ಇಸ್ಲಾಮಾಬಾದ್: ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕುಸ್ತಿ ಪಟು ಅಲಿ ಅಸದ್ (Ali Asad) ಅವರು ಕೆಲ ತಿಂಗಳ ಹಿಂದೆ ಬರ್ಮಿಂಗ್ಹಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಗೆದ್ದಿದ್ದ ಕಂಚಿನ ಪದಕವನ್ನು ಹಿಂಪಡೆಯಲಾಗಿದೆ. ನಿಷೇಧಿತ ಮಾದಕವಸ್ತು ಸೇವನೆ ಮಾಡಿದ ಆರೋಪವಿದ್ದ ಕಾರಣ, ಅವರನ್ನು ತಪಾಸಣೆಗೊಳಪಡಿಸಿದಾಗ ಸೇವಿಸಿದ್ದು ನಿಜ ಎಂಬುದು ಸಾಬೀತಾಗಿದೆ.
ಅಲಿ ಅಸದ್ ಅವರು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ನ್ಯೂಜಿಲೆಂಡ್‌ನ ಸೂರಜ್ ಸಿಂಗ್ ಅವರನ್ನು ೫೭ ಕೆ.ಜಿ ವಿಭಾಗದ ಕುಸ್ತಿಯಲ್ಲಿ ಸೋಲಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಆದರೆ, ಅವರು ಕಾಮನ್ವೆಲ್ತ್ ಗೇಮ್ಸ್‌ಗಾಗಿ ವಿಮಾನ ಹತ್ತುವ ಮೊದಲು ಪಾಕಿಸ್ತಾನದಲ್ಲಿ ಉದ್ದೀಪನಾ ಮದ್ದು ಸೇವಿಸಿದ್ದರು ಎಂಬುದು ಸಾಬೀತಾಗಿದೆ.
ಕುಸ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಬೇಕು ಎಂಬ ಕಾರಣಕ್ಕಾಗಿ ಅಲಿ ಅಸದ್ ಉದ್ದೀಪನಾ ಮದ್ದು ಸೇವಿಸಿದ್ದರು ಎಂದು ತಿಳಿದುಬಂದಿದೆ. ಇವರು ಪದಕ ಗೆದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರವು ನಗದು ಬಹುಮಾನವನ್ನೂ ನೀಡಿತ್ತು. ಅದೇ ಪಾಕಿಸ್ತಾನದ ಸ್ಪೋರ್ಟ್ಸ್ ಬೋರ್ಡ್ ನಡೆಸಿದ ತಪಾಸಣೆ ವೇಳೆ ಅಲಿ ಅಸದ್ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ | Doping Test | ಕರ್ನಾಟಕದ ಪೂವಮ್ಮಗೆ ಎರಡು ವರ್ಷ ನಿಷೇಧ, ಶಿಕ್ಷೆಯ ಪ್ರಮಾಣ 3 ತಿಂಗಳಿಂದ 2 ವರ್ಷಕ್ಕೆ ಏರಿಕೆ