ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ನ (Paris Olympics 2024 ) ಏಳನೇ ದಿನವಾದ ಶುಕ್ರವಾರ ಭಾರತಕ್ಕೆ ಯಾವುದೇ ಪದಕಗಳು ಲಭಿಸಿಲ್ಲ. ಆರ್ಚರಿಯ ಮಿಶ್ರ ತಂಡ ವಿಭಾಗದಲ್ಲಿ ಅಂಕಿತಾ ಹಾಗೂ ಧೀರಜ್ ಬೊಮ್ಮದೇವರ ಕಂಚಿನ ಪದಕ ಮಿಸ್ ಮಾಡಿಕೊಳ್ಳುವ ಮೂಲಕ ಹಿನ್ನಡೆಯಾಯಿತು. ಇದೇ ವೇಳೆ ಪೂಲ್ ಹಂತದ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಆಸ್ಟ್ರೇಲಿಯಾವನ್ನು 3-2 ಅಂತರದಿಂದ ಸೋಲಿಸಿತು. 1972ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಪುರುಷರ ತಂಡ ಒಲಿಂಪಿಕ್ಸ್ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದೆ.
MANU BHAKER INTO THE FINAL IN WOMEN'S 25m PISTOL…!!!!
— Johns. (@CricCrazyJohns) August 2, 2024
– The dream for the third medal is on for Manu. 🇮🇳 pic.twitter.com/kHBLQtW6Kx
ಎರಡು ಬಾರಿ ಪ್ಯಾರಿಸ್ ಒಲಿಂಪಿಕ್ ಪದಕ ವಿಜೇತ ಮನು ಭಾಕರ್ ತಮ್ಮ ಮೂರನೇ ಸ್ಪರ್ಧೆಯಾದ 25 ಮೀಟರ್ ಪಿಸ್ತೂಲ್ ನ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಶೂಟಿಂಗ್ನಲ್ಲಿ ಭಾರತಕ್ಕೆ ಎರಡು ಕಂಚಿನ ಪದಕ ಗೆದ್ದ ಅವರು ಮತ್ತೊಂದು ಪದಕಕ್ಕೆ ಗುರಿಯಿಟ್ಟಿದ್ದಾರೆ. ಆರ್ಚರಿಯಲ್ಲಿ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಅವರು ಇಂಡೋನೇಷ್ಯಾ ಮತ್ತು ಸ್ಪೇನ್ ಜೋಡಿಯನ್ನು ಸೋಲಿಸಿ ಮಿಶ್ರ ತಂಡ ಸ್ಪರ್ಧೆಯ ಸೆಮಿಫೈನಲ್ ಗೆ ಪ್ರವೇಶಿಸಿದ್ದರು. ಆದರೆ, ಚಾಂಪಿಯನ್ ಕೊರಿಯಾ ಹಾಗೂ ಕಂಚಿನ ಪದಕದ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋತಿತು.
ಮೂರನೇ ದಿನ ಮನು ಭಾಕರ್ಗೆ ಚಿನ್ನ ಸೇರಿದಂತೆ ಯಾವುದೇ ಪದಕ ಗೆಲ್ಲುವ ಅವಕಾಶವಿದೆ. ಅದು ಅವರ ಮೂರನೇ ಪದಕವಾಗಲಿದೆ. ಬಾಕ್ಸರ್ ನಿಶಾಂತ್ ದೇವ್ ಕೂಡ ಶನಿವಾರ ಪದಕವನ್ನು ಖಚಿತಪಡಿಸುವ ಅವಕಾಶವಿದೆ. ಮೆಕ್ಸಿಕೊದ ಮಾರ್ಕೊ ವರ್ಡೆ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಯ ಗಳಿಸಿದರೆ ಸೆಮಿಫೈನಲ್ ಪ್ರವೇಶಿಸಲಿದ್ದು. ಪದಕ ಖಚಿತವಾಗಲಿದೆ. ಆರ್ಚರಿಯಲ್ಲಿ ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ತಮ್ಮ ಮಹಿಳಾ ಸಿಂಗಲ್ಸ್ ಸುತ್ತುಗಳಲ್ಲಿ ಸ್ಪರ್ಧಿಸಲಿದ್ದಾರೆ.
