Site icon Vistara News

Ind vs Pak : ಭಾರತ – ಪಾಕಿಸ್ತಾನ ಪಂದ್ಯದ ವೇಳೆ ಸೃಷ್ಟಿಯಾಗಲಿರುವ ರೆಕಾರ್ಡ್​​ಗಳ ವಿವರ ಇಲ್ಲಿದೆ

Ravindra jadeja

ಕೊಲಂಬೊ: ಇಲ್ಲಿನ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 10 ರಂದು ನಡೆಯಲಿರುವ ಏಷ್ಯಾ ಕಪ್ 2023ರ (Asia Cup 2023) ಸೂಪರ್ 4 ಹಂತದ ನ ಮೂರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ (Ind vs Pak ) ಮುಖಾಮುಖಿಯಾಗಲಿವೆ. ಇದು ಹಾಲಿ ಟೂರ್ನಿಯಲ್ಲಿ ಎರಡು ತಂಡಗಳ ಎರಡನೇ ಮುಖಾಮುಖಿ.

ಭಾರತ ತನ್ನ ಎರಡನೇ ಪಂದ್ಯದಲ್ಲಿ ನೇಪಾಳ ವಿರುದ್ಧ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಸೂಪರ್​4 ಹಂತಕ್ಕೆ ತೇರ್ಗಡೆ ಹೊಂದಿತ್ತು. ಅದೇ ರೀತಿ ಲೀಗ್ ಹಂತದಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯ ಮಳೆಯಿಂದಾಗಿ ಫಲಿತಾಂಶವನ್ನು ಕಂಡಿರಲಿಲ್ಲ . ಏಷ್ಯಾ ಕಪ್ 2023ರಲ್ಲಿ ಭಾರತದ ಪರ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಮತ್ತು ಶುಭ್​​ಮನ್​ ಗಿಲ್ ರನ್ ಗಳಿಸಿದ್ದಾರೆ. ಇವರಲ್ಲಿ, ಕಿಶನ್ ಮತ್ತು ಪಾಂಡ್ಯ ಪಾಕಿಸ್ತಾನ ವಿರುದ್ಧ 138 ರನ್​ಗಳ ಜೊತೆಯಾಟದಲ್ಲಿ ಕ್ರಮವಾಗಿ ಅರ್ಧಶತಕಗಳನ್ನು ಗಳಿಸಿದ್ದಾರೆ. ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಕೂಡ ನೇಪಾಳ ವಿರುದ್ಧ ತಮ್ಮ ಅರ್ಧಶತಕಗಳನ್ನು ದಾಖಲಿಸಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ನೇಪಾಳ ವಿರುದ್ಧ ತಲಾ ಮೂರು ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಹೆಚ್ಚು ಪ್ರಭಾವಶಾಲಿಯಾಗಿದ್ದರು. ಮತ್ತೊಂದೆಡೆ ಪಾಕಿಸ್ತಾನವು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದೆ. ಪಾಕಿಸ್ತಾನ ಪಡೆದ 30 ವಿಕೆಟ್​​ಗಳಲ್ಲಿ 24 ವೇಗಿಗಳಿಂದ ಬಂದಿದ್ದರೆ, ಸ್ಪಿನ್ನರ್​ಗಳು ಕೇವಲ 6 ವಿಕೆಟ್ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: World Cup 2023 : ಪಾಕ್​ ತಂಡಕ್ಕೆ ಇನ್ನೂ ಅಭದ್ರತೆ; ಪರಿಶೀಲನೆಗೆ ಬರುತ್ತದಂತೆ ನಿಯೋಗ!

ವೇಗದ ಬೌಲರ್​ಗಳಾದ ಹ್ಯಾರಿಸ್ ರವೂಫ್, ನಸೀಮ್ ಶಾ ಮತ್ತು ಶಾಹೀನ್ ಅಫ್ರಿದಿ ಒಟ್ಟು 24 ವಿಕೆಟ್​ಗಳಲ್ಲಿ 23 ವಿಕೆಟ್​​ಗಳನ್ನು ಪಡೆದಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಬಾಬರ್ ಅಜಮ್ ಮತ್ತು ಇಫ್ತಿಕರ್ ಅಹ್ಮದ್ ನೇಪಾಳ ವಿರುದ್ಧ ಶತಕ ಗಳಿಸಿದರೆ, ಮೊಹಮ್ಮದ್ ರಿಜ್ವಾನ್ ಮತ್ತು ಇಮಾಮ್-ಉಲ್-ಹಕ್ ಬಾಂಗ್ಲಾದೇಶದ ವಿರುದ್ಧ ಅರ್ಧಶತಕಗಳನ್ನು ಗಳಿಸಿದ್ದಾರೆ. ಪಾಕಿಸ್ತಾನ ತನ್ನ ಪ್ರಾಬಲ್ಯವನ್ನು ಮುಂದುವರಿಸಲು ನೋಡುತ್ತದೆ ಮತ್ತು ಭಾರತದ ವಿರುದ್ಧದ ಗೆಲುವಿನೊಂದಿಗೆ ಮತ್ತೊಂದು ಫೈನಲ್ ಅವಕಾಶಕ್ಕಾಗಿ ಮುಂದಡಿ ಇಟ್ಟಿದೆ.

