Site icon Vistara News

Paris Olympics 2024 Day 6: ಇಂದಿನಿಂದ ಅಥ್ಲೆಟಿಕ್ಸ್ ಆರಂಭ; ಭಾರತದ ಕ್ರೀಡಾ ಸ್ಪರ್ಧೆಗಳ ವಿವರ ಹೀಗಿದೆ

Paris Olympics 2024 Day 6

Paris Olympics 2024 Day 6: India's Full schedule of medal events and fixtures

ಪ್ಯಾರಿಸ್​: ಒಲಿಂಪಿಕ್ಸ್​ನಲ್ಲಿ(Paris Olympics) ಬುಧವಾರ ನಡೆದಿದ್ದ ಹಲವು ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಫಲಿತಾಂಶ ದಾಖಲಿಸಿ, ಕೆಲವರು ಫೈನಲ್​, ಕ್ವಾರ್ಟರ್​ ಫೈನಲ್​ ಮತ್ತು ಪ್ರೀ ಕ್ವಾರ್ಟರ್​ ಫೈನಲ್​ ಪ್ರವೇಶಿಸಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಇದೀಗ ಇಂದು(ಗುರುವಾರ) ನಡೆಯುವ ಹಲವು(Paris Olympics 2024 Day 6) ವಿಭಾಗದ ಸ್ಪರ್ಧೆಗಳಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಲು ಭಾರತೀಯ ಕ್ರೀಡಾಪಟುಗಳು(India at Paris Olympics) ಸಜ್ಜಾಗಿದ್ದಾರೆ. ಇಂದು ಭಾರತೀಯ ಕ್ರೀಡಾಳುಗಳು ಕಣಕ್ಕಿಳಿಯುವ ಸ್ಪರ್ಧೆಗಳ ವಿವರ ಹೀಗಿದೆ.

ಅಥ್ಲೆಟಿಕ್ಸ್​ನಲ್ಲಿ ಪದಕ ನಿರೀಕ್ಷೆ


ಈ ಬಾರಿ ಪ್ಯಾರಿಸ್​ಗೆ ಕಳುಹಿಸಿದ 117 ಕ್ರೀಡಾಪಟುಗಳ ಪಟ್ಟಿಯಲ್ಲಿ ಅಥ್ಲೆಟಿಕ್ಸ್​ ದೊಡ್ಡ ತಂಡವಾಗಿದೆ. ಒಟ್ಟು 29 ಸ್ಪರ್ಧಿಗಳು ಭಾರತವನ್ನು ಈ ವಿಭಾಗದಿಂದ ಪ್ರತಿನಿಧಿಸಲಿದ್ದಾರೆ. ಇವರಿಂದ ಹಲವು ಪದಕಗಳನ್ನು ಕೂಡ ಈ ಬಾರಿ ನಿರೀಕ್ಷೆ ಮಾಡಲಾಗಿದೆ. 18 ಪುರುಷರು ಹಾಗೂ 11 ಮಹಿಳೆಯರು ಸೇರಿದ್ದಾರೆ. ಇಂದು ನಡೆಯುವ ಪುರುಷರ ಮತ್ತು ಮಹಿಳೆಯರ 20 ಕಿಮೀ ಓಟದ ನಡಿಗೆ ಸ್ಪರ್ಧೆಯಲ್ಲಿ ಐತಿಹಾಸಿಕ ಪದಕವೊಂದನ್ನು ನಿರೀಕ್ಷೆ ಮಾಡಲಾಗಿದೆ. ಅಕ್ಷದೀಪ್ ಸಿಂಗ್, ವಿಕಾಶ್ ಸಿಂಗ್ ,ಪರಮ್ಜೀತ್ ಸಿಂಗ್ ಬಿಷ್ತ್ ಪುರುಷರ ವಿಭಾಗದಲ್ಲಿ ಕಣಕ್ಕಿಳಿದರೆ, ಮಹಿಳಾ ವಿಭಾಗದಲ್ಲಿ ಏಕೈಕ ಓಟಗಾರ್ತಿ ಪ್ರಿಯಾಂಕಾ ಗೋಸ್ವಾಮಿ(priyanka goswami) ಸ್ಪರ್ಧಿಸಲಿದ್ದಾರೆ.

