ಅಹಮದಾಬಾದ್: ಬೌಲರ್ಗಳ ಸಂಘಟಿತ ಹೋರಾಟ ನಾಯಕ ರೋಹಿತ್ ಶರ್ಮಾ (86) ಅವರ ಅಬ್ಬರದ ಅರ್ಧ ಶತಕದ ನೆರವು ಪಡೆದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Ind vs Pak) ವಿರುದ್ಧದ ವಿಶ್ವ ಕಪ್ (ICC World Cup 2023) ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತವರೂರು ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಹೀನಾಯವಾಗಿ ಸೋಲಿಸಿತು. ಪಂದ್ಯ ನಡೆದ ಸ್ಟೇಡಿಯಮ್ ಕೂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿರುವ ಕಾರಣ ಚರ್ಚೆ ಯೂ ಜೋರಾಗಿತ್ತು. ಆದರೆ ಭಾರತ ಬಳಗ ಪಾಕ್ ತಂಡವನ್ನು ಕ್ಯಾರೇ ಎನ್ನದೇ ಗೆಲುವು ಸಾಧಿಸಿತು.
ಇದರೊಂದಿಗೆ ಹಾಲಿ ವಿಶ್ವ ಕಪ್ನಲ್ಲಿ ಭಾರತ ತಂಡ ಅತ್ಯುತ್ತಮ ಆರಂಭ ಪಡೆದಿದ್ದು ಹ್ಯಾಟ್ರಿಕ್ ಜಯ ಭಾರತದ ಪಾಲಾಗಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿದ್ದ ಭಾರತ ತಂಡ ನಂತರದ ಪಂದ್ಯದಲ್ಲಿ ಅಪಘಾನಿಸ್ತಾನ ತಂಡದ ವಿರುದ್ಧ ಸವಾರಿ ಮಾಡಿತ್ತು. ಇದೀಗ ಪಾಕ್ ವಿರುದ್ಧವೂ ನಿರಾಯಾಸ ಗೆಲುವು ತನ್ನದಾಗಿಸಿಕೊಂಡಿದೆ. ಈ ವಿಜಯದೊಂದಿಗೆ ಪಾಕ್ ವಿರುದ್ಧ ವಿಶ್ವ ಕಪ್ ಇತಿಹಾಸದಲ್ಲಿನ ತನ್ನ ಮುನ್ನಡೆಯನ್ನು 8-0 ಅಂತರಕ್ಕೆ ಮುಂದುವರಿಸಿಕೊಂಡಿತು ಟೀಮ್ ಇಂಡಿಯಾ.
ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ಮುನ್ನಡೆಗೆ ಕಾರಣರಾದರು. ಪಾಕ್ ವಿರುದ್ಧದ ಗೆಲುವಿನಲ್ಲಿ ಬೌಲರ್ಗಳ ಪಾಲು ದೊಡ್ಡದಿದೆ. ಪ್ರಮುಖ ಬ್ಯಾಟರ್ಗಳನ್ನು ಔಟ್ ಮಾಡುವ ಮೂಲಕ ಸಣ್ಣ ಮೊತ್ತದ ಸವಾಲು ಎದುರಾಗುವಂತೆ ನೋಡಿಕೊಂಡರು. ಇನಿಂಗ್ಸ್ ಉದ್ದಕ್ಕೂ ಭಾರತದ ಬೌಲರ್ಗಳು ಹಾಗೂ ಫೀಲ್ಡರ್ಗಳು ಮೆರೆದಾಡಿದರು. ಪಾಕ್ ಬ್ಯಾಟರ್ಗಳು ಅಕ್ಷರಶಃ ಪರದಾಡಿದರು.
ಇದು ಭಾರತ ತಂಡಕ್ಕೆ ಪಾಕಿಸ್ತಾನ ವಿರುದ್ಧ ಏಕ ದಿನ ಮಾದರಿಯಲ್ಲಿ ಸಿಗುತ್ತಿರುವ ಸತತ ಎರಡನೇ ವಿಜಯ. ಸೆಪ್ಟೆಂಬರ್ 4ರಂದು ನಡೆದಿದ್ದ ಏಷ್ಯಾ ಕಪ್ ಸೂಪರ್ ಸಿಕ್ಸ್ ಹಣಾಹಣಿಯಲ್ಲಿ ಪಾಕ್ ವಿರುದ್ಧ 228 ರನ್ಗಳ ಬೃಹತ್ ಅಂತರದ ಗೆಲುವು ದಾಖಲಿಸಿತ್ತು ಭಾರತ.
