ಪ್ಯಾರಿಸ್: ಉತ್ತಮ ಫಾರ್ಮ್ ನಲ್ಲಿರುವ ಧೀರಜ್ ಬೊಮ್ಮದೇವರ(Dhiraj Bommadevara) ಮತ್ತು ಅಂಕಿತಾ ಭಕತ್(Ankita Bhakat) ಅವರು ಪ್ಯಾರಿಸ್ ಒಲಿಂಪಿಕ್ಸ್‌ನ(Paris Olympics) ಆರ್ಚರಿ ಕ್ರೀಡೆಯ ಮಿಶ್ರ ತಂಡದ 16ನೇ ಸುತ್ತಿನ ಪಂದ್ಯದಲ್ಲಿ ಇಂಡೋನೇಷ್ಯಾವನ್ನು 5-1 (37-36, 38-38, 38-37) ಅಂತದಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಈ ಮೂಲಕ ಆರ್ಚರಿಯಲ್ಲಿ ಒಲಿಂಪಿಕ್ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದೆ.
ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಭಾಗವಹಿ ಸುತ್ತಿರುವ ಧೀರಜ್ ಮತ್ತು ಅಂಕಿತಾ ಅವರ ಅಮೋಘ ನಿರ್ವಹಣೆಯಿಂದ ಭಾರತ ಕ್ವಾರ್ಟರ್‌ಫೈನಲಿಗೆ ಪ್ರವೇಶಿಸಿದೆ. 26ರ ಹರೆಯದ ಅಂಕಿತಾ ಅಮೋಘ ಪ್ರದಶನ ತೋರುವ ಮೂಲಕ ಹಲವು ಬಾರಿ 10 ಅಂಕ್ಕೆ ಗುರಿ ಇರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕ್ವಾರ್ಟರ್ ಫೈನಲ್ ಪಂದ್ಯ ಇಂದು ಸಂಜೆ 5.40ಕ್ಕೆ ನಡೆಯಲಿದೆ.
ಬ್ಯಾಡ್ಮಿಂಡನ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿರುವ ಲಕ್ಷ್ಯ ಸೇನ್ ಇಂದು ಕಣಕ್ಕಿಳಿಯಲಿದ್ದಾರೆ. ಗೆದ್ದರೆ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಮೂಲಕ ಪದಕ ಸುತ್ತಿಗೇರಲಿದ್ದಾರೆ. ಏತನ್ಮಧ್ಯೆ, ಭಾರತದ ಹಾಕಿ ತಂಡ ಕೂಡ ಅಂತಿಮ ಲೀಗ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ನಿನ್ನೆ(ಗುರುವಾರ) ನಡೆದಿದ್ದ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 2-1 ಅಂತರದ ಸೋಲು ಕಂಡಿತ್ತು.
ಇದನ್ನೂ ಓದಿ Paris Olympics: ಹ್ಯಾಟ್ರಿಕ್ ಪದಕ ನಿರೀಕ್ಷೆಯಲ್ಲಿ ಮನು ಭಾಕರ್; 25 ಮೀ. ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧೆ
ಪ್ರಸಕ್ತ ಸಾಗುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್(Paris Olympic) ಕ್ರೀಡಾಕೂಟದಲ್ಲಿ ಭಾರತ ಇದುವರೆಗೂ 3 ಪದಕಗಳನ್ನು ಗೆದ್ದು ಪದಕಪಟ್ಟಿಯಲ್ಲಿ ಸದ್ಯ 44ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಕೆಲವು ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಳುಗಳು ತಮ್ಮ ವಿಭಾಗದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ಪದಕ ಭರವಸೆ ಮೂಡಿಸಿದ್ದಾರೆ. ಇದರ ಬೆನ್ನಲ್ಲೇ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ಕಾರು ಬಹುಮಾನ ನೀಡಲಾಗುವುದು ಎಂದು ಜೆಎಸ್ಡಬ್ಲ್ಯು ಎಂಜಿ ಇಂಡಿಯಾದ ಚೇರ್ಮನ್ ಸಜ್ಜನ್ ಜಿಂದಾಲ್(JSW Chairman Sajjan Jindal) ಘೋಷಣೆ ಮಾಡಿದ್ದಾರೆ. ಹೊಸದಾಗಿ ಮಾರುಕಟ್ಟೆಗೆ ಬರುತ್ತಿರುವ ಎಂಜಿ ವಿಂಡ್ಸರ್(MG Windsor) ಕಾರನ್ನು ಬಹುಮಾನವಾಗಿ ನೀಡುವುದಾಗಿ ಸಜ್ಜನ್ ಜಿಂದಾಲ್ ಹೇಳಿದ್ದಾರೆ. ಈ ಕಾರಿನ ಮೌಲ್ಯ ಸುಮಾರು 25 ಲಕ್ಷ ರೂ. ಆಗಿದೆ.