Site icon Vistara News

Pankaj Advani: 26ನೇ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ​​ ಗೆದ್ದ ಕನ್ನಡಿಗ ಪಂಕಜ್ ಅಡ್ವಾಣಿ

Pankaj Advani

ದೋಹಾ: ಭಾರತದ ಹೆಮ್ಮೆಯ ಹಾಗೂ ಅನುಭವಿ ಬಿಲಿಯರ್ಡ್ಸ್ ತಾರೆ ಪಂಕಜ್ ಅಡ್ವಾಣಿ(Pankaj Advani) ಅವರು ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್(World Billiards Championship) ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಮೂಲಕ 26ನೇ(26th time Billiards Championship) ವಿಶ್ವ ಬಿಲಿಯರ್ಡ್ಸ್ ಗೆದ್ದ ಸಾಧನೆ ಮಾಡಿದ್ದಾರೆ. ಫೈನಲ್​ನಲ್ಲಿ ಭಾರತದವರೇ ಆದ ಸೌರವ್ ಕೊಠಾರಿ(Sourav Kothari) ಅವರನ್ನು ಸೋಲಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿದರು.

2003 ರಲ್ಲಿ ಮೊದಲ ಬಾರಿ ವಿಶ್ವ ಪ್ರಶಸ್ತಿ ಗೆದ್ದ ಪಂಕಜ್ ಅಡ್ವಾಣಿ ಅವರು ಇದೀಗ ಒಂಬತ್ತನೇ ಬಾರಿಗೆ ‘ಲಾಂಗ್ ಫಾರ್ಮ್ಯಾಟ್ ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಅಲ್ಲದೆ ಎಂಟು ಬಾರಿ ‘ಪಾಯಿಂಟ್ ಫಾರ್ಮ್ಯಾಟ್’ ಚಾಂಪಿಯನ್‌ಶಿಪ್‌ನಲ್ಲಿ ಜಯಗಳಿಸಿದ್ದಾರೆ. ಒಂದು ಬಾರಿ ವಿಶ್ವ ಟೀಮ್ ಬಿಲಿಯರ್ಡ್ಸ್ ಚಾಂಪಿಯನ್​ಶಿಫ್​ ಗೆದ್ದಿದ್ದಾರೆ.

ಜಿದ್ದಾಜಿದ್ದಿನ ಪಂದ್ಯ

ಮೊದಲ ಒಂದು ಗಂಟೆಯ ಆಟದಲ್ಲಿ 26-180ರಿಂದ ಹಿನ್ನಡೆಯಲ್ಲಿದ್ದ ಅಡ್ವಾಣಿ 2018ರ ವಿಶ್ವ ಚಾಂಪಿಯನ್ ಕೊಥಾರಿ ಅವರನ್ನು 1000-416 ಅಂತರದಿಂದ ಮಣಿಸಿದರು. ಉಭಯ ಆಟಗಾರರ ಈ ಹೋರಾಟ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿತ್ತು. ಒಂದು ಹಂತದಲ್ಲಿ ಅಡ್ವಾನಿ ಸೋಲು ಕಾಣುವ ಸ್ಥಿತಿಯಲ್ಲಿದ್ದರು. ಆದರೆ ಅಂತಿಮ ಕ್ಷಣದಲ್ಲಿ ತಮ್ಮ ಎಲ್ಲ ಅನುಭವವನ್ನು ಮುಂದಿಟ್ಟು ಆಡಿ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು. ಕಳೆದ ವರ್ಷ ಕೌಲಾಲಂಫುರದಲ್ಲಿ ನಡೆದ ಟೂರ್ನಿಯಲ್ಲೂ ಉಭಯ ಆಟಗಾರರು ಫೈನಲ್​ನಲ್ಲಿ ಮುಖಾಮುಖಿಯಾಗಿದ್ದರು.

ಇದನ್ನೂ ಓದಿ Sports Movies: ಕ್ರಿಕೆಟ್‌ ಆಧಾರಿತ ಟಾಪ್‌ 10 ಬಾಲಿವುಡ್‌ ಚಿತ್ರಗಳಿವು

ಸೆಮಿ ಫೈನಲ್​ ಪಂದ್ಯದಲ್ಲಿ ಕೊಥಾರಿ ಅವರು ಧ್ರುವ್ ಸಿಟ್ವಾಲಾರನ್ನು 900-756 ಅಂತರದಿಂದ ಮಣಿಸಿದ್ದರು. ಸುಮಾರು 5 ಗಂಟೆಗಳ ಕಾಲ ಈ ಪಂದ್ಯ ಸಾಗಿತ್ತು. ಮತ್ತೊಂದು ಸೆಮಿಯಲ್ಲಿ ಅಡ್ವಾಣಿ ಅವರು ಭಾರತದ ಇನ್ನೋರ್ವ ಸ್ಪರ್ಧಿ ರೂಪೇಶ್ ಶಾರನ್ನು 900-273 ಅಂತರದಿಂದ ಸೋಲಿಸಿದ್ದರು.

14 ವರ್ಷ ಇರುವಾಗಲೇ ಸ್ನೂಕರ್​ ಆಡುಲು ಆರಂಭಿಸಿದ ಕನ್ನಡಿಗ ಪಂಕಜ್ ಅಡ್ವಾಣಿ ಈ ಕ್ರಿಡೆಯಲ್ಲಿ ಅಮೋಘ ಸಾಧನೆ ಮಾಡುತ್ತಲೇ ಇದ್ದಾರೆ. ಇವರ ಕ್ರೀಡಾ ಸಾಧನೆಗೆ ಭಾರತ ಸರ್ಕಾರದಿಂದ ಅರ್ಜುನ ಪ್ರಶಸ್ತಿ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Exit mobile version