ಪ್ಯಾರಿಸ್: ಜಗತ್ತಿನ ಅತಿದೊಡ್ಡ ಕ್ರೀಡಾಕೂಟವಾದ ಪ್ಯಾರಿಸ್ನಲ್ಲಿ(Paris 2024 Olympics) ನಡೆಯುತ್ತಿರುವ ಒಲಿಂಪಿಕ್ಸ್ ಉದ್ಘಾಟನ ಸಮಾರಂಭದಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ವಸ್ತ್ರ ವಿನ್ಯಾಸ(Team India’s Olympic Outfits) ಮಾಡಿದ್ದ ವಿನ್ಯಾಸಕಾರ ತರುಣ್ ತಹಿಲಿಯಾನಿಗೆ(Tarun Tahiliani) ನೆಟ್ಟಿಗರು ಹಿಗ್ಗಾಮುಗ್ಗಾ ಬೈದಿದ್ದಾರೆ. ಅಂಬಾನಿ ಮಗನ ಮದುವೆ ವಿಚಾರ ಬಂದಾಗ ನೀವು ಮಾಸ್ಟರ್‌ಪೀಸ್ ಆದ ಡ್ರೆಸ್‌ಗಳನ್ನು ವಿನ್ಯಾಸ ಮಾಡುತ್ತೀರಿ. ದೇಶದ ವಿಚಾರ ಬಂದಾಗ ಇಂಥ ಕೆಟ್ಟ ವಿನ್ಯಾಸದ ಡ್ರೆಸ್ ಮಾಡುತ್ತೀರಿ. ಭಾರತದ ಕ್ರೀಡಾಪಟುಗಳು ಧರಿಸಿದ್ದ ಸಮವಸ್ತ್ರಗಳು ಕಳೆಪೆ ಗುಣಮಟ್ಟದ್ದಾಗಿತ್ತು, ದೇಶಕ್ಕೆ ಅವಮಾನ ಮಾಡುವ ರೀತಿಯತ್ತು ಎಂದು ಟೀಕೆ ವ್ಯಕ್ತಪಡಿಸಿದ್ದಾರೆ.
ಪಥಸಂಚಲನಕ್ಕೂ ಮುನ್ನ ಧ್ವಜಧಾರಿಗಳಾದ ಪಿವಿ.ವಿ ಸಿಂಧು ಮತ್ತು ಶರತ್ ಕಮಲ್ ಸೇರಿದಂತೆ ಹಲವು ಭಾರತೀಯ ಕ್ರೀಡಾಪಟುಗಳು ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ವಿನ್ಯಾಸ ಮಾಡಲಾಗಿದ್ದ ಸಮವಸ್ತ್ರ ಧರಿಸಿದ್ದ ಚಿತ್ರಗಳನ್ನು ಹಂಚಿಕೊಂಡಿದ್ದರು. ಈ ಫೋಟೊ ಕಂಡ ನೆಟ್ಟಿಗರು ಭಾರತೀಯರ ಸಮವಸ್ತ್ರದ ವಿನ್ಯಾಸ ಕಳಪೆ ಗುಣಮಟ್ಟದ್ದಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ ಸಮವಸ್ತ್ರ ವಿನ್ಯಾಸಗೊಳಿಸಿದ ತರುಣ್ ತಹಿಲಿಯಾನಿಯ ಅವರನ್ನು ಟ್ರೋಲ್ ಮಾಡಿದ್ದಾರೆ.
“ಡಾ. ನಂದಿತಾ ಅಯ್ಯರ್ ಎನ್ನುವ ನೆಟ್ಟಿಗರೊಬ್ಬರು ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ, ‘ಹಲೋ ತರುಣ್ ತಹಲಿಯಾನಿ, ಇದಕ್ಕಿಂತ ಉತ್ತಮವಾದ ಸೀರೆಗಳನ್ನು ನಾನು ಮುಂಬೈನ ಬೀದಿಗಳಲ್ಲಿ ಬರೀ 200 ರೂಪಾಯಿಗೆ ನೋಡಿದ್ದೇನೆ. ಆದರೆ, ನೀವು ಡಿಸೈನ್ ಮಾಡಿದ್ದು ಸಮಾರಂಭಕ್ಕೆ ಧರಿಸುವ ಸೀರೆಗಳಾಗಿರಲಿಲ್ಲ. ಅತ್ಯಂತ ಕಳಪೆ ಮಟ್ಟದಿಂದ ಕೂಡಿದ ವಿನ್ಯಾಸ ಇದಾಗಿತ್ತು. ಇದನ್ನು ನೋಡುವಾಗ ಡೆಡ್‌ಲೈನ್‌ಗೆ ಮೂರು ನಿಮಿಷ ಬಾಕಿ ಇರುವಾಗ ತರಾತುರಿಯಲ್ಲಿ ಪ್ರಿಂಟ್ ಮಾಡಿದ ಡಿಸೈನ್ನಂತೆ ತೋರುತ್ತಿದೆ. ದೇಶದಲ್ಲಿರುವ ಶ್ರೀಮಂತ ಜವಳಿ ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ನೀವು ಮಾಡಿದ ಅವಮಾನ ಇದಾಗಿದೆ” ಎಂದು ಬರೆದುಕೊಂಡು ಟೀಕಿಸಿದ್ದಾರೆ.
ಇಂದು ಭಾರತದ ಸ್ಪರ್ಧೆಗಳ ವಿವರ
ಬ್ಯಾಡ್ಮಿಂಟನ್ (ಆರಂಭ: ಮಧ್ಯಾಹ್ನ 12.45)
ಪುರುಷರ ಸಿಂಗಲ್ಸ್ ಗ್ರೂಪ್ ಹಂತ: ಎಚ್.ಎಸ್. ಪ್ರಣಯ್, ಲಕ್ಷ್ಯ ಸೇನ್.
ಮಹಿಳಾ ಸಿಂಗಲ್ಸ್ ಗ್ರೂಪ್ ಹಂತ: ಪಿ.ವಿ. ಸಿಂಧು.
ಪುರುಷರ ಡಬಲ್ಸ್ ಗ್ರೂಪ್ ಹಂತ: ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್.
ಮಹಿಳಾ ಡಬಲ್ಸ್ ಗ್ರೂಪ್ ಹಂತ: ತನಿಷಾ ಕ್ರಾಸ್ಟೊ-ಅಶ್ವಿನಿ ಪೊನ್ನಪ್ಪ.
ಶೂಟಿಂಗ್ (ಮಧ್ಯಾಹ್ನ12.45)
ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಅರ್ಹತಾ ಸುತ್ತು: ಇಳವೆನಿಲ್ ವಲರಿವನ್, ರಮಿತಾ ಜಿಂದಲ್.
ಪುರುಷರ 10 ಮೀ. ಏರ್ ಪಿಸ್ತೂಲ್ ಫೈನಲ್
ಪುರುಷರ 10 ಮೀ. ಏರ್ ರೈಫಲ್ ಅರ್ಹತಾ ಸುತ್ತು: ಸಂದೀಪ್ ಸಿಂಗ್, ಅರ್ಜುನ್ ಬಬುಟ.(ಮಧ್ಯಾಹ್ನ 2.45)
ವನಿತೆಯರ 10 ಮೀ. ಏರ್ ಪಿಸ್ತೂಲ್ ಫೈನಲ್: ಮನು ಭಾಕರ್ (ಮಧ್ಯಾಹ್ನ, 3.30)
ಆರ್ಚರಿ
ಮಹಿಳೆಯರ ತಂಡ ಸ್ಪರ್ಧೆ, 16ರ ಸುತ್ತು: ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್. (ಮಧ್ಯಾಹ್ನ 1.00)
ಮಹಿಳಾ ತಂಡದ ಕಂಚಿನ ಸ್ಪರ್ಧೆ.(ರಾತ್ರಿ 8.18)
ಮಹಿಳಾ ತಂಡದ ಚಿನ್ನದ ಸ್ಪರ್ಧೆ.(ರಾತ್ರಿ 8.41)
ರೋಯಿಂಗ್
ಪುರುಷರ ಸಿಂಗಲ್ ಸ್ಕಲ್ಸ್ ರೆಪಿಶಾಜ್ ಸುತ್ತು: ಬಲ್ರಾಜ್ ಪನ್ವರ್.(ಮಧ್ಯಾಹ್ನ 1.06)
ಟೇಬಲ್ ಟೆನಿಸ್
ಪುರುಷರ ಸಿಂಗಲ್ಸ್: ಶರತ್ ಕಮಲ್, ಹರ್ಮೀತ್ ದೇಸಾಯಿ.
ಮಹಿಳಾ ಸಿಂಗಲ್ಸ್: ಮಣಿಕಾ ಬಾತ್ರಾ, ಶ್ರೀಜಾ ಅಕುಲಾ.(ಮಧ್ಯಾಹ್ನ 1.30)
ಬಾಕ್ಸಿಂಗ್
ಪುರುಷರ 51 ಕೆಜಿ, 32ರ ಸುತ್ತು: ಅಮಿತ್ ಪಂಘಲ್.(ಮಧ್ಯಾಹ್ನ 2.30)
ಪುರುಷರ 71 ಕೆಜಿ, 32ರ ಸುತ್ತು: ನಿಶಾಂತ್ ದೇವ್.(ಮಧ್ಯಾಹ್ನ 3.02)
ಮಹಿಳೆಯರ 50 ಕೆಜಿ, 32ರ ಸುತ್ತು: ನಿಖತ್ ಜರೀನ್ (ಸಂಜೆ 4.06)
ಈಜು
ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್ ಹೀಟ್ಸ್: ಶ್ರಿಹರಿ ನಟರಾಜ್.
ವನಿತೆಯರ 200 ಮೀ. ಫ್ರೀಸ್ಟೈಲ್ ಹೀಟ್ಸ್: ಧಿನಿಧಿ ದೇಸಿಂಗೂ. (ಮಧ್ಯಾಹ್ನ 2.30)
ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್ ಸೆಮಿಫೈನಲ್. (ತಡರಾತ್ರಿ 1.02)
ಮಹಿಳೆಯರ 200 ಮೀ. ಫ್ರೀಸ್ಟೈಲ್ ಸೆಮಿಫೈನಲ್.(ತಡರಾತ್ರಿ 1.20.)
ಟೆನಿಸ್
ಪುರುಷರ ಸಿಂಗಲ್ಸ್ ಮೊದಲ ಸುತ್ತು: ಸುಮಿತ್ ನಾಗಲ್.
ಪುರುಷರ ಡಬಲ್ಸ್: ರೋಹನ್ ಬೋಪಣ್ಣ-ಶ್ರೀರಾಮ್ ಬಾಲಾಜಿ(ಮಧ್ಯಾಹ್ನ 3.30)