Ali Asad | ಉದ್ದೀಪನಾ ಮದ್ದು ಸೇವನೆ, ಪಾಕ್‌ ಕುಸ್ತಿಪಟುವಿನ ಕಾಮನ್ವೆಲ್ತ್ ಗೇಮ್ಸ್‌ ಮೆಡಲ್‌ ವಾಪಸ್‌ - Vistara News

ಕ್ರೀಡೆ

Ali Asad | ಉದ್ದೀಪನಾ ಮದ್ದು ಸೇವನೆ, ಪಾಕ್‌ ಕುಸ್ತಿಪಟುವಿನ ಕಾಮನ್ವೆಲ್ತ್ ಗೇಮ್ಸ್‌ ಮೆಡಲ್‌ ವಾಪಸ್‌

ಅಲಿ ಅಸದ್‌ (Ali Asad) ಅವರು ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ನ್ಯೂಜಿಲೆಂಡ್‌ನ ಸೂರಜ್‌ ಸಿಂಗ್‌ ಅವರನ್ನು 57 ಕೆ.ಜಿ ವಿಭಾಗದ ಕುಸ್ತಿಯಲ್ಲಿ ಸೋಲಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.

VISTARANEWS.COM


on

Ali Asad
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಸ್ಲಾಮಾಬಾದ್:‌ ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕುಸ್ತಿ ಪಟು ಅಲಿ ಅಸದ್‌ (Ali Asad) ಅವರು ಕೆಲ ತಿಂಗಳ ಹಿಂದೆ ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಗೆದ್ದಿದ್ದ ಕಂಚಿನ ಪದಕವನ್ನು ಹಿಂಪಡೆಯಲಾಗಿದೆ. ನಿಷೇಧಿತ ಮಾದಕವಸ್ತು ಸೇವನೆ ಮಾಡಿದ ಆರೋಪವಿದ್ದ ಕಾರಣ, ಅವರನ್ನು ತಪಾಸಣೆಗೊಳಪಡಿಸಿದಾಗ ಸೇವಿಸಿದ್ದು ನಿಜ ಎಂಬುದು ಸಾಬೀತಾಗಿದೆ.

ಅಲಿ ಅಸದ್‌ ಅವರು ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ನ್ಯೂಜಿಲೆಂಡ್‌ನ ಸೂರಜ್‌ ಸಿಂಗ್‌ ಅವರನ್ನು ೫೭ ಕೆ.ಜಿ ವಿಭಾಗದ ಕುಸ್ತಿಯಲ್ಲಿ ಸೋಲಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಆದರೆ, ಅವರು ಕಾಮನ್ವೆಲ್ತ್‌ ಗೇಮ್ಸ್‌ಗಾಗಿ ವಿಮಾನ ಹತ್ತುವ ಮೊದಲು ಪಾಕಿಸ್ತಾನದಲ್ಲಿ ಉದ್ದೀಪನಾ ಮದ್ದು ಸೇವಿಸಿದ್ದರು ಎಂಬುದು ಸಾಬೀತಾಗಿದೆ.

ಕುಸ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಬೇಕು ಎಂಬ ಕಾರಣಕ್ಕಾಗಿ ಅಲಿ ಅಸದ್‌ ಉದ್ದೀಪನಾ ಮದ್ದು ಸೇವಿಸಿದ್ದರು ಎಂದು ತಿಳಿದುಬಂದಿದೆ. ಇವರು ಪದಕ ಗೆದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರವು ನಗದು ಬಹುಮಾನವನ್ನೂ ನೀಡಿತ್ತು. ಅದೇ ಪಾಕಿಸ್ತಾನದ ಸ್ಪೋರ್ಟ್ಸ್‌ ಬೋರ್ಡ್‌ ನಡೆಸಿದ ತಪಾಸಣೆ ವೇಳೆ ಅಲಿ ಅಸದ್‌ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ | Doping Test | ಕರ್ನಾಟಕದ ಪೂವಮ್ಮಗೆ ಎರಡು ವರ್ಷ ನಿಷೇಧ, ಶಿಕ್ಷೆಯ ಪ್ರಮಾಣ 3 ತಿಂಗಳಿಂದ 2 ವರ್ಷಕ್ಕೆ ಏರಿಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Milind Kumar : ಆರ್​ಸಿಬಿಯ ಮಾಜಿ ಆಟಗಾರ ಕ್ರಿಕೆಟ್​ನಿಂದ ನಿವೃತ್ತಿ

Milind Kumar: ಹೌದು, ಭಾರತದಲ್ಲಿ ಕ್ರಿಕೆಟ್​ನಿಂದ ನಿವೃತ್ತರಾಗುವ ನನ್ನ ನಿರ್ಧಾರವನ್ನು ನಾನು ಬಿಸಿಸಿಐಗೆ ತಿಳಿಸಿದ್ದೇನೆ. ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ಇಶಾಂತ್ ಶರ್ಮಾ ಅವರಂತಹ ಶ್ರೇಷ್ಠ ಆಟಗಾರರೊಂದಿಗೆ ದೆಹಲಿ ಪರ ಆಡು

VISTARANEWS.COM


on

dilip Kumar
Koo

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಭಾಗವಾಗಿದ್ದ ಮಿಲಿಂದ್ ಕುಮಾರ್ (Milind Kumar) ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಅವರು ಈಗ ಯುಎಸ್ಎಯಲ್ಲಿ ಮೈನರ್ ಲೀಗ್ ಕ್ರಿಕೆಟ್​ನೊಂದಿಗೆ ಸಹಿ ಹಾಕಿದ್ದಾರೆ. ಅಲ್ಲಿ ಅವರು ಫಿಲಡೆಲ್ಫಿಯನ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಭಾರತದ ಅಂಡರ್-19 ತಂಡದ ಮಾಜಿ ನಾಯಕ ಉನ್ಮುಕ್ತ್ ಚಾಂದ್​ ಅವರು ಭಾರತೀಯ ಕ್ರಿಕೆಟ್​ನಿಂದ ನಿವೃತ್ತರಾಗಿ ಅಮೆರಿಕಕ್ಕೆ ತೆರಳಿದ್ದರು. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಸ್ಮಿತ್ ಪಟೇಲ್, ಹರ್ಮೀತ್ ಸಿಂಗ್ ಮತ್ತು ಸಿದ್ಧಾರ್ಥ್ ತ್ರಿವೇದಿ ಎಂಐಎಲ್​​ಸಿ ಸೇರಿದ್ದರು.

ಬಿಸಿಸಿಐ ನಿಯಮದ ಪ್ರಕಾರ, ಒಬ್ಬ ಆಟಗಾರ (ಪುರುಷ) ಭಾರತೀಯ ಕ್ರಿಕೆಟ್​ನಿಂದ ನಿವೃತ್ತರಾಗದಿದ್ದರೆ ಇತರ ಲೀಗ್​ಗಳಲ್ಲಿ ಆಡಲು ಸಾಧ್ಯವಿಲ್ಲ. “ಹೌದು, ಭಾರತದಲ್ಲಿ ಕ್ರಿಕೆಟ್​ನಿಂದ ನಿವೃತ್ತರಾಗುವ ನನ್ನ ನಿರ್ಧಾರವನ್ನು ನಾನು ಬಿಸಿಸಿಐಗೆ ತಿಳಿಸಿದ್ದೇನೆ. ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ಇಶಾಂತ್ ಶರ್ಮಾ ಅವರಂತಹ ಶ್ರೇಷ್ಠ ಆಟಗಾರರೊಂದಿಗೆ ದೆಹಲಿ ಪರ ಆಡುವುದನ್ನು ನಾನು ಆನಂದಿಸಿದೆ. ಇದು ಮುಂದುವರಿಯುವ ಸಮಯ ಎಂದು ಮಿಲಿಂದ್ ಕುಮಾರ್ ತಿಳಿಸಿದ್ದಾರೆ.

ರಣಜಿ ವಿವರ

2018-19ರ ರಣಜಿ ಟ್ರೋಫಿ ಋತುವಿನಲ್ಲಿ 1000 ಕ್ಕೂ ಹೆಚ್ಚು ರನ್ ಗಳಿಸಿದ್ದ ಮಿಲಿಂದ್ ಕುಮಾರ್, 2014 ರ ಐಪಿಎಲ್​​ನಲ್ಲಿ ದೆಹಲಿ ತಂಡದ ಭಾಗವಾಗಿದ್ದರು. 2019 ರ ಋತುವಿನಲ್ಲಿ ಆರ್​ಸಿಬಿಯೊಂದಿಗೆ ಇದ್ದರು. ಆದಾಗ್ಯೂ, ಆ ಎರಡು ಋತುಗಳಲ್ಲಿ ಐಪಿಎಲ್​ಗೆ ಪಾದಾರ್ಪಣೆ ಮಾಡಲು ಅವರಿಗೆ ಅವಕಾಶ ಸಿಗಲಿಲ್ಲ.

ಇದನ್ನೂ ಓದಿ: Gautam Gambhir : ಗೌತಮ್​ ಗಂಭೀರ್ ಟೀಮ್ ಇಂಡಿಯಾದ ಮುಂದಿನ ಕೋಚ್​​?

ದೇಶೀಯ ಕ್ರಿಕೆಟ್​ನಲ್ಲಿ ದೆಹಲಿ, ಸಿಕ್ಕಿಂ ಮತ್ತು ತ್ರಿಪುರಾವನ್ನು ಪ್ರತಿನಿಧಿಸಿದ ಅವರು 46.68 ಸರಾಸರಿಯಲ್ಲಿ 9 ಶತಕಗಳು ಮತ್ತು 15 ಅರ್ಧಶತಕಗಳೊಂದಿಗೆ 2988 ಪ್ರಥಮ ದರ್ಜೆ ರನ್ ಗಳಿಸಿದ್ದಾರೆ. ಅವರು 2023 ರ ಲಿಸ್ಟ್-ಎ ರನ್ಗಳನ್ನು 43.04 ಸರಾಸರಿಯಲ್ಲಿ ಮತ್ತು 1176 ಟಿ 20 ರನ್​ಗಳನ್ನು 29.40 ಸರಾಸರಿಯಲ್ಲಿ ಗಳಿಸಿದ್ದಾರೆ.

2013 ರಲ್ಲಿ ಇಂಗ್ಲೆಂಡ್ ತಂಡವನ್ನು ಅಭ್ಯಾಸ ಪಂದ್ಯದಲ್ಲಿ ಸೋಲಿಸಿದ ದೆಹಲಿ ತಂಡದ ಭಾಗವಾಗಿದ್ದರು, ಅಲ್ಲಿ ಅವರು 85 ಎಸೆತಗಳಲ್ಲಿ 78* ರನ್ ಗಳಿಸಿದ್ದರು. ಅವರು 2017ರಲ್ಲಿ ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮಂಡಳಿಯ ಅಧ್ಯಕ್ಷರ ಇಲೆವೆನ್ ಅನ್ನು ಪ್ರತಿನಿಧಿಸಿದರು.

ಬಿಸಿಸಿಐ ಅಡಿಯಲ್ಲಿ ಕ್ರಿಕೆಟ್ ತೊರೆದ ನಂತರ, ಮಿಲಿಂದ್ ಕುಮಾರ್ ಈಗ ಇತರ ಫ್ರ್ಯಾಂಚೈಸ್ ಲೀಗ್​ಗಳಲ್ಲಿ ಆಡಲು ಅರ್ಹರಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಭಾರತೀಯ ಕ್ರಿಕೆಟ್​​ನಲ್ಲಿ ವಿದಾಯ ಹೇಳಿದ ಸ್ಮಿತ್ ಪಟೇಲ್ ಅವರನ್ನು ಈ ವರ್ಷದ ಕೆರಿಬಿಯನ್ ಪ್ರೀಮಿಯರ್ ಲೀಗ್ಗೆ ಬಾರ್ಬಡೋಸ್ ಟ್ರೈಡೆಂಟ್ಸ್ ಆಯ್ಕೆ ಮಾಡಿದೆ.

Continue Reading

ದೇಶ

Reliance Jio: ಜಿಯೋ ಏರ್‌ಫೈಬರ್, ಜಿಯೋಫೈಬರ್, ಜಿಯೋ ಮೊಬಿಲಿಟಿ ಗ್ರಾಹಕರಿಗೆ ಫ್ಯಾನ್ ಕೋಡ್ ಒಟಿಟಿ ಸಬ್‌ಸ್ಕ್ರಿಪ್ಷನ್!

