Site icon Vistara News

Paris Olympic: ರೋಯಿಂಗ್​ನಲ್ಲಿ ಶುಭ ಸುದ್ದಿ; ಶೂಟಿಂಗ್​ನಲ್ಲಿ ನಿರಾಸೆ ಮೂಡಿಸಿದ ಮಿಶ್ರ ತಂಡ

Paris Olympic

Paris Olympic: Shooters Disappoint In 10m Air Rifle, Fail To Reach Final

ಪ್ಯಾರಿಸ್​: ಒಲಿಂಪಿಕ್ಸ್​(Paris Olympic) ಶೂಟಿಂಗ್​ನಲ್ಲಿ ಪದಕ ನಿರೀಕ್ಷೆ ಮಾಡಿದ್ದ ಭಾರತೀಯ ಕ್ರಿಡಾಭಿಮಾನಿಗಳಿಗೆ ಮೊದಲ ದಿನವೇ ನಿರಾಸೆಯಾಗಿದೆ. ಇಂದು(ಶನಿವಾರ) ನಡೆದ 10 ಮೀ. ಏರ್​ ರೈಫಲ್​ ಮಿಶ್ರ ತಂಡ ವಿಭಾಗದಲ್ಲಿ ಭಾರತ ಸೋಲು ಕಂಡು ಪದಕ ಸುತ್ತಿಗೇರುವಲ್ಲಿ ವಿಫಲವಾಯಿತು. ಆದರೆ ರೋಯಿಂಗ್​ನಲ್ಲಿ ಬಾಲರಾಜ್ ಪನ್ವಾರ್(Balraj Panwar) ಹೀಟ್ಸ್​ನಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ರೆಪೆಚೇಜ್ ರೌಂಡ್​ಗೆ ಅರ್ಹತೆ ಪಡೆದಿದ್ದಾರೆ. ಈ ಪಂದ್ಯ ನಾಳೆ(ಭಾನುವಾ) ನಡೆಯಲಿದೆ.

ಸಂದೀಪ್​ ಸಿಂಗ್​-ಇಲವೆನಿಲ್​ ವಲರಿವನ್​ ಜೋಡಿ 12ನೇ ಸ್ಥಾನ ಪಡೆದರೆ, ಅರ್ಜುನ್​ ಬಬುಟ-ರಮಿತಾ ಜಿಂದಾಲ್ ಜೋಡಿ 6ನೇ ಸ್ಥಾನ ಪಡೆಯಿತು. ಈ ಜೋಡಿ ಒಟ್ಟು 628.7 ಅಂಕಗಳಿಸಿದರೆ, ಸಂದೀಪ್​ ಸಿಂಗ್​-ಇಲವೆನಿಲ್ ಜೋಡಿ 626.3 ಅಂಕ ಗಳಿಸಿತು. ಇದರೊಂದಿಗೆ 10 ಮೀ. ಏರ್​ ರೈಫಲ್​ ಮಿಶ್ರ ಸ್ಪರ್ಧೆಯಲ್ಲಿ ಭಾರತದ ಎರಡೂ ತಂಡಗಳು ಕೂಡ ಪದಕ ಸುತ್ತಿಗೇರುವಲ್ಲಿ ವಿಫಲವಾಯಿತು. ಚೀನಾ, ಕೊರಿಯಾ, ಜರ್ಮನಿ ಮತ್ತು ಕಝಾಕಿಸ್ತಾನ್ ಪದಕ ಸುತ್ತಿಗೆ ಪ್ರವೇಶಿಸಿತು.

ಪುರುಷರ ಸಿಂಗಲ್ ಸ್ಕಲ್ಸ್ ಹೀಟ್ಸ್​ನಲ್ಲಿ ಕಣಕ್ಕಿಳಿದ್ದ ಬಾಲರಾಜ್ ಪನ್ವಾರ್ ಕೊನೆಯ ಹಂತದ ಸುತ್ತಿನವರೆಗೂ ಮೂರನೇ ಸ್ಥಾನ ಕಾಯ್ದುಕೊಂಡಿದ್ದರು. ಆದರೆ ಫಿನಿಶಿಂಗ್​ ಹಂತದ ವೇಳೆ ಹಿನ್ನಡೆ ಅನುಭವಿಸಿ ಅಂತಿಮವಾಗಿ 07:07.11 ನಿಮಿಷದಲ್ಲಿ ಹೀಟ್ಸ್ ಪೂರ್ಣಗೊಳಿಸಿ ನಾಲ್ಕನೇ ಸ್ಥಾನ ಪಡೆದರು.

 

ಇಂದು ನಡೆಯುವ ಪುರುಷರ ಸಿಂಗಲ್ಸ್‌ ಟೆಬಲ್​ ಟೆನಿಸ್​ನಲ್ಲಿ ಅನುಭವಿ ಆಟಗಾರ, 41 ವರ್ಷದ ಶರತ್ ಕಮಲ್ ಅವರು ತಮ್ಮ ಮೊದಲ ಪಂದ್ಯದಲ್ಲಿ ಸ್ಲೊವೆನಿಯಾದ ಡೆನಿ ಕೊಜುಲ್ ವಿರುದ್ಧ ಆಡಲಿದ್ದಾರೆ. ಮತ್ತೋರ್ವ ಭಾರತೀಯ ಆಟಗಾರ, ಗುಜರಾತ್‌ನ 31 ವರ್ಷದ ಹರ್ಮಿತ್ ದೇಸಾಯಿ ಜೋರ್ಡಾನ್‌ನ ಝೈದ್ ಅಬೊ ಯಮನ್ ವಿರುದ್ಧ ಸೆಣಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆ, ಈ ಬಾರಿಯ ಪದಕ ಭರಸೆಯ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಮಣಿಕಾ ಬಾತ್ರಾ ಅವರು ಗ್ರೇಟ್‌ ಬ್ರಿಟನ್‌ನ ಅನಾ ಹರ್ಸೆ ವಿರುದ್ಧ ಸೆಣಸಾಟ ನಡೆಸಲಿದ್ದಾರೆ. ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಬಾತ್ರ ಕಳೆದ ಬಾರಿಯ ಟೋಕಿಯೊ ಒಲಿಂಪಿಕ್ಸ್​ ತಪ್ಪನ್ನು ಇಲ್ಲಿ ಮರುಕಳಿಸಲ್ಲ ಎಂದು ಹೇಳುವ ಮೂಲಕ ಪದಕ ಗೆಲ್ಲುವು ವಿಶ್ವಾಸ ವ್ಯಕ್ತಪಡಿಸಿದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ 32ರ ಘಟ್ಟದದ ಪಂದ್ಯದಲ್ಲಿ ಸೋಲು ಕಂಡಿದ್ದರು.

ಪುರುಷರ ತಂಡ ವಿಭಾಗದಲ್ಲಿ ಶರತ್ ಕಮಲ್, ದೇಸಾಯಿ ಮತ್ತು ಮಾನವ್ ಠಕ್ಕರ್ ಕಣಕ್ಕಿಳಿದರೆ, ಮಹಿಳೆಯರ ತಂಡದಲ್ಲಿ ಮಣಿಕಾ, ಶ್ರೀಜಾ ಅಕುಲಾ ಹಾಗೂ ಕರ್ನಾಟಕದ ಅರ್ಚನಾ ಕಾಮತ್ ಸ್ಪರ್ಧಿಸಲಿದ್ದಾರೆ. ಜಿ. ಸತ್ಯನ್, ಐಹಿಕಾ ಮುಖರ್ಜಿ ಮೀಸಲು ಆಟಗಾರರಾಗಿದ್ದಾರೆ. ಶರತ್ ಕಮಲ್ ಅವರಿಗೆ ಇದು ಬಹುತೇಕ ಕೊನಯ ಒಲಿಂಪಿಕ್ಸ್​ ಟೂರ್ನಿಯಾಗಿದೆ. ಹೀಗಾಗಿ ಅವರು ಐತಿಹಾಸಿಕ ಪದಕ ಗೆದ್ದು ತಮ್ಮ ಕ್ರೀಡಾ ವೃತ್ತಿ ಜೀವನನ್ನು ಸ್ಮರಣೀಯಗೊಳಿಸಲಿ ಎನ್ನುವುದು ಭಾರತೀಯರ ಹಾರೈಕೆ.

Exit mobile version