ನವದೆಹಲಿ: ಭಾರತದ ಪುರುಷರ ಮತ್ತು ಮಹಿಳೆಯರ 4×400 ಮೀಟರ್ ರಿಲೇ ತಂಡಗಳು ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್(Paris Olympics) ಟೂರ್ನಿಗೆ ಅರ್ಹತೆ ಸಂಪಾದಿಸಿದೆ. ಮಹಿಳೆಯರ(India Women’s 4x400m Relay Teams) ಸ್ಪರ್ಧೆಯಲ್ಲಿ ರೂಪಲ್ ಚೌಧರಿ, ಎಂ ಆರ್ ಪೂವಮ್ಮ, ಜ್ಯೋತಿಕಾ ಶ್ರೀ ದಂಡಿ ಮತ್ತು ಶುಭಾ ವೆಂಕಟೇಶನ್ ಸ್ಪರ್ಧಿಸಿಲಿದ್ದಾರೆ. ಸೋಮವಾರ ನಡೆದ ವಿಶ್ವ ಅಥ್ಲೆಟಿಕ್ಸ್ ರಿಲೇ ಟೂರ್ನಿಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಈ ಮಹಿಳಾ ತಂಡ ಅರ್ಹತೆ ಪಡೆಯಿತು. 3 ನಿಮಿಷ 29.35 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಮೊದಲ ಸ್ಥಾನಿ ಜಮೈಕಾ (3:28.54) ಮೊದಲ ಸ್ಥಾನಿಯಾಯಿತು.
Indian women's 4x400m relay team qualifies for Paris Olympics as they finish 2nd in Olympic Games qualification
— ANI (@ANI) May 6, 2024
(Pic: Athletics Federation of India) pic.twitter.com/lUfswoEKzR
ಪುರುಷರ ತಂಡದಲ್ಲಿ(India Men’s 4x400m Relay Teams) ಮುಹಮ್ಮದ್ ಅನಾಸ್, ಮುಹಮ್ಮದ್ ಅಜ್ಮಲ್, ಅರೋಕಿಯಾ ರಾಜೀವ್ ಮತ್ತು ಅಮೋಜ್ ಜೇಕಬ್ ಅವರ ತಂಡವು 3 ನಿಮಿಷ ಮತ್ತು 3.23 ಸೆಕೆಂಡುಗಳಲ್ಲಿ ಗುರಿ ತಲುಪಿ ಒಲಿಂಪಿಕ್ಸ್ ಟಿಕೆಟ್ ಪಡೆದುಕೊಂಡಿತು. ಎರಡನೇ ಸುತ್ತಿನ ಮೂರು ಹೀಟ್ಸ್‌ಗಳಲ್ಲಿ ಅಗ್ರ ಎರಡು ತಂಡಗಳು ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿರುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕಿತ್ತು. ಎರಡನೇ ಲೆಗ್ ಓಟಗಾರ ರಾಜೇಶ್ ರಮೇಶ್ ಸೆಳೆತದ ಕಾರಣ ಮಧ್ಯಂತರದಲ್ಲಿ ಹಿಂದೆ ಸರಿದ ನಂತರ ಪುರುಷರ ತಂಡವು ಮೊದಲ ಸುತ್ತಿನ ಅರ್ಹತಾ ಹೀಟ್‌ನಲ್ಲಿ ಮುಗಿಸಲು ವಿಫಲವಾಯಿತು. ಇದರೊಂದಿಗೆ, ಭಾರತವು ಈಗ 19 ಮಂದಿ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳೊಂದಿಗೆ ಪ್ಯಾರಿಸ್ಗೆ ಹೋಗಲಿದೆ. ಈ ಪಟ್ಟಿಯಲ್ಲಿ ಹಾಲಿ ಜಾವೆಲಿನ್ ಥ್ರೋ ಚಾಂಪಿಯನ್ ನೀರಜ್ ಚೋಪ್ರಾ ಇತರರು ಕೂಡ ಸೇರಿದ್ದಾರೆ.
Indian men's 4x400m relay team comprising of Muhammad Anas, Yahiya, Muhammad Ajmal, Arokia Rajiv and Amos Jacob, qualifies for Paris Olympics as they finish 2nd in Olympic Games qualification
— ANI (@ANI) May 6, 2024
(Pic: Athletics Federation of India) pic.twitter.com/OtGeGKY7lw
ಟ್ರ್ಯಾಕ್ ಮತ್ತು ಫೀಲ್ಡ್(track & field gold medallists) ವಿಭಾಗದಲ್ಲಿ ಚಿನ್ನ ಜಯಿಸುವ ಅಥ್ಲೀಟ್‌ಗಳಿಗೆ 41.60 ಲಕ್ಷ ನಗದು ಪ್ರಶಸ್ತಿ ನೀಡಲು ವಿಶ್ವ ಅಥ್ಲೆಟಿಕ್ (ಡಬ್ಲ್ಯುಎ) ಸಂಸ್ಥೆ ತೀರ್ಮಾನಿಸಿದೆ. 2028ರಲ್ಲಿ ಲಾಸ್ ಏಂಜಲಿಸ್ನಲ್ಲಿ ನಡೆಯುವ ಒಲಿಂಪಿಕ್ ಕೂಟದಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಎಲ್ಲರಿಗೂ ನಗದು ಪ್ರಶಸ್ತಿ ನೀಡುವುದಾಗಿಯೂ ಸಂಸ್ಥೆ ಘೋಷಿಸಿದೆ. ಇದೇ ಮೊದಲ ಬಾರಿಗೆ ಒಲಿಂಪಿಕ್ ಕೂಟದಲ್ಲಿ ನಗದು ಪ್ರಶಸ್ತಿ ನೀಡಲಾಗುತ್ತಿದೆ.
ಟೋಕಿಯೊ ಒಲಿಂಪಿಕ್ ಕೂಟದ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್ ಚೋಪ್ರಾ ಅವರು ಈ ಬಾರಿ ಚೆನ್ನ ಗೆದ್ದರೆ ಅವರಿಗೆ 50,000 ಅಮೆರಿಕನ್ ಡಾಲರ್ ಬಹುಮಾನ ದೊರೆಯಲಿದೆ. ನೀರಜ್ ಅವರು ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಪ್ಯಾರಿಸ್‌ನಲ್ಲಿಯೂ ಅವರ ಮೇಲೆ ಚಿನ್ನದ ನಿರೀಕ್ಷೆ ಮಾಡಲಾಗಿದೆ.
ಉದ್ಘಾಟನಾ ಸಮಾರಂಭ(paris olympics 2024 opening ceremony) ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮದೊಂದಿಗೆ ನೆರವೇರಲಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಈಗಾಗಲೇ ಕ್ರೀಡಾಕೂಟದ ಆಯೋಜಕರು ಮಾಡಿದ್ದಾರೆ. ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ.