Site icon Vistara News

Paris Olympic 2024:’ಆ್ಯಂಟಿ-ಸೆಕ್ಸ್ ಬೆಡ್’ನ ಸಾಮರ್ಥ್ಯ ಪರೀಕ್ಷೆ ನಡೆಸಿದ ಆಸ್ಟ್ರೇಲಿಯಾದ ಟೆನಿಸ್​ ಆಟಗಾರ್ತಿಯರು; ವಿಡಿಯೊ ವೈರಲ್​

Paris Olympic 2024

Paris Olympic 2024: Athletes Test 'Anti-Sex Beds' At Paris Olympics, Share Videos On Instagram

ಪ್ಯಾರಿಸ್​: ಕ್ರೀಡಾಪಟುಗಳು ಲೈಂಗಿಕಾಸಕ್ತಿ ತೋರದು ಕೇವಲ ಕ್ರೀಡಾಸ್ಪರ್ಧೆಗಳತ್ತ ಗಮನ ಹರಿಸಲಿ ಎಂಬ ಧ್ಯೇಯದೊಂದಿಗೆ ಟೋಕಿಯೊ ಒಲಿಂಪಿಕ್ ಕ್ರೀಡಾ ಗ್ರಾಮದಲ್ಲಿ ಜಾರಿಗೆ ತಂದಿದ್ದ ‘ಆ್ಯಂಟಿ-ಸೆಕ್ಸ್ ಬೆಡ್’ಗಳ(‘Anti-Sex Beds’) ಅಳವಡಿಕೆಯನ್ನು ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿಯೂ(Paris Olympic 2024) ಮುಂದುವರಿಸಲಾಗಿದೆ. ಆಸ್ಟ್ರೇಲಿಯಾದ ಟೆನಿಸ್ ಆಟಗಾರ್ತಿಯರು ಈ ಬೆಡ್​ನ ಸಾಮರ್ಥ್ಯ ಪರೀಕ್ಷೆ ನಡೆಸಿದ ವಿಡಿಯೊವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಪ್ಯಾರಿಸ್​ ಒಲಿಂಪಿಕ್ಸ್​ ಆರಂಭಕ್ಕೂ ಮುನ್ನವೇ ಕೆಲವು ಅಥ್ಲೀಟ್​ಗಳು ಈ ಬಾರಿ ‘ಆ್ಯಂಟಿ ಸೆಕ್ಸ್‌ ಬೆಡ್‌’ಗಳು ಅಳವಡಿಸ ಬಾರದೆಂದು ಆಗ್ರಹಿಸಿದ್ದರು. ಆದರೆ, ಸಂಘಟಕರು ಕ್ರೀಡಾಗ್ರಾಮದಲ್ಲಿ ಆ್ಯಂಟಿ ಸೆಕ್ಸ್‌ ಬೆಡ್​ಗಳು ಅಳವಡಿಸಿದ್ದಾರೆ. ಒಬ್ಬ ವ್ಯಕ್ತಿ ಮಾತ್ರ ಮಲಗಬಹುದಾದ ಹಾಸಿಗೆ ಇದಾಗಿದೆ. ಮರುಬಳಕೆ ಮಾಡಬಹುದಾದಂಥ ವಸ್ತುಗಳಿಂದ ಇದನ್ನು ಸಿದ್ಧಪಡಿಸಲಾಗಿದೆ.

ಪ್ರತಿ ಬೆಡ್ ಸುಮಾರು 200 ಕೆಜಿ ಭಾರವನ್ನಷ್ಟೇ ಹೊರಬಲ್ಲಷ್ಟು ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ. ಕಾರ್ಡ್‌ಬೋರ್ಡ್‌ನಿಂದ ತಯಾರಿಸಲಾಗಿರುವ ಬೆಡ್‌ಗಳ ಬಗ್ಗೆ ಕ್ರೀಡಾಪಟುಗಳು, ಕ್ರೀಡಾಪ್ರೇಮಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಲವು ತಮಾಷೆಯ ಕಾಮೆಂಟ್‌ಗಳೂ ಹರಿದುಬರುತ್ತಿವೆ. ಈ ಮಧ್ಯೆ ಆಸ್ಟ್ರೇಲಿಯಾದ ಟೆನಿಸ್ ತಾರೆಯರಾದ ಡೇರಿಯ ಸಾವಿಲ್ಲೆ ಮತ್ತು ಎಲೆನ್ ಪೆರೆಜ್‌ ಜತೆಯಾಗಿ ‘ಆ್ಯಂಟಿ ಸೆಕ್ಸ್‌ ಬೆಡ್‌’ಗಳ ಕ್ವಾಲಿಟಿ ಟೆಸ್ಟ್ ಮಾಡಿದ್ದಾರೆ. ಈ ಬೆಡ್‌ನ ಮೇಲೆ ಈ ಜೋಡಿ ವಾಲಿ ಪ್ರಾಕ್ಟೀಸ್, ಸ್ಕ್ವಾಟ್‌ ಜಂಪ್ಸ್‌, ಸ್ಟೆಪ್‌-ಅಪ್ಸ್ ಸೇರಿದಂತೆ ಹಲವು ಅಭ್ಯಾಸಗಳನ್ನು ನಡೆಸಿ ತಮ್ಮ ತಮಾಷೆಯಾಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ‘ಒಲಿಂಪಿಕ್ಸ್‌ ಗ್ರಾಮದಲ್ಲಿರುವ ಕಾರ್ಡ್‌ಬೋರ್ಡ್‌ಗಳನ್ನು ಟೆಸ್ಟ್‌ ಮಾಡಿದ್ದೇವೆ” ಎನ್ನುವ ಕ್ಯಾಪ್ಶನ್ ನೀಡಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಎಲ್ಲಡೆ ವೈರಲ್​ ಆಗುತ್ತಿದೆ.


ಕ್ರೀಡಾ ಗ್ರಾಮಕ್ಕೆ​ ದಾಖಲೆಯ 3 ಲಕ್ಷ ಕಾಂಡೋಮ್ ಪೂರೈಕೆ!


ಈ ಕ್ರೀಡಾಕೂಡದ ಯಶಸ್ಸಿಗಾಗಿ ಪ್ಯಾರಿಸ್(Paris Olympic 2024)​ ಸರ್ವ ಸನ್ನದ್ಧವಾಗಿದೆ. ಜುಲೈ 26ರಿಂದ ಟೂರ್ನಿ ಆರಂಭವಾಗಲಿದೆ. ಇದೀಗ ಒಲಿಂಪಿಕ್ಸ್​ ಕ್ರೀಡಾ ಗ್ರಾಮದಲ್ಲಿ(Olympic Game Village) ಕ್ರೀಡಾಪಟುಗಳಿಗೆ ಸಂಘಟಕರು 3 ಲಕ್ಷ ಕಾಂಡೋಮ್​ಗಳನ್ನು ಪೂರೈಕೆ ಮಾಡಿದ್ದಾರೆ. ಇದು ಒಲಿಂಪಿಕ್ಸ್​ ಇತಿಹಾಸದಲ್ಲೇ ಗರಿಷ್ಠ ಸಂಖ್ಯೆಯ ಕಾಂಡೋಮ್​ ಪೂರೈಕೆಯಾಗಿರಲಿದೆ.

2021ರ ಟೋಕಿಯೊ ಒಲಿಂಪಿಕ್ಸ್​ ವೇಳೆ ಕರೊನಾ ಹಾವಳಿ ಇದ್ದ ಕಾರಣದಿಂದಾಗಿ ​ಸಂಟಕರು 1.5 ಲಕ್ಷ ಕಾಂಡೋಮ್​ಗಳನ್ನು ಕ್ರೀಡಾಪಟುಗಳಿಗೆ ಪೂರೈಕೆ ಮಾಡಿದ್ದರು. ಈ ಆದರೆ ಬಾರಿ ದಾಖಲೆಯ ಸಂಖ್ಯೆಯಲ್ಲಿ ಕಾಂಡೋಮ್​ಗಳನ್ನು ಪೂರೈಕೆ ಮಾಡಲಾಗಿದೆ. ಇದಕ್ಕೂ ಒಂದು ಕಾರಣವಿದೆ. ಪ್ಯಾರಿಸ್ ಎಂದರೆ ಪ್ರಣಯ ನಗರ ಎಂದೇ ಪ್ರಸಿದ್ಧಿ ಹೀಗಾಗಿ ಇಷ್ಟು ದೊಡ್ಡ ಸಂಖ್ಯೆಯ ಕಾಂಡೋಮ್​ಗಳನ್ನು ಸಂಘಟಕರು ಪೂರೈಕೆ ಮಾಡಿದ್ದಾರೆ. ಜತೆಗೆ ನಿಮ್ಮ ದೇಶದಲ್ಲಿ ಎಚ್​ಐವಿ ಜಾಗೃತಿ ಮೂಡಿಸಲು ಇದನ್ನು ಬಳಸಿ ಎಂಬ ಕಿವಿಮಾತು ಹೇಳಿದ್ದಾರೆ. ಈ ಕಾಂಡೋಮ್ ಕವರ್​ನಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​ 2024 ಎಂದು ಬರೆದಿದೆ.

‘ಕ್ರೀಡಾಪಟುಗಳು ಕಾಂಡೋಮ್ ಅನ್ನು ಒಲಿಂಪಿಕ್ಸ್ ಗ್ರಾಮದಲ್ಲಿ ಬಳಸಬಾರದು. ಸ್ಮರಣಿಕೆಗಳ ರೀತಿಯಲ್ಲಿ ತವರಿಗೆ ಕೊಂಡೊಯ್ಯಿರಿ ಎಂದು ಐಒಸಿ ಸೂಚಿಸಿದೆ’. 1988ರ ಸಿಯೋಲ್ ಒಲಿಂಪಿಕ್ಸ್‌ನಿಂದ ಏಡ್ಸ್ ರೋಗದ ಜಾಗೃತಿಗಾಗಿ ಪ್ರತಿ ಗೇಮ್ಸ್‌ನಲ್ಲಿ ಕಾಂಡೋಮ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

Exit mobile version