ದುಬೈ : ಏಷ್ಯಾ ಕಪ್‌ನ ಸೂಪರ್-೪ ಹಂತದ ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ (IND vs PAK) ತಂಡ ಪರಸ್ಪರ ಮುಖಮುಖಿಯಾಗುತ್ತಿವೆ. ಟಾಸ್ ಗೆದ್ದಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತಕ್ಕೆ ಬ್ಯಾಟಿಂಗ್ ಮಾಡುವಂತೆ ಆಹ್ವಾನ ನೀಡಿದೆ.
ಹಾಲಿ ಏಷ್ಯಾ ಕಪ್‌ನಲ್ಲಿ ಭಾರತ ತಂಡ ಎರಡನೇ ಬಾರಿ ಮುಖಾಮುಖಿಯಾತ್ತಿವೆ. ಕಳೆದ ಭಾನುವಾರ (ಅಗಸ್ಟ್ ೨೮) ನಡೆದ ಪಂದ್ಯದಲ್ಲಿ ಭಾರತ ತಂಡ ೫ ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಹೀಗಾಗಿ ಭಾರತ ತಂಡ ಅದೇ ವಿಶ್ವಾಸದೊಂದಿಗೆ ಆಡಿ ಗೆಲುವಿಗೆ ಪ್ರಯತ್ನಿಸಲಿದೆ.
ದುಬೈ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಮಾಡುತ್ತದೆ. ಅಂತೆಯೇ ಬಾಬರ್ ಭಾರತ ತಂಡಕ್ಕೆ ಬ್ಯಾಟಿಂಗ್‌ಗೆ ಆಹ್ವಾನ ಕೊಟ್ಟಿತು. ಈ ಸ್ಟೇಡಿಯಮ್‌ನಲ್ಲಿ ಸತತವಾಗಿ ೧೧ ಟಿ೨೦ ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಂತಾಗಿದೆ.
ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಕಾಯಂ ನಾಯಕ ರಿಷಭ್ ಪಂತ್ ತಂಡಕ್ಕೆ ಪ್ರವೇಶ ಪಡೆದಿದ್ದು, ದಿನೇಶ್ ಕಾರ್ತಿಕ್ ಅವರನ್ನು ಕೈ ಬಿಡಲಾಗಿದೆ. ರವೀಂದ್ರ ಜಡೇಜಾ ಅವರು ಸ್ಥಾನಕ್ಕೆ ಬ್ಯಾಟಿಂಗ್ ಆಲ್‌ರೌಂಡರ್ ದೀಪಕ್ ಹೂಡಾ ಬಂದಿದ್ದು, ಆವೇಶ್ ಖಾನ್ ಅವರಿಂದ ತೆರವಾದ ವೇಗದ ಬೌಲಿಂಗ್ ವಿಭಾಗಕ್ಕೆ ಸ್ಪಿನ್ನರ್ ರವಿ ಬಿಷ್ಣೋಯಿ ಅವಕಾಶ ಪಡೆದುಕೊಂಡಿದ್ದಾರೆ.
ತಂಡಗಳು
ಭಾರತ ತಂಡ : ರೋಹಿತ್ ಶರ್ಮ(ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ದೀಪಕ್ ಹೂಡ, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ಯಜ್ವೇಂದ್ರ ಚಹಲ್, ರವಿ ಬಿಷ್ಣೋಯಿ.
ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಶ್ದಿಲ್ ಶಾ, ಆಸಿಫ್ ಅಲಿ, ಶದಾಬ್ ಖಾನ್, ಹಾರಿಸ್ ರವೂಫ್, ಮೊಹಮ್ಮದ್ ನವಾಜ್, ನಾಸಿಮ್ ಶಾ, ಹಸನ್ ಅಲಿ.