Ravi Shastri says : "Rohit Sharma is the Best batter of WorldCup. The man who deserved the Worldcup most is One and Only Rohit Sharma."#RohitSharma𓃵 #INDvsPAK pic.twitter.com/WywlmCQDpq
— Mufaddal_vohra (@Mufaadal_Vohra) October 14, 2023
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹೈವೋಲ್ಟೇಜ್ ಹಣಾಹಣಿಯಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಪಾಕ್ ತಂಡದ ಭಾರತ ಬೌಲಿಂಗ್ ದಾಳಿಗೆ ತತ್ತರಿಸಿ 42.5 ಓವರ್ಗಳಲ್ಲಿ 191 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ 30.3 ಓವರ್ಗಳಲ್ಲಿ 3 ವಿಕೆಟ್ ನಷ್ಟಮಾಡಿಕೊಂಡು 193 ರನ್ ಬಾರಿಸಿ ಗೆಲುವು ಸಾಧಿಸಿತು.
ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಹೊರಟ ಭಾರತ ತಂಡ ಅಬ್ಬರಿಸುವ ಲಕ್ಷಣ ತೋರಿತು. ಮೊದಲ ವಿಕೆಟ್ಗೆ ಅತಿ ವೇಗದಲ್ಲಿ 23 ರನ್ ಬಾರಿಸಿತು. ಆದರೆ, ಪಾಕ್ನ ಪ್ರತಿಭಾವಂತ ಬೌಲರ್ ಶಾಹಿನ್ ಅಫ್ರಿದಿಯ ಎಸೆತಕ್ಕೆ ಶದಾಬ್ ಖಾನ್ಗೆ ಕ್ಯಾಚ್ ನೀಡಿದ ಶುಭ್ಮನ್ ಗಿಲ್ 16 ರನ್ ಬಾರಿಸಿ ಔಟಾದರು. ಡೆಂಗ್ಯು ಜ್ವರದ ಕಾರಣಕ್ಕೆ ಮೊದಲ ಎರಡು ಪಂದ್ಯಗಳಿಂದ ವಂಚಿತರಾಗಿದ್ದ ಅವರು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಪಾಕ್ ಬೌಲರ್ಗಳನ್ನು ದಂಡಿಸಲು ಮುಂದಾದ ಅವರು ಕ್ಯಾಚ್ ನೀಡಿ ಔಟಾದರು.
ರೋಹಿತ್ ಅಬ್ಬರ
ಮೊದಲ ವಿಕೆಟ್ ಬೇಗ ಕಳೆದುಕೊಂಡ ಹೊರತಾಗಿಯೂ ನಾಯಕ ರೋಹಿತ್ ರನ್ ಗಳಿಕೆ ವೇಗ ಕಡಿಮೆಯಾಗಲು ಅವಕಾಶ ನೀಡಲಿಲ್ಲ. ಅವರು ತಮ್ಮ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. 36 ಎಸೆತಗಗಳಲ್ಲಿ ಅರ್ಧ ಶತಕ ಪೂರೈಸಿದ ಅವರು ಮುನ್ನಡೆ ಕಲ್ಪಿಸಿಕೊಟ್ಟರು. ಆ ಬಳಿಕವೂ ಅವರು ರನ್ ಗಳಿಕೆಗೆ ಕುಂದು ತರಲಿಲ್ಲ. ಫೋರ್, ಸಿಕ್ಸರ್ಗಳ ಮೂಲಕ ಭಾರತದ ಅಭಿಮಾನಿಗಳ ಮನ ರಂಜಿಸಿದರು. ಅಫಘಾನಿಸ್ತಾನ ವಿರುದ್ಧದ ಹಿಂದಿನ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ್ದ ರೋಹಿತ್ ಈ ಪಂಧ್ಯದಲ್ಲಿಯೂ ಶತಕ ಬಾರಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಶಾಹಿನ್ ಅಫ್ರಿದಿಯ ಎಸೆತಕ್ಕೆ ಅವರ ಬ್ಯಾಟಿಂಗ್ ಲಯ ತಪ್ಪಿ 86 ರನ್ಗೆ ಔಟಾದರು. ಈ ಮೂಲಕ ಅವತು ಸತತ ಎರಡನೇ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು.
