Paris 2024 Olympics: ಭಾರತೀಯ ಕ್ರೀಡಾಪಟುಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದ ತರುಣ್‌ ವಿರುದ್ಧ ಟೀಕೆಗಳ ಸುರಿಮಳೆ - Vistara News

ಕ್ರೀಡೆ

Paris 2024 Olympics: ಭಾರತೀಯ ಕ್ರೀಡಾಪಟುಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದ ತರುಣ್‌ ವಿರುದ್ಧ ಟೀಕೆಗಳ ಸುರಿಮಳೆ

Paris 2024 Olympics: ನೆಟ್ಟಿಗರು ಭಾರತೀಯರ ಸಮವಸ್ತ್ರದ ವಿನ್ಯಾಸ ಕಳಪೆ ಗುಣಮಟ್ಟದ್ದಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ ಸಮವಸ್ತ್ರ ವಿನ್ಯಾಸಗೊಳಿಸಿದ ತರುಣ್‌ ತಹಿಲಿಯಾನಿಯ ಅವರನ್ನು ಟ್ರೋಲ್​ ಮಾಡಿದ್ದಾರೆ.

VISTARANEWS.COM


on

Paris 2024 Olympics
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್‌: ಜಗತ್ತಿನ ಅತಿದೊಡ್ಡ ಕ್ರೀಡಾಕೂಟವಾದ ಪ್ಯಾರಿಸ್​ನಲ್ಲಿ(Paris 2024 Olympics) ನಡೆಯುತ್ತಿರುವ ಒಲಿಂಪಿಕ್ಸ್​ ಉದ್ಘಾಟನ ಸಮಾರಂಭದಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ವಸ್ತ್ರ ವಿನ್ಯಾಸ(Team India’s Olympic Outfits) ಮಾಡಿದ್ದ ವಿನ್ಯಾಸಕಾರ ತರುಣ್‌ ತಹಿಲಿಯಾನಿಗೆ(Tarun Tahiliani) ನೆಟ್ಟಿಗರು ಹಿಗ್ಗಾಮುಗ್ಗಾ ಬೈದಿದ್ದಾರೆ. ಅಂಬಾನಿ ಮಗನ ಮದುವೆ ವಿಚಾರ ಬಂದಾಗ ನೀವು ಮಾಸ್ಟರ್‌ಪೀಸ್‌ ಆದ ಡ್ರೆಸ್‌ಗಳನ್ನು ವಿನ್ಯಾಸ ಮಾಡುತ್ತೀರಿ. ದೇಶದ ವಿಚಾರ ಬಂದಾಗ ಇಂಥ ಕೆಟ್ಟ ವಿನ್ಯಾಸದ ಡ್ರೆಸ್‌ ಮಾಡುತ್ತೀರಿ. ಭಾರತದ ಕ್ರೀಡಾಪಟುಗಳು ಧರಿಸಿದ್ದ ಸಮವಸ್ತ್ರಗಳು ಕಳೆಪೆ ಗುಣಮಟ್ಟದ್ದಾಗಿತ್ತು, ದೇಶಕ್ಕೆ ಅವಮಾನ ಮಾಡುವ ರೀತಿಯತ್ತು ಎಂದು ಟೀಕೆ ವ್ಯಕ್ತಪಡಿಸಿದ್ದಾರೆ.

ಪಥಸಂಚಲನಕ್ಕೂ ಮುನ್ನ ಧ್ವಜಧಾರಿಗಳಾದ ಪಿವಿ.ವಿ ಸಿಂಧು ಮತ್ತು ಶರತ್‌ ಕಮಲ್‌ ಸೇರಿದಂತೆ ಹಲವು ಭಾರತೀಯ ಕ್ರೀಡಾಪಟುಗಳು ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ವಿನ್ಯಾಸ ಮಾಡಲಾಗಿದ್ದ ಸಮವಸ್ತ್ರ ಧರಿಸಿದ್ದ ಚಿತ್ರಗಳನ್ನು ಹಂಚಿಕೊಂಡಿದ್ದರು. ಈ ಫೋಟೊ ಕಂಡ ನೆಟ್ಟಿಗರು ಭಾರತೀಯರ ಸಮವಸ್ತ್ರದ ವಿನ್ಯಾಸ ಕಳಪೆ ಗುಣಮಟ್ಟದ್ದಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ ಸಮವಸ್ತ್ರ ವಿನ್ಯಾಸಗೊಳಿಸಿದ ತರುಣ್‌ ತಹಿಲಿಯಾನಿಯ ಅವರನ್ನು ಟ್ರೋಲ್​ ಮಾಡಿದ್ದಾರೆ.

ಇದನ್ನೂ ಓದಿ Paris Olympics 2024 : ಭಾರತಕ್ಕೆ ಒಲಿಂಪಿಕ್ ಕ್ರೀಡಾಕೂಟ ತರುವ ದಿನ ದೂರವಿಲ್ಲ; ಇಂಡಿಯಾ ಹೌಸ್ ಉದ್ಘಾಟನೆಯಲ್ಲಿ ನೀತಾ ಅಂಬಾನಿ

“ಡಾ. ನಂದಿತಾ ಅಯ್ಯರ್​ ಎನ್ನುವ ನೆಟ್ಟಿಗರೊಬ್ಬರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ, ‘ಹಲೋ ತರುಣ್‌ ತಹಲಿಯಾನಿ, ಇದಕ್ಕಿಂತ ಉತ್ತಮವಾದ ಸೀರೆಗಳನ್ನು ನಾನು ಮುಂಬೈನ ಬೀದಿಗಳಲ್ಲಿ ಬರೀ 200 ರೂಪಾಯಿಗೆ ನೋಡಿದ್ದೇನೆ. ಆದರೆ, ನೀವು ಡಿಸೈನ್‌ ಮಾಡಿದ್ದು ಸಮಾರಂಭಕ್ಕೆ ಧರಿಸುವ ಸೀರೆಗಳಾಗಿರಲಿಲ್ಲ. ಅತ್ಯಂತ ಕಳಪೆ ಮಟ್ಟದಿಂದ ಕೂಡಿದ ವಿನ್ಯಾಸ ಇದಾಗಿತ್ತು. ಇದನ್ನು ನೋಡುವಾಗ ಡೆಡ್‌ಲೈನ್‌ಗೆ ಮೂರು ನಿಮಿಷ ಬಾಕಿ ಇರುವಾಗ ತರಾತುರಿಯಲ್ಲಿ ಪ್ರಿಂಟ್​ ಮಾಡಿದ ಡಿಸೈನ್​ನಂತೆ ತೋರುತ್ತಿದೆ. ದೇಶದಲ್ಲಿರುವ ಶ್ರೀಮಂತ ಜವಳಿ ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ನೀವು ಮಾಡಿದ ಅವಮಾನ ಇದಾಗಿದೆ” ಎಂದು ಬರೆದುಕೊಂಡು ಟೀಕಿಸಿದ್ದಾರೆ.

ಇಂದು ಭಾರತದ ಸ್ಪರ್ಧೆಗಳ ವಿವರ

ಬ್ಯಾಡ್ಮಿಂಟನ್‌ (ಆರಂಭ: ಮಧ್ಯಾಹ್ನ 12.45)

ಪುರುಷರ ಸಿಂಗಲ್ಸ್‌ ಗ್ರೂಪ್‌ ಹಂತ: ಎಚ್‌.ಎಸ್‌. ಪ್ರಣಯ್‌, ಲಕ್ಷ್ಯ ಸೇನ್‌.

ಮಹಿಳಾ ಸಿಂಗಲ್ಸ್‌ ಗ್ರೂಪ್‌ ಹಂತ: ಪಿ.ವಿ. ಸಿಂಧು.

ಪುರುಷರ ಡಬಲ್ಸ್‌ ಗ್ರೂಪ್‌ ಹಂತ: ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌.

ಮಹಿಳಾ ಡಬಲ್ಸ್‌ ಗ್ರೂಪ್‌ ಹಂತ: ತನಿಷಾ ಕ್ರಾಸ್ಟೊ-ಅಶ್ವಿ‌ನಿ ಪೊನ್ನಪ್ಪ.

ಶೂಟಿಂಗ್‌ (ಮಧ್ಯಾಹ್ನ12.45)

ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ಅರ್ಹತಾ ಸುತ್ತು: ಇಳವೆನಿಲ್‌ ವಲರಿವನ್‌, ರಮಿತಾ ಜಿಂದಲ್‌.

ಪುರುಷರ 10 ಮೀ. ಏರ್‌ ಪಿಸ್ತೂಲ್‌ ಫೈನಲ್‌
ಪುರುಷರ 10 ಮೀ. ಏರ್‌ ರೈಫ‌ಲ್‌ ಅರ್ಹತಾ ಸುತ್ತು:
 ಸಂದೀಪ್‌ ಸಿಂಗ್‌, ಅರ್ಜುನ್‌ ಬಬುಟ.(ಮಧ್ಯಾಹ್ನ 2.45)

ವನಿತೆಯರ 10 ಮೀ. ಏರ್‌ ಪಿಸ್ತೂಲ್‌ ಫೈನಲ್‌: ಮನು ಭಾಕರ್‌ (ಮಧ್ಯಾಹ್ನ, 3.30)

ಆರ್ಚರಿ

ಮಹಿಳೆಯರ ತಂಡ ಸ್ಪರ್ಧೆ, 16ರ ಸುತ್ತು: ದೀಪಿಕಾ ಕುಮಾರಿ, ಅಂಕಿತಾ ಭಕತ್‌, ಭಜನ್‌ ಕೌರ್‌. (ಮಧ್ಯಾಹ್ನ 1.00)

ಮಹಿಳಾ ತಂಡದ ಕಂಚಿನ ಸ್ಪರ್ಧೆ.(ರಾತ್ರಿ 8.18)

ಮಹಿಳಾ ತಂಡದ ಚಿನ್ನದ ಸ್ಪರ್ಧೆ.(ರಾತ್ರಿ 8.41)

ರೋಯಿಂಗ್​


ಪುರುಷರ ಸಿಂಗಲ್‌ ಸ್ಕಲ್ಸ್‌ ರೆಪಿಶಾಜ್‌ ಸುತ್ತು: ಬಲ್ರಾಜ್‌ ಪನ್ವರ್‌.(ಮಧ್ಯಾಹ್ನ 1.06)

ಟೇಬಲ್‌ ಟೆನಿಸ್

ಪುರುಷರ ಸಿಂಗಲ್ಸ್‌: ಶರತ್‌ ಕಮಲ್‌, ಹರ್ಮೀತ್‌ ದೇಸಾಯಿ.

ಮಹಿಳಾ ಸಿಂಗಲ್ಸ್‌: ಮಣಿಕಾ ಬಾತ್ರಾ, ಶ್ರೀಜಾ ಅಕುಲಾ.(ಮಧ್ಯಾಹ್ನ 1.30)

ಬಾಕ್ಸಿಂಗ್‌


ಪುರುಷರ 51 ಕೆಜಿ, 32ರ ಸುತ್ತು: ಅಮಿತ್‌ ಪಂಘಲ್‌.(ಮಧ್ಯಾಹ್ನ 2.30)

ಪುರುಷರ 71 ಕೆಜಿ, 32ರ ಸುತ್ತು: ನಿಶಾಂತ್‌ ದೇವ್‌.(ಮಧ್ಯಾಹ್ನ 3.02)

ಮಹಿಳೆಯರ 50 ಕೆಜಿ, 32ರ ಸುತ್ತು: ನಿಖತ್‌ ಜರೀನ್‌ (ಸಂಜೆ 4.06)

ಈಜು


ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ ಹೀಟ್ಸ್‌: ಶ್ರಿಹರಿ ನಟರಾಜ್‌.

ವನಿತೆಯರ 200 ಮೀ. ಫ್ರೀಸ್ಟೈಲ್‌ ಹೀಟ್ಸ್‌: ಧಿನಿಧಿ ದೇಸಿಂಗೂ. (ಮಧ್ಯಾಹ್ನ 2.30)

ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ ಸೆಮಿಫೈನಲ್‌. (ತಡರಾತ್ರಿ 1.02)

ಮಹಿಳೆಯರ 200 ಮೀ. ಫ್ರೀಸ್ಟೈಲ್‌ ಸೆಮಿಫೈನಲ್‌.(ತಡರಾತ್ರಿ 1.20.)

ಟೆನಿಸ್‌

ಪುರುಷರ ಸಿಂಗಲ್ಸ್‌ ಮೊದಲ ಸುತ್ತು: ಸುಮಿತ್‌ ನಾಗಲ್‌.

ಪುರುಷರ ಡಬಲ್ಸ್‌: ರೋಹನ್‌ ಬೋಪಣ್ಣ-ಶ್ರೀರಾಮ್‌ ಬಾಲಾಜಿ(ಮಧ್ಯಾಹ್ನ 3.30)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Paris Olympics Badminton: ಗೆಲುವಿನ ಶುಭಾರಂಭ ಮಾಡಿದ ಪಿ.ವಿ. ಸಿಂಧು

Paris Olympics Badminton: ಭಾನುವಾರ ನಡೆದ ಮಹಿಳಾ ಸಿಂಗಲ್ಸ್​ M ಗುಂಪಿನ ಪಂದ್ಯದಲ್ಲಿ ಸಿಂಧು ಆಕ್ರಮಣಕಾರಿ ಆಟವಾಡುವ ಮೂಲಕ ಎದುರಾಳಿ ಫಾತಿಮತ್ ನಬಾಹಾ ವಿರುದ್ಧ ಸುಲಭ ಗೆಲುವು ದಾಖಲಿಸಿದರು. ಫಾತಿಮತ್ ನಬಾಹಾ ಯಾವುದೇ ಹಂತದಲ್ಲೂ ಸಿಂಧುಗೆ ಪೈಪೋಟಿ ನೀಡುವಲ್ಲಿ ಯಶಸ್ಸು ಕಾಣಲಿಲ್ಲ.

