ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಗಲಾಟೆ ಕೊನೆಗೂ ಬಯಲಾಗಿದೆ. ಐಸಿಸಿ ವಿಶ್ವಕಪ್ 2023 ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಕಳಪೆ ಪ್ರದರ್ಶನವು ಮೊದಲ ಬಲಿ ತೆಗೆದುಕೊಂಡಿದೆ. ಮುಖ್ಯ ಆಯ್ಕೆಗಾರ ಇಂಜಮಾಮ್ ಉಲ್ ಹಕ್ ತಮ್ಮ ಸ್ಥಾನಕ್ಕೆ ಏಕಾಏಕಿ ರಾಜೀನಾಮೆ ನೀಡಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕನ ವಿರುದ್ಧ ಹಿತಾಸಕ್ತಿ ಸಂಘರ್ಷವಿದೆ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಮ್ಮ ತನಿಖೆಯನ್ನು ನಡೆಸಲು ಸಜ್ಜಾಗಿದೆ. ಜತೆಗೆ ಭಾರತದಲ್ಲಿರುವ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ನೀಡುತ್ತಿದೆ. ಇವೆಲ್ಲದರ ನಡುವೆ ಸಮಸ್ಯೆಯಿಂದ ಪಾರಾಗಲು ಮಾಜಿ ನಾಯಕ ರಾಜೀನಾಮೆ ನೀಡಿದ್ದಾರೆ.
🗣️Inzamam Ul Haq reveals the reason behind his resignation.pic.twitter.com/fuKSjwj9AB
— CricTracker (@Cricketracker) October 30, 2023
ಜನರು ಅಧ್ಯಯನವೇ ಇಲ್ಲದೆ ಮಾತನಾಡುತ್ತಾರೆ. ನನ್ನ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದವು, ಆದ್ದರಿಂದ ನಾನು ರಾಜೀನಾಮೆ ನೀಡುವುದು ಉತ್ತಮ ಎಂದು ನಾನು ನಿರ್ಧರಿಸಿದೆ ಎಂದು ಇಂಜಮಾಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಜನರು ಅರಿವಿಲ್ಲದೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾನು ಪಿಸಿಬಿಗೆ ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಹೇಳಿದೆ. ಪ್ಲೇಯರ್-ಏಜೆಂಟ್ ಕಂಪನಿಯೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ, “ಎಂದು ಇಂಜಮಾಮ್ ಸ್ಪಷ್ಟಪಡಿಸಿದ್ದಾರೆ.
ಹಿತಾಸಕ್ತಿ ಸಂಘರ್ಷ?
ಇಂಜಮಾಮ್ ಅವರು ಆಟಗಾರರ ಏಜೆನ್ಸಿಯಾದ ‘ಯಾಜೋ ಇಂಟರ್ನ್ಯಾಷನಲ್ ಲಿಮಿಟೆಡ್’ ನ ಪಾಲುದಾರರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್, ಶಾಹೀನ್ ಅಫ್ರಿದಿ ಮತ್ತು ಮೊಹಮ್ಮದ್ ರಿಜ್ವಾನ್ ಈ ಕಂಪನಿಯನ್ನು ಪ್ರತಿನಿಧಿಸುವ ಕೆಲವು ತಾರೆಗಳಲ್ಲಿ ಸೇರಿದ್ದಾರೆ. ಇಂಜಮಾಮ್ ಕಂಪನಿಯ ಮಧ್ಯಸ್ಥಗಾರ ಮತ್ತು ಮುಖ್ಯ ಆಯ್ಕೆದಾರನಾಗಿರುವುದರಿಂದ ಇದು ಖಂಡಿತವಾಗಿಯೂ ಪ್ರಮುಖ ಹಿತಾಸಕ್ತಿ ಸಂಘರ್ಷವಾಗುತ್ತದೆ. ಈ ಕುರಿತು ತನಿಖೆ ಆರಂಭಗೊಂಡಿದೆ.
ಇದನ್ನೂ ಓದಿ : MS Dhoni: ಎಸ್ಬಿಐನಲ್ಲಿ ಕೆಲಸ ಆರಂಭಿಸಿದ ಮಹೇಂದ್ರ ಸಿಂಗ್ ಧೋನಿ; ವಿಡಿಯೊ ವೈರಲ್
ಈ ಹಿಂದೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ಹಿತಾಸಕ್ತಿ ಸಂಘರ್ಷದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲು ನಿರ್ಧರಿಸಿತು. ಇಂಜಮಾಮ್ ತಪ್ಪಿತಸ್ಥರೆಂದು ಕಂಡುಬಂದರೆ ಮತ್ತು ಅವರ ಒಪ್ಪಂದವನ್ನು ಕೊನೆಗೊಳಿಸಿದರೆ ಪಿಸಿಬಿ ಅವರಿಗೆ ಭಾರಿ ಪರಿಹಾರವನ್ನು ನೀಡಬೇಕಾಗುತ್ತದೆ.
