ಮುಂಬಯಿ: ಐಪಿಎಲ್ 2024ರ ಮೊದಲು ಹಲವಾರು ಅನಿರೀಕ್ಷಿತ ಪ್ರಸಂಗಗಳು ನಡೆಯುತ್ತಿವೆ. ಪ್ರಮುಖವಾಗಿ ಮುಂಬಯಿ ಇಂಡಿಯನ್ಸ್ ತಂಡದಲ್ಲಿ ಭಾರೀ ಬದಲಾವಣೆ ಘಟಿಸಿದೆ. ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಗುಜರಾತ್ ಜೈಂಟ್ಸ್ ತಂಡದಿಂದ ಮುಂಬಯಿ ತಂಡಕ್ಕೆ 15 ಕೋಟಿ ರೂಪಾಯಿಯ ಟ್ರೇಡ್ ಮಾಡಿ ಕರೆ ತಂದಾಗ ದೊಡ್ಡ ಬದಲಾವಣೆ ನಿರೀಕ್ಷೆ ಮಾಡಲಾಗಿತ್ತು. ಅಂತೆಯೇ ಆಗಿದ್ದು ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
– Won IPL Trophy 2013.
— CricketMAN2 (@ImTanujSingh) December 15, 2023
– Won IPL Trophy 2015.
– Won IPL Trophy 2017.
– Won IPL Trophy 2019.
– Won IPL Trophy 2020.
Rohit Sharma won 5 IPL Trophies for Mumbai Indians and now End of a Golden Era Rohit as Captain – He is one of the Greatest ever in the world. pic.twitter.com/hxmW2KMb6R
ಹಾರ್ದಿಕ್ ಪಾಂಡ್ಯ ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹೊಸ ನಾಯಕರಾಗಿದ್ದಾರೆ. 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಐದು ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದ ರೋಹಿತ್ ಶರ್ಮಾ ಅವರ ಸ್ಥಾನವನ್ನು ಅವರು ತುಂಬಲಿದ್ದಾರೆ. ಹೀಗಾಗಿ ಅವರನ್ನು ರೋಹಿತ್ ಶರ್ಮಾ ಅವರಿಗೆ ಅವಮಾನ ಮಾಡಲಾಗಿದೆಯೇ ಎಂಬುದೆಯೇ ಎಂಬ ಪ್ರಶ್ನೆಯನ್ನು ಅವರ ಅಭಿಮಾನಿಗಳು ಕೇಳಿದ್ದಾರೆ.
HARDIK PANDYA WILL LEAD MUMBAI INDIANS IN IPL 2024…!!! pic.twitter.com/lFVgaxhZmM
— Johns. (@CricCrazyJohns) December 15, 2023
ಕ್ರಿಕೆಟ್ ಅಭಿಮಾನಿಗಳು ಈ ಬದಲಾವಣೆಯಿಂದ ಸಂತೋಷಪಟ್ಟಿದ್ದಾರೆ. ಆದರೆ ಅವರು ಕೆಲವರು ಖಂಡಿತವಾಗಿಯೂ ಬೇಸರಕ್ಕೆ ಒಳಗಾಗಿದ್ದಾರೆ. ರೋಹಿತ್ ಶರ್ಮಾಗೆ ಇದು ಒಂದು ಯುಗದ ಅಂತ್ಯವಾಗಿದೆ. ಐಪಿಎಲ್ ಇತಿಹಾಸದಲ್ಲಿ ಗೆಲುವಿನ ಶೇಕಡಾವಾರು ದೃಷ್ಟಿಯಿಂದ ಅವರು ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ 158 ಪಂದ್ಯಗಳನ್ನು ಆಡಿದ್ದಾರೆ, 89 ಪಂದ್ಯಗಳನ್ನು ಗೆದ್ದಿದ್ದಾರೆ.