VISTARANEWS.COM


on

Paris Olympics Badminton
Koo

ಪ್ಯಾರಿಸ್​: ಅವಳಿ ಒಲಿಂಪಿಕ್ಸ್(Paris Olympics)​ ಪದಕ ವಿಜೇತೆ, ಭಾರತದ ಸ್ಟಾರ್​ ಶಟ್ಲರ್​ ಪಿ.ವಿ ಸಿಂಧು(PV Sindhu) ಅವರು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಗೆಲುವಿನ ಶುಭಾರಂಭ ಕಂಡಿದ್ದಾರೆ. ಇಂದು(ಭಾನುವಾರ) ನಡೆದ ಮಹಿಳಾ ಸಿಂಗಲ್ಸ್​ ವಿಭಾಗದ(Paris Olympics Badminton) ಮೊದಲ ಸುತ್ತಿನ ಪಂದ್ಯದಲ್ಲಿ ಮಾಲ್ಡಿವ್ಸ್​ನ ಫಾತಿಮತ್ ನಬಾಹಾ ಅಬ್ದುಲ್ ರಝಾಕ್ ವಿರುದ್ಧ 21-9, 21-6 ನೇರ ಗೇಮ್​ಗಳಿಂದ ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಸಿಂಧು 2ನೇ ಸುತ್ತಿನ ಪಂದ್ಯದಲ್ಲಿ ಕ್ರಿಸ್ಟಿನ್ ಕುಬಾ ವಿರುದ್ಧ ಆಡಲಿದ್ದಾರೆ. ಈ ಪಂದ್ಯ ಬುಧವಾರ ನಡೆಯಲಿದೆ.

ಭಾನುವಾರ ನಡೆದ ಮಹಿಳಾ ಸಿಂಗಲ್ಸ್​ M ಗುಂಪಿನ ಪಂದ್ಯದಲ್ಲಿ ಸಿಂಧು ಆಕ್ರಮಣಕಾರಿ ಆಟವಾಡುವ ಮೂಲಕ ಎದುರಾಳಿ ಫಾತಿಮತ್ ನಬಾಹಾ ವಿರುದ್ಧ ಸುಲಭ ಗೆಲುವು ದಾಖಲಿಸಿದರು. ಫಾತಿಮತ್ ನಬಾಹಾ ಯಾವುದೇ ಹಂತದಲ್ಲೂ ಸಿಂಧುಗೆ ಪೈಪೋಟಿ ನೀಡುವಲ್ಲಿ ಯಶಸ್ಸು ಕಾಣಲಿಲ್ಲ.

ಅಶ್ವಿನಿ ಪೊನ್ನಪ್ಪ-ಕ್ರಾಸ್ತೊ ಜೋಡಿಗೆ ಸೋಲು


ಶನಿವಾರ ನಡೆದಿದ್ದ ಮಹಿಳಾ ಡಬಲ್ಸ್​ನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ತನಿಷಾ ಕ್ರಾಸ್ತೊ ಜೋಡಿ ಮೊದಲ ಪಂದ್ಯದಲ್ಲಿ ಸೋತು ನಿರಾಸೆ ಮೂಡಿಸಿತ್ತು. ದಕ್ಷಿಣ ಕೊರಿಯಾದ ಕಿಮ್‌ ಸೊ ಯಿಯಾಂಗ್‌ ಮತ್ತು ಕಾಗ್‌ ಹೀ ಯಾಂಗ್‌ ಎದುರು 18-21, 10-21 ಅಂತರದಿಂದ ಮುಗ್ಗರಿಸಿತ್ತು. ಮುಂದಿನ ಪಂದ್ಯದಲ್ಲಿ ಜಪಾನ್‌ನ ಚಿಹರು ಶಿದಾ ಮತ್ತು ನಮಿ ಮತ್ಸುಯಾಮ ಎದುರು ಸೋಮವಾರ ಕಣಕ್ಕಿಳಿಯಲಿದೆ.

ಇದನ್ನೂ ಓದಿ Paris Olympics boxing: ಎದುರಾಳಿಗೆ ಪವರ್​ ಪಂಚ್​ ನೀಡಿ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಬಾಕ್ಸರ್ ಪ್ರೀತಿ ಪವಾರ್

ಸಾತ್ವಿಕ್‌-ಚಿರಾಗ್‌, ಸೇನ್‌ ಗೆಲುವಿನ ಆರಂಭ


ಭಾರತದ ತಾರಾ ಶಟ್ಲರ್‌ ಲಕ್ಷ್ಯ ಸೇನ್‌ ಶನಿವಾರ ನಡೆದಿದ್ದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಗ್ವಾಟೆಮಾಲಾ ದೇಶದ ಕೆವಿನ್‌ ಕಾರ್ಡನ್‌ ವಿರುದ್ಧ 21-8, 22-20 ಗೇಮ್‌ಗಳಲ್ಲಿ ಸುಲಭ ಗೆಲುವು ಸಾಧಿಸಿ ಮುಂದಿನ ಹಂತಕ್ಕೇರಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಪದಕ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿರುವ, ವಿಶ್ವ ನಂ.3 ಸಾತ್ವಿಕ್‌-ಚಿರಾಗ್‌ ಕೂಡ ಆರಂಭಿಕ ಸುತ್ತಿನಲ್ಲಿ ಶ್ರೇಯಾಂಕ ರಹಿತ, ಫ್ರಾನ್ಸ್‌ನ ಲುಕಾಸ್‌-ಲಾಬರ್‌ ರೊನನ್‌ ವಿರುದ್ಧ 21-17, 21-14 ನೇರ ಗೇಮ್‌ಗಳಲ್ಲಿ ಗೆದ್ದು 2ನೇ ಸುತ್ತು ಪ್ರವೇಶಿಸಿದ್ದಾರೆ.

ಪ್ರೀ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಬಾಕ್ಸರ್ ಪ್ರೀತಿ ಪವಾರ್


ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಶನಿವಾರ ತಡರಾತ್ರಿ ನಡೆದಿದ್ದ ಮಹಿಳೆಯರ 54 ಕೆಜಿ ವಿಭಾಗದ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ(Paris Olympics boxing) ಭಾರತದ ಬಾಕ್ಸರ್ ಪ್ರೀತಿ ಪವಾರ್(Preeti Pawar) ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಪ್ರೀತಿ ಅವರ ಪವರ್​ ಪಂಚ್​ಗಳಿಗೆ ತಡೆಯೊಡ್ಡುವಲ್ಲಿ ಸಂಪೂರ್ಣ ವಿಫಲರಾದ ವಿಯೆಟ್ನಾಂನ ಪ್ರತಿಸ್ಪರ್ಧಿ ವೋ ಥಿ ಕಿಮ್ ಅನ್ಹ್(Vo Thi Kim Anh) 0-5 ಅಂತರದ ಸೋಲು ಕಂಡರು.

