Site icon Vistara News