ಬೆಂಗಳೂರು: ಪಾಕಿಸ್ತಾನ ತಂಡದ ವಿಶ್ವ ಕಪ್ (ICC World Cup 2023) ಸೆಮಿ ಫೈನಲ್ ಪ್ರವೇಶ ಅವಕಾಶ ಇನ್ನೂ ಇದೆ. ಹೇಗೆಂದರೆ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ ಬಾರಿಸಿರುವ 337 ರನ್ಗಳ ಗುರಿಯನ್ನು ಬೆನ್ನಟ್ಟಲು ಆರಂಭಿಸಿ ಕೇವಲ 6.4 ಓವರ್ಗಳಲ್ಲಿ 338 ರನ್ಗಳನ್ನು ಬಾರಿಸಬೇಕು! ಇದು ಅಸಾಧ್ಯವಾಗಿರುವ ಗುರಿ. ಆದರೆ, ಪಾಕಿಸ್ತಾನ ತಂಡದ ನಾಯಕ ನಾವು ಸೆಮೀಸ್ ಪ್ರವೇಶ ಮಾಡಿಯೇ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಹೀಗಾಗಿ ಇಂಥದ್ದೊಂದು ದಾಖಲೆಯನ್ನು ಪಾಕಿಸ್ತಾನ ಮಾಡಬಹುದು ಎಂದು ನಿರೀಕ್ಷೆ ಮಾಡಬಹುದು.
ಅಂದಹಾಗೆ ಪಾಕಿಸ್ತಾನ ತಂಡ 6.4 ಓವರ್ಗಳಲ್ಲಿ ಈ ಗುರಿಯನ್ನು ಮುಟ್ಟಿದರೆ ಅದು ವಿಶ್ವ ದಾಖಲೆ ಎನಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ.
#PAKvsENG
— 👌👑⭐ (@kingkohli1916) November 11, 2023
Now Last option for Pakistan to win the World Cup :- pic.twitter.com/5JtHf5NePT
ಇಂಗ್ಲೆಂಡ್ ತಂಡದ ಆರಂಭಿಕರು ಉತ್ತಮ ಆರಂಭವನ್ನು ಪಡೆಯುವುದರೊಂದಿಗೆ, ರೂಟ್ ಮತ್ತು ಸ್ಟೋಕ್ಸ್ ದೊಡ್ಡ ಮೊತ್ತಕ್ಕೆ ವೇದಿಕೆಯಲ್ಲಿ ನಿರ್ಮಿಸುವುದರೊಂದಿಗೆ ಮತ್ತು ಬ್ರೂಕ್ ಮತ್ತು ಬಟ್ಲರ್ ಉಪಯುಕ್ತ ರನ್ಗಳೊಂದಿಗೆ ಇಂಗ್ಲೆಂಡ್ ತಂಡ ದೊಡ್ಡ ಮೊತ್ತ ಪೇರಿಸಿದೆ. ಕೋಲ್ಕೊತಾದ ಕಠಿಣ ಪಿಚ್ನಲ್ಲಿ ಆಂಗ್ಲರು ದೊಡ್ಡ ಮೊತ್ತ ಪೇರಿಸಿದ್ದಾರೆ. ಇಂಗ್ಲೆಂಡ್ ಕೊನೆಯ 10 ಓವರ್ಗಳಲ್ಲಿ 100 ರ ಸಮೀಪಕ್ಕೆ ತಲುಪಿತು. ಏಕೆಂದರೆ ಆ ಹಂತಕ್ಕೆ ಹೋಗಲು ಸಾಕಷ್ಟು ವಿಕೆಟ್ಗಳು ಆ ತಂಡದ ಕೈಯಲ್ಲಿದ್ದವು. ಕೆಲವು ಅವಕಾಶಗಳನ್ನು ಕೈಚೆಲ್ಲಿದ ಹೊರತಾಗಿಯೂ ದೊಡ್ಡ ಮೊತ್ತ ಪೇರಿಸಿತು. ನೆಟ್ರನ್ರೇಟ್ ಸಮೀಕರಣದಲ್ಲಿ ಆಸಕ್ತಿ ಹೊಂದಿರುವವರಿಗೆ, ಪಾಕಿಸ್ತಾನವು ಸೆಮಿಫೈನಲ್ಗೆ ಅರ್ಹತೆ ಪಡೆಯಲು ಈ ಗುರಿಯನ್ನು 6.4 ಓವರ್ಗಳಲ್ಲಿ ಬೆನ್ನಟ್ಟಬೇಕಾಗಿದೆ. ಅದು ಸಾಧ್ಯವಿಲ್ಲ. ಆದರೆ ಇನ್ನೇನಾದರೂ ಆಗಬಹುದೇ ಎಂದು ಕಾದು ನೋಡಬೇಕು.
