Site icon Vistara News

Paris Olympics 2024 : ಕ್ರೀಡಾಗ್ರಾಮಲ್ಲಿ ಮಾದಕ ವಸ್ತು ಕೊಕೇನ್ ಸೇವನೆ, ಆಸ್ಟ್ರೇಲಿಯಾದ ಹಾಕಿ ಆಟಗಾರನ ಬಂಧನ

Paris Olympics 2024

ಬೆಂಗಳೂರು: ಕೊಕೇನ್ ಖರೀದಿಸಿದ ಆರೋಪದ ಮೇಲೆ ಆಸ್ಟ್ರೇಲಿಯಾದ ಹಾಕಿ ತಂಡದ ಆಟಗಾರನನ್ನು ಫ್ರಾನ್ಸ್ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಹಾಕಿ ಆಟಗಾರ ಥಾಮಸ್ ಕ್ರೇಗ್ (28) ಆಗಸ್ಟ್​ 6ರಂದು ಪೊಲೀಸರ ವಶಕ್ಕೆ ಸಿಲುಕಿದ್ದ .ಟೋಕಿಯೊ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಮತ್ತು ರಾಷ್ಟ್ರೀಯ ತಂಡಕ್ಕಾಗಿ 100 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಅನುಭವಿ ಕ್ರೇಗ್ ಈ ಘಟನೆಯ ನಂತರ ತಮ್ಮ ಕುಟುಂಬ ಸದಸ್ಯರಿಗೆ ಮತ್ತು ತಂಡದ ಆಟಗಾರರಿಗೆ ಕ್ಷಮೆಯಾಚಿಸಿದ್ದಾರೆ.

ಭಾನುವಾರ ನೆದರ್ಲ್ಯಾಂಡ್ಸ್ ವಿರುದ್ಧ ನಡೆದ ಕ್ವಾರ್ಟರ್ ಫೈನಲ್​​ನಲ್ಲಿ ಆಸ್ಟ್ರೇಲಿಯಾದ ಪುರುಷರ ಹಾಕಿ ತಂಡ ಸೋತು ಒಲಿಂಪಿಕ್ಸ್​ನಿಂದ ನಿರ್ಗಮಿಸಿತ್ತು. ಆ ಬಳಿಕ ಕ್ರೇಗ್ ಅವರನ್ನು ಬಂಧಿಸಲಾಯಿತು. ಕ್ರೇಗ್ ಬಳಿ ಸುಮಾರು ಒಂದು ಗ್ರಾಂ ಕೊಕೇನ್ ಇರುವುದನ್ನು ಫ್ರೆಂಚ್ ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿದೆ. ಅವರು ಈಗ ಬಂಧನದಿಂದ ಬಿಡುಗಡೆಯಾಗಿದ್ದಾರೆ. 28 ವರ್ಷದ ಆಟಗಾರ ತಾನು ಭಯಾನಕ ತಪ್ಪು ಮಾಡಿದ್ದೇನೆ ಮತ್ತು ಅವರ ಕ್ರಮಗಳು ತಮ್ಮ ಕುಟುಂಬ, ಸಹ ಆಟಗಾರರು ಮತ್ತು ಆಸ್ಟ್ರೇಲಿಯಾ ಒಲಿಂಪಿಕ್ ತಂಡದ ಮೌಲ್ಯಗಳಿಗೆ ಹಾನಿ ಮಾಡಿದೆ ಎಂಬುದನ್ನು ತಪ್ಪೊಪ್ಪಿಕೊಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ನಡೆದಿರುವ ಘಟನೆಗಳಿಗೆ ನಾನು ಮೊದಲು ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ಭಯಾನಕ ತಪ್ಪು ಮಾಡಿದ್ದೇನೆ. ನನ್ನ ಕೃತ್ಯಗಳಿಗೆ ನಾನು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ” ಎಂದು ಕ್ರೇಗ್ ಹೇಳಿದ್ದಾರೆ.

ನನ್ನ ತಪ್ಪುಗಳು ನನ್ನದೇ ಆಗಿವೆ ಮತ್ತು ಯಾವುದೇ ರೀತಿಯಲ್ಲಿ, ನನ್ನ ಕುಟುಂಬ, ನನ್ನ ಸಹ ಆಟಗಾರರು, ನನ್ನ ಸ್ನೇಹಿತರು, ನನ್ನ ಕ್ರೀಡೆ ಮತ್ತು ಆಸ್ಟ್ರೇಲಿಯಾದ ಒಲಿಂಪಿಕ್ ತಂಡದ ಮೌಲ್ಯಗಳಿಗೆ ಪೂರಕವಾಗಿಲ್ಲ. ನಾನು ನಿಮ್ಮೆಲ್ಲರನ್ನೂ ಮುಜುಗರಕ್ಕೀಡು ಮಾಡಿದ್ದೇನೆ. ನನ್ನನ್ನು ನಿಜವಾಗಿಯೂ ಕ್ಷಮಿಸಿ ಎಂದು ಕ್ರೇಗ್ ಹೇಳಿಕೊಂಡಿದ್ದಾರೆ.

ಶಿಕ್ಷೆಯಿಲ್ಲದೆ ಬಿಡುಗಡೆ

ಕ್ರೇಗ್ ಅವರಿಗೆ ಫ್ರೆಂಚ್ ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಯಾವುದೇ ಶಿಕ್ಷೆಯಿಲ್ಲದೆ ಬಿಡುಗಡೆ ಮಾಡಲಾಗಿದೆ ಎಂದು ಆಸ್ಟ್ರೇಲಿಯಾ ತಂಡದ ವಕ್ತಾರ ಡೊಮಿನಿಕ್ ಸುಲ್ಲಿವಾನ್ ದೃಢಪಡಿಸಿದ್ದಾರೆ. ಫ್ರೆಂಚ್ ನ್ಯಾಯಾಧೀಶರು ನೀಡಿದ ಎಚ್ಚರಿಕೆಯನ್ನು ಆಸ್ಟ್ರೇಲಿಯಾದ ರಾಷ್ಟ್ರೀಯ ಒಲಿಂಪಿಕ್ ಸಮಿತಿ ಕೂಡ ದೃಢಪಡಿಸಿದೆ.

ಕ್ರೇಗ್ ಅವರ ಕೃತ್ಯಗಳನ್ನು ಕ್ಷಮಿಸಲು ಸಾಧ್ಯವಿಲ್ಲ. ಅವರು ತಮ್ಮ ಒಲಿಂಪಿಕ್ ಸೌಲಭ್ಯಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಆಸ್ಟ್ರೇಲಿಯಾದ ಚೆಫ್ ಡಿ ಮಿಷನ್ ಅನ್ನಾ ಮೀರೆಸ್ ಹೇಳಿದ್ದಾರೆ. ಹೀಗಾಗಿ ಕ್ರೇಗ್ ಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಮೀರೆಸ್ ಹೇಳಿದರು.

ಇದನ್ನೂ ಓದಿ: Paris Olympics 2024 : ಭಾರತ ಹಾಕಿ ತಂಡಕ್ಕೆ ಕಂಚಿನ ಪದಕ, ಸ್ಪೇನ್ ವಿರುದ್ಧ 2-1 ಗೋಲ್​ಗಳ ಗೆಲುವು

“ಟಾಮ್ ಮಾಡಿದ್ದನ್ನು ನಾನು ಕ್ಷಮಿಸಲಾರೆ. ಅವರು ಕೆಟ್ಟ ನಿರ್ಧಾರ ತೆಗೆದುಕೊಂಡ ಒಳ್ಳೆಯ ವ್ಯಕ್ತಿ. ಆದರೆ ಈ ರೀತಿಯ ನಿರ್ಧಾರಗಳಿಗೆ ಪರಿಣಾಮಗಳಾಗುತ್ತವೆ. ಪರಿಣಾಮವಾಗಿ ಟಾಮ್ ತನ್ನ ಉಳಿದ ಎಲ್ಲಾ ಒಲಿಂಪಿಕ್ ಸವಲತ್ತುಗಳನ್ನು ಕಳೆದುಕೊಳ್ಳುತ್ತಾನೆ. ಅವರು ಆಗಲೇ ಒಲಿಂಪಿಕ್ ಗ್ರಾಮದಿಂದ ಹೊರಹೋಗಿದ್ದರು. ಅವರು ಸಮಾರೋಪ ಸಮಾರಂಭಕ್ಕೆ ಮರಳುವ ಉದ್ದೇಶ ಹೊಂದಿರಲಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಬಂದರೂ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಆಸ್ಟ್ರೇಲಿಯಾದ ಚೆಫ್ ಡಿ ಮಿಷನ್ ಅನ್ನಾ ಮೀರೆಸ್ ಹೇಳಿಕೆಯಲ್ಲಿ

ಕೊಕೇನ್ ಖರೀದಿಸಿದ್ದಕ್ಕಾಗಿ ಆಸ್ಟ್ರೇಲಿಯಾದ ಕ್ರೀಡಾಪಟುವನ್ನು ಬಂಧಿಸಲಾಗಿದೆ ಎಂದು ಪ್ಯಾರಿಸ್ ಪ್ರಾಸಿಕ್ಯೂಟರ್ ಕಚೇರಿ ಒಪ್ಪಿಕೊಂಡಿದ್ದರೂ, ಕ್ರೀಡೆಯ ಜಾಗತಿಕ ಆಡಳಿತ ಮಂಡಳಿಯಾದ ಅಂತರರಾಷ್ಟ್ರೀಯ ಹಾಕಿ ಫೆಡರೇಶನ್​​ನಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

Exit mobile version