Site icon Vistara News

Pakistan Cricket : ಭಾರತದ ಕ್ರಿಕೆಟ್​ ಮಾದರಿಯನ್ನು ನಕಲು ಮಾಡಲು ಮುಂದಾದ ಪಾಕಿಸ್ತಾನ

Pakistan Cricket League

ಬೆಂಗಳೂರು: ಭಾರತದಲ್ಲಿ ಕ್ರಿಕೆಟ್ ಮಾದರಿಯೊಂದು ಯಶಸ್ವಿಯಾದರೆ ಅದನ್ನೇ ಕಾಪಿ ಮಾಡುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (Pakistan Cricket) ಚಾಳಿ. ಭಾರತದಲ್ಲಿ ಐಪಿಎಲ್​ ಯಶಸ್ವಿಯಾದ ತಕ್ಷಣ ಅಲ್ಲಿ ಪಾಕಿಸ್ತಾನ ಪ್ರೀಮಿಯರ್ ಲೀಗ್ ಸ್ಥಾಪಿಸಿ ಆಡಿಸಲಾಗುತ್ತಿದೆ. ಐಪಿಎಲ್​ ಮೊತ್ತ ಹಾಗೂ ಹೂಡಿಕೆಗೆ ಹೋಲಿಸಿದರೆ ಅದರು ಸಣ್ಣ ಗಾತ್ರದ ಟೂರ್ನಿ. ಆದರೆ, ನಕಲು ಮಾಡುವುದು ಮಾಮೂಲು. ಅಂತೆಯೇ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತೊಂದು ಹೆಜ್ಜೆಯನ್ನು ಅನುಸರಿಸಲು ಯೋಜಿಸುತ್ತಿದೆ ಎಂದು ಹೇಳಲಾಗಿದೆ. ಬಿಸಿಸಿಐ 2ನೇ ಹಂತದ ಟಿ10 ಕ್ರಿಕೆಟ್ ಲೀಗ್ ಆರಂಭಿಸಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪಿಸಿಬಿ ಕೂಡ ಅದೇ ಮಾದರಿಯ ಟಿ10 ಲೀಗ್ ಆರಂಭಿಸಲು ಸಜ್ಜಾಗಿದೆ.

ಕ್ರಿಕೆಟ್ ಪಾಕಿಸ್ತಾನದ ಪ್ರಕಾರ, ರಾಷ್ಟ್ರೀಯ ತಂಡದ ನ್ಯೂಜಿಲೆಂಡ್ ಪ್ರವಾಸದ ನಂತರ ಪ್ರಾಯೋಗಿಕ ಟಿ10 ಕ್ರಿಕೆಟ್​ ಟೂರ್ನಿಯನ್ನು ಅನ್ನು ಆಯೋಜಿಸಲು ಮಂಡಳಿ ಯೋಜಿಸುತ್ತಿದೆ, ರಾವಲ್ಪಿಂಡಿಯಲ್ಲಿ ಆರು ಪಂದ್ಯಗಳನ್ನು ಆಯೋಜಿಸುತ್ತದೆ. ಇದರಲ್ಲಿ ಪುರುಷರ ಮತ್ತು ಮಹಿಳಾ ತಂಡಗಳು ಭಾಗವಹಿಸಲಿವೆ ಎಂದು ಹೇಳಲಾಗಿದೆ.

ಪಿಸಿಬಿ ಕೆಲವು ಅಂತಾರಾಷ್ಟ್ರೀಯ ಆಟಗಾರರನ್ನು ತಂಡದಲ್ಲಿ ಸೇರಿಸಲು ಯೋಜನೆ ರೂಪಿಸಿದೆ. ಪಾಲುದಾರಿಕೆಗಾಗಿ ಇಂಗ್ಲಿಷ್ ಕೌಂಟಿ ಕ್ಲಬ್ ಮಿಡ್ಲ್​ಸೆಕ್ಸ್ ಅನ್ನೂ ಸಂಪರ್ಕಿಸಲು ಯೋಜಿಸುತ್ತಿದೆ ಎಂಬುದಾಗಿ ವರದಿಯಾಗಿದೆ. ಈ ಪಂದ್ಯಗಳಿಗೆ ಸಿಗುವ ಪ್ರತಿಕ್ರಿಯೆಯನ್ನು ನೋಡುವುದು ಅಲ್ಲಿನ ಮಂಡಳಿಯ ಉದ್ದೇಶವಾಗಿದೆ. ಲೀಗ್ ಬಗ್ಗೆ ಮಂಡಳಿಯ ಅಂತಿಮ ನಿರ್ಧಾರವು ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ : Team India : ಭಾರತ ಕ್ರಿಕೆಟ್​ ತಂಡದ ಆಟಗಾರರಿಗೆ ಮಾನಸಿಕ ಒತ್ತಡದ ಸಮಸ್ಯೆ?