Reliance Jio: ಜಿಯೋದಿಂದ ದೇಶದಾದ್ಯಂತ ಇರುವ ಕ್ರೀಡಾ ಉತ್ಸಾಹಿಗಳಿಗೆ ಹೊಸ ಹಾಗೂ ರೋಮಾಂಚಕ ಡಿಜಿಟಲ್ ಅನುಭವವನ್ನು ಪರಿಚಯಿಸಲಾಗಿದ್ದು, ಜಿಯೋ ಏರ್‌ಫೈಬರ್, ಜಿಯೋಫೈಬರ್ ಹಾಗೂ ಜಿಯೋ ಮೊಬಿಲಿಟಿ ಪ್ರೀಪ್ರೇಯ್ಡ್ ಗ್ರಾಹಕರು ಇದೀಗ ‘ಫ್ಯಾನ್ ಕೋಡ್’ಎಂಬ ಪ್ರೀಮಿಯಂ ಕ್ರೀಡಾ ಒಟಿಟಿ ಅಪ್ಲಿಕೇಷನ್‌ಗೆ ಕಾಂಪ್ಲಿಮೆಂಟರಿ ಸಬ್‌ಸ್ಕ್ರಿಪ್ಷನ್ ಪಡೆಯಬಹುದಾಗಿದೆ. ಇದರಲ್ಲಿ ಫ್ಯಾನ್ ಕೋಡ್‌ನ ಎಕ್ಸ್‌ಕ್ಲೂಸಿವ್‌ ಫಾರ್ಮುಲಾ ಒನ್ ಪ್ರಸಾರದ ಕಂಟೆಂಟ್ ಸಂಪರ್ಕ ಸಹ ಪಡೆಯಬಹುದಾಗಿದ್ದು, ಜಿಯೋ ಏರ್‌ಫೈಬರ್, ಜಿಯೋಫೈಬರ್ ಮತ್ತು ಜಿಯೋ ಮೊಬಿಲಿಟಿಯ ಆಯ್ದ ಅರ್ಹ ಗ್ರಾಹಕರಿಗೆ ಮಾತ್ರ ಈ ಕಾಂಪ್ಲಿಮೆಂಟರಿ ಪ್ಲಾನ್ ಅನ್ವಯಿಸುತ್ತವೆ.

VISTARANEWS.COM


on

Fan Code OTT Subscription Now for Jio AirFiber JioFiber Jio Mobility Customers
Koo

ಮುಂಬೈ: ದೇಶದಾದ್ಯಂತ ಇರುವ ಕ್ರೀಡಾ ಉತ್ಸಾಹಿಗಳಿಗೆ ಜಿಯೋದಿಂದ ಹೊಸ ಹಾಗೂ ರೋಮಾಂಚಕ ಡಿಜಿಟಲ್ ಅನುಭವವನ್ನು ಪರಿಚಯಿಸಲಾಗಿದ್ದು, ಜಿಯೋ ಏರ್‌ಫೈಬರ್, ಜಿಯೋಫೈಬರ್ ಹಾಗೂ ಜಿಯೋ ಮೊಬಿಲಿಟಿ (Reliance Jio) ಪ್ರೀಪ್ರೇಯ್ಡ್ ಗ್ರಾಹಕರು ಇದೀಗ ‘ಫ್ಯಾನ್ ಕೋಡ್’ ಎಂಬ ಪ್ರೀಮಿಯಂ ಕ್ರೀಡಾ ಒಟಿಟಿ ಅಪ್ಲಿಕೇಷನ್‌ಗೆ ಕಾಂಪ್ಲಿಮೆಂಟರಿ ಸಬ್‌ಸ್ಕ್ರಿಪ್ಷನ್ ಪಡೆಯಬಹುದಾಗಿದೆ.

ಈ ಆಫರ್ ಮೂಲಕ ಜಿಯೋ ಗ್ರಾಹಕರು ರೋಮಾಂಚಕವಾದ ಮತ್ತು ಕ್ರೀಡೆಯಲ್ಲಿಯೇ ಅತ್ಯುತ್ತಮವಾದ ನೇರಪ್ರಸಾರದ ಅನುಭವವನ್ನು ಪಡೆಯಬಹುದು. ಇದರಲ್ಲಿ ಫ್ಯಾನ್ ಕೋಡ್‌ನ ಎಕ್ಸ್‌ಕ್ಲೂಸಿವ್‌ ಫಾರ್ಮುಲಾ ಒನ್ ಪ್ರಸಾರದ ಕಂಟೆಂಟ್ ಸಂಪರ್ಕ ಸಹ ಪಡೆಯಬಹುದಾಗಿದ್ದು, ಜಿಯೋ ಏರ್‌ಫೈಬರ್, ಜಿಯೋಫೈಬರ್ ಮತ್ತು ಜಿಯೋ ಮೊಬಿಲಿಟಿಯ ಆಯ್ದ ಅರ್ಹ ಗ್ರಾಹಕರಿಗೆ ಮಾತ್ರ ಈ ಕಾಂಪ್ಲಿಮೆಂಟರಿ ಪ್ಲಾನ್ ಅನ್ವಯಿಸುತ್ತವೆ.

ಜಿಯೋ ಏರ್‌ಫೈಬರ್ ಮತ್ತು ಜಿಯೋಫೈಬರ್ ಗ್ರಾಹಕರು 1199 ರೂಪಾಯಿ ಮತ್ತು ಮೇಲ್ಪಟ್ಟ ಪ್ಲಾನ್‌ಗೆ ಸಬ್‌ಸ್ಕ್ರಿಪ್ಷನ್ ಪಡೆದಾಗ ಕಾಂಪ್ಲಿಮೆಂಟರಿ ಆಗಿ ಫ್ಯಾನ್ ಕೋಡ್ ಪಡೆಯುವುದಕ್ಕೆ ಅರ್ಹರು. ಅದೇ ರೀತಿ ಜಿಯೋ ಮೊಬಿಲಿಟಿ ಪ್ರಿಪೇಯ್ಡ್ ಗ್ರಾಹಕರು ತಮ್ಮ ಈಗಿರುವ ರೂ. 398, ರೂ. 1198, ರೂ. 4498 ಪ್ಲಾನ್‌ಗಳ ಮೂಲಕ ಅಥವಾ ಹೊಚ್ಚ ಹೊಸದಾದ 3333 ರೂಪಾಯಿಯ ವಾರ್ಷಿಕ ಪ್ಲಾನ್ ಬಳಸುತ್ತಿದ್ದಲ್ಲಿ ಈ ಕಾಂಪ್ಲಿಮೆಂಟರಿ ಫ್ಯಾನ್ ಕೋಡ್ ಪಡೆಯಬಹುದು. ಯಾವುದೇ ಹೆಚ್ಚುವರಿಯಾದ ಶುಲ್ಕ ಇಲ್ಲದೆ ಈ ಕಾಂಪ್ಲಿಮೆಂಟರಿ ಯೋಜನೆ ಸೇರ್ಪಡೆ ಆಗುತ್ತದೆ. ಹೊಸ ಹಾಗೂ ಈಗಾಗಲೇ ಗ್ರಾಹಕರಾದವರಿಗೆ ಈ ಪ್ಲಾನ್ ದೊರೆಯುತ್ತದೆ.