ಚೊಚ್ಚಲ ಬಾರಿಗೆ ಒಲಿಂಪಿಕ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಪ್ರೀತಿ ತಮ್ಮ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದ್ದಾರೆ. ಕಳೆದ ಏಷ್ಯನ್​ ಗೇಮ್ಸ್‌ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ತೋರಿದ್ದರು. ಹರಿಯಾಣದ 20 ವರ್ಷದ ಈ ಬಾಕ್ಸರ್‌ ಮಂಗಳವಾರ ನಡೆಯುವ 16ನೇ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾದ ಮಾರ್ಕೆಲಾ ಯೆನಿ ವಿರುದ್ಧ ಸೆಣಸಲಿದ್ದಾರೆ.

Continue Reading

ಕ್ರೀಡೆ

Paris Olympics boxing: ಎದುರಾಳಿಗೆ ಪವರ್​ ಪಂಚ್​ ನೀಡಿ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಬಾಕ್ಸರ್ ಪ್ರೀತಿ ಪವಾರ್

Paris Olympics boxing: ಚೊಚ್ಚಲ ಬಾರಿಗೆ ಒಲಿಂಪಿಕ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಪ್ರೀತಿ ತಮ್ಮ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದ್ದಾರೆ. ಕಳೆದ ಏಷ್ಯನ್​ ಗೇಮ್ಸ್‌ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ತೋರಿದ್ದರು.

VISTARANEWS.COM


on

Koo

ಪ್ಯಾರಿಸ್‌: ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಶನಿವಾರ ತಡರಾತ್ರಿ ನಡೆದಿದ್ದ ಮಹಿಳೆಯರ 54 ಕೆಜಿ ವಿಭಾಗದ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ(Paris Olympics boxing) ಭಾರತದ ಬಾಕ್ಸರ್ ಪ್ರೀತಿ ಪವಾರ್(Preeti Pawar) ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಪ್ರೀತಿ ಅವರ ಪವರ್​ ಪಂಚ್​ಗಳಿಗೆ ತಡೆಯೊಡ್ಡುವಲ್ಲಿ ಸಂಪೂರ್ಣ ವಿಫಲರಾದ ವಿಯೆಟ್ನಾಂನ ಪ್ರತಿಸ್ಪರ್ಧಿ ವೋ ಥಿ ಕಿಮ್ ಅನ್ಹ್(Vo Thi Kim Anh) 0-5 ಅಂತರದ ಸೋಲು ಕಂಡರು.

ಚೊಚ್ಚಲ ಬಾರಿಗೆ ಒಲಿಂಪಿಕ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಪ್ರೀತಿ ತಮ್ಮ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದ್ದಾರೆ. ಕಳೆದ ಏಷ್ಯನ್​ ಗೇಮ್ಸ್‌ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ತೋರಿದ್ದರು. ಹರಿಯಾಣದ 20 ವರ್ಷದ ಈ ಬಾಕ್ಸರ್‌ ಮಂಗಳವಾರ ನಡೆಯುವ 16ನೇ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾದ ಮಾರ್ಕೆಲಾ ಯೆನಿ ವಿರುದ್ಧ ಸೆಣಸಲಿದ್ದಾರೆ.

ಒಲಿಂಪಿಕ್ಸ್​ ಕ್ರೀಡಾಕೂಟಕ್ಕೂ ಮುನ್ನ ಪ್ರೀತಿ ಅನಾರೋಗ್ಯಕ್ಕೊಳಗಾಗಿದ್ದರು. ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದರೂ ಕೂಡ ಮೊದಲ ಸುತ್ತಿನಲ್ಲಿ ಅವರು ನಡೆಸಿದ ಹೋರಾಟ ಮತ್ತು ಅಸಾಧಾರಣ ಧೈರ್ಯವನ್ನು ಮೆಚ್ಚಲೇ ಬೇಕು. ಎದುರಾಳಿಗೆ ಒಂದಕ್ಕವನ್ನು ಕೂಡ ಬಿಟ್ಟುಕೊಡದೆ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಅಧಿಕಾರಯುತ ಗೆಲುವು ತಮ್ಮದಾಗಿಸಿಕೊಂಡರು.

ಇಂದು ನಡೆಯುವ ಮಹಿಳೆಯರ 50 ಕೆಜಿ ವಿಭಾಗದ 32ರ ಘಟ್ಟದ ಪಂದ್ಯದಲ್ಲಿ ನಿಖತ್​ ಜರೀನ್​ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯ ಮಧ್ಯಾಹ್ನ 3.50ಕ್ಕೆ ನಡೆಯಲಿದೆ. ಆರ್ಚರಿ ಮತ್ತು ಶೂಟಿಂಗ್​ನಲ್ಲಿ ಭಾರತ ಇಂದು ಐತಿಹಾಸಿಕ ಪದಕ ನಿರೀಕ್ಷೆಯೊಂದನ್ನು ಕೂಡ ಇಟ್ಟುಕೊಂಡಿದೆ.

ಇದನ್ನೂ ಓದಿ Paris Olympics 2024 Day 2: ನೀಗಲಿ 36 ವರ್ಷಗಳ ಪದಕ ಬರ; ಚಿನ್ನಕ್ಕೆ ಗುರಿ ಇರಿಸಲಿ ಭಾರತೀಯ ಮಹಿಳಾ ಆರ್ಚರಿ ತಂಡ

ಇಂದು ನಡೆಯುವ(Paris Olympics 2024 Day 2) ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಭಾರತದ ದೀಪಿಕಾ ಕುಮಾರಿ(Deepika Kumari), ಅಂಕಿತಾ ಭಕತ್‌(Ankita Bhakat), ಭಜನ್‌ ಕೌರ್‌(Bhajan Kaur) ಅವರನ್ನೊಳಗೊಂಡ ತಂಡ ಕಣಕ್ಕಿಳಿಯಲಿದೆ. ಫ್ರಾನ್ಸ್​ ಅಥವಾ ನೆದರ್ಲೆಂಡ್ಸ್​ ತಂಡವನ್ನು ಎದುರಿಸಲಿದೆ. ಭಾರತ ಅರ್ಹತಾ ಸುತ್ತಿನ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು.

