Site icon Vistara News

ತಿರಂಗಾಕ್ಕಿಂತ ಪಾಕ್​ ಧ್ವಜವೇ ದೊಡ್ಡದು; ಕೇರಳ ಮಾಲ್​ನಲ್ಲಿ ಶತ್ರುಗಳಿಗೆ ಬೆಂಬಲ

Pakistan Flag Placed Above Indian Tricolour In Kerala's Lulu Mall

ಕೊಚ್ಚಿ: ಬಹುನಿರೀಕ್ಷಿತ ಪಾಕಿಸ್ತಾನ ಮತ್ತು ಭಾರತ ವಿರುದ್ಧದ ವಿಶ್ವಕಪ್ ಮುಖಾಮುಖಿ ಇದೇ ಶನಿವಾರ ಅಕ್ಟೋಬರ್​ 14ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಕೇರಳ ರಾಜ್ಯ ಎಲ್ಲ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

ಕೇರಳದ ಕೊಚ್ಚಿಯಲ್ಲಿರುವ ಲುಲೂ ಶಾಪಿಂಗ್ ಮಾಲ್​ನಲ್ಲಿ(lulu mall kochi) ವಿಶ್ವಕಪ್ ಟೂರ್ನಿ ಪ್ರಯುಕ್ತ ಈ ಟೂರ್ನಿಯಲ್ಲಿ ಆಡುತ್ತಿರುವ 10 ದೇಶಗಳ ರಾಷ್ಟ್ರ ಧ್ಜಜವನ್ನು ಹಾಕಲಾಗಿದೆ. ಆದರೆ ನಮ್ಮ ದೇಶದ ತಿರಂಗಾವನ್ನು ಕಡೆಗಣಿಸಿ ಬದ್ಧ ವೈರಿಗಳಾದ, ಉಗ್ರರ ತಾಣವಾದ ಪಾಕಿಸ್ತಾನ ದೇಶದ ಧ್ಜಜಕ್ಕೆ ಹೆಚ್ಚಿನ ಮಹತ್ವದ ನೀಡಿದ್ದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.

ಪಾಕಿಸ್ತಾನ ಧ್ವಜವನ್ನು ತಿರಂಗಾಕ್ಕಿಂತ ದೊಡ್ಡ ಗಾತ್ರದಲ್ಲಿ ಮಾಡಲಾಗಿದೆ. ಅಷ್ಟೇ ಅಲ್ಲದೆ ಇದನ್ನು ನಮ್ಮ ರಾಷ್ಟ್ರ ಧ್ವಜಕ್ಕಿಂತ ಮೇಲೆ ನೇತು ಹಾಕಲಾಗಿದೆ. ಈ ಮೂಲಕ ರಾಷ್ಟ್ರ ಧ್ಜಜಕ್ಕೆ ಅಗೌರವ ಸೂಚಿಸಿ ಉಗ್ರರ ದೇಶ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಲಾಗಿದೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​(viral news) ಆಗಿದ್ದು ಎಲ್ಲ ಕಡೆಯಿಂದ ವಿರೋಧ ವ್ಯಕ್ತವಾಗಿದೆ.

ಭಾರಿ ವಿರೋಧ

ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದಂತೆ. ದೇಶಾಭಿಮಾನಿಗಳು ಈ ಕುರಿತು ಆಕ್ರೋಶ ಹೊರಹಾಕಿದ್ದಾರೆ. ಇದೊಂದು ಕೇರಳ ಸ್ಟೋರಿಯ 2ನೇ ಭಾಗ. ದೇಶದ ಧ್ವಜ ನಿಯಮ ಉಲ್ಲಂಘಿಸಿದ ಈ ಮಾಲ್ ಭಾರತದಲ್ಲಿ ಬ್ಯಾನ್​ ಆಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ IND vs PAK: ಇಂಡೋ-ಪಾಕ್​ ಕದನಕ್ಕೆ ಸಾಕ್ಷಿಯಾಗಲಿದ್ದಾರೆ ಸಿನಿಮಾ ರಂಗದ ದಿಗ್ಗಜರು

ಶತ್ರು ದೇಶದ ಧ್ವಜವನ್ನು ದೊಡ್ಡದಾಗಿ ಹಾಕಿ ಯಾರನ್ನೂ ಒಲೈಕೆ ಮಾಡುತ್ತಿದ್ದಾರೆ. ಐಸಿಸ್‌ ಉಗ್ರ ತಾಣವಾದ ಕೇರಳದ ಕರಾಳ ಮುಖ ಈ ಘಟನೆಯಿಂದ ಮತ್ತೊಮ್ಮೆ ಬಯಲಾಗಿದೆ. ಇಷ್ಟು ದೊಡ್ಡ ಧ್ವಜ ಹಾಕಿ ನಿಯಮ ಉಲ್ಲಂಘನೆ ಮಾಡಿದರೂ ಇಲ್ಲಿನ ಸರ್ಕಾರ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಲವು ನಿಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಬಾಯ್ಕಾಟ್​ ಲುಲೂ ಮಾಲ್

ದೇಶಾದ್ಯಂತ ಇರುವ ಲುಲೂ ಮಾಲನ್ನು ಬ್ಯಾನ್​ ಮಾಡಬೇಕೆಂದು ಮತ್ತು ಈ ಮಾಲ್​ಗೆ ಯಾರು ಕೂಡ ಹೋಗದಂತೆ “ಬಾಯ್ಕಾಟ್​ ಲುಲೂ ಮಾಲ್” ಎನ್ನುವ ಅಭಿಯಾನವೂ ಆರಂಭವಾಗಿದೆ. ಇದು ಈ ಮಾಲ್​ನ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿಯೇ ಮಾಡಿದ್ದಾರೋ ಎನ್ನೊ ಬಗ್ಗೆ ಇನಷ್ಟೇ ಮಾಹಿತಿ ತಿಳಿದು ಬರಬೇಕಿದೆ.

ಅಮಿತಾಬ್, ರಜನಿಕಾಂತ್ ಭಾಗಿ

ಪಾಕಿಸ್ತಾನ(IND vs PAK) ನಡುವಣ ಹೈವೋಲ್ಟೇಜ್​ ಕದನಕ್ಕೆ ಭಾರತೀಯ ಸಿನಿಮಾ ರಂಗದ ದಿಗ್ಗಜ ನಟರಾದ ಬಾಲಿವುಡ್​ನ ಅಮಿತಾಬ್ ಬಚ್ಚನ್(Amitabh Bachchan) ಮತ್ತು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್(Rajnikanath) ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಇವರ ಜತೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್(Sachin Tendulkar)​ ಕೂಡ ಉಪಸ್ಥಿತರಿರಲಿದ್ದಾರೆ.

Exit mobile version