ಇದನ್ನೂ ಓದಿ: Tatkal Tickets: ಕೊನೆ ಘಳಿಗೆಯಲ್ಲಿ ರೈಲು ಪ್ರಯಾಣಕ್ಕೆ ತತ್ಕಾಲ್‌ ಟಿಕೆಟ್‌ ಪಡೆಯುವುದು ಹೇಗೆ?

ಫ್ಯಾನ್ ಕೋಡ್ ಎಂಬುದು ಪ್ರಮುಖ ಕ್ರೀಡಾ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್. ಇದು ಇಂಟರ್ ಆಕ್ಟಿವ್ ನೇರ ಪ್ರಸಾರವನ್ನು ತರುತ್ತದೆ. ಪ್ರೀಮಿಯರ್ ಕ್ರಿಕೆಟ್ ಪಂದ್ಯಾವಳಿಗಳು, ಮಹಿಳಾ ಕ್ರಿಕೆಟ್, ಫುಟ್‌ಬಾಲ್ ನೇರಪ್ರಸಾರ, ಬ್ಯಾಸ್ಕೆಟ್ ಬಾಲ್, ಬೇಸ್ ಬಾಲ್, ಕುಸ್ತಿ, ಬ್ಯಾಡ್ಮಿಂಟನ್ ಮತ್ತು ಇತರ ಪ್ರಮುಖ ಕ್ರೀಡಾ ಕಾರ್ಯಕ್ರಮಗಳು ಪ್ರಸಾರ ಆಗುತ್ತವೆ. ಫಾರ್ಮುಲಾ 1 ಉತ್ಸಾಹಿಗಳ ಮಧ್ಯೆ ಇದು ಬಹಳ ಖ್ಯಾತಿಯನ್ನು ಪಡೆದಿದೆ. 2024 ಮತ್ತು 2025ನೇ ಇಸವಿಗೆ ಫಾರ್ಮುಲಾ 1 ಭಾರತದ ಪ್ರಸಾರ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಬಳಕೆದಾರರು ನೈಜ ಸಮಯದ ಪಂದ್ಯದ ಮುಖ್ಯಾಂಶಗಳು, ಸಂಪೂರ್ಣ ಮ್ಯಾಚ್ ವಿಡಿಯೋಗಳು, ಭಾರತೀಯ ಕ್ರಿಕೆಟ್ ಪ್ರಮುಖಾಂಶಗಳು, ದತ್ತಾಂಶ, ಅಂಕಿ-ಅಂಶಗಳು, ಗಹನವಾದ ವಿಶ್ಲೇಷಣೆ, ಫ್ಯಾಂಟಸಿ ಸ್ಪೋರ್ಟ್ಸ್ ಒಳನೋಟಗಳು, ಮತ್ತು ವಿಶ್ವ ಮಟ್ಟದ ಕ್ರೀಡೆಗೆ ಸಂಬಂಧಿಸಿದ ಬ್ರೇಕಿಂಗ್ ಸುದ್ದಿ ಇವೆಲ್ಲವೂ ದೊರೆಯುತ್ತವೆ.

ಕಾಂಪ್ಲಿಮೆಂಟರಿ ಸಂಪರ್ಕದಿಂದ ಏನೇನು ದೊರೆಯಲಿದೆ?

ಪ್ರೀಮಿಯಂ ಫ್ಯಾನ್ ಕೋಡ್ ಕಂಟೆಂಟ್

ಫ್ಯಾನ್ ಕೋಡ್‌ನ ಎಕ್ಸ್‌ಕ್ಲೂಸಿವ್ ಆದ ಕ್ರೀಡಾ ಕಂಟೆಂಟ್‌ಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಜಿಯೋಟಿವಿ+ ಅಥವಾ ಜಿಯೋಟಿವಿ ಅಪ್ಲಿಕೇಷನ್ ಮೂಲಕ ವೀಕ್ಷಣೆ ಮಾಡಬಹುದು.

ಇದನ್ನೂ ಓದಿ: Delhi Airport: ಹಾರುತ್ತಿದ್ದ ವಿಮಾನದಲ್ಲಿ ಅಗ್ನಿ ಅವಘಡ; ದೆಹಲಿ ಏರ್‌ಪೋರ್ಟ್‌ನಲ್ಲಿ ಎಮರ್ಜನ್ಸಿ ಘೋಷಣೆ!

ಎಫ್1 ಸಂಪರ್ಕ

2024 ಮತ್ತು 2025ನೇ ಋತುವಿಗೆ ಫಾರ್ಮುಲಾ 1 ಭಾರತದ ಪ್ರಸಾರ ಹಕ್ಕುಗಳನ್ನು ಫ್ಯಾನ್ ಕೋಡ್ ತನ್ನದಾಗಿಸಿಕೊಂಡಿದೆ. ಭಾರತೀಯ ಅಭಿಮಾನಿಗಳು ರೇಸ್‌ಗಳನ್ನು ಫ್ಯಾನ್ ಕೋಡ್ ಮೂಲಕ ಸ್ಮಾರ್ಟ್ ಟೀವಿಗಳು, ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್ ಗಳಲ್ಲಿ ವೀಕ್ಷಿಸಬಹುದು. ಇನ್ನು ಕವರೇಜ್‌ನಲ್ಲಿ ಅಭ್ಯಾಸ, ಅರ್ಹತಾ ಸೆಷನ್‌ಗಳು, ಸ್ಪ್ರಿಂಟ್ ರೇಸ್‌ಗಳು ಹಾಗೂ ಗ್ರಾಂಡ್ ಪ್ರಿಕ್ಸ್ ಒಳಗೊಂಡಿರುತ್ತದೆ.