1988ರಲ್ಲಿ ಒಲಿಂಪಿಕ್ಸ್‌ನಲ್ಲಿ ಆರ್ಚರಿ ಸ್ಪರ್ಧೆಯನ್ನು ಆಯೋಜಿಸಿದ ಬಳಿಕ ಭಾರತಕ್ಕೆ ಇನ್ನೂ ಪದಕಕ್ಕೆ ಗುರಿ ಇರಿಸಲಾಗಲಿಲ್ಲ. 2000ದ ಸಿಡ್ನಿ ಕೂಟಕ್ಕೆ ಅರ್ಹತೆಯೇ ಲಭಿಸಿರಲಿಲ್ಲ. ಪ್ರತೀ ಸಲವೂ ಪದಕದ ನಿರೀಕ್ಷೆ ಮಾಡಿದರೂ ಕೂಡ ಯಶಸ್ಸು ಮಾತ್ರ ಮರೀಚಿಕೆಯೇ ಆಗುಳಿದಿದೆ. ಇದುವರೆಗೂ ಕ್ವಾರ್ಟರ್‌ ಫೈನಲ್‌ನಾಚೆ ದಾಟಿಲ್ಲ. ಈ ಬಾರಿ ಐತಿಹಾಸಿಕ ಪದಕವೊಂದರ ಭರವಸೆ ಇರಿಸಲಾಗಿದೆ. ಗೆದ್ದರೆ 36 ವರ್ಷಗಳ ಪದಕ ಬರ ನೀಗಲಿದೆ. ಕ್ವಾರ್ಟರ್​ ಫೈನಲ್​, ಸೆಮಿಫೈನಲ್ ಮತ್ತು ಫೈನಲ್​​ ಪಂದ್ಯಗಳು ಇಂದೇ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 5.45ಕ್ಕೆ ಕ್ವಾರ್ಟರ್​ ಫೈನಲ್​ ಪಂದ್ಯ ನಡೆಯಲಿದೆ. ಇಲ್ಲಿ ಗೆದ್ದರೆ ಸೆಮಿಫೈನಲ್​ ಪಂದ್ಯ ರಾತ್ರಿ 8.41ಕ್ಕೆ ನಡೆಯಲಿದೆ. ಕಂಚಿನ ಸ್ಪರ್ಧೆಯ ಪಂದ್ಯ ರಾತ್ರಿ 8.18ಕ್ಕೆ, ಫೈನಲ್ ಪಂದ್ಯ ರಾತ್ರಿ 8.41ಕ್ಕೆ ನಡೆಯಲಿದೆ.

10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಫೈನಲ್‌ ಪಂದ್ಯದಲ್ಲಿ ಮನು ಭಾಕರ್ ಸ್ಪರ್ಧಿಸಲಿದ್ದಾರೆ. ಇವರ ಮೇಲೂ ಪದಕ ನಿರೀಕ್ಷೆ ಮಾಡಲಾಗಿದೆ. 22ರ ಹರೆಯದ ಭಾಕರ್ ನಿನ್ನೆ(ಶನಿವಾರ) ನಡೆದಿದ್ದ ಅರ್ಹತಾ ಸುತ್ತಿನಲ್ಲಿ 580 ಅಂಕ ಗಳಿಸಿ ಮೂರನೇ ಸ್ಥಾನಿಯಾಗಿ ಫೈನಲ್​ಗೆ ಅರ್ಹತೆ ಪಡೆದಿದ್ದರು.

Continue Reading

ಕ್ರೀಡೆ

Paris Olympics 2024 Day 2: ನೀಗಲಿ 36 ವರ್ಷಗಳ ಪದಕ ಬರ; ಚಿನ್ನಕ್ಕೆ ಗುರಿ ಇರಿಸಲಿ ಭಾರತೀಯ ಮಹಿಳಾ ಆರ್ಚರಿ ತಂಡ

Paris Olympics 2024 Day 2: ಇಂದು ನಡೆಯುವ 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಫೈನಲ್‌ ಪಂದ್ಯದಲ್ಲಿ ಮನು ಭಾಕರ್ ಸ್ಪರ್ಧಿಸಲಿದ್ದಾರೆ. ಇವರ ಮೇಲೂ ಪದಕ ನಿರೀಕ್ಷೆ ಮಾಡಲಾಗಿದೆ. 22ರ ಹರೆಯದ ಭಾಕರ್ ನಿನ್ನೆ(ಶನಿವಾರ) ನಡೆದಿದ್ದ ಅರ್ಹತಾ ಸುತ್ತಿನಲ್ಲಿ 580 ಅಂಕ ಗಳಿಸಿ ಮೂರನೇ ಸ್ಥಾನಿಯಾಗಿ ಫೈನಲ್​ಗೆ ಅರ್ಹತೆ ಪಡೆದಿದ್ದರು.

VISTARANEWS.COM


on

Paris Olympics 2024 Day 2
Koo

ಪ್ಯಾರಿಸ್​: ಈ ಬಾರಿಯ ಪ್ಯಾರಿಸ್​ ಪಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲು ಪದಕ ಭರವಸೆ ಮೂಡಿಸಿದ್ದು ಆರ್ಚರಿ ತಂಡ. ಗುರುವಾರ ನಡೆದಿದ್ದ ಪುರುಷರ ಮತ್ತು ಮಹಿಳಾ ತಂಡ ಕ್ವಾರ್ಟರ್​ ಫೈನಲ್​ ಪ್ರವೇಶಿಸಿತ್ತು. ಇಂದು ನಡೆಯುವ(Paris Olympics 2024 Day 2) ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಭಾರತದ ದೀಪಿಕಾ ಕುಮಾರಿ(Deepika Kumari), ಅಂಕಿತಾ ಭಕತ್‌(Ankita Bhakat), ಭಜನ್‌ ಕೌರ್‌(Bhajan Kaur) ಅವರನ್ನೊಳಗೊಂಡ ತಂಡ ಕಣಕ್ಕಿಳಿಯಲಿದೆ. ಫ್ರಾನ್ಸ್​ ಅಥವಾ ನೆದರ್ಲೆಂಡ್ಸ್​ ತಂಡವನ್ನು ಎದುರಿಸಲಿದೆ. ಭಾರತ ಅರ್ಹತಾ ಸುತ್ತಿನ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು.

