Site icon Vistara News

Pakistan Cricket Team: ಪಾಕ್​​ ಕ್ರಿಕೆಟಿಗರಿಗೆ ಮಿಲಿಟರಿ ಟ್ರೈನಿಂಗ್​; ವಿಡಿಯೊ ವೈರಲ್

Pakistan Cricket Team

ಕರಾಚಿ: ಪಾಕಿಸ್ತಾನ ಕ್ರಿಕೆಟ್​ ತಂಡ(Pakistan Cricket Team) ಕೂಡ ಫಿಟ್​ನೆಸ್​ ಕಾಯ್ದಕೊಳ್ಳುವ ಸಲುವಾಗಿ ಕಾಕುಲ್‌ನಲ್ಲಿರುವ ಆರ್ಮಿ ಸ್ಕೂಲ್ ಆಫ್ ಫಿಸಿಕಲ್ ಟ್ರೈನಿಂಗ್ (ಎಎಸ್‌ಪಿಟಿ) ನಲ್ಲಿ ಎರಡು ವಾರಗಳ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದೆ. ಪಾಕ್​ ಆಟಗಾರರು ಮಿಲಿಟರಿ ಡ್ರಿಲ್‌ಗಳಲ್ಲಿ ಭಾಗವಹಿಸಿದ ವಿಡಿಯೊ ವೈರಲ್(viral video)​ ಆಗಿದೆ.

ಏಕದಿನ ಮತ್ತು ಟಿ20 ಕ್ರಿಕೆಟ್​ಗೆ ಮರು ನೇಮಕಗೊಂಡ ನಾಯಕ ಬಾಬರ್ ಅಜಂ ನೇತೃತ್ವದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಸೇನೆಯೊಂದಿಗೆ ತರಬೇತಿ ನಡೆಸಿತು. ಆರ್ಮಿ ತರಬೇತಿಯ ಅನುಭವ ಹಂಚಿಕೊಂಡ ಆಟಗಾರರು ಇದೇ ರೀತಿಯ ಅಭ್ಯಾಸ ನಡೆಸಿದರೆ ನಮ್ಮ ತಂಡ ಕೂಡ ಫುಲ್​ ಫಿಟ್​ ಆಗಲಿದೆ ಎಂದರು. ಕಳೆದ ವರ್ಷ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದ ವೇಗಿ ನಸೀಮ್ ಶಾ ಅವರು ಹಿಂದೆಂದು ಕೂಡ ಈ ರೀತಿಯ ಫಿಟ್​ನೆಸ್​ ತರಬೇತಿ ನಡೆಸಿಲ್ಲ ಎಂದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೈಯದ್ ಮೊಹ್ಸಿನ್ ರಜಾ ನಖ್ವಿ(Syed Mohsin Naqvi) ಅವರ ನೇತೃತ್ವದಲ್ಲಿ ಈ ಪ್ರಯೋಗ ನಡೆಸಲಾಗುತ್ತಿದೆ.

ಟ್ರೈನಿಂಗ್​ ನಡೆಸಿದ ಆಟಗಾರರು


ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್, ಸೈಮ್ ಅಯೂಬ್, ಫಖರ್ ಜಮಾನ್, ಸಾಹಿಬ್ಜಾದಾ ಫರ್ಹಾನ್, ಹಸೀಬುಲ್ಲಾ, ಸೌದ್ ಶಕೀಲ್, ಉಸ್ಮಾನ್ ಖಾನ್, ಮೊಹಮ್ಮದ್ ಹ್ಯಾರಿಸ್, ಸಲ್ಮಾನ್ ಅಲಿ ಅಘಾ, ಅಜಮ್ ಖಾನ್, ಇಫ್ತಿಕರ್ ಅಹ್ಮದ್, ಇರ್ಫಾನ್ ಖಾನ್ ನಿಯಾಜಿ, ಶಾದಾಬ್ ಖಾನ್, ಮೊಹಮ್ಮದ್ ವಾಸಿಮ್, ಉಸ್ಮದ್ ವಾಸಿಮ್, ನವಾಜ್, ಮೆಹ್ರಾನ್ ಮುಮ್ತಾಜ್, ಅಬ್ರಾರ್ ಅಹ್ಮದ್, ಶಾಹೀನ್ ಶಾ ಆಫ್ರಿದಿ, ನಸೀಮ್ ಶಾ, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಹಸನ್ ಅಲಿ, ಮೊಹಮ್ಮದ್ ಅಲಿ, ಜಮಾನ್ ಖಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ಅಮೀರ್ ಜಮಾಲ್, ಹ್ಯಾರಿಸ್ ರೌಫ್ ಮತ್ತು ಮೊಹಮ್ಮದ್ ಅಮೀರ್ ಮಿಲಿಟರಿ ಡ್ರಿಲ್‌ಗಳಲ್ಲಿ ಭಾಗವಹಿಸಿದ ಆಟಗಾರರು.

ಇದನ್ನೂ ಓದಿ Pakistan Cricket Team : ಪಾಕ್ ಆಟಗಾರನ ಕಳ್ಳಾಟ ಕಂಡು ಮೈದಾನದಲ್ಲೇ ಬೆಂಡೆತ್ತಿದ ಅಂಪೈರ್​

ಇದೇ ಜೂನ್‌ನಲ್ಲಿ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​(T20 World Cup) ಆಡುವ ಸಲುವಾಗಿ ವಿವಾದಾತ್ಮಕ ಎಡಗೈ ವೇಗಿ ಮೊಹಮ್ಮದ್ ಅಮೀರ್(Mohammad Amir) ಅಂತಾರಾಷ್ಟ್ರೀಯ ನಿವೃತ್ತಿಯಿಂದ ಕಳೆದ ವಾರ ಹೊರಬದಿದ್ದರು. ಇದೀಗ ಸಹ ಆಟಗಾರರೊಂದಿಗೆ ಕಠಿಣ ಅಭ್ಯಾಸ ಕೂಡ ಆರಂಭಿಸಿದ್ದಾರೆ.

2 ದಿನಗಳ ಹಿಂದಷ್ಟೇ ಬಾಬರ್​ ಅಜಂ(Babar Azam) ಅವರನ್ನು ಪಾಕ್​ ತಂಡದ ಸೀಮಿತ ಓವರ್​ಗಳ ನಾಯಕನಾಗಿ ಮರು ನೇಮಕ ಮಾಡಲಾಗಿತ್ತು. ಕಳೆದ ವರ್ಷ(2023) ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಾಬರ್​ ಸಾರಥ್ಯದಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್​ ವಿರುದ್ಧ ಪಾಕ್​ ತಂಡದ ಮಾಜಿ ಆಟಗಾರರು ಸೇರಿ ಅಂದಿನ ಪಿಬಿ ಅಧ್ಯಕ್ಷ ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಮತ್ತೆ ಅವರಿಗೆ ನಾಯಕತ್ವ ನೀಡಲಾಗಿದೆ.

Exit mobile version