ಈ ಸುದ್ದಿಗಳನ್ನೂ ಓದಿ
Ind vs Pak : ಪಾಕ್ ವಿರುದ್ಧ ಪಂದ್ಯದ ವೇಳೆ ತಪ್ಪು ಜೆರ್ಸಿ ಹಾಕಿಕೊಂಡು ಮೈದಾನಕ್ಕೆ ಬಂದ ಕೊಹ್ಲಿ
Rohit Sharma : ಸಿಕ್ಸರ್ಗಳನ್ನು ಬಾರಿಸಿ ನೂತನ ದಾಖಲೆ ಬರೆದ ಹಿಟ್ಮ್ಯಾನ್ ರೋಹಿತ್
Rohit Sharma : ಕಪಿಲ್ ದೇವ್ 40 ವರ್ಷದ ಹಿಂದೆ ಸೃಷ್ಟಿಸಿದ್ದ ದಾಖಲೆ ಮುರಿದ ರೋಹಿತ್
ಅದಕ್ಕಿಂತ ಮೊದಲು ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 16 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಅವರಿಂದ ದೊಡ್ಡ ಇನಿಂಗ್ಸ್ ನಿರೀಕ್ಷೆ ಮಾಡಿದ್ದ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಎದುರಾಯಿತು. ಬಳಿಕ ಶ್ರೇಯಸ್ ಅಯ್ಯರ್ (ಅಜೇಯ 53) ಹಾಗೂ ಕೆ. ಎಲ್ ರಾಹುಲ್ 19 ರನ್ ಬಾರಿಸಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟರು.
ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ಗೆ 41 ರನ್ ಬಾರಿಸಿತು. ಹೀಗಾಗಿ ಪಾಕ್ ತಂಡ ದೊಡ್ಡ ಮೊತ್ತ ಪೇರಿಸುವ ನಿರೀಕ್ಷೆಯಿತ್ತು. ಆದರೆ, ಮೊಹಮ್ಮದ್ ಸಿರಾಜ್ ಅಬ್ದುಲ್ಲಾ ಶಫಿಖ್ ಅವರನ್ನು ಔಟ್ ಮಾಡಿದರು. ಅವರು 20 ರನ್ಗೆ ಔಟ್ ಮಾಡಿದರು. ಅದಾದ ಬಳಿಕವೂ ಪಾಕ್ ತಂಡ ಬ್ಯಾಟಿಂಗ್ ಮುಂದುವರಿಸಿತು. ಆದರೆ ಮತ್ತೊಂದು ಬದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಇಮಾಮ್ ಉಲ್ ಹಕ್ (36) ಅವನ್ನು ಹಾರ್ದಿಕ್ ಪಾಂಡ್ಯ ಔಟ್ ಮಾಡಿದರು.
ಪಾಕ್ನ ನೀರಸ ಬ್ಯಾಟಿಂಗ್
ಮೊದಲು ಬ್ಯಾಟ್ ಮಾಡಿದ ಪಾಕ್ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ಗೆ 41 ರನ್ ಬಾರಿಸಿತು. ಹೀಗಾಗಿ ಪಾಕ್ ತಂಡ ದೊಡ್ಡ ಮೊತ್ತ ಪೇರಿಸುವ ನಿರೀಕ್ಷೆಯಿತ್ತು. ಆದರೆ, ಮೊಹಮ್ಮದ್ ಸಿರಾಜ್ ಅಬ್ದುಲ್ಲಾ ಶಫಿಖ್ ಅವರನ್ನು ಔಟ್ ಮಾಡಿದರು. ಅವರು 20 ರನ್ಗೆ ಔಟ್ ಮಾಡಿದರು. ಅದಾದ ಬಳಿಕವೂ ಪಾಕ್ ತಂಡ ಬ್ಯಾಟಿಂಗ್ ಮುಂದುವರಿಸಿತು. ಆದರೆ ಮತ್ತೊಂದು ಬದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಇಮಾಮ್ ಉಲ್ ಹಕ್ (36) ಅವನ್ನು ಹಾರ್ದಿಕ್ ಪಾಂಡ್ಯ ಔಟ್ ಮಾಡಿದರು.
