Site icon Vistara News

ICC World Cup 2023 : ಬಾಂಗ್ಲಾ-ಪಾಕ್​; ಸೋತವರ ನಡುವಿನ ಕದನದಲ್ಲಿ ಗೆಲ್ಲುವವರು ಯಾರು?

Pakistan Crikcket team

ಕೋಲ್ಕತಾ: ಐಸಿಸಿ ಏಕದಿನ ವಿಶ್ವಕಪ್ 2023ರ (ICC World Cup 2023) 31ನೇ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ಪಾಕಿಸ್ತಾನ ತಂಡವು ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾ ವಿರುದ್ಧ ಸತತ ಗೆಲುವುಗಳೊಂದಿಗೆ ವಿಶ್ವ ಕಪ್​ ಅಭಿಯಾನ ಆರಂಭಿಸಿತ್ತು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮೆನ್ ಇನ್ ಗ್ರೀನ್ ತನ್ನ ವಿಶ್ವಕಪ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿದ ದಾಖಲೆಯನ್ನು ಬರೆಯಿತು. ಆದಾಗ್ಯೂ, ಮೊದಲ ಎರಡು ಪಂದ್ಯಗಳ ಅಬ್ಬರ ಆ ಬಳಿಕ ನಡೆಯಲಿಯಲ್ಲ. ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ದ ಬಾಬರ್ ಅಜಮ್ ಬಳಗ ಏಳು ವಿಕೆಟ್​ಗಳಿಂದ ಹೀನಾಯವಾಗಿ ಸೋತಿತು. ಬಳಿಕ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸೋಲುಗಳು ಸೆಮಿಫೈನಲ್ ಸ್ಥಾನದ ಪಾಕಿಸ್ತಾನದ ಭರವಸೆಯನ್ನು ಭಗ್ನಗೊಳಿಸಿದೆ. ಹೀಗಾಗಿ ಉಳಿದಿರುವ ಪಂದ್ಯಗಳಲ್ಲಿ ಮರ್ಯಾದೆ ಉಳಿಸಿಕೊಳ್ಳುವುದಕ್ಕೆ ಆಡಬೇಕಾಗಿದೆ.

ಮೊಹಮ್ಮದ್ ರಿಜ್ವಾನ್ ಮತ್ತು ಅಬ್ದುಲ್ಲಾ ಶಫೀಕ್ ಮಾತ್ರ ಉತ್ತಮ ಫಾರ್ಮ್​ನಲ್ಲಿದ್ದಾರೆ. ನಾಯಕ ಬಾಬರ್ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ, ಆದರೆ ಸಂಘಟಿತ ಪ್ರಯತ್ನವಿಲ್ಲದೆ ಸೋಲನ್ನು ಅನುಭವಿಸುತ್ತಿದ್ದಾರೆ. ಶಾಹೀನ್ ಆರು ಪಂದ್ಯಗಳಲ್ಲಿ 22.77 ಸರಾಸರಿಯಲ್ಲಿ 13 ವಿಕೆಟ್​​ಗಳನ್ನು ಪಡೆದಿದ್ದಾರೆ. ಆದರೆ ಅವರ ಬೌಲಿಂಗ್ ಪಾಲುದಾರ ಹ್ಯಾರಿಸ್ ರೌಫ್ ತುಂಬಾ ನಿರಾಶಾದಾಯಕ ಅಭಿಯಾನವನ್ನು ಹೊಂದಿದ್ದಾರೆ.

ಈ ಸುದ್ದಿಗಳನ್ನೂ ಓದಿ
MS Dhoni: ಎಸ್​ಬಿಐನಲ್ಲಿ ಕೆಲಸ ಆರಂಭಿಸಿದ ಮಹೇಂದ್ರ ಸಿಂಗ್​ ಧೋನಿ; ವಿಡಿಯೊ ವೈರಲ್​
Rishabh Pant : ಭಾರತೀಯ ಕ್ರಿಕೆಟ್ ತಂಡಕ್ಕೆ ಗುಡ್​ ನ್ಯೂಸ್​ ಕೊಟ್ಟ ರಿಷಭ್ ಪಂತ್​
IND vs ENG: ಬುಮ್ರಾ ಬೌಲಿಂಗ್​ ಪ್ರದರ್ಶನ ಕೊಂಡಾಡಿದ ಪಾಕಿಸ್ತಾನದ ಮಾಜಿ ಸ್ಟಾರ್​ ವೇಗಿ

