ಪ್ಯಾರಿಸ್: ಮಂಗಳವಾರ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ(Paris Olympics) ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಫೈನಲ್ ಪ್ರವೇಶಿಸುವ ಮೂಲಕ ದೇಶಕ್ಕೆ ಐತಿಹಾಸಿಕ ಪದಕವೊಂದನ್ನು ಖಾತ್ರಿಪಡಿಸಿದ್ದಾರೆ. ಆದರೆ, ಬಹಳ ನಿರೀಕ್ಷೆ ಇರಿಸಿದ್ದ ಭಾರತ ಪುರುಷರ ಹಾಕಿ ತಂಡ ಸೆಮಿಫೈನಲ್ನಲ್ಲಿ ಸೋಲು ಕಾಣುವ ಮೂಲಕ ನಿರಾಶೆ ಮೂಡಿಸಿತ್ತು. ಇದೀಗ ಬುಧವಾರ ನಡೆಯುವ ಸ್ಪರ್ಧೆಗಳ ವಿವರ ಹೀಗಿದೆ.
ಅಥ್ಲೆಟಿಕ್ಸ್( ಪದಕ ಸ್ಪರ್ಧೆ)
ಮ್ಯಾರಥಾನ್ ರೇಸ್ ವಾಕ್ ರಿಲೇ ಮಿಶ್ರ ತಂಡ: ಪನ್ವರ್ ಸೂರಜ್ / ಪ್ರಿಯಾಂಕಾ. (ಆರಂಭ: ಬೆಳಗ್ಗೆ 11 ಗಂಟೆ)
ಗಾಲ್ಫ್
ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್ 1
ಅದಿತಿ ಅಶೋಕ್
ದಿಶಾ ದಾಗರ್ (ಆರಂಭ: ಮಧ್ಯಾಹ್ನ 12.30)
ಟೇಬಲ್ ಟೆನಿಸ್
ಮಹಿಳಾ ತಂಡ ಕ್ವಾರ್ಟರ್‌ಫೈನಲ್: ಭಾರತ-ಜರ್ಮನಿ. (ಆರಂಭ: ಮಧ್ಯಾಹ್ನ 1.30)
ಅಥ್ಲೆಟಿಕ್ಸ್
ಪುರುಷರ ಹೈ ಜಂಪ್ ಅರ್ಹತಾ ಸುತ್ತು: ಸರ್ವೇಶ್ ಅನಿಲ್ ಕುಶಾರೆ. (ಆರಂಭ: ಮಧ್ಯಾಹ್ನ 1.35)
ಅಥ್ಲೆಟಿಕ್ಸ್
ಮಹಿಳೆಯರ 100 ಮೀ ಹರ್ಡಲ್ಸ್ ಸುತ್ತು 1: ಜ್ಯೋತಿ ಯರಾಜಿ. (ಆರಂಭ: ಮಧ್ಯಾಹ್ನ 1.45)
ಕುಸ್ತಿ
ಮಹಿಳೆಯರ ಫ್ರೀಸ್ಟೈಲ್ 53kg (ಆರಂಭ: ಮಧ್ಯಾಹ್ನ 2.30)
ಅಥ್ಲೆಟಿಕ್ಸ್
ಪುರುಷರ ಟ್ರಿಪಲ್ ಜಂಪ್ ಅರ್ಹತೆ: ಅಬ್ದುಲ್ಲ ನರಂಗೋಳಿಂತೇವಿ, ಪ್ರವೀಣ್ ಚಿತ್ರವೇಲ್ (ಆರಂಭ: ರಾತ್ರಿ 10.45)
ವೇಟ್ ಲಿಫ್ಟಿಂಗ್
ಮಹಿಳೆಯರ 49 ಕೆಜಿ ವಿಭಾಗ: ಮೀರಾಬಾಯಿ ಚಾನು (ಆರಂಭ: ರಾತ್ರಿ 11)
ಮಂಗಳವಾರ ರಾತ್ರಿ ನಡೆದಿದ್ದ ಮಹಿಳೆಯರ 50 ಕೆಜಿ ಕುಸ್ತಿ ಸೆಮಿಫೈನಲ್ ಪಂದ್ಯದಲ್ಲಿ ವಿನೇಶ್ ಫೋಗಟ್ ಕ್ಯೂಬಾದ ಯುಸ್ನಿಲಿಸ್ ಗುಜ್ಮಾನ್(Yusneylys Guzman) ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದರು. ಈ ಮೂಲಕ ವಿನೇಶ್ ಫೋಗಟ್ ಒಲಿಂಪಿಕ್ ಇತಿಹಾಸದಲ್ಲಿ ಫೈನಲ್ ಪ್ರವೇಶಿಸಿ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಫೈನಲ್ನಲ್ಲಿ ಚಿನ್ನ ಅಥವಾ ಬೆಳ್ಳಿ ಗೆದ್ದರೂ ಐತಿಹಾಸಿಕ ಪದಕ ಗೆದ್ದ ಸಾಧನೆ ಮಾಡಲಿದ್ದಾರೆ. 50 ಕೆಜಿ ವಿಭಾಗದಲ್ಲಿ ವಿನೇಶ್ ಒಲಿಂಪಿಕ್ಸ್ ಆಡುತ್ತಿರುವುದು ಇದೇ ಮೊದಲ ಬಾರಿ. ಇದಕ್ಕೂ ಮುನ್ನ ರಿಯೋ ಒಲಿಂಪಿಕ್ಸ್ನಲ್ಲಿ 48 ಕೆಜಿ, ಟೋಕಿಯೊದಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಇದು ವಿನೇಶ್ ಅವರ ಮೂರನೇ ಒಲಿಂಪಿಕ್ಸ್ ಟೂರ್ನಿಯಾಗಿದೆ.