ಈ ಸುದ್ದಿಯನ್ನೂ ಓದಿ: ಪಾಕಿಗಳ ಎಲ್ಲ ಆರೋಪಗಳಿಗೆ ಪದಗಳಲ್ಲೇ ಅಟ್ಟಾಡಿಸಿ ಸಿಕ್ಸರ್ ಹೊಡೆದ ಸೆಹವಾಗ್
ಮ್ಯಾಕ್ಸ್ವೆಲ್ ನಮಗೆ ಸ್ಫೂರ್ತಿ; ಸೆಮಿ ಪ್ರವೇಶ ಖಚಿತ ಎಂದ ಬಾಬರ್ ಅಜಂ
ಕೋಲ್ಕೊತಾ: ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ರೇಸ್ನಿಂದ ಬಹುತೇಕ ಹೊರಬಿದ್ದಿರುವ ಪಾಕಿಸ್ತಾನ(PAK vs ENG) ತಂಡ ತನ್ನ ಕೊನೆಯ ಪ್ರಯತ್ನದಲ್ಲಿ ಇಂದು ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಸೆಮಿಗೆ ಪ್ರವೇಶ ಪಡೆಯಬೇಕಿದ್ದರೆ ಪವಾಡ ಸಂಭವಿಸಿದಂತೆ ಫಲಿತಾಂಶ ದಾಖಲಾಗಬೇಕಿದೆ. ಆದರೆ ಪಾಕ್ ನಾಯಕ ಬಾಬರ್ ಅಜಂ ನಾವು ಸೆಮಿ ಅವಕಾಶ ಗಿಟ್ಟಿಸಿಕೊಳ್ಳಲಿದ್ದೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬರ್ ಅಜಂ, “ಎಲ್ಲರು ನಮ್ಮ ತಂಡ ಸೆಮಿಫೈನಲ್ನಿಂದ ಹೊರಬಿದ್ದಿದ್ದೇವೆ ಎಂದು ಗೇಲಿ ಮಾಡುತ್ತಿದ್ದಾರೆ. ಆದರೆ ನಾವು ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ಖಂಡಿತವಾಗಿಯೂ ನಾವು ಸೆಮಿ ಪ್ರವೇಶದ ಬಗ್ಗೆ ಈಗಾಗಲೇ ಕಾರ್ಯತಂತ್ರವನ್ನು ರೂಪಿಸಿದ್ದೇವೆ” ಎಂದರು.
ಬಾಬರ್ ಕಾರ್ಯತಂತ್ರವೇನು?
ರನ್ರೇಟ್ ಮೇಲೆ ನಾವು ಹೆಚ್ಚು ಗಮನ ಹರಿಸಿದ್ದೇವೆ. ಫಖಾರ್ ಜಮಾನ್ ಅವರು 20 ರಿಂದ 30 ಓವರ್ ಕ್ರೀಸ್ ಆಕ್ರಮಿಸಲು ನಾವು ಅವರಿಗೆ ಹೇಳಿದ್ದೇವೆ. ಅವರು ನಮ್ಮ ಬೇಡಿಕೆಯಂತೆ ಇಚ್ಟು ಹೊತ್ತು ಬ್ಯಾಟಿಂಗ್ ನಡೆಸಿದರೆ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ಯಾವುದೇ ಅನುಮಾನ ಬೇಡ. ಏಕೆಂದರೆ ಅವರು ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿ. ನಮ್ಮ ಎಲ್ಲ ಆಟಗಾರು ಆಂಗ್ಲರ ವಿರುದ್ಧ ಬಿರುಸಿನ ಆಟಕ್ಕೆ ಒತ್ತು ನೀಡಿದ್ದೇವೆ ಎಂದರು.
ಏನು ಬೇಕಾದರೂ ಸಂಭವಿಸಬಹುದು
ಕ್ರಿಕೆಟ್ನಲ್ಲಿ ಏನು ಬೇಕಾದರು ಸಂಭವಿಸಬಹುದು. ಇದಕ್ಕೆ ಕಳೆದ ಅಫಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯವೇ ಸಾಕ್ಷಿ. ಆಸ್ಟ್ರೇಲಿಯಾ 90 ರನ್ಗೆ 7 ವಿಕೆಟ್ ಕಳೆದುಕೊಂಡಾಗ ಗೆಲುವಿನ ಸಾಧ್ಯತೆ ಕೇವಲ ಶೇ.6ರಷ್ಟು ಇತ್ತು. ಅಫಫಾನಿಸ್ತಾನ 96 ಶೇ. ಗೆಲುವಿನ ಪ್ರತಿಶತ ಹೊಂದಿತ್ತು. ಆದರೆ ಕೊನೆಗೆ ಗೆಲುವು ಸಾಧಿಸಿದ್ದು ಆಸ್ಟ್ರೇಲಿಯಾ. ಗ್ಲೆನ್ ಮ್ಯಾಕ್ಸ್ವೆಲ್ ಏಕಾಂಗಿಯಾಗಿ ಹೋರಾಡಿ ಅಜೇಯ ದ್ವಿಶತಕದ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಅವರ ಈ ಆಟವನ್ನೇ ನಮ್ಮ ತಂಡ ಸ್ಫೂರ್ತಿಯಾಗಿ ತೆಗೆದುಕೊಂಡು ಇಂಗ್ಲೆಂಡ್ ವಿರುದ್ಧ ಅಚ್ಚರಿಯ ಫಲಿತಾಂಶ ದಾಖಲಿ ಸೆಮಿ ಫೈನಲ್ ಪ್ರವೇಶಿಸಲಿದ್ದೇವೆ ಎಂದು ಬಾಬರ್ ಆತ್ಮವಿಶ್ವಾಸದಿಂದ ಹೇಳಿದರು.