Site icon Vistara News

Paris Olympics 2024: ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಬಾಲರಾಜ್; ಪದಕದ ಆಸೆ ಜೀವಂತ

Paris Olympics 2024

Paris Olympics 2024: Rower Balraj Panwar Finishes 2nd in Repechage to Enter Men’s Single Sculls Quarterfinals

ಪ್ಯಾರಿಸ್​: ರೋಯಿಂಗ್​ ಸ್ಪರ್ಧೆಯಲ್ಲಿ(Paris Olympics 2024) ಭಾರತದ ಏಕೈಕ ಭರವಸೆ ಎನಿಸಿಕೊಂಡಿರುವ ಬಾಲರಾಜ್​ ಪನ್ವರ್(Rower Balraj Panwar)​ ಇಂದು ನಡೆದ ಪುರುಷರ ಸಿಂಗಲ್ಸ್​ ಸ್ಕಲ್ಸ್​ ವಿಭಾಗದ ರಿಪಿಚೇಜ್‌ ಸುತ್ತಿನಲ್ಲಿ 7 ನಿಮಿಷ 12.41 ಸೆಂಕಡ್​ನಲ್ಲಿ ಗುರಿ ಮುಟ್ಟಿ 2ನೇ ಸ್ಥಾನ ಪಡೆಯುವ ಮೂಲಕ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ. ಈ ಮೂಲಕ ಪದಕದಾಸೆಯನ್ನು ಜೀವಂತವಿರಿಸಿದ್ದಾರೆ. ರಿಪಿಚೇಜ್‌ ಸುತ್ತಿನಲ್ಲಿ ಅಗ್ರ 2 ಸ್ಥಾನ ಪಡೆದ ಆಟಗಾರರಿಗೆ ಕ್ವಾರ್ಟರ್​ ಫೈನಲ್​ ಅರ್ಹತೆ ಲಭಿಸುತ್ತದೆ.

7 ನಿಮಿಷ 10 ಸೆಂಕಡ್​ನಲ್ಲಿ ಗುರಿ ಮುಟ್ಟಿದ ಮೊನಕೊ ದೇಶದ ಕ್ವೆಂಟಿನ್ ಆಂಟೊಗ್ನೆಲ್ಲಿ ಮೊದಲ ಸ್ಥಾನ ಪಡೆದರು. ಕೇವಲ 2 ಸೆಂಕಡ್​ಗಳ ಅಂತರದಲ್ಲಿ ಭಾರತದ ನಾವಿಕ ಬಾಲರಾಜ್ ಮೊದಲ ಸ್ಥಾನದಿಂದ ವಂಚಿತರದಾದರು. ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್​ ಪ್ರವೇಶಿಸಿದರೆ ಐತಿಹಾಸಿಕ ಪದಕವೊಂದು ಖಾತ್ರಿಯಾಗಲಿದೆ.

ಇದಕ್ಕೂ ಮುನ್ನ ನಡೆದಿದ್ದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬಾಲರಾಜ್ ನಾಲ್ಕನೇ ಸ್ಥಾನ ಪಡೆದು ರಿಪಿಚೇಜ್‌ ಸುತ್ತಿಗೆ ಪ್ರವೇಶಿಸಿದ್ದರು. 2022ರ ಏಷ್ಯನ್​ ಗೇಮ್ಸ್​ನಲ್ಲಿ ಬಾಲರಾಜ್​ ನಾಲ್ಕನೇ ಸ್ಥಾನಿಯಾಗಿದ್ದರು.