28 ವರ್ಷದ ಪ್ರಿಯಾಂಕಾ ಗೋಸ್ವಾಮಿ ಉತ್ತರಪ್ರದೇಶದ ಮುಜಫ‌ರ್‌ ನಗರದವರು. ಆರಂಭದಲ್ಲಿ ಜಿಮ್ನಾಸ್ಟ್‌ ಆಗಿದ್ದ ಅವರು ಆ ಬಳಿಕ ಅಥ್ಲೆಟಿಕ್ಸ್‌ಗೆ ಹೊರಳಿಕೊಂಡರು. 2022ರ ಕಾಮನ್‌ ವೆಲ್ತ್‌ ಗೇಮ್ಸ್​ ಮತ್ತು ಕಳೆದ ವರ್ಷ ನಡೆದಿದ್ದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಕ್ರಮವಾಗಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದರು. ಅವರು ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಭಾರತದ ಹೊಸ ಆಶಾಕಿರಣವಾಗಿ ಗೋಚರಿಸಿದ್ದಾರೆ.

ಇದನ್ನೂ ಓದಿ Paris Olympics: ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಮುಗ್ಗರಿಸಿದ ಮಣಿಕಾ ಬಾತ್ರಾ

ವೇಳಾಪಟ್ಟಿ


ಅಥ್ಲೆಟಿಕ್ಸ್​

ಪುರುಷರ 20 ಕಿಮೀ ಓಟದ ನಡಿಗೆ, ಫೈನಲ್
ಅಕ್ಷದೀಪ್ ಸಿಂಗ್, ವಿಕಾಶ್ ಸಿಂಗ್ ,ಪರಮ್ಜೀತ್ ಸಿಂಗ್ ಬಿಷ್ತ್ (ಆರಂಭ; ಬೆಳಗ್ಗೆ 11 ಗಂಟೆ)

ಮಹಿಳೆಯರ 20 ಕಿಮೀ ಓಟದ ನಡಿಗೆ, ಫೈನಲ್
ಪ್ರಿಯಾಂಕಾ ಗೋಸ್ವಾಮಿ (ಆರಂಭ: ಮಧ್ಯಾಹ್ನ 12:50) 

ಆರ್ಚರಿ

ಪುರುಷರ ವೈಯಕ್ತಿಕ, 1/32 ಎಲಿಮಿನೇಷನ್ ಸುತ್ತು

ಪ್ರವೀಣ್ ರಮೇಶ್ ಜಾಧವ್ vs ಕೆಎಒ ವೆಂಚಾವ್(ಚೀನಾ). (ಆರಂಭ: ಮಧ್ಯಾಹ್ನ  2:31) 

ಸೈಲಿಂಗ್​ (ಹಾಯಿದೋಣಿ)


ಪುರುಷರ ಡಿಂಗಿ, ರೇಸ್​ 1

ವಿಷ್ಣು ಸರವಣನ್ (ಆರಂಭ: ಮಧ್ಯಾಹ್ನ  3:45) 

ಮಹಿಳೆಯರ ಡಿಂಗಿ, ರೇಸ್​ 1

ನೇತ್ರಾ ಕುಮನನ್‌

ಗಾಲ್ಫ್​


ಪುರುಷರ ವೈಯಕ್ತಿಕ ಸ್ಟ್ರೋಕ್ ಗೇಮ್​, ಸುತ್ತು 1

ಶುಭಂಕರ್ ಶರ್ಮಾ, ಗಗನ್ಜೀತ್ ಭುಲ್ಲರ್. (ಆರಂಭ: ಮಧ್ಯಾಹ್ನ  12:30) 

ಹಾಕಿ


ಪುರುಷರ, ಗುಂಪು ಬಿ.

ಭಾರತ vs ಬೆಲ್ಜಿಯಂ (ಆರಂಭ: ಮಧ್ಯಾಹ್ನ, 1:30)

ಶೂಟಿಂಗ್​


ಮಹಿಳೆಯರು 50 ಮೀ ರೈಫಲ್ 3 ತ್ರೀ ಪೊಸಿಶನ್‌ ಅರ್ಹತಾ ಸುತ್ತು

ಅಂಜುಮ್ ಮೌದ್ಗಿಲ್, ಸಿಫ್ಟ್ ಕೌರ್ ಸಮ್ರಾ (ಆರಂಭ: ಮಧ್ಯಾಹ್ನ, 3:30)

Exit mobile version