ್ಪರ್ಧೆಯು ಶಾಂತಿಗಾಗಿತ್ತು. ನಾವು ಶತ್ರುಗಳಲ್ಲ, ಒಟ್ಟಿಗೆ ಇದ್ದೇವೆ. ಒಟ್ಟಾಗಿ ನಾವು ಏನು ಬೇಕಾದರೂ ಮಾಡಬಹುದು. ಈ ಹೋರಾಟವು ಪಾಕಿಸ್ತಾನ ಮತ್ತು ಭಾರತದ ಸ್ನೇಹಕ್ಕಾಗಿ ಮತ್ತು ಹತ್ತಿರವಾಗಲು” ಎಂದು ಅವರು ಹೇಳಿದ್ದರು.

ಇದನ್ನೂ ಓದಿ: IPL 2024 : ಕೆಕೆಆರ್​ ವಿರುದ್ಧ ಆರ್​​ಸಿಬಿ ವೀರೋಚಿತ 1 ರನ್​ ಸೋಲು; ಫಾಫ್​ ಬಳಗಕ್ಕೆ ಏಳನೇ ಮುಖಭಂಗ

ಇಲ್ಲಿಗೆ ಇಲ್ಲಿಗೆ ಬಂದಿದ್ದಕ್ಕಾಗಿ ನಾನು ಸಲ್ಮಾನ್ ಖಾನ್ ಅವರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನ್ನ ಸೂಪರ್ ಸ್ಟಾರ್. ನಾನು ಬಾಲ್ಯದಿಂದಲೂ ನಿಮ್ಮ ಚಲನಚಿತ್ರಗಳನ್ನು ನೋಡುತ್ತಿದ್ದೇನೆ. ನಿಮ್ಮ ಮುಂದೆ ಹೋರಾಡಲು ಸಂತೋಷವಾಗಿದೆ. ಧನ್ಯವಾದಗಳು, “ಎಂದು ಅವರು ಹೇಳಿದರು. ಈ ಸ್ಪರ್ಧೆಯ ವೇಳೆ ಸಲ್ಮಾನ್ ಖಾನ್ ಅಲ್ಲಿ ಹಾಜರಿದ್ದರು.

ನಂತರ ಶಹಜೈಬ್ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ಮಾತುಕತೆ ನಡೆಸುವ ಅವಕಾಶವನ್ನು ಪಡೆದರು. ಅವರು ಕ್ರೀಡಾಪಟುವಿನ ಅದ್ಭುತ ನಡೆಗಾಗಿ ಅವರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Exit mobile version