1988ರಲ್ಲಿ ಒಲಿಂಪಿಕ್ಸ್‌ನಲ್ಲಿ ಆರ್ಚರಿ ಸ್ಪರ್ಧೆಯನ್ನು ಆಯೋಜಿಸಿದ ಬಳಿಕ ಭಾರತಕ್ಕೆ ಇನ್ನೂ ಪದಕಕ್ಕೆ ಗುರಿ ಇರಿಸಲಾಗಲಿಲ್ಲ. 2000ದ ಸಿಡ್ನಿ ಕೂಟಕ್ಕೆ ಅರ್ಹತೆಯೇ ಲಭಿಸಿರಲಿಲ್ಲ. ಪ್ರತೀ ಸಲವೂ ಪದಕದ ನಿರೀಕ್ಷೆ ಮಾಡಿದರೂ ಕೂಡ ಯಶಸ್ಸು ಮಾತ್ರ ಮರೀಚಿಕೆಯೇ ಆಗುಳಿದಿದೆ. ಇದುವರೆಗೂ ಕ್ವಾರ್ಟರ್‌ ಫೈನಲ್‌ನಾಚೆ ದಾಟಿಲ್ಲ. ಈ ಬಾರಿ ಐತಿಹಾಸಿಕ ಪದಕವೊಂದರ ಭರವಸೆ ಇರಿಸಲಾಗಿದೆ. ಗೆದ್ದರೆ 36 ವರ್ಷಗಳ ಪದಕ ಬರ ನೀಗಲಿದೆ. ಕ್ವಾರ್ಟರ್​ ಫೈನಲ್​, ಸೆಮಿಫೈನಲ್ ಮತ್ತು ಫೈನಲ್​​ ಪಂದ್ಯಗಳು ಇಂದೇ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 5.45ಕ್ಕೆ ಕ್ವಾರ್ಟರ್​ ಫೈನಲ್​ ಪಂದ್ಯ ನಡೆಯಲಿದೆ. ಇಲ್ಲಿ ಗೆದ್ದರೆ ಸೆಮಿಫೈನಲ್​ ಪಂದ್ಯ ರಾತ್ರಿ 8.41ಕ್ಕೆ ನಡೆಯಲಿದೆ. ಕಂಚಿನ ಸ್ಪರ್ಧೆಯ ಪಂದ್ಯ ರಾತ್ರಿ 8.18ಕ್ಕೆ, ಫೈನಲ್ ಪಂದ್ಯ ರಾತ್ರಿ 8.41ಕ್ಕೆ ನಡೆಯಲಿದೆ.

ಇಂದು ನಡೆಯುವ 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಫೈನಲ್‌ ಪಂದ್ಯದಲ್ಲಿ ಮನು ಭಾಕರ್ ಸ್ಪರ್ಧಿಸಲಿದ್ದಾರೆ. ಇವರ ಮೇಲೂ ಪದಕ ನಿರೀಕ್ಷೆ ಮಾಡಲಾಗಿದೆ. 22ರ ಹರೆಯದ ಭಾಕರ್ ನಿನ್ನೆ(ಶನಿವಾರ) ನಡೆದಿದ್ದ ಅರ್ಹತಾ ಸುತ್ತಿನಲ್ಲಿ 580 ಅಂಕ ಗಳಿಸಿ ಮೂರನೇ ಸ್ಥಾನಿಯಾಗಿ ಫೈನಲ್​ಗೆ ಅರ್ಹತೆ ಪಡೆದಿದ್ದರು.

ಇದನ್ನೂ ಓದಿ Paris Olympics 2024 : ಭಾರತಕ್ಕೆ ಒಲಿಂಪಿಕ್ ಕ್ರೀಡಾಕೂಟ ತರುವ ದಿನ ದೂರವಿಲ್ಲ; ಇಂಡಿಯಾ ಹೌಸ್ ಉದ್ಘಾಟನೆಯಲ್ಲಿ ನೀತಾ ಅಂಬಾನಿ

ಇಂದು ಭಾರತದ ಸ್ಪರ್ಧೆಗಳ ವಿವರ

ಬ್ಯಾಡ್ಮಿಂಟನ್‌ (ಆರಂಭ: ಮಧ್ಯಾಹ್ನ 12.45)

ಪುರುಷರ ಸಿಂಗಲ್ಸ್‌ ಗ್ರೂಪ್‌ ಹಂತ: ಎಚ್‌.ಎಸ್‌. ಪ್ರಣಯ್‌, ಲಕ್ಷ್ಯ ಸೇನ್‌.

ಮಹಿಳಾ ಸಿಂಗಲ್ಸ್‌ ಗ್ರೂಪ್‌ ಹಂತ: ಪಿ.ವಿ. ಸಿಂಧು.

ಪುರುಷರ ಡಬಲ್ಸ್‌ ಗ್ರೂಪ್‌ ಹಂತ: ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌.

ಮಹಿಳಾ ಡಬಲ್ಸ್‌ ಗ್ರೂಪ್‌ ಹಂತ: ತನಿಷಾ ಕ್ರಾಸ್ಟೊ-ಅಶ್ವಿ‌ನಿ ಪೊನ್ನಪ್ಪ.

ಶೂಟಿಂಗ್‌ (ಮಧ್ಯಾಹ್ನ12.45)

ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ಅರ್ಹತಾ ಸುತ್ತು: ಇಳವೆನಿಲ್‌ ವಲರಿವನ್‌, ರಮಿತಾ ಜಿಂದಲ್‌.

ಪುರುಷರ 10 ಮೀ. ಏರ್‌ ಪಿಸ್ತೂಲ್‌ ಫೈನಲ್‌
ಪುರುಷರ 10 ಮೀ. ಏರ್‌ ರೈಫ‌ಲ್‌ ಅರ್ಹತಾ ಸುತ್ತು:
 ಸಂದೀಪ್‌ ಸಿಂಗ್‌, ಅರ್ಜುನ್‌ ಬಬುಟ.(ಮಧ್ಯಾಹ್ನ 2.45)

ವನಿತೆಯರ 10 ಮೀ. ಏರ್‌ ಪಿಸ್ತೂಲ್‌ ಫೈನಲ್‌: ಮನು ಭಾಕರ್‌ (ಮಧ್ಯಾಹ್ನ, 3.30)

ಆರ್ಚರಿ

ಮಹಿಳೆಯರ ತಂಡ ಸ್ಪರ್ಧೆ, 16ರ ಸುತ್ತು: ದೀಪಿಕಾ ಕುಮಾರಿ, ಅಂಕಿತಾ ಭಕತ್‌, ಭಜನ್‌ ಕೌರ್‌. (ಮಧ್ಯಾಹ್ನ 1.00)

ಮಹಿಳಾ ತಂಡದ ಕಂಚಿನ ಸ್ಪರ್ಧೆ.(ರಾತ್ರಿ 8.18)

ಮಹಿಳಾ ತಂಡದ ಚಿನ್ನದ ಸ್ಪರ್ಧೆ.(ರಾತ್ರಿ 8.41)

ರೋಯಿಂಗ್​


ಪುರುಷರ ಸಿಂಗಲ್‌ ಸ್ಕಲ್ಸ್‌ ರೆಪಿಶಾಜ್‌ ಸುತ್ತು: ಬಲ್ರಾಜ್‌ ಪನ್ವರ್‌.(ಮಧ್ಯಾಹ್ನ 1.06)

ಟೇಬಲ್‌ ಟೆನಿಸ್

ಪುರುಷರ ಸಿಂಗಲ್ಸ್‌: ಶರತ್‌ ಕಮಲ್‌, ಹರ್ಮೀತ್‌ ದೇಸಾಯಿ.

