ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್(Paris Olympics) ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ವಿಶ್ವ ನಂ. 3 ಭಾರತದ ತಾರಾ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್-ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ತಮ್ಮ ಒಲಿಂಪಿಕ್ಸ್ ಅಭಿಯಾನ ಕೊನೆಗೊಳಿಸಿದ್ದಾರೆ.
ಗುರುವಾರ ನಡೆದ ಅತ್ಯಂತ ಜಿದ್ದಾಜಿದ್ದಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಾತ್ವಿಕ್(Satwiksairaj Rankireddy)-ಚಿರಾಗ್(Chirag Shetty) ಜೋಡಿ ಮಲೇಷ್ಯಾದ ಆರನ್ ಚಿಯಾ-ವೂಯಿ ಯಿಕ್ ಸೊಹ್ ಜೋಡಿ ವಿರುದ್ಧ 13-21 21-14, 21-16 ಗೇಮ್‌ಗಳ ಅಂತರದಿಂದ ಸೋತು ನಿರಾಸೆ ಎದುರಿಸಿದರು.
ಮೊದಲ ಗೇಮ್‌ನಲ್ಲಿ ಒಂದು ಹಂತದ ವರೆಗೂ ಭಾರತೀಯ ಜೋಡಿಗೆ ಮಲೇಷ್ಯಾದ ಜೋಡಿ ತೀವ್ರ ಪೈಪೋಟಿ ನೀದರೂ ಕೂಡ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. 13-21 ಗೇಮ್‌ಗಳ ಅಂತರದಿಂದ ಸೋಲು ಕಂಡರು. 2ನೇ ಗಮ್ನಲ್ಲಿ ತಿರುಗಿ ಬಿದ್ದ ಚಿಯಾ-ವೂಯಿ ಬಲಿಷ್ಠ ಹೊಡೆತಗಳ ಮೂಲಕ ಈ ಗೇಮ್ ಅನ್ನು 21-14 ಅಂತರದಿಂದ ಗೆದ್ದು ಪಂದ್ಯವನ್ನು 1-1 ಸಮಬಲಕ್ಕೆ ತಂದರು. ಅಂತಿಮ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಭಾರತೀಯ ಜೋಡಿಗೆ ಗೆಲ್ಲುವ ಅವಕಾಶವಿದ್ದರೂ ಕೂಡ ಹಲವು ತಪ್ಪುಗಳನ್ನು ಮಾಡಿದ ಅಂತಿಮವಾಗಿ ಕಾರಣ ಸೋಲಿಗೆ ತುತ್ತಾದರು.
ದಿನದ ಮತ್ತೊಂದು ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ‘ಆಲ್ ಇಂಡಿಯನ್’ ಹೋರಾಟವೊಂದಕ್ಕೆ ಅಣಿಯಾಗಿದೆ. ಲಕ್ಷ್ಯ ಸೇನ್(Lakshya Sen) ಮತ್ತು ಎಚ್.ಎಸ್.ಪ್ರಣಯ್(HS Prannoy) ಮುಖಾಮುಖಿಯಾಗಲಿದ್ದಾರೆ. ಉಭಯ ಆಟಗಾರರ ಮುಖಾಮುಖಿಯಾದ ಕಾರಣ ಪುರುಷರ ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಒಂದು ಪದಕ ನಿರೀಕ್ಷೆ ಹುಸಿಯಾಗಿದೆ.
ಬುಧವಾರ ತಡರಾತ್ರಿ ನಡೆದಿದ್ದ ಗ್ರೂಪ್ ‘ಕೆ’ ವಿಭಾಗದ ಅಂತಿಮ ಲೀಗ್ ಪಂದ್ಯದಲ್ಲಿ ಪ್ರಣಯ್ ಅವರು ವಿಯೆಟ್ನಾಂನ ಡ್ಯೂಕ್ ಫತ್ ಲೇ ಅವರನ್ನು ಮೂರು ಸೆಟ್ಗಳ ತೀವ್ರ ಹೋರಾಟದಲ್ಲಿ 16-21, 21-11,21-12 ಅಂತರದಿಂದ ಮಣಿಸಿ 16ರ ಹಂತಕ್ಕೆ ಮುನ್ನಡೆದಿದ್ದರು. ಇದಕ್ಕೂ ಮುನ್ನ ನಡೆದಿದ್ದ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರು ಜೋನಾಥನ್ ಕ್ರಿಸ್ಟಿ ವಿರುದ್ಧ ಗೆದ್ದು ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.
ಲಕ್ಷ್ಯ ಸೇನ್ ಮತ್ತು ಎಚ್.ಎಸ್.ಪ್ರಣಯ್ ಅವರು ಇದುವರೆಗೆ ಒಟ್ಟು ಏಳು ಬಾರಿ ಮುಖಾಮುಖಿಯಾಗಿದ್ದಾರೆ. ಈ ಪೈಕಿ ಸೇನ್ 4 ಪಂದ್ಯ ಗೆದ್ದರೆ, ಪ್ರಣಯ್ 3 ಪಂದ್ಯ ಗೆದ್ದಿದ್ದಾರೆ. ಕಳೆದ ವರ್ಷ(2023) ಜನವರಿಯಲ್ಲಿ ನಡೆದಿದ್ದ ಇಂಡಿಯಾ ಓಪನ್‌ನಲ್ಲಿ ಉಭಯ ಆಟಗಾರರು ಕೊನೆಯ ಬಾರಿಗೆ ಎದುರಾಗಿದ್ದರು. ಈ ಪಂದ್ಯದಲ್ಲಿ ಲಕ್ಷ್ಯ 21-14, 21-15 ನೇರ ಗೇಮ್‌ಗಳ ಅಂತರದಿಂದ ಗೆದ್ದು ಬೀಗಿದ್ದರು.