ಭಾರತ ಮತ್ತು ಪಾಕಿಸ್ತಾನದ ಪಂದ್ಯಕ್ಕೆ ಮುಂಚಿತವಾಗಿ ಅಂಕಿಅಂಶಗಳು ಮತ್ತು ಸಮೀಪಿಸುತ್ತಿರುವ ಮೈಲಿಗಲ್ಲುಗಳನ್ನು ಗಮನಿಸೋಣ

ಉಭಯ ತಂಡಗಳು ಆಡಿದ 133 ಪಂದ್ಯಗಳಲ್ಲಿ ಪಾಕಿಸ್ತಾನ 73 ಗೆಲುವುಗಳೊಂದಿಗೆ ಮೇಲುಗೈ ಸಾಧಿಸಿದ್ದರೆ, ಭಾರತ 55 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. 5 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ.

ಏಷ್ಯಾಕಪ್ ಏಕದಿನ ಪಂದ್ಯದಲ್ಲಿ ಉಭಯ ತಂಡಗಳು 14 ಪಂದ್ಯಗಳನ್ನು ಆಡಿದ್ದು, ಭಾರತ 7 ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ 5 ಪಂದ್ಯಗಳನ್ನು ಗೆದ್ದಿದೆ.

ಉಳಿದ ದಾಖಲೆಗಳು

98- ವಿರಾಟ್ ಕೊಹ್ಲಿಗೆ (12902) ಏಕದಿನ ಪಂದ್ಯಗಳಲ್ಲಿ 13000 ರನ್ ಪೂರೈಸಲು 98 ರನ್ ಅಗತ್ಯವಿದೆ.

78- ಏಕದಿನ ಕ್ರಿಕೆಟ್​​ನಲ್ಲಿ 10,000 ರನ್ ಪೂರೈಸಲು ರೋಹಿತ್ ಶರ್ಮಾ (9922) ಗೆ 78 ರನ್​​ಗಳ ಅಗತ್ಯವಿದೆ.

3- ರವೀಂದ್ರ ಜಡೇಜಾ (197) ಏಕದಿನ ಕ್ರಿಕೆಟ್​​ನಲ್ಲಿ 200 ವಿಕೆಟ್ ಪೂರೈಸಲು ಇನ್ನೂ ಮೂರು ವಿಕೆಟ್​ಗಳ ಅಗತ್ಯವಿದೆ.

4- ಮೊಹಮ್ಮದ್ ಸಿರಾಜ್ (46) ಏಕದಿನ ಪಂದ್ಯಗಳಲ್ಲಿ 50 ವಿಕೆಟ್​ಗಳ ಮೈಲಿಗಲ್ಲನ್ನು ತಲುಪಲು 4 ವಿಕೆಟ್​ಗಳ ಅಗತ್ಯವಿದೆ.

5- ಬಾಬರ್ ಅಜಮ್ (45) ಏಕದಿನ ಪಂದ್ಯಗಳಲ್ಲಿ 50 ಕ್ಯಾಚ್​​ಗಳನ್ನು ಪೂರೈಸಲು ಐದು ಕ್ಯಾಚ್​​ಗಳ ಅಗತ್ಯವಿದೆ

1- ಶದಾಬ್ ಖಾನ್ (199) ಎಲ್ಲಾ ಮಾದರಿಯ ಕ್ರಿಕೆಟ್​​ನಲ್ಲಿ 200 ವಿಕೆಟ್​ಗಳ ಮೈಲುಗಲ್ಲು ತಲುಪಲು ಒಂದು ವಿಕೆಟ್ ಅಗತ್ಯವಿದೆ.

134 – ಫಖರ್ ಜಮಾನ್ (4866) ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 5000 ರನ್ ಪೂರೈಸಲು 134 ರನ್​ಗಳ ಅಗತ್ಯವಿದೆ.

33- ಏಕದಿನ ಕ್ರಿಕೆಟ್​ನಲ್ಲಿ 3000 ರನ್ ಪೂರೈಸಲು ಇಮಾಮ್-ಉಲ್-ಹಕ್ (2967) ಗೆ 33 ರನ್​ಗಳ ಅಗತ್ಯವಿದೆ.

    14- ಕೆಎಲ್ ರಾಹುಲ್ (1986) 2000 ಏಕದಿನ ರನ್ ಪೂರೈಸಲು 14 ರನ್​ಗಳ ಅಗತ್ಯವಿದೆ.

    Exit mobile version