ಮೊದಲೆರಡು ವಿಕೆಟ್ಗಳು ಪತನಗೊಳ್ಳುತ್ತಿದ್ದಂತೆ ಜತೆಯಾದ ನಾಯಕ ಬಾಬರ್ ಅಜಂ ಹಾಗೂ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರಿಬ್ಬರೂ ಮೂರನೇ ವಿಕೆಟ್ಗೆ 82 ರನ್ ಜತೆಯಾಟ ನೀಡಿದರು. ನಾಯಕ ಬಾಬರ್ ಅಜಮ್ ಅವರಂತೂ ಅರ್ದ ಶತಕ ಬಾರಿಸಿ ಭಾರತಕ್ಕೆ ಅಪಾಯಕಾರಿಯಾಗುವ ಲಕ್ಷಣ ತೋರಿದರು. ಆದರೆ, ಮೊಹಮ್ಮದ್ ಸಿರಾಜ್ ಅವರನ್ನು ಬೌಲ್ಡ್ ಮಾಡುವ ಮೂಲಕ ಭಾರತಕ್ಕೆ ಚೈತನ್ಯ ತಂದರು.
ಬಳಿಕ ಸ್ಪಿನ್ ದಾಳಿಗೆ ಇಳಿದ ಕುಲ್ದೀಪ್ ಯಾದವ್ ಒಂದೇ ಓವರ್ನಲ್ಲಿ ಸೌದ್ ಶಕೀಲ್ (6ರನ್) ಹಾಗೂ ಇಫ್ತಿಕಾರ್ ಅಹ್ಮದ್ (4) ಅವರನ್ನು ಔಟ್ ಮಾಡುವ ಮೂಲಕ ಪಂದ್ಯಕ್ಕೆ ನಾಟಕೀಯ ತಿರುವು ತಂದರು. ಬಳಿಕ ದಾಳಿಗೆ ಇಳಿದ ಜಸ್ಪ್ರಿತ್ ಬುಮ್ರಾ ಕ್ರೀಸ್ನಲ್ಲಿ ತಳವೂರಿದ್ದ ರಿಜ್ವಾನ್ ವಿಕೆಟ್ ಉರುಳಿಸಿದರು. ರಿಜ್ವಾನ್ 1 ರನ್ ಕೊರತೆಯೊಂದಿಗೆ ಅರ್ಧ ಶತಕ ಬಾರಿಸುವ ಅವಕಾಶ ಕಳೆದುಕೊಂಡರು. ಈ ರೀತಿಯಾಗಿ ಆರಂಭಗೊಂಡ ಭಾರತದ ಬೌಲಿಂಗ್ ಪ್ರಭಾವ ಕೊನೇ ತನಕ ಮುಂದುವರಿಯಿತು.
ಶದಾಬ್ ಖಾನ್ ಬುಮ್ರಾ ಎಸೆತಕ್ಕೆ ಬೌಲ್ಡ್ ಆದರೆ, ಮೊಹಮ್ಮದ್ ನವಾಜ್ ಪಾಂಡ್ಯ ಎಸೆತಕ್ಕೆ ಕ್ಯಾಚ್ ನೀಡಿ ಔಟಾಗುವ ಮೊದಲು ಕೇವಲ ನಾಲ್ಕು ರನ್ ಬಾರಿಸಿದ್ದರು. ಹಸನ್ ಅಲಿ 12 ರನ್ ಬಾರಿಸಿ ಜಡೇಜಾ ಎಸೆತಕ್ಕೆ ಶುಭ್ಮನ್ ಗಿಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಶಹೀನ್ ಶಾ ಅಫ್ರಿದಿ 2 ರನ್ ಬಾರಿಸಿ ಔಟಾಗದೇ ಉಳಿದರೆ ಹ್ಯಾರಿಸ್ ರವೂಫ್ 2 ರನ್ ಕೊಡುಗೆ ಕೊಟ್ಟರು.