ವಿಸ್ತೃತವಾದ ಕವರೇಜ್

ಪ್ರಮುಖ ಕ್ರೀಡಾ ಪಂದ್ಯಾವಳಿಗಳ ನೇರಪ್ರಸಾರ, ಆಳವಾದ ವಿಶ್ಲೇಷಣೆ ಮತ್ತು ರಿಯಲ್ ಟೈಮ್ ವಿಶ್ಲೇಷಣೆ ಇರುತ್ತದೆ.

ಸಮಗ್ರವಾದ ಸ್ಪೋರ್ಟ್ಸ್ ಲೈಬ್ರರಿ

ಪಂದ್ಯಾವಳಿಯ ಪ್ರಮುಖಾಂಶಗಳು, ಸಂಪೂರ್ಣವಾದ ಅಂಕಿ- ಅಂಶ, ಮತ್ತು ಕ್ರೀಡಾ ಒಳನೋಟಕ್ಕೆ ಸಂಪರ್ಕ ದೊರೆಯುತ್ತದೆ.

ತಾಜಾ ಸುದ್ದಿ ಬಗ್ಗೆ ಅಪ್‌ಡೇಟ್

ಭಾರತೀಯ ಕ್ರಿಕೆಟ್ ಮತ್ತು ಜಾಗತಿಕ ಕ್ರೀಡೆಗಳ ತಾಜಾ ಸುದ್ದಿ ಬಗ್ಗೆ ಅಪ್‌ಡೇಟ್ ದೊರೆಯುತ್ತದೆ.

ಹೊಸ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್

ಜಿಯೋದಿಂದ ಹೊಸದಾಗಿ 3333 ರೂ. ಪ್ಲಾನ್ ಇದ್ದು, ಇದರಲ್ಲಿ 2.5 ಜಿಬಿ/ದಿನಕ್ಕೆ ನೀಡುತ್ತಿದೆ, ಈ ಪ್ಲ್ಯಾನ್ ಜತೆಗೆ ಕಾಂಪ್ಲಿಮೆಂಟರಿ ಆಗಿ ಫ್ಯಾನ್‌ಕೋಡ್ ಚಂದಾದಾರಿಕೆ ದೊರೆಯುತ್ತದೆ.

ಇದನ್ನೂ ಓದಿ: SSLC 2024 Exam 2: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫೇಲ್‌ ಆದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿ ಮುಂದೂಡಿಕೆ

ಜಿಯೋ ಏರ್‌ಫೈಬರ್, ಜಿಯೋಫೈಬರ್ ಮತ್ತು ಮತ್ತು ಪ್ರಿಪೇಯ್ಡ್ ಮೊಬಿಲಿಟಿ ಪ್ಲಾನ್ ಬಳಕೆದಾರರು ಅರ್ಹ ಯೋಜನೆಗಳನ್ನು ಹೊಂದಿದ್ದಲ್ಲಿ ಈಗ ಕ್ರೀಡಾ ಜಗತ್ತಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು, ಅದರಲ್ಲೂ ವಿಶೇಷವಾಗಿ ಎಫ್ 1ಗೆ ಸಂಬಂಧಿಸಿದಂತೆ ಈ ಹಿಂದೆಂದಿಗಿಂತಲೂ ಹೆಚ್ಚು ತೊಡಗಿಸಿಕೊಳ್ಳಬಹುದು. ಈ ಕೊಡುಗೆಯು ಜಿಯೋ ಬಳಕೆದಾರರಿಗೆ ಹೆಚ್ಚಿನ ಗುಣಮಟ್ಟದ ಕ್ರೀಡಾ ಕಂಟೆಂಟ್‌ಗೆ ಸಂಪರ್ಕ ಹೊಂದಿದ್ದು, ಮನರಂಜನೆ, ಸುದ್ದಿ, ಆಧ್ಯಾತ್ಮಿಕ ಇತ್ಯಾದಿ ಕಂಟೆಂಟ್‌ಗಳು ಸಹ ಇದ್ದು, ಇತರ ಪ್ರಕಾರಗಳಲ್ಲಿ ಕಂಟೆಂಟ್‌ನ ವಿಶಾಲವಾದ ಲೈಬ್ರರಿಯನ್ನು ಹೊಂದಿದೆ ಎಂದು ಖಚಿತಪಡಿಸುತ್ತದೆ. ಇದರಿಂದಾಗಿ ಬಳಕೆದಾರರ ವೀಕ್ಷಣೆಯ ಅನುಭವವನ್ನು ಹೆಚ್ಚಿಸುತ್ತದೆ ಮತ್ತು ಅವರ ನೆಚ್ಚಿನ ಆನ್-ಡಿಮಾಂಡ್ ವಿಡಿಯೋಗಳೊಂದಿಗೆ ಯಾವಾಗಲೂ ಸಂಪರ್ಕದಲ್ಲಿ ಇರಿಸುತ್ತದೆ ಎಂದು ತಿಳಿಸಿದೆ.

Continue Reading

ಕ್ರಿಕೆಟ್

Gautam Gambhir : ಗೌತಮ್​ ಗಂಭೀರ್ ಟೀಮ್ ಇಂಡಿಯಾದ ಮುಂದಿನ ಕೋಚ್​​?

Gautam Gambhir : ಮುಂದಿನ ತಿಂಗಳು ಟಿ 20 ವಿಶ್ವಕಪ್ ಮುಗಿದ ನಂತರ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಈ ಬಾರಿ ವಿಸ್ತರಣೆ ಅವಧಿ ಸ್ವೀಕರಿಸದಿರಲು ಭಾರತದ ಮಾಜಿ ನಾಯಕ ನಿರ್ಧರಿಸಿದ್ದಾರೆ. ಅವರ ಮೂಲ ಒಪ್ಪಂದವು ಏಕದಿನ ವಿಶ್ವಕಪ್ ನಂತರ ಕಳೆದ ವರ್ಷವೇ ಕೊನೆಗೊಂಡಿತ್ತು ಆದರೆ ಟಿ 20 ವಿಶ್ವಕಪ್ ವರೆಗೆ ಕೋಚ್ ಆಗಿ ಮುಂದುವರಿಯಲು ಬಿಸಿಸಿಐ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.