ವಿಶೇಷವೆಂದರೆ, ಟಿ 10 ಸ್ವರೂಪವು ಡಿಸೆಂಬರ್ 2017ರಲ್ಲಿ ಪ್ರಾರಂಭವಾದಾಗಿನಿಂದ ಕ್ರಿಕೆಟ್ ಜಗತ್ತನ್ನು ಜೋರಾಗಿ ಅಪ್ಪಿಕೊಂಡಿದೆ. ಪ್ರತಿ ವರ್ಷ ನಡೆಯುವ ಅಬುಧಾಬಿ ಟಿ 10 ಲೀಗ್​ ಅದ್ಧೂರಿ ಬೆಂಬಲ ಪಡೆದುಕೊಂಡಿದೆ. ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಅಬುಧಾಬಿ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಜಿಂಬಾಬ್ವೆ ಜುಲೈನಲ್ಲಿ ತಮ್ಮದೇ ಆದ ಜಿಮ್ ಆಫ್ರೋ ಟಿ10 ಅನ್ನು ಪರಿಚಯಿಸಿತು. ನಂತರ ಯುಎಸ್ಎ ಆಗಸ್ಟ್​​ನಲ್ಲಿ ಯುಎಸ್ ಮಾಸ್ಟರ್ಸ್ ಟಿ 10 ಲೀಗ್ ಅನ್ನು ನಡೆಸಿತ್ತು.

ಪ್ಯಾಲೆಸ್ತೀನ್​ಗೆ ಬೆಂಬಲ ಸೂಚಿಸಿದ ಆಸೀಸ್​ ಆಟಗಾರನಿಗೆ ಛೀಮಾರಿ ಹಾಕಿದ ಐಸಿಸಿ

ಸಿಡ್ನಿ: ಪಾಕಿಸ್ತಾನ ವಿರುದ್ಧದ ತವರಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಪ್ಯಾಲೆಸ್ತೀನಿಯರಿಗೆ ಬೆಂಬಲ ವ್ಯಕ್ತಪಡಿಸಿ ಕೈಗೆ ಕಪ್ಪು ಧರಿಸಿ ಆಡಿದ್ದ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ(Usman Khawaja) ಐಸಿಸಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರಿಗೆ ಐಸಿಸಿ(ICC) ಛೀಮಾರಿ ಹಾಕಿದೆ.

ಪಾಕ್​ ವಿರುದ್ಧದ ಮೊದಲ ಇನಿಂಗ್ಸ್​ ವೇಳೆ ಉಸ್ಮಾನ್ ಖವಾಜಾ, ಗಾಝಾಕ್ಕೆ(Gaza) ಬೆಂಬಲ ಸೂಚಿಸುವ ಸಂದೇಶಗಳನ್ನು ತನ್ನ ಶೂನಲ್ಲಿ ಪ್ರದರ್ಶಿಸಲು ಬಯಸಿದ್ದರು. ‘‘ಸ್ವಾತಂತ್ರ್ಯ ಎನ್ನುವುದು ಮಾನವಹಕ್ಕು’’ ಎಲ್ಲ ಜೀವಗಳು ಸಮಾನ’’ ಎಂಬುದಾಗಿ ಫೆಲೆಸ್ತೀನ್ ಧ್ವಜದ ಬಣ್ಣಗಳಲ್ಲಿ ಬರೆದ ಸಂದೇಶಗಳನ್ನು ಹೊತ್ತ ಶೂಗಳನ್ನು ಟೆಸ್ಟಿಗೂ ಮೊದಲು ನಡೆದ ತರಬೇತಿ ಅವಧಿಯಲ್ಲಿ ಹಾಕಲು ಬಯಸಿದ್ದರು. ಆದರೆ, ಧಾರ್ಮಿಕ, ರಾಜಕೀಯ ಮತ್ತು ಜನಾಂಗೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಸಂದೇಶಗಳನ್ನು ಪ್ರದರ್ಶಿಸುವುದನ್ನು ಐಸಿಸಿ ನಿಯಮಾವಳಿಗಳು ನಿಷೇಧಿಸುವುದರಿಂದ ಆ ಶೂಗಳನ್ನು ಧರಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೊ ಮೂಲಕ ಗಾಝಾಕ್ಕೆ ಬೆಂಬಲ ಸೂಚಿಸಿ ಕೆಲ ವಿಚಾರವನ್ನು ಹಂಚಿಕೊಂಡಿದ್ದರು.

ಶೂ ಧರಿಸಲು ಸಾಧ್ಯವಾಗದ ಕಾರಣ ಉಸ್ಮಾನ್ ಖವಾಜಾ ಅವರು ಏಕಾಂಗಿಯಾಗಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಿದ್ದರು. ಇದು ಐಸಿಸಿಯ ನಿಯಮಾವಳಿಗಳಿಗೆ ವಿರುದ್ಧವಾಗಿದೆ. ಹೀಗಾಗಿ ಅವರ ವಿರುದ್ಧ ಐಸಿಸಿ ವಾಗ್ದಂಡನೆ ಮಾಡಿದೆ. ಈ ರೀತಿಯ ಮೊದಲ ಅಪರಾಧಕ್ಕೆ ವಾಗ್ದಂಡನೆಯಾಗಿದೆ. ಇದೇ ತಪ್ಪು ಮುಂದುವರಿದರೆ ಅವರಿಗೆ ನಿಷೇಧ ಶಿಕ್ಷೆ ವಿಧಿಸಲಾಗುವುದು ಎಂದು ಐಸಿಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Exit mobile version