ಇದನ್ನೂ ಓದಿ: Paris Olympics 2024 : ಭಾರತಕ್ಕೆ ಒಂದು ಪದಕ ಜಸ್ಟ್ ಮಿಸ್; ಆರ್ಚರಿ ಕಂಚಿನ ಪದಕದ ಪಂದ್ಯದಲ್ಲಿ ಸೋತ ಅಂಕಿತಾ, ಧೀರಜ್ ಜೋಡಿ
ಆಗಸ್ಟ್ 3ರ ಭಾರತದ ವೇಳಾಪಟ್ಟಿಯ ನೋಟ ಇಲ್ಲಿದೆ
ಮಧ್ಯಾಹ್ನ 12:30: ಶೂಟಿಂಗ್ – ಮಹಿಳಾ ಸ್ಕೀಟ್ ಅರ್ಹತಾ ಸುತ್ತಿನ ದಿನ ಮೊದಲ ದಿನ, ರೈಜಾ ಧಿಲ್ಲಾನ್ ಮತ್ತು ಮಹೇಶ್ವರಿ ಚೌಹಾಣ್.
ಮಧ್ಯಾಹ್ನ 1 ಗಂಟೆ: ಶೂಟಿಂಗ್; ಮಹಿಳೆಯರ 25 ಮೀಟರ್ ಪಿಸ್ತೂಲ್ ಫೈನಲ್ನಲ್ಲಿ ಮನು ಭಾಕರ್ (ಪದಕದ ಸ್ಪರ್ಧೆ)
ಮಧ್ಯಾಹ್ನ 1:52: ಆರ್ಚರಿ – ಮಹಿಳೆಯರ ವೈಯಕ್ತಿಕ 16ನೇ ಸುತ್ತಿನ ಪಂದ್ಯದಲ್ಲಿ ದೀಪಿಕಾ ಕುಮಾರಿ ಮತ್ತು ಜರ್ಮನಿಯ ಮಿಚೆಲ್ ಕ್ರೊಪೆನ್ ನಡುವೆ ಹಣಾಹಣಿ
ಮಧ್ಯಾಹ್ನ 2:05: ಆರ್ಚರಿ – ಮಹಿಳೆಯರ ವೈಯಕ್ತಿಕ 16ನೇ ಸುತ್ತಿನ ಪಂದ್ಯದಲ್ಲಿ ಭಜನ್ ಕೌರ್ ಮತ್ತು ಡಯಾನಂದಾ ಕೊಯಿರುನ್ನಿಸಾ.
ಮಧ್ಯಾಹ್ನ 3:45 ಸೇಯ್ಲಿಂಗ್- ಪುರುಷರ ಡಿಂಗ್ಲೇ ರೇಸ್ 5 ಮತ್ತು 6ರಲ್ಲಿ ವಿಷ್ಣು ಸರವಣನ್ ಸ್ಪರ್ಧಿಸಲಿದ್ದಾರೆ.
ಸಂಜೆ 5:55: ಸೇಯ್ಲಿಂಗ್; ಮಹಿಳೆಯರ ಡಿಂಗ್ಲೇ ರೇಸ್ 5 ಮತ್ತು 6 ರಲ್ಲಿ ನೇತ್ರಾ ಕುಮನನ್ ಭಾಗಿಯಾಗಲಿದ್ದಾರೆ.
ರಾತ್ರಿ 11:05: ಶಾಟ್ ಪುಟ್ ಫೈನಲ್ ; ತಜಿಂದರ್ಪಾಲ್ ಸಿಂಗ್ ತೂರ್ (ಅರ್ಹತೆ ಪಡೆದರೆ).
ರಾತ್ರಿ 12:02 : ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ನಿಶಾಂತ್ ದೇವ್ ಮತ್ತು ಮೆಕ್ಸಿಕೊದ ಮಾರ್ಕೊ ವರ್ಡೆ.