VISTARANEWS.COM


on

Koo

ಬೆಂಗಳೂರು: ಟೀಂ ಇಂಡಿಯಾದ ಮಾಜಿ ಆರಂಭಿಕ ಬ್ಯಾಟರ್​ ಗೌತಮ್ ಗಂಭೀರ್ (Gautam Gambhir) ಟೀಮ್ ಇಂಡಿಯಾದ ಮುಂದಿನ ಮುಖ್ಯ ಕೋಚ್ ಆಗುವುದು ಬಹುತೇಕ ಖಚಿತವಾಗಿದೆ. ಬಿಸಿಸಿಐ ಪ್ರಸ್ತುತ ರಾಹುಲ್ ದ್ರಾವಿಡ್ ಅವರ ಬದಲಿ ಆಟಗಾರನನ್ನು ಹುಡುಕುತ್ತಿದೆ. ಈಗಾಗಲೇ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅವರಲ್ಲಿ ಗೌತಮ್ ಗಂಭೀರ್ ಅವರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಬಿಸಿಸಿಐ ಯೋಜನೆ ರೂಪಿಸಿದೆ.

ಮುಂದಿನ ತಿಂಗಳು ಟಿ 20 ವಿಶ್ವಕಪ್ ಮುಗಿದ ನಂತರ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಈ ಬಾರಿ ವಿಸ್ತರಣೆ ಅವಧಿ ಸ್ವೀಕರಿಸದಿರಲು ಭಾರತದ ಮಾಜಿ ನಾಯಕ ನಿರ್ಧರಿಸಿದ್ದಾರೆ. ಅವರ ಮೂಲ ಒಪ್ಪಂದವು ಏಕದಿನ ವಿಶ್ವಕಪ್ ನಂತರ ಕಳೆದ ವರ್ಷವೇ ಕೊನೆಗೊಂಡಿತ್ತು ಆದರೆ ಟಿ 20 ವಿಶ್ವಕಪ್ ವರೆಗೆ ಕೋಚ್ ಆಗಿ ಮುಂದುವರಿಯಲು ಬಿಸಿಸಿಐ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.

ಅಂತಿಮವಾಗಿ ದ್ರಾವಿಡ್ ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ ಗೌತಮ್ ಗಂಭೀರ್ ಅವರನ್ನು ಬದಲಿಯಾಗಿ ಬಿಸಿಸಿಐ ಬಯಸಿದೆ ಎಂದು ಇಎಸ್​​ಪಿಎನ್​ ಕ್ರಿಕ್ಇನ್ಫೋ ವರದಿ ಮಾಡಿದೆ. ಮಾಜಿ ಬ್ಯಾಟರ್​ ಬಿಸಿಸಿಐನ ವಿಶ್ ಲಿಸ್ಟ್​ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: rfan Pathan : ಕಹಿ ನೆನಪು; ಬುರ್ಖಾ ಧರಿಸದ ಪತ್ನಿ ಜತೆ ಫೋಟೋ ತೆಗಿಸಿಕೊಳ್ಳಲು ಒಪ್ಪದ ಇರ್ಫಾನ್ ಪಠಾಣ್​​

ವರದಿಯ ಪ್ರಕಾರ, ಬಿಸಿಸಿಐ ಈಗಾಗಲೇ ಗೌತಮ್ ಗಂಭೀರ್ ಅವರನ್ನು ಸಂಪರ್ಕಿಸಿದೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ನ ಅಭಿಯಾನವು ಕೊನೆಗೊಂಡ ನಂತರ ಈ ವಿಷಯದ ಬಗ್ಗೆ ಹೆಚ್ಚಿನ ಚರ್ಚೆ ನಡೆಯುವ ನಿರೀಕ್ಷೆಯಿದೆ. ವಿಶ್ವಕಪ್ ವಿಜೇತ ಆಟಗಾರ ಪ್ರಸ್ತುತ ಕೆಕೆಆರ್ಗೆ ಮಾರ್ಗದರ್ಶಕರಾಗಿ ತಮ್ಮ ವೃತ್ತಿಯನ್ನು ನಡೆಸುತ್ತಿದ್ದಾರೆ. ಐಪಿಎಲ್ ಫೈನಲ್ ಪಂದ್ಯದ ಬಳಿಕ ಮೇ 27ರಂದು ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಗೌತಮ್ ಗಂಭೀರ್ ಅವರ ಕೋಚಿಂಗ್ ಅನುಭವ


ಗೌತಮ್ ಗಂಭೀರ್ ಅವರು ಅಂತಾರಾಷ್ಟ್ರೀಯ ಅಥವಾ ರಾಜ್ಯ ತಂಡಕ್ಕೆ ತರಬೇತುದಾರರಾಗಿ ತಮ್ಮ ವೃತ್ತಿಜೀವನವನ್ನು ಇನ್ನೂ ನಡೆಸಿಲ್ಲ. ಆದಾಗ್ಯೂ, ಮಾಜಿ ಕ್ರಿಕೆಟಿಗ ಕಳೆದ ಮೂರು ಋತುಗಳಲ್ಲಿ ಐಪಿಎಲ್ ಫ್ರಾಂಚೈಸಿಗಳೊಂದಿಗೆ ತರಬೇತುದಾರರಾಗಿ ಸಂಬಂಧ ಹೊಂದಿದ್ದರು. 2022 ಮತ್ತು 2023ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದರು. ಅವರ ಅಧಿಕಾರಾವಧಿಯಲ್ಲಿ, ಎಲ್ಎಸ್​ಜಿ ಎರಡೂ ಋತುಗಳಲ್ಲಿ ಪ್ಲೇಆಫ್​ಗೆ ಅರ್ಹತೆ ಪಡೆಯಿತು.

ಪ್ರಸಕ್ತ ಋತುವಿನಲ್ಲಿ, ಅವರು ಕೆಕೆಆರ್ಗೆ ಸೇರಲು ನಿರ್ಧರಿಸಿದರು ಮತ್ತು ತಕ್ಷಣದ ಪರಿಣಾಮ ಬೀರಿದ್ದಾರೆ. ಕೆಕೆಆರ್ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನವನ್ನು ಪಡೆದ ನಂತರ ಪ್ಲೇಆಫ್ಗೆ ಅರ್ಹತೆ ಪಡೆದಿದೆ. ಗೌತಮ್ ಗಂಭೀರ್ ದೊಡ್ಡ ಸಂದರ್ಭಗಳಲ್ಲಿ ಪ್ರದರ್ಶನ ನೀಡುವ ಖ್ಯಾತಿಯನ್ನು ಹೊಂದಿದ್ದಾರೆ.