ಮಹಿಳಾ ಸಿಂಗಲ್ಸ್‌: ಮಣಿಕಾ ಬಾತ್ರಾ, ಶ್ರೀಜಾ ಅಕುಲಾ.(ಮಧ್ಯಾಹ್ನ 1.30)

ಬಾಕ್ಸಿಂಗ್‌


ಪುರುಷರ 51 ಕೆಜಿ, 32ರ ಸುತ್ತು: ಅಮಿತ್‌ ಪಂಘಲ್‌.(ಮಧ್ಯಾಹ್ನ 2.30)

ಪುರುಷರ 71 ಕೆಜಿ, 32ರ ಸುತ್ತು: ನಿಶಾಂತ್‌ ದೇವ್‌.(ಮಧ್ಯಾಹ್ನ 3.02)

ಮಹಿಳೆಯರ 50 ಕೆಜಿ, 32ರ ಸುತ್ತು: ನಿಖತ್‌ ಜರೀನ್‌ (ಸಂಜೆ 4.06)

ಈಜು


ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ ಹೀಟ್ಸ್‌: ಶ್ರಿಹರಿ ನಟರಾಜ್‌.

ವನಿತೆಯರ 200 ಮೀ. ಫ್ರೀಸ್ಟೈಲ್‌ ಹೀಟ್ಸ್‌: ಧಿನಿಧಿ ದೇಸಿಂಗೂ. (ಮಧ್ಯಾಹ್ನ 2.30)

ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ ಸೆಮಿಫೈನಲ್‌. (ತಡರಾತ್ರಿ 1.02)

ಮಹಿಳೆಯರ 200 ಮೀ. ಫ್ರೀಸ್ಟೈಲ್‌ ಸೆಮಿಫೈನಲ್‌.(ತಡರಾತ್ರಿ 1.20.)

ಟೆನಿಸ್‌

ಪುರುಷರ ಸಿಂಗಲ್ಸ್‌ ಮೊದಲ ಸುತ್ತು: ಸುಮಿತ್‌ ನಾಗಲ್‌.

ಪುರುಷರ ಡಬಲ್ಸ್‌: ರೋಹನ್‌ ಬೋಪಣ್ಣ-ಶ್ರೀರಾಮ್‌ ಬಾಲಾಜಿ(ಮಧ್ಯಾಹ್ನ 3.30)

Continue Reading

ದೇಶ

Kangana Ranaut: ಮಲಗುವ ಕೋಣೆಗಳಲ್ಲಿ ಲೈಂಗಿಕತೆ ಏಕೆ ಉಳಿಯಬಾರದು?; ಒಲಿಂಪಿಕ್ಸ್ ಆಯೋಜಕರ ವಿರುದ್ಧ ಕಂಗನಾ ಆಕ್ರೋಶ

Kangana Ranaut: ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಂಗನಾ ರಣಾವತ್‌ ಅವರು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 72,088 ಮತಗಳಿಂದ ಗೆಲುವು ಸಾಧಿಸಿದ್ದರು.

VISTARANEWS.COM


on

Kangana Ranaut
Koo

ನವದೆಹಲಿ: 2 ದಿನಗಳ ಹಿಂದಷ್ಟೇ ಪ್ಯಾರಿಸ್​ನಲ್ಲಿ 33ನೇ ಒಲಿಂಪಿಕ್ಸ್(Olympics Opening)​ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ಸಿಕ್ಕಿತ್ತು. ಆದರೆ ಉದ್ಘಾಟನಾ ಸಮಾರಂಭದಲ್ಲಿ ಲಿಯೊನಾರ್ಡೊ ಡಾ ವಿನ್ಸಿಯವರ “ದಿ ಲಾಸ್ಟ್ ಸಪ್ಪರ್” ಪೇಂಟಿಂಗ್‌ನ ಸ್ಪಷ್ಟ ವಿಡಂಬನೆಯನ್ನು ಪ್ರದರ್ಶಿಸುವ ಡ್ರ್ಯಾಗ್ ಕ್ವೀನ್‌ಗಳ ಸನ್ನಿವೇಶದ ಕುರಿತು ಬಿಜೆಪಿ ಸಂಸದೆ(BJP MP Kangana Ranaut ) ಕಂಗನಾ ರಣಾವತ್(Kangana Ranaut) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಲಿಂಪಿಕ್ಸ್ ಆಯೋಜಕರನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ.

ಮೂವರು ಪ್ರಸಿದ್ಧ ಡ್ರ್ಯಾಗ್ ರೇಸ್ ಕ್ವೀನ್ಸ್ ಸೇರಿದಂತೆ 18 ಮಂದಿಯನ್ನು ಒಳಗೊಂಡ ಡ್ರ್ಯಾಗ್ ಆಕ್ಟ್‌ ಒಂದನ್ನು ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶಿಸಲಾಗಿತ್ತು. ಈ ಬಗ್ಗೆ ಕಂಗನಾ ರಣಾವತ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದಿ ಲಾಸ್ಟ್ ಸಪ್ಪರ್‌ನ ಹೈಪರ್-ಸೆ *ಕ್ಷುವಲೈಸ್ಡ್, ಧರ್ಮನಿಂದೆಯ ಚಿತ್ರಣ” ಎಂದು ಟೀಕಿಸಿದ್ದಾರೆ. “ನೀಲಿ ಬಣ್ಣ ಬಳಿದ ಬೆತ್ತಲೆ ಮನುಷ್ಯನನ್ನು ಯೇಸುವಿನಂತೆ ತೋರಿಸಿ ಕ್ರಿಶ್ಚಿಯನ್ ಧರ್ಮವನ್ನು ಅಪಹಾಸ್ಯ ಮಾಡಿದ್ದಾರೆ. ಎಡಪಂಥೀಯರು ಒಲಂಪಿಕ್ಸ್ ಕ್ರೀಡೆಯನ್ನು ಸಂಪೂರ್ಣವಾಗಿ ಹೈಜಾಕ್ ಮಾಡಿದ್ದಾರೆ. ಇದು ನಾಚಿಕೆಗೇಡು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ Paris Olympics 2024 : ಭಾರತಕ್ಕೆ ಒಲಿಂಪಿಕ್ ಕ್ರೀಡಾಕೂಟ ತರುವ ದಿನ ದೂರವಿಲ್ಲ; ಇಂಡಿಯಾ ಹೌಸ್ ಉದ್ಘಾಟನೆಯಲ್ಲಿ ನೀತಾ ಅಂಬಾನಿ