5 times champion Rohit Sharma hitman is sacked from Mumbai Indians
— Sporty Girl (@Sporty_Girl360) December 15, 2023
ಹಾರ್ದಿಕ್ ಪಾಂಡ್ಯ ಅವರನ್ನು ನೇಮಿಸುವ ಮೂಲಕ 10 ವರ್ಷಗಳ ಕಾಲ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ರೋಹಿತ್ ಶರ್ಮಾಗೆ ಅವಮಾನ ಮಾಡಲಾಗಿದೆ. ಅವರಿಗೆ ಅಗೌರವ ತೋರಲಾಗಿದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Pakistan Cricket Team : ಪಾಕ್ ಆಟಗಾರನ ಕಳ್ಳಾಟ ಕಂಡು ಮೈದಾನದಲ್ಲೇ ಬೆಂಡೆತ್ತಿದ ಅಂಪೈರ್
ಅತ್ಯಂತ ಯಶಸ್ವಿ ಐಪಿಎಲ್ ತಂಡವಾಗಿರುವ ಮುಂಬಯಿ ಇಂಡಿಯನ್ಸ್ ಹಿರಿಯ ಆಟಗಾರನನ್ನು ನಾಯಕತ್ವದಿಂದ ತೆಗೆದು ಹಾಕಿರುವುದು ಸರಿಯಾದ ಕ್ರಮವಲ್ಲ ಎಂಬುದಾಗಿ ಅಭಿಮಾನಿಗಳು ಹೇಳಿಕೆ ನೀಡಿದ್ದಾರೆ.
ಅಚ್ಚರಿಯ ನಿರ್ಧಾರ; ಪಾಂಡ್ಯಗೆ ಮುಂಬಯಿ ಇಂಡಿಯನ್ಸ್ ನಾಯಕತ್ವ ಪಟ್ಟ
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಮುಂಬೈ ಇಂಡಿಯನ್ಸ್ ಐಪಿಎಲ್ 2024 ಋತುವಿಗೆ ಫ್ರಾಂಚೈಸಿಗೆ ಹಿಂದಿರುಗಿದ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಿಸಿದೆ. ರೋಹಿತ್ ಶರ್ಮಾ ಅವರ 10 ವರ್ಷಗಳ ನಾಯಕತ್ವದ ನಂತರ ಹಾರ್ದಿಕ್ ತಂಡದ ಮುಂದಾಳತ್ವ ವಹಿಸಿಕೊಂಡಿದ್ದಾರೆ. 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಐಪಿಎಲ್ ಚಾಂಪಿಯನ್ಸ್ ಪಟ್ಟದ ಕಡೆಗೆ ಮುನ್ನಡೆಸಿದ ಹಾರ್ದಿಕ್, ಎರಡು ವರ್ಷಗಳ ನಂತರ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದರು. ಪಾಂಡ್ಯ ಅವರ ನೇಮಕದ ಹೊರತಾಗಿಯೂ 10 ವರ್ಷ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಮಾಹಿತಿ ಲಭ್ಯವಿಲ್ಲ. ಅವರು ನಾಯಕತ್ವದ ಹೊರತಾಗಿಯೂ ತಂಡದಲ್ಲಿ ಮುಂದುವರಿಯುವರೇ ಎಂದು ಕಾದು ನೋಡಬೇಕಾಗಿದೆ.
“ಇದು ಪರಂಪರೆಯನ್ನು ನಿರ್ಮಿಸುವ ಭಾಗವಾಗಿದೆ ಮತ್ತು ಭವಿಷ್ಯಕ್ಕೆ ನಿರ್ಧಾರವಾಗಿದೆ. ಈ ತತ್ವಕ್ಕೆ ಅನುಗುಣವಾಗಿ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ” ಎಂದು ತಂಡದ ಜಾಗತಿಕ ಪ್ರದರ್ಶನ ಮುಖ್ಯಸ್ಥ ಮಹೇಲಾ ಜಯವರ್ಧನೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ರೋಹಿತ್ ಶರ್ಮಾ ಅವರ ಅಸಾಧಾರಣ ನಾಯಕತ್ವಕ್ಕಾಗಿ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ. 2013 ರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಅವರ ಅಧಿಕಾರಾವಧಿ ಅಸಮಾನ್ಯವಾಗಿದೆ. ಅವರ ನಾಯಕತ್ವವು ತಂಡಕ್ಕೆ ಸಾಟಿಯಿಲ್ಲದ ಯಶಸ್ಸನ್ನು ತಂದುಕೊಟ್ಟಿದೆ ಮಾತ್ರವಲ್ಲ, ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿ ಅವರ ಸ್ಥಾನವನ್ನು ಭದ್ರಪಡಿಸಿದೆ ಎಂದು ಹೇಳಿದ್ದಾರೆ.