2007ರ ಟಿ20 ವಿಶ್ವಕಪ್ ಫೈನಲ್ ಹಾಗೂ 2011ರ ವಿಶ್ವಕಪ್ ಫೈನಲ್ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಐಪಿಎಲ್ನಲ್ಲಿ ಗಂಭೀರ್ 2012 ರಲ್ಲಿ ಕೆಕೆಆರ್ ತಂಡವನ್ನು ಚೊಚ್ಚಲ ಪ್ರಶಸ್ತಿಗೆ ಮುನ್ನಡೆಸಿದರು ಮತ್ತು 2014 ರಲ್ಲಿ ಮತ್ತೊಂದು ಪ್ರಶಸ್ತಿಗೆ ಮಾರ್ಗದರ್ಶನ ನೀಡಿದರು. 2014ರಲ್ಲಿ ಕೆಕೆಆರ್ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯ ಫೈನಲ್ಗೆ ಅರ್ಹತೆ ಪಡೆದಿತ್ತು.

Continue Reading

ಕ್ರೀಡೆ

Irfan Pathan : ಕಹಿ ನೆನಪು; ಬುರ್ಖಾ ಧರಿಸದ ಪತ್ನಿ ಜತೆ ಫೋಟೋ ತೆಗಿಸಿಕೊಳ್ಳಲು ಒಪ್ಪದ ಇರ್ಫಾನ್ ಪಠಾಣ್​​

Irfan Pathan: ಫೆಬ್ರವರಿ 2024 ರಲ್ಲಿ, ದಂಪತಿ ತಮ್ಮ 8 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದರು. ಆ ಸಮಯದಲ್ಲಿ ಇರ್ಫಾನ್ ಪಠಾಣ್ ತಮ್ಮ ಹೆಂಡತಿಯ ಮುಖವನ್ನು ಮೊದಲ ಬಾರಿಗೆ ಅನಾವರಣಗೊಳಿಸಿದ್ದರು. ಈ ಕ್ರಮವು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವ್ಯಕ್ತಿಗಳಿಂದ ಗಮನಾರ್ಹ ಟೀಕೆಗೆ ಗುರಿಯಾಯಿತು. ಕೆಲವರು ಅವರನ್ನು ಅನಗತ್ಯವಾಗಿ ಟೀಕೆ ಮಾಡಿದ್ದರು.

VISTARANEWS.COM


on

Irfan Pathan
Koo

ಬೆಂಗಳೂರು: ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಮತ್ತು ಸ್ವಿಂಗ್ ಬೌಲರ್ ಇರ್ಫಾನ್ ಪಠಾಣ್ (Irfan Pathan) ತಮ್ಮ ಪತ್ನಿ ಸಫಾ ಬೇಗ್ ಅವರೊಂದಿಗೆ ಮುಂಬೈನ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದರು. ಆದಾಗ್ಯೂ ಅವರು ಪರ್ದಾ (ಬುರ್ಖಾ) ಇಲ್ಲದೆ ಅವರೊಂದಗಿಎ ಫೋಟೋಗಳನ್ನು ತೆಗೆದುಕೊಳ್ಳಲು ಇರ್ಫಾನ್​ ಪಠಾಣ್​ ಪಾಪರಾಜಿಗಳಿಗೆ (ಫೋಟೊಗ್ರಾಫರ್​ಗಳಿಗೆ) ನಿರಾಕರಿಸಿದ ಪ್ರಸಂಗ ನಡೆಯಿತು. ಸಾಮಾನ್ಯವಾಗಿ ಪಠಾಣ್ ಪತ್ನಿ ಸಫಾ ಬುರ್ಖಾ ಧರಿಸಿಕೊಂಡಿರುತ್ತಾರೆ. ಆದರೆ ಈ ಬಾರಿ ಕರಿ ವರ್ಣದ ಬಟ್ಟೆಯಲ್ಲಿದ್ದರು. ಹಿಂದೊಮ್ಮೆ ಅವರು ಮುಖವನ್ನು ಮುಚ್ಚದೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಳಿಕ ಆನ್ ಲೈನ್ ನಲ್ಲಿ ಟೀಕೆ ಮತ್ತು ಟ್ರೋಲ್ ಗಳನ್ನು ಎದುರಿಸಬೇಕಾಯಿತು.

ಫೆಬ್ರವರಿ 2024 ರಲ್ಲಿ, ದಂಪತಿ ತಮ್ಮ 8 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದರು. ಆ ಸಮಯದಲ್ಲಿ ಇರ್ಫಾನ್ ಪಠಾಣ್ ತಮ್ಮ ಹೆಂಡತಿಯ ಮುಖವನ್ನು ಮೊದಲ ಬಾರಿಗೆ ಅನಾವರಣಗೊಳಿಸಿದ್ದರು. ಈ ಕ್ರಮವು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವ್ಯಕ್ತಿಗಳಿಂದ ಗಮನಾರ್ಹ ಟೀಕೆಗೆ ಗುರಿಯಾಯಿತು. ಕೆಲವರು ಅವರನ್ನು ಅನಗತ್ಯವಾಗಿ ಟೀಕೆ ಮಾಡಿದ್ದರು.

ಕೆಲವು ವರ್ಷಗಳ ಹಿಂದೆ ಇರ್ಫಾನ್ ಪಠಾಣ್ ತಮ್ಮ ಪತ್ನಿ ಸಫಾ ಬೇಗ್ ಅವರ ಮುಖವನ್ನು ತೋರಿಸದೇ ಇದ್ದಿದ್ದಕ್ಕೆ ಟ್ರೋಲ್ ಎದುರಿಸಿದ್ದರು. ಆದಾಗ್ಯೂ, ಸಫಾ ಬೇಗ್ ತನ್ನ ಪತಿಯನ್ನು ಬೆಂಬಲಿಸಿದ್ದರು. ಅವೆಲ್ಲವೂ ನಮ್ಮ ಆಯ್ಕೆ ಎಂದು ಹೇಳಿದ್ದರು.

