Site icon Vistara News

IND vs PAK: ಮೋದಿ ನಾಡಲ್ಲಿ ಪಾಕ್​ ಆಟಗಾರರಿಗೆ ಭರ್ಜರಿ ಸ್ವಾಗತ

akistan cricket team receives warm welcome in Ahmedabad

ಅಹಮದಾಬಾದ್​: ಭಾರತ(IND vs PAK) ವಿರುದ್ಧದ ಹೈವೋಲ್ಟೇಜ್​ ಪಂದ್ಯವನ್ನಾಡಲು ಪಾಕಿಸ್ತಾನ ಕ್ರಿಕೆಟ್​ ತಂಡ(Pakistan cricket team) ಅಹಮದಾಬಾದ್(Ahmedabad)​ ತಲುಪಿದೆ. ಪಾಕ್​ ಆಟಗಾರರು ಅಹಮದಾಬಾದ್​ಗೆ ಆಗಮಿಸುತ್ತಿದಂತೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಗಿದೆ. ಹೂವಿನ ಮಳೆಯನ್ನೇ ಸುರಿಸಲಾಗಿದೆ. ಇದರ ವಿಡಿಯೊ ವೈರಲ್ ಆಗಿದೆ.

ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರವಾಗಿದೆ. ಆದರೆ ಅತಿಥಿ ದೇವೋಭವ ಎಂಬ ಸತ್ಪರಂಪರೆಯನ್ನು ಬೆಳೆಸಿಕೊಂಡಿರುವ ಭಾರತೀಯರು ಯಾವುದೇ ಬೇಧಭಾವ ತೋರದೆ ಪಾಕ್​ ಆಟಗಾರರನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಟೂರ್ನಿ ಆಡಲು ಹೈದರಾಬಾದ್​ಗೆ ಬಂದಾಗಲೇ ಪಾಕ್​ ಆಟಗಾರರು ಭಾರತೀಯ ಆತಿಥ್ಯವನ್ನು ಕೊಂಡಾಡಿದ್ದರು. ಇದೀಗ ಅಹಮದಾಬಾದ್​ನಲ್ಲಿಯೂ ಭರ್ಜರಿ ಸ್ವಾಗತ ಸಿಕ್ಕಿದೆ.

ವಿಶ್ವಕಪ್​ ಟೂರ್ನಿ ಆರಂಭಕ್ಕೂ ಮುನ್ನ ಪಾಕಿಸ್ತಾನ ತಂಡ ಯಾವುದೇ ಕಾರಣಕ್ಕೂ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ಆಡುವುದಿಲ್ಲ ಎಂದು ಪಾಕ್​ ಕ್ರಿಕೆಟ್​ ಮಂಡಳಿ ಪಟ್ಟುಹಿಡಿದಿತ್ತು. ಇದೇ ಕಾರಣದಿಂದ ವೇಳಾಪಟ್ಟಿ ಪ್ರಕಟ ವಿಳಂಬಗೊಂಡಿತ್ತು. ಆ ಬಳಿಕ ಐಸಿಸಿಯ ಮನವೊಳಿಕೆಯಿಂದ ಪಾಕ್​ ಒಲ್ಲದ ಮನಸ್ಸಿನಿಂದ ಇದಕ್ಕೆ ಒಪ್ಪಿಗೆ ಸೂಚಿಸಿತ್ತು.

ಇದನ್ನೂ ಓದಿ IND vs PAK: ಇಂಡೋ-ಪಾಕ್ ವಿಶ್ವಕಪ್​​ ಕದನ; ಕಡಿಮೆ ದರದಲ್ಲೂ ಹೋಟೆಲ್​ ಲಭ್ಯ

ಹೂವಿನ ಮಳೆಯಿಂದ ಸ್ವಾಗತ

ಶನಿವಾರ ಭಾರತ ವಿರುದ್ಧ ಆಡಲು ಪಾಕಿಸ್ತಾನ ತಂಡದ ಆಟಗಾರರು ಅಹಮದಾಬಾದ್​ಗೆ ಕಾಲಿಡುತ್ತಿದಂತೆ ಅವರಿಗೆ ಹೋವಿನ ಮಳೆ ಸುರಿದು ಸ್ವಾಗತ ಕೋರಲಾಯಿತು. ಇದೇ ವೇಳೆ ಅಹಮದಾಬಾದ್​ನ ಸಾಂಸ್ಕೃತಿಕ ನೃತ್ಯಗಳು ಕೂಡ ಗಮನಸೆಳೆದವು. ಹೈದರಾಬಾದ್​ನಲ್ಲಿ ಪಾಕ್​ ಆಟಗಾರರಿಗೆ ಕೇಸರಿ ಶಾಲು ಹಾಕಿ ಸ್ವಾಗತ ಕೋರಲಾಗಿತ್ತು. ಆದರೆ ಇಲ್ಲಿ ಬಿಳಿ ಶಾಲು ಹೊದಿಸಲಾಯಿತು.