ಇದಕ್ಕೂ ಮುನ್ನ ಇಂಜಮಾಮ್-ಉಲ್-ಹಕ್ ಅವರ ಹಿತಾಸಕ್ತಿ ಸಂಘರ್ಷದ ವಿಷಯಗಳ ಬಗ್ಗೆ ಪಿಸಿಬಿ ಮುಖ್ಯಸ್ಥ ಝಕಾ ಅಶ್ರಫ್ ಪ್ರತಿಕ್ರಿಯಿಸಿದ್ದರು. ಈ ವಿಷಯದ ಬಗ್ಗೆ ಪಿಸಿಬಿ ಮುಖ್ಯ ಆಯ್ಕೆದಾರರೊಂದಿಗೆ ಚರ್ಚೆ ನಡೆಸಲಿದೆ ಎಂದು ಹೇಳಿದ್ದಾರೆ.
“ಖಂಡಿತವಾಗಿಯೂ, ಇದು ಹಿತಾಸಕ್ತಿ ಸಂಘರ್ಷದಂತೆ ಕಾಣುತ್ತದೆ. ನಾವು ಮುಖ್ಯ ಆಯ್ಕೆದಾರರನ್ನು ಕರೆದು ಈ ಸುದ್ದಿ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಳುತ್ತೇವೆ. ಆದರೆ ತಲಾ ಏಳರಿಂದ ಎಂಟು ಆಟಗಾರರನ್ನು ಅವರು ತಮ್ಮ ಏಜೆನ್ಸಿಯಿಂದ ಆಯ್ಕೆ ಮಾಡಿಕೊಂಡಿದ್ದರೆ ಬಗ್ಗೆ ವಿವರಣೆ ನೀಡುವಂತೆ ಕೇಳುತ್ತೇವೆ, “ಎಂದು ಝಾಕಾ ಹೇಳಿದ್ದರು.
ಅಜಂ ವಾಟ್ಸ್ಆ್ಯಪ್ ಮಾಹಿತಿ ಸೋರಿಕೆ
ಬೆಂಗಳೂರು: ಪಾಕಿಸ್ತಾನ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಆಗಾಗ ಸಾಬೀತಾಗುತ್ತಿದೆ. ಅಂತೆಯೇ ವಿಶ್ವ ಕಪ್ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಬಂದಿರುವ ಪಾಕಿಸ್ತಾನ ತಂಡವು ಆಂತರಿಕ ಕಲಹದಲ್ಲಿ ಮುಳುಗಿದೆ ಎಂಬುದು ಹೊಸ ಸುದ್ದಿ. ಈ ಸುದ್ದಿಯನ್ನು ಅನೇಕರು ನಿರಾಕರಿಸಿದರೂ ಕೆಲವೊಂದು ವರದಿಗಳು ಇದು ಸತ್ಯ ಎಂಬುದಕ್ಕೆ ಸಾಕ್ಷಿ ನೀಡುತ್ತಿವೆ. ಅಂತೆಯೇ ಪಾಕಿಸ್ತಾನ ತಂಡದ ನಾಯಕ ತಂಡದ ಸಮಸ್ಯೆ ಕುರಿತು ಪಾಕಿಸ್ತಾನ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಝಾಕಾ ಅಶ್ರಫ್ ಅವರಿಗೆ ಕಳುಹಿಸಿರುವ ವಾಟ್ಸ್ಆ್ಯಪ್ ಸಂದೇಶವನ್ನು ಸೋರಿಕೆ ಮಾಡಿದ್ದು, ತಂಡದ ನೈತಿಕತೆಯನ್ನು ಪ್ರಶ್ನಿಸಲಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಿರ್ವಹಣಾ ಸಮಿತಿ ಮುಖ್ಯಸ್ಥ ಝಾಕಾ ಅಶ್ರಫ್ ಭಾನುವಾರ ತಡರಾತ್ರಿ ಬಾಬರ್ ಅಜಮ್ ಅವರ ವೈಯಕ್ತಿಕ ವಾಟ್ಸಾಪ್ ಸಂದೇಶಗಳನ್ನು ಲೈವ್ ಟಿವಿಯಲ್ಲಿ ಸೋರಿಕೆ ಮಾಡಿದ್ದಾರೆ. ಪಿಸಿಬಿ ಮುಖ್ಯಸ್ಥರ ಕ್ರಮಗಳು ನೈತಿಕ ಕಳವಳಗಳನ್ನು ಹುಟ್ಟುಹಾಕಿವೆ. ಏಕೆಂದರೆ ಪಾಕಿಸ್ತಾನ ನಾಯಕ ಬಾಬರ್ ಅಜಮ್ ತಮ್ಮ ಖಾಸಗಿ ಸಂದೇಶಗಳನ್ನು ಲೈವ್ ಟಿವಿಯಲ್ಲಿ ಹಂಚಿಕೊಳ್ಳಲು ಅನುಮತಿ ನೀಡಿದ್ದಾರೆಯೇ ಎಂಬುದು ತಿಳಿದಿಲ್ಲ. ಖಾಸಗಿ ಸಂದೇಶಗಳನ್ನು ಸೋರಿಕೆ ಮಾಡುವುದು ಗೌಪ್ಯತೆ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.