ಇದನ್ನೂ ಓದಿ: Dubbing Premier League : ಶನಿವಾರದಿಂದ 3ನೇ ಆವೃತ್ತಿಯ ಡಬ್ಬಿಂಗ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ

ಫೋಟೋ ಭಯ

ಇರ್ಫಾನ್ ಪಠಾಣ್ ತಮ್ಮ ಪತ್ನಿ ಸಫಾ ಮತ್ತು ಮಗನೊಂದಿಗೆ ಬಾಂದ್ರಾದ ಕೆಫೆಯಲ್ಲಿ ವಿಹಾರಿಸುತ್ತಿದ್ದರು. ಪಾಪರಾಜಿಗಳ ಗುಂಪು ಪಠಾಣ್ ಅವರನ್ನು ಹಿಂಬಾಲಿಸಿ ಅವರ ಕುಟುಂಬದ ಫೋಟೋಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿತು. ಆದರೆ ಸಫಾ ಅವರಿಂದ ಆತುರದಿಂದ ಹೊರಟುಹೋದರು. ಇದರಿಂದ ಸಿಟ್ಟಿಗೆದ್ದ ಇರ್ಫಾನ್ ಪಠಾಣ್ ತಮ್ಮ ಪತ್ನಿಯ ಫೋಟೋ ತೆಗೆಯದಂತೆ ಪಾಪರಾಜಿಗಳಿಗೆ ಮನವಿ ಮಾಡಿದರು.

ಇರ್ಫಾನ್ ಪಠಾಣ್ ವೃತ್ತಿಜೀವನ

ಕ್ರಿಕೆಟ್​ನಿಂದ ನಿವೃತ್ತಿಯಾದ ನಂತರ, ಬಹು-ಪ್ರತಿಭಾವಂತ ಇರ್ಫಾನ್ ಪಠಾಣ್ ವಿವಿಧ ಅನ್ವೇಷಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರು ಆಟದ ಬಗ್ಗೆ ಆಳವಾದ ತಿಳುವಳಿಕೆಯೊಂದಿಗೆ ಕ್ರಿಕೆಟ್ ವಿಶ್ಲೇಷಕ ಮತ್ತು ವೀಕ್ಷಕವಿವರಣೆಗಾರರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಪೋಷಿಸುವ ಗುರಿಯೊಂದಿಗೆ ಅವರು ತಮ್ಮ ಸಹೋದರನೊಂದಿಗೆ ಕ್ರಿಕೆಟ್ ಅಕಾಡೆಮಿ ಆಫ್ ಪಠಾಣ್ಸ್ ಅನ್ನು ಸ್ಥಾಪಿಸಿದ್ದಾರೆ. ವಿಶೇಷವೆಂದರೆ 2015 ರಲ್ಲಿ, ಅವರು ನೃತ್ಯ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯ ಮತ್ತೊಂದು ಮುಖವನ್ನು ಪ್ರದರ್ಶಿಸಿದ್ದರು.

ತೀರಾ ಇತ್ತೀಚೆಗೆ ಅವರು ಬಹರಾಂಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ತಮ್ಮ ಸಹೋದರ ಯೂಸುಫ್ ಪಠಾಣ್ ಅವರನ್ನು ಬೆಂಬಲಿಸಿ ಮತಯಾಚಿಸಿದರು.

Continue Reading
Advertisement
Narendra modi
ದೇಶ1 min ago

Narendra Modi: ಕಾಂಗ್ರೆಸ್‌ ಗೆದ್ದರೆ ಬುಲ್ಡೋಜರ್‌ನಿಂದ ರಾಮಮಂದಿರ ನೆಲಸಮ ಎಂದ ಮೋದಿ!

ಕರ್ನಾಟಕ32 mins ago

Rain News: ಮುಧೋಳದಲ್ಲಿ ಸಿಡಿಲಿಗೆ ಬಾಲಕಿ ಬಲಿ; ಚನ್ನರಾಯಪಟ್ಟಣ, ಗುಂಡ್ಲುಪೇಟೆ ಸೇರಿ ವಿವಿಧೆಡೆ ವರುಣಾರ್ಭಟ

dilip Kumar
ಪ್ರಮುಖ ಸುದ್ದಿ34 mins ago

Milind Kumar : ಆರ್​ಸಿಬಿಯ ಮಾಜಿ ಆಟಗಾರ ಕ್ರಿಕೆಟ್​ನಿಂದ ನಿವೃತ್ತಿ

Fan Code OTT Subscription Now for Jio AirFiber JioFiber Jio Mobility Customers
ದೇಶ49 mins ago

Reliance Jio: ಜಿಯೋ ಏರ್‌ಫೈಬರ್, ಜಿಯೋಫೈಬರ್, ಜಿಯೋ ಮೊಬಿಲಿಟಿ ಗ್ರಾಹಕರಿಗೆ ಫ್ಯಾನ್ ಕೋಡ್ ಒಟಿಟಿ ಸಬ್‌ಸ್ಕ್ರಿಪ್ಷನ್!

Gopi Hinduja
ವಿದೇಶ53 mins ago

Gopi Hinduja: ನಮ್ಮನ್ನಾಳಿದ ಬ್ರಿಟನ್‌ನಲ್ಲಿ ಭಾರತದ ಉದ್ಯಮಿಯೇ ಅತ್ಯಂತ ಸಿರಿವಂತ; ಯಾರಿವರು?

AC visited Gandabommanahalli Goshala and inspected
ವಿಜಯನಗರ2 hours ago

Vijayanagara News: ಗಂಡಬೊಮ್ಮನಹಳ್ಳಿಯ ಗೋಶಾಲೆಗೆ ಉಪ ವಿಭಾಗಾಧಿಕಾರಿ ಭೇಟಿ, ಪರಿಶೀಲನೆ

Application Invited for TTTI and Toyota Skill Courses from Toyota Technical Training Institute
ಕರ್ನಾಟಕ2 hours ago

Toyota: ಟೊಯೊಟಾ ಕೌಶಲ್ಯ ಕೋರ್ಸ್‌ಗೆ ಅರ್ಜಿ ಆಹ್ವಾನ; ಗ್ರಾಮೀಣ ಯುವಕರೇ ಈ ಅವಕಾಶ ಬಳಸಿಕೊಳ್ಳಿ

SSLC Exam 2024
ಕರ್ನಾಟಕ2 hours ago

SSLC 2024 Exam 2: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫೇಲ್‌ ಆದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿ ಮುಂದೂಡಿಕೆ

ಕ್ರಿಕೆಟ್2 hours ago

Gautam Gambhir : ಗೌತಮ್​ ಗಂಭೀರ್ ಟೀಮ್ ಇಂಡಿಯಾದ ಮುಂದಿನ ಕೋಚ್​​?

Retirement Plan
ಮನಿ ಗೈಡ್2 hours ago

Retirement Plan: ನಿವೃತ್ತಿ ನಂತರ ನೆಮ್ಮದಿ ಜೀವನ ನಡೆಸಬೇಕೆ? ಈ 5 ಯೋಜನೆಗಳನ್ನು ಮರೆಯಬೇಡಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ2 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ16 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ18 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