ಪ್ಯಾರಿಸ್: ಫ್ರಾನ್ಸ್ನ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ (Paris Olympics 2024) ಭಾರತದ ಮನು ಭಾಕರ್ ಅವರು ಕಂಚಿನ ಪದಕ ಗೆದ್ದಿದ್ದು, ಭಾರತೀಯ ಅಥ್ಲೀಟ್ಗಳ (Indian Athletes) ವಿಶ್ವಾಸ ಹೆಚ್ಚಾಗಿದೆ. ಇನ್ನು, ಸೋಮವಾರ (ಜುಲೈ 29) ಕೂಡ ಭಾರತೀಯ ಅಥ್ಲೀಟ್ಗಳು ಪದಕಕ್ಕಾಗಿ ಸೆಣಸಾಟ ನಡೆಸುತ್ತಿದ್ದಾರೆ. ಹಾಗಾದರೆ, ಸೋಮವಾರ ಭಾರತದ ಅಥ್ಲೀಟ್ಗಳು ಯಾವೆಲ್ಲ ಕ್ರೀಡೆಯಲ್ಲಿ ಪಾಲ್ಗೊಳ್ಳಲಿದ್ದಾರೆ? ಭಾರತೀಯ ಕಾಲಮಾನ ಯಾವುದು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಒಲಿಂಪಿಕ್ಸ್ನಲ್ಲಿ ಇಂದು ಭಾರತೀಯರು
- ಮಧ್ಯಾಹ್ನ 12: ಬ್ಯಾಡ್ಮಿಂಟನ್- ಪುರುಷರ ಡಬಲ್ಸ್ ಗ್ರೂಪ್ ಸ್ಟೇಜ್- ಸಾತ್ವಿಕ್ರಾಜ್ ರಂಕಿರೆಡ್ಡಿ/ ಚಿರಾಗ್ ಶೆಟ್ಟಿ vs ಮಾರ್ಕ್ ಲ್ಯಾಮ್ಫಸ್. ಮಾರ್ವಿನ್ ಸೀಡೆಲ್ (ಜರ್ಮನಿ)
- 12.45- 10 ಎಂ ಏರ್ ಪಿಸ್ತೂಲ್ ಮಿಕ್ಸ್ಡ್ ಟೀಮ್ ಕ್ವಾಲಿಫಿಕೇಶನ್- ಇಂಡಿಯಾ 1 (ಮನು ಭಾಕರ್/ ಸರಬ್ಜೋತ್ ಸಿಂಗ್); ಇಂಡಿಯಾ 2 (ರಿದಮ್ ಸಂಗ್ವಾನ್/ ಅರ್ಜುನ್ ಸಿಂಗ್ ಚೀಮಾ)
- 12.50- ಬ್ಯಾಡ್ಮಿಂಟನ್- ಮಹಿಳೆಯರ ಡಬಲ್ಸ್ ಗ್ರೂಪ್ ಸ್ಟೇಜ್೦ ತನಿಶಾ ಕ್ರಾಸ್ಟೋ/ಅಶ್ವಿನಿ ಪೊನ್ನಪ್ಪ vs ನಾಮಿ ಮತ್ಸುಯಾಮಾ/ಚಿಹಾರು ಶಿಡಾ (ಜಪಾನ್)
- ಮಧ್ಯಾಹ್ನ 1- ಶೂಟಿಂಗ್- ಟ್ರ್ಯಾಪ್ ಮೆನ್ಸ್ ಕ್ವಾಲಿಫಿಕೇಶನ್ ಡೇ 1- ಪೃಥ್ವಿರಾಜ್ ತೊಂಡೈಮನ್
- ಮಧ್ಯಾಹ್ನ 1- ಶೂಟಿಂಗ್- 10 ಎಂ ಏರ್ ರೈಫಲ್ ವುಮೆನ್ಸ್ ಫೈನಲ್೦ ರಮಿತಾ ಜಿಂದಾಲ್