ವಿಶ್ವಕಪ್​ನಲ್ಲಿ ಇತ್ತಂಡಗಳದ್ದೇ ಒಂದು ಪ್ರತ್ಯೇಕ ಇತಿಹಾಸ

ವಿಶ್ವಕಪ್‌ ಇತಿಹಾಸದಲ್ಲಿ ಭಾರತ-ಪಾಕಿಸ್ತಾನ ತಂಡಗಳದ್ದೇ ಒಂದು ಪ್ರತ್ಯೇಕ ಇತಿಹಾಸ! ಬಗೆದಷ್ಟೂ ರೋಚಕ ಅಂಕಿಅಂಶ, ಘಟನಾವಳಿ, ರೋಮಾಂಚನ ಹಾಗೂ ಉದ್ವೇಗದ ಕ್ಷಣಗಳು ಉಕ್ಕಿ ಬರುತ್ತವೆ. ಇವುಗಳಲ್ಲಿ ಪ್ರಮುಖವಾದುದೆಂದರೆ, ಪಾಕಿಸ್ತಾನ ವಿರುದ್ಧದ ಏಕದಿನ ವಿಶ್ವಕಪ್‌ ಮುಖಾಮುಖೀಯಲ್ಲಿ ಭಾರತ ಸೋಲರಿಯದ ಸರದಾರನಾಗಿ ಮೆರೆದಿರುವುದು. ಈ ಪ್ರತಿಷ್ಠಿತ ಕೂಟದಲ್ಲಿ ಆಡಿದ ಏಳೂ ಪಂದ್ಯಗಳಲ್ಲಿ ಟೀಮ್‌ ಇಂಡಿಯಾ ಪಾಕಿಸ್ತಾನವನ್ನು ಮಣ್ಣುಮುಕ್ಕಿಸಿದೆ!. ಇದೀಗ ಎಂಟನೇ ಮುಖಾಮುಖಿಯಲ್ಲಿಯೂ ಅದರಲ್ಲೂ 7 ವರ್ಷಗಳ ಬಳಿಕ ತವರಿನಲ್ಲಿ ಮತ್ತೊಮ್ಮೆ ಸೋಲಿನ ಪಂಚ್​ ನೀಡಲು ಭಾರತ ಸಜ್ಜಾಗಿದೆ. ಆದರೆ ಪಾಕ್​ ಸವಾಲನ್ನು ಅಷ್ಟು ಸುಲಭವಾಗಿ ಕಡೆಗಣಿಸುವಂತಿಲ್ಲ.

ತಂಡಗಳು

ಪಾಕಿಸ್ತಾನ: ಬಾಬರ್ ಅಜಂ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಇಮಾಮ್ ಉಲ್ ಹಕ್, ಫಕಾರ್ ಜಮಾನ್, ಇಫ್ತಿಕಾರ್ ಅಹ್ಮದ್, ಮೊಹಮ್ಮದ್ ನವಾಜ್, ಶದಾಬ್ ಖಾನ್, ಹಸನ್ ಅಲಿ, ಹ್ಯಾರೀಸ್ ರಾವುಫ್, ಮೊಹಮ್ಮದ್ ವಾಸಿಂ, ಶಹೀನ್ ಅಫ್ರಿಧಿ, ಸೌದ್ ಶಕೀಲ್, ಸಲ್ಮಾನ್ ಅಲಿ ಆಘಾ, ಉಸ್ಮಾನ್ ಮೀರ್, ಅಬ್ದುಲ್ಲಾ ಶಫೀಕ್

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್​ ಅಶ್ವಿನ್​, ಶಾರ್ದೂಲ್ ಠಾಕೂರ್, ಜಸ್​ಪ್ರೀತ್​ ಬುಮ್ರಾ , ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್.

Exit mobile version