“ನಾನು ಸಲಿಂಗಕಾಮಕ್ಕೆ ವಿರುದ್ಧವಾಗಿಲ್ಲ. ಆದರೆ ಒಲಿಂಪಿಕ್ಸ್ ಯಾವುದೇ ಲೈಂಗಿಕತೆಗೆ ಹೇಗೆ ಸಂಬಂಧಿಸಿದೆ ಎಂಬುದು ನನಗೆ ತಿಳಿದಿದಿಲ್ಲ?? ಲೈಂಗಿಕತೆಯ ಮೂಲಕ ಮಾನವ ಶ್ರೇಷ್ಠತೆಯನ್ನು ಹೇಳಿಕೊಳ್ಳಲು ಎಲ್ಲಾ ರಾಷ್ಟ್ರಗಳ ಆಟಗಳು, ಕ್ರೀಡೆಗಳ ಭಾಗವಹಿಸುವಿಕೆ ಏಕೆ ?? ನಮ್ಮ ಮಲಗುವ ಕೋಣೆಗಳಲ್ಲಿ ಲೈಂಗಿಕತೆಯು ಏಕೆ ಉಳಿಯಬಾರದು? ಇದು ರಾಷ್ಟ್ರೀಯ ಗುರುತಾಗಿ ಏಕೆ ಇರಬೇಕು?.. ಇದು ವಿಚಿತ್ರ !!” ಎಂದು ಬರೆದಿದ್ದಾರೆ. ‘ಎಕ್ಸ್’ ಮಾಲಕ ಎಲಾನ್ ಮುಸ್ಕ್ ಅವರು ಕೂಡ ‘ಇದು ಕ್ರೈಸ್ತ ಧರ್ಮಕ್ಕೆ ಅಗೌರವ’ ಎಂದು ಪೋಸ್ಟ್ ಮಾಡಿ ಆಯೋಜಕರ ಈ ನಡೆಯನ್ನು ಖಂಡಿಸಿದ್ದಾರೆ.


ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಂಗನಾ ರಣಾವತ್‌ ಅವರು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 72,088 ಮತಗಳಿಂದ ಗೆಲುವು ಸಾಧಿಸಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಟನೆ ತೊರೆಯುವುದಾಗಿ ಕಂಗನಾ ರಣಾವತ್‌ ಈಗಾಗಲೇ ಘೋಷಣೆ ಮಾಡಿದ್ದಾರೆ. ಆಜ್‌ ತಕ್‌ ಸುದ್ದಿವಾಹಿನಿಗೆ ಸಂದರ್ಶನ ನೀಡುವ ವೇಳೆ ಈ ಘೋಷಣೆ ಮಾಡಿದ್ದರು

“ನೀವು ಮಂಡಿ ಲೋಕಸಭೆಯಲ್ಲಿ ಗೆಲುವು ಸಾಧಿಸಿದರೆ ಏನೆಲ್ಲ ಮಾಡುತ್ತೀರಿ” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೌದು, ಮಂಡಿಯಲ್ಲಿ ಗೆಲುವು ಸಾಧಿಸಿದ ಬಳಿಕ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಆದರೆ, ನಮ್ಮ ಬಳಿ ತುಂಬ ಒಳ್ಳೆಯ ನಟಿ ಇದ್ದಾರೆ. ದಯಮಾಡಿ ನೀವು ಬಿಟ್ಟು ಹೋಗಬೇಡಿ ಎಂಬುದಾಗಿ ಹೆಚ್ಚಿನ ನಿರ್ದೇಶಕರು ಹೇಳುತ್ತಾರೆ. ಹೌದು, ನಾನೊಬ್ಬ ಒಳ್ಳೆ ನಟಿ ನಿಜ. ಇದೇ ಮೆಚ್ಚುಗೆಯನ್ನು ಸ್ವೀಕರಿಸಿ ನಾನು ಮುಂದೆ ಹೋಗುತ್ತೇನೆ” ಎಂದು ತಿಳಿಸಿದ್ದಾರೆ. ಆ ಮೂಲಕ ಬಾಲಿವುಡ್‌, ನಟನೆ ತ್ಯಜಿಸುವುದನ್ನು ಅವರು ದೃಢಪಡಿಸಿದ್ದಾರೆ.

Continue Reading
Advertisement
Sexual Harassment
ಪ್ರಮುಖ ಸುದ್ದಿ1 min ago

Sexual Harassment : ರಿಕ್ಷಾದಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಚಾಲಕ

Viral Video
ವೈರಲ್ ನ್ಯೂಸ್6 mins ago

Viral Video: ಶೇ. 100ರಷ್ಟು ಆದಾಯ ತೆರಿಗೆಯನ್ನು ಹೀಗೂ ಉಳಿಸಬಹುದಂತೆ ನೋಡಿ!

Union Budget 2024
ಕರ್ನಾಟಕ11 mins ago

Union Budget 2024: ವಾರ್ಷಿಕ 7.5 ಲಕ್ಷ ವೇತನ ಪಡೆಯುವವರಿಗೆ ಯಾವುದೇ ತೆರಿಗೆ ಇಲ್ಲ: ನಿರ್ಮಲಾ ಸೀತಾರಾಮನ್

Paris Olympics Badminton
ಕ್ರೀಡೆ11 mins ago

Paris Olympics Badminton: ಗೆಲುವಿನ ಶುಭಾರಂಭ ಮಾಡಿದ ಪಿ.ವಿ. ಸಿಂಧು

Health Tips
ಪ್ರಮುಖ ಸುದ್ದಿ12 mins ago

Health Tips : ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ 5 ವಿಧದ ಸೂಪ್ ಸೇವಿಸಿ

Naveen Sajju debuts movie titled first look out
ಸಿನಿಮಾ24 mins ago

Naveen Sajju: ಗುಡ್‌ ನ್ಯೂಸ್‌ ಕೊಟ್ಟ ʻಚುಕ್ಕಿತಾರೆ ಸೀರಿಯಲ್‌ʼ ನಟ ನವೀನ್‌ ಸಜ್ಜು: ಶುಭ ಕೋರಿದ ಫ್ಯಾನ್ಸ್‌!

Assault case
ಚಿಕ್ಕೋಡಿ32 mins ago

Assault Case : ಠಾಣೆಗೆ ಬಂದ ಮಹಿಳೆಗೆ ಜಾಡಿಸಿ ಒದ್ದ ಖಡಕಲಾಟ ಪಿಎಸ್‌ಐ!

Mann Ki Baat
ದೇಶ35 mins ago

Mann Ki Baat: ಪ್ಯಾರಿಸ್ ಒಲಿಂಪಿಕ್ಸ್​: ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಂತೆ ʼಮನ್​ ಕಿ ಬಾತ್​ʼನಲ್ಲಿ ಮೋದಿ ಕರೆ

valmiki corporation scam satyanarayana varma
ಕ್ರೈಂ37 mins ago

Valmiki Corporation Scam: 10 ಕೆಜಿ ಚಿನ್ನದ ಗಟ್ಟಿ ಮನೆಯಲ್ಲಿಟ್ಟಿದ್ದ ವಾಲ್ಮೀಕಿ ನಿಗಮ ಹಗರಣದ ಆರೋಪಿ! ಇನ್ನೂ 5 ಕಿಲೋ ಗಾಯಬ್

ಕ್ರೀಡೆ41 mins ago

Paris Olympics boxing: ಎದುರಾಳಿಗೆ ಪವರ್​ ಪಂಚ್​ ನೀಡಿ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಬಾಕ್ಸರ್ ಪ್ರೀತಿ ಪವಾರ್

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 hour ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ19 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ24 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ1 day ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ3 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್3 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

ಟ್ರೆಂಡಿಂಗ್‌