ಸಿಂಧು ಗೆಲುವಿನ ಆರಂಭ


ಅವಳಿ ಒಲಿಂಪಿಕ್ಸ್(Paris Olympics)​ ಪದಕ ವಿಜೇತೆ, ಭಾರತದ ಸ್ಟಾರ್​ ಶಟ್ಲರ್​ ಪಿ.ವಿ ಸಿಂಧು(PV Sindhu) ಅವರು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಗೆಲುವಿನ ಶುಭಾರಂಭ ಕಂಡಿದ್ದಾರೆ. ಇಂದು(ಭಾನುವಾರ) ನಡೆದ ಮಹಿಳಾ ಸಿಂಗಲ್ಸ್​ ವಿಭಾಗದ(Paris Olympics Badminton) ಮೊದಲ ಸುತ್ತಿನ ಪಂದ್ಯದಲ್ಲಿ ಮಾಲ್ಡಿವ್ಸ್​ನ ಫಾತಿಮತ್ ನಬಾಹಾ ಅಬ್ದುಲ್ ರಝಾಕ್ ವಿರುದ್ಧ 21-9, 21-6 ನೇರ ಗೇಮ್​ಗಳಿಂದ ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಸಿಂಧು 2ನೇ ಸುತ್ತಿನ ಪಂದ್ಯದಲ್ಲಿ ಕ್ರಿಸ್ಟಿನ್ ಕುಬಾ ವಿರುದ್ಧ ಆಡಲಿದ್ದಾರೆ. ಈ ಪಂದ್ಯ ಬುಧವಾರ ನಡೆಯಲಿದೆ.

ಇದನ್ನೂ ಓದಿ Paris Olympics boxing: ಎದುರಾಳಿಗೆ ಪವರ್​ ಪಂಚ್​ ನೀಡಿ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಬಾಕ್ಸರ್ ಪ್ರೀತಿ ಪವಾರ್

ಭಾನುವಾರ ನಡೆದ ಮಹಿಳಾ ಸಿಂಗಲ್ಸ್​ M ಗುಂಪಿನ ಪಂದ್ಯದಲ್ಲಿ ಸಿಂಧು ಆಕ್ರಮಣಕಾರಿ ಆಟವಾಡುವ ಮೂಲಕ ಎದುರಾಳಿ ಫಾತಿಮತ್ ನಬಾಹಾ ವಿರುದ್ಧ ಸುಲಭ ಗೆಲುವು ದಾಖಲಿಸಿದರು. ಫಾತಿಮತ್ ನಬಾಹಾ ಯಾವುದೇ ಹಂತದಲ್ಲೂ ಸಿಂಧುಗೆ ಪೈಪೋಟಿ ನೀಡುವಲ್ಲಿ ಯಶಸ್ಸು ಕಾಣಲಿಲ್ಲ.

ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟ ಪ್ರೀತಿ ಪವಾರ್​

ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಶನಿವಾರ ತಡರಾತ್ರಿ ನಡೆದಿದ್ದ ಮಹಿಳೆಯರ 54 ಕೆಜಿ ವಿಭಾಗದ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ(Paris Olympics boxing) ಭಾರತದ ಬಾಕ್ಸರ್ ಪ್ರೀತಿ ಪವಾರ್(Preeti Pawar) ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಪ್ರೀತಿ ಅವರ ಪವರ್​ ಪಂಚ್​ಗಳಿಗೆ ತಡೆಯೊಡ್ಡುವಲ್ಲಿ ಸಂಪೂರ್ಣ ವಿಫಲರಾದ ವಿಯೆಟ್ನಾಂನ ಪ್ರತಿಸ್ಪರ್ಧಿ ವೋ ಥಿ ಕಿಮ್ ಅನ್ಹ್(Vo Thi Kim Anh) 0-5 ಅಂತರದ ಸೋಲು ಕಂಡರು.

ಚೊಚ್ಚಲ ಬಾರಿಗೆ ಒಲಿಂಪಿಕ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಪ್ರೀತಿ ತಮ್ಮ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದ್ದಾರೆ. ಕಳೆದ ಏಷ್ಯನ್​ ಗೇಮ್ಸ್‌ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ತೋರಿದ್ದರು. ಹರಿಯಾಣದ 20 ವರ್ಷದ ಈ ಬಾಕ್ಸರ್‌ ಮಂಗಳವಾರ ನಡೆಯುವ 16ನೇ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾದ ಮಾರ್ಕೆಲಾ ಯೆನಿ ವಿರುದ್ಧ ಸೆಣಸಲಿದ್ದಾರೆ.

Exit mobile version