Site icon Vistara News

Pakistan Team Troll: ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಪಾಕ್​ಗೆ ಟ್ರೋಲ್​ಗಳ ಛಡಿಯೇಟು

Pakistan cricket team

Pakistan Team Troll: India fans troll Pakistan cricket team as arch-rival knocked out from T20 World Cup 2024

ಬೆಂಗಳೂರು: ಭಾರತದ ಬದ್ಧ ಎದುರಾಳಿ ಪಾಕಿಸ್ತಾನ ತಂಡ ಈ ಬಾರಿಯ ಟಿ20 ವಿಶ್ವಕಪ್​(T20 World Cup 2024) ಟೂರ್ನಿಯಲ್ಲಿ ಲೀಗ್​ ಹಂತದಲ್ಲೇ ಮುಗ್ಗರಿಸಿ ತವರಿಗೆ ಗಂಟುಮೂಟೆ ಕಟ್ಟಿದೆ. ಇದೀಗ ಪಾಕ್​ ತಂಡವನ್ನು(Pakistan Team Troll) ಸ್ವತಃ ತವರಿನ ಅಭಿಮಾನಿಗಳು ಸೇರಿ ಭಾರತೀಯ(India fans troll Pakistan cricket team) ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ. ಹಲವು ಮಿಮ್ಸ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೂರು ಪಂದ್ಯಗಳನ್ನು ಆಡಿರುವ ಪಾಕಿಸ್ತಾನವು ಅಮೆರಿಕ ಹಾಗೂ ಭಾರತದ ವಿರುದ್ಧ ಹೀನಾಯವಾಗಿ ಸೋಲನುಭವಿಸಿದೆ. ಕೆನಡಾ ವಿರುದ್ಧ ಮಾತ್ರ ಗೆದ್ದಿರುವ ಕಾರಣ 2 ಪಾಯಿಂಟ್‌ಗಳನ್ನು ಪಡೆದಿದೆ. ಇನ್ನು, ನಾಲ್ಕು ಪಾಯಿಂಟ್ ಹೊಂದಿದ್ದ ಅಮೆರಿಕ ತಂಡವು ಐರ್ಲೆಂಡ್‌ ವಿರುದ್ಧ ಸೋತು, ಜೂನ್‌ 16ರಂದು ಐರ್ಲೆಂಡ್‌ ವಿರುದ್ಧ ನಡೆಯುವ ಪಂದ್ಯದಲ್ಲಿ ಬಾಬರ್‌ ಅಜಂ ಬಳಗ ಗೆದ್ದರೆ ಮಾತ್ರ ಸೂಪರ್‌ 8ಕ್ಕೆ ಅರ್ಹತೆ ಪಡೆಯುತ್ತಿತ್ತು. ಆದರೆ, ಅಮೆರಿಕ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯವು ಮಳೆಯಿಂದ ರದ್ದಾದ ಕಾರಣ ಅಮೆರಿಕದ ಅಂಕಗಳು 5ಕ್ಕೆ ಏರಿಕೆಯಾದವು. ಇದರಿಂದಾಗಿ ಐರ್ಲೆಂಡ್‌ ವಿರುದ್ಧ ಪಾಕ್‌ ಗೆದ್ದರೂ ಯಾವುದೇ ಉಪಯೋಗವಿಲ್ಲದಂತಾಗಿದೆ.

ಪಾಕ್​ ಅಭಿಮಾನಿಯೊಬ್ಬ ಬೇಸರದಲ್ಲಿ ಪಾಕ್​ ತಂಡದ ಜೆರ್ಸಿಯನ್ನು ಮಡಚಿ ಗೋದ್ರೇಜ್​ ಒಳಗಡೆ ಇಟ್ಟು ಜೋರಾಗಿ ಅಳುತ್ತಿರುವ ಮತ್ತು ಕೆನಡಾ, ಅಮೆರಿಕ, ಭಾರತ, ಐರ್ಲೆಂಡ್​ ಮತ್ತು ಅಫಘಾನಿಸ್ತಾನ ತಂಡದ ನಾಯಕರು ಪಾಕ್​ ನಾಯಕ ಬಾಬರ್​ ಅಜಂ ಅವರನ್ನು ಶವ ಹೊತ್ತಂತೆ ಹೊತ್ತು ಸಾಗುತ್ತಿರುವ ಮಿಮ್ಸ್​ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಭಾರತಕ್ಕೆ ಬೆಂಬಲ ಸೂಚಿಸಿದ ಪಾಕ್​ ಅಭಿಮಾನಿ


ಪಾಕಿಸ್ತಾನ ತಂಡ ಹೊರಬಿದ್ದ ಬೇಸರದ ಮಧ್ಯೆಯೂ ಫರೀದ್​ ಖಾನ್​ ಎನ್ನುವ ಪಾಕ್​ ಅಭಿಮಾನಿಯೊಬ್ಬ ಭಾರತ ತಂಡಕ್ಕೆ ಬೆಂಬಲ ಸೂಚಿಸಿದ್ದಾನೆ. ಟೀಮ್​ ಇಂಡಿಯಾದ ಜೆರ್ಸಿ ಹಿಡಿದುಕೊಂಡ ಫೋಟೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡು, ಭಾರತ ಕಪ್​ ಗೆಲ್ಲಲಿ ಎಂದಿದ್ದಾನೆ. ‘ನನ್ನ 2ನೇ ನೆಚ್ಚಿನ ತಂಡದವಾದ ಭಾರತಕ್ಕೆ ಚಿಯರ್​ ಅಪ್​ ಮಾಡಲು ಈಗ ಸಮಯ ಬಂದಾಗಿದೆ. ಮುಂದಿನ ಪಂದ್ಯಗಳಲ್ಲಿಯೂ ಭಾರತ ಉತ್ತಮವಾಗಿ ಆಡಿ ಕಪ್​ ಗೆಲ್ಲುವಂತಾಗಲಿ’ ಎಂದು ಶುಭ ಹಾರೈಸಿದ್ದಾನೆ.

ಇದನ್ನೂ ಓದಿ IND vs CAN: ಇಂದು ಭಾರತ-ಕೆನಡಾ ಪಂದ್ಯ ಅನುಮಾನ; ಭಾರೀ ಮಳೆ ಎಚ್ಚರಿಕೆ ನೀಡಿದ ಹಮಾಮಾನ ಇಲಾಖೆ


ಮತ್ತೆ ಬಾಬರ್​ ತಲೆದಂಡ?


ಕಳೆದ ವರ್ಷ(2023) ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಾಬರ್​ ಸಾರಥ್ಯದಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್​ ವಿರುದ್ಧ ಪಾಕ್​ ತಂಡದ ಮಾಜಿ ಆಟಗಾರರು ಸೇರಿ ಅಂದಿನ ಪಿಬಿ ಅಧ್ಯಕ್ಷ ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಟಿ20 ವಿಶ್ವಕಪ್​ನಲ್ಲಿ ಪಾಕ್​ ತಂಡ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದಕ್ಕಾಗಿ ಮತ್ತೆ ಬಾಬರ್​ ಅವರ ತಲೆದಂಡವಾಗುವ ಸಾಧ್ಯತೆ ಅಧಿಕವಾಗಿದೆ ಎನ್ನಲಾಗಿದೆ.

2009ರ ಟಿ-20 ವಿಶ್ವಕಪ್‌ ಚಾಂಪಿಯನ್‌ ಆಗಿರುವ ಪಾಕಿಸ್ತಾನವು 2022ರ ಟಿ-20 ವಿಶ್ವಕಪ್‌ನಲ್ಲಿ ಫೈನಲ್‌ ತಲುಪಿ, ರನ್ನರ್‌ ಅಪ್‌ ಆಗಿತ್ತು. ಆದರೆ, ಪ್ರಸಕ್ತ ಟೂರ್ನಿಯಲ್ಲಿ ಗ್ರೂಪ್‌ ಹಂತದಲ್ಲಿಯೇ ಮನೆಯ ದಾರಿ ಹಿಡಿದಿದೆ. 2007ರಿಂದಲೂ ಟಿ-20 ವಿಶ್ವಕಪ್‌ ಟೂರ್ನಿಗಳಲ್ಲಿ ಪಾಕಿಸ್ತಾನವು ಒಮ್ಮೆಯೂ ಗ್ರೂಪ್‌ ಹಂತದಲ್ಲಿಯೇ ಹೊರಬಿದ್ದಿರಲಿಲ್ಲ. ಆದರೆ, ಪ್ರಸಕ್ತ ಟೂರ್ನಿಯಲ್ಲಿ ಹೊರಬೀಳುವ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗದೆ.

Exit mobile version