ಸಂಕಟದಲ್ಲಿ ಬಾಂಗ್ಲಾ

ಅಫ್ಘಾನಿಸ್ತಾನ ವಿರುದ್ಧ ಆತ್ಮವಿಶ್ವಾಸದ ಗೆಲುವಿನೊಂದಿಗೆ ವಿಶ್ವ ಕಪ್​ನಲ್ಲಿ ಅಭಿಯಾನ ಪ್ರಾರಂಭಿಸಿದ್ದ ಬಾಂಗ್ಲಾದೇಶವು ಸತತ ಐದು ಸೋಲುಗಳಿಗೆ ಕುಸಿದಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ 9 ನೇ ಸ್ಥಾನದಲ್ಲಿದೆ. ಅವರು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯದಿರುವ ಅಪಾಯವನ್ನು ಎದುರಿಸುತ್ತಿದ್ದಾರೆ. ಮಹಮದುಲ್ಲಾ ಅವರನ್ನು ಹೊರತುಪಡಿಸಿದರೆ, ಉಳಿದವರಿಗೆ ಇದು ಕೆಟ್ಟ ಅಭಿಯಾನವಾಗಿದೆ. ಬ್ಯಾಟ್ ಮತ್ತು ಚೆಂಡಿನೊಂದಿಗೆ ನಾಯಕನ ಪ್ರದರ್ಶನವು ಅವರ ಸಾಮಾನ್ಯ ಮಾನದಂಡಗಳಿಗೂ ಹತ್ತಿರವಾಗಿಲ್ಲ. ಆಡಿರುವ 5 ಪಂದ್ಯಗಳಲ್ಲಿ ಶಕೀಬ್ ಕೇವಲ 61 ರನ್ ಹಾಗೂ 7 ವಿಕೆಟ್ ಕಬಳಿಸಿದ್ದಾರೆ.

ಮುಸ್ತಾಫಿಜುರ್ ರೆಹಮಾನ್ ಅವರು ಐಪಿಎಲ್ ತಂಡಗಳೊಂದಿಗೆ ಆಡಿದ್ದು, ಭಾರತೀಯ ಪರಿಸ್ಥಿತಿಗಳಲ್ಲಿ ಆಡಿರುವ ಕಾಋಣ ತಮ್ಮ ಅಪಾರ ಅನುಭವದಿಂದಾಗಿ ತಂಡದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದಾಗ್ಯೂ, ಅನುಭವಿ ಆಟಗಾರ ಆರು ಪಂದ್ಯಗಳಲ್ಲಿ 68.75 ಸರಾಸರಿಯಲ್ಲಿ ಕೇವಲ ನಾಲ್ಕು ವಿಕೆಟ್​ಗಳನ್ನು ಪಡೆದಿದ್ದಾರೆ. ಲಿಟನ್ ದಾಸ್, ಮೆಹೆದಿ ಹಸನ್ ಮಿರಾಜ್ ಮತ್ತು ನಜ್ಮುಲ್ ಹುಸೇನ್ ಶಾಂಟೊ ಅವರಂತಹ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಅನುಭವಿ ಬ್ಯಾಟರ್​​ ಮುಷ್ಫಿಕರ್ ರಹೀಮ್ ಒಂದೆರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ಆದರೆ ಅವು ಪಂದ್ಯಗಳ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ.

ಸಂಯೋಜನೆ ಹೇಗಿರಬಹುದು?

ಪಾಕಿಸ್ತಾನ ತಂಡದಲ್ಲಿ ಅನಾರೋಗ್ಯದ ಕಾರಣ ಹಸನ್ ಅಲಿ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಪಂದ್ಯದಿಂದ ಹೊರಗುಳಿದಿದ್ದರು. ಮೊಹಮ್ಮದ್ ವಾಸಿಮ್ ಜೂನಿಯರ್ ಅವರ ಬದಲಿಗೆ ತಂಡದಲ್ಲಿದ್ದರು . ಕಳೆದ ಪಂದ್ಯದಲ್ಲಿ ಆಘಾತಕ್ಕೆ ಒಳಗಾಗಿದ್ದ ಶಬಾದ್ ಖಾನ್ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳದಿದ್ದರೆ, ಉಸಾಮಾ ಮಿರ್ ತಂಡದಲ್ಲಿ ಸ್ಥಾನ ಪಡೆಯಬಹುದು.

ಬಾಂಗ್ಲಾದೇಶದ ವಿಶ್ವಕಪ್ ತಂಡದ 15 ಆಟಗಾರರಲ್ಲಿ 14 ಆಟಗಾರರು ಕನಿಷ್ಠ ಒಂದು ಪಂದ್ಯವನ್ನು ಆಡಿದ್ದಾರೆ. ಈಡನ್ ಗಾರ್ಡನ್ಸ್​​ನಲ್ಲಿ ಹೊಸ ಚೆಂಡಿನೊಂದಿಗೆ ತಂಜಿಮ್ ಹಸನ್ ಸಾಕಿಬ್ ಮಾತ್ರ ಬೆರಳೆಣಿಕೆಯಷ್ಟು ರನ್ ಗಳಿಸಿದ್ದಾರೆ. ಏಷ್ಯಾ ಕಪ್​ನಲ್ಲಿ ಬಾಂಗ್ಲಾದೇಶದ ಬೌಲರ್​ಗಳು ಭಾರತೀಯ ಬ್ಯಾಟರ್​ಗಳಿಗೆ ಕೆಲವು ಸಮಸ್ಯೆಗಳನ್ನು ಉಂಟುಮಾಡಿದ್ದರು. ಪಾಕ್​ಗೆ ಇನ್ನಷ್ಟು ಕಾಡಬಹುದು.

ಬ್ಯಾಟಿಂಗ್​ಗೆ ಪೂರಕ ಪಿಚ್

ಈಡನ್ ಗಾರ್ಡನ್ಸ್ ಹೆಚ್ಚಿನ ಸ್ಕೋರಿಂಗ್ ಸ್ಥಳವೆಂದು ಹೆಸರುವಾಸಿಯಾಗಿದೆ. ಪಿಚ್​ಗಳು ಬ್ಯಾಟಿಂಗ್ಗೆ ಉತ್ತಮವಾಗಿವೆ. ಮತ್ತು ಔಟ್​​ಫೀಲ್ಡ್​ ಅತ್ಯುತ್ತಮವಾಗಿದೆ. ಹೊಸ-ಚೆಂಡಿನಲ್ಲಿ ಬೌಲರ್​​ಗಳಿಗೆ ನೆರವಾಗಲಿದೆ. ಹೊಳಪು ಕಳೆದುಕೊಂಡ ನಂತರ ರನ್​ ಮಳೆ ಸುರಿಯುತ್ತದೆ. ನೆದರ್ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯಕ್ಕೆ ಈಡನ್ ಗಾರ್ಡನ್ಸ್ ಆತಿಥ್ಯ ವಹಿಸಿತ್ತು. ಪಿಚ್ ಸಾಕಷ್ಟು ಸಮತೋಲಿತವಾಗಿತ್ತು. ಬ್ಯಾಟರ್​ಗಳು ಮತ್ತು ಬೌಲರ್​ಗಳಿಗೆ ಸಮಾನ ನೆರವು ಕೊಟ್ಟಿತ್ತು. ಬ್ಯಾಟ್ ಮತ್ತು ಬಾಲ್ ನಡುವೆ ಉತ್ತಮ ಸ್ಪರ್ಧೆ ಇರಲಿದೆ.‘

ತಂಡಗಳು ಇಂತಿವೆ

ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ಸಿ), ಮೊಹಮ್ಮದ್ ರಿಜ್ವಾನ್ (ವಿಕೆ), ಸೌದ್ ಶಕೀಲ್, ಶದಾಬ್ ಖಾನ್/ ಉಸಾಮಾ ಮಿರ್, ಇಫ್ತಿಖರ್ ಅಹ್ಮದ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹಸನ್ ಅಲಿ/ ಮೊಹಮ್ಮದ್ ವಾಸಿಮ್ ಜೂನಿಯರ್, ಹ್ಯಾರಿಸ್ ರವೂಫ್.

ಬಾಂಗ್ಲಾದೇಶ: ಶಕೀಬ್ ಅಲ್ ಹಸನ್ (ನಾಯಕ), ತಂಜೀದ್ ಹಸನ್, ಲಿಟನ್ ದಾಸ್, ನಜ್ಮುಲ್ ಹುಸೇನ್ ಶಾಂಟೊ, ಮುಷ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮುದುಲ್ಲಾ, ಮೆಹಿದಿ ಹಸನ್ ಮಿರಾಜ್, ಮಹೆದಿ ಹಸನ್ / ತಂಜಿಮ್ ಹಸನ್ ಸಾಕಿಬ್,

ಇತ್ತಂಡಗಳ ಮುಖಾಮುಖಿ

ನೇರ ಪ್ರಸಾರ ಮಾಹಿತಿ

Exit mobile version