- 3.30: ಶೂಟಿಂಗ್- 10 ಎಂ ಏರ್ ರೈಫಲ್ ಮೆನ್ಸ್ ಫೈನಲ್- ಅರ್ಜುನ್ ಬಬುತಾ
- ಸಂಜೆ 4.15- ಹಾಕಿ- ಮೆನ್ಸ್ ಪೂಲ್ ಬಿ- ಇಂಡಿಯಾ vs ಅರ್ಜೆಂಟೀನಾ
- 5.30- ಬ್ಯಾಡ್ಮಿಂಟನ್- ಮೆನ್ಸ್ ಸಿಂಗಲ್ಸ್ ಗ್ರೂಪ್ ಸ್ಟೇಜ್- ಲಕ್ಷ್ಯಾ ಸೇನ್ vs ಜೂಲಿಯನ್ ಕರಾಗಿ (ಜರ್ಮನಿ)
- 6.31- ಅರ್ಚರಿ- ಮೆನ್ಸ್ ಟೀಮ್ ಕ್ವಾರ್ಟರ್ ಫೈನಲ್ (ಧೀರಜ್ ಬೊಮ್ಮದೇವರ/ಪ್ರವೀಣ್ ಜಾಧವ್/ತರುಣ್ದೀಪ್ ರಾಯ್)
- 8.18- ಅರ್ಚರಿ- ಮೆನ್ಸ್ ಟೀಮ್ ಬ್ರಾಂಜ್ ಮೆಡಲ್ ಮ್ಯಾಚನ್ (ಧಿರಜ್ ಬೊಮ್ಮದೇವರ/ಪ್ರವೀಣ್ ಜಾಧವ್/ತರುಣ್ದೀಪ್ ರಾಯ್
- 8.41- ಅರ್ಚರಿ೦ ಮೆನ್ಸ್ ಟೀಮ್ ಗೋಲ್ಡ್ ಮೆಡಲ್ ಮ್ಯಾಚ್ (ಧೀರಜ್ ಬೊಮ್ಮದೇವರ/ಪ್ರವೀಣ್ ಜಾಧವ್/ತರುಣ್ದೀಪ್ ರಾಯ್)
- 11.30- ಟೇಬಲ್ ಟೆನಿಸ್- ವುಮೆನ್ಸ್ ಸಿಂಗಲ್ಸ್ ರೌಂಡ್ ಆಫ್ 32- ಶ್ರೀಜಾ ಅಕುಲಾ vs ಜಿಯಾನ್ ಜೆಂಗ್ (ಸಿಂಗಾಪುರ)
ಯಾರಿಗೆಲ್ಲ ಪದಕ ಗೆಲ್ಲುವ ಅವಕಾಶ?
ಮನು ಭಾಕರ್ ಅವರು ಕಂಚಿನ ಪದಕ ಗೆದ್ದ ಬಳಿಕ ಭಾರತದ ಅಥ್ಲೀಟ್ಗಳ ವಿಶ್ವಾಸ ಹೆಚ್ಚಾಗಿದೆ. ಸೋಮವಾರ ಕೂಡ ಭಾರತಕ್ಕೆ ಪದಕ ಗೆಲ್ಲುವ ಸಾಧ್ಯತೆಗಳಿವೆ. 10 ಎಂ ಏರ್ ರೈಫಲ್ ಇವೆಂಟ್ಗಳಲ್ಲಿ ರಮಿತಾ ಜಿಂದಾಲ್ ಹಾಗೂ ಅರ್ಜುನ್ ಬಬುತಾ ಅವರು ಭಾರತಕ್ಕೆ ದ್ವಿತೀಯ ಹಾಗೂ ತೃತೀಯ ಮೆಡಲ್ಗಳನ್ನು ತಂದು ಕೊಡುವ ನಿರೀಕ್ಷೆ ಇದೆ.
ಇದನ್ನೂ ಓದಿ: Manu Bhaker : ಭಾರತಕ್ಕೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮೊದಲ ಪದಕ ತಂದುಕೊಟ್ಟ ಮನು ಭಾಕರ್ ಯಾರು? ಅವರ ಹಿನ್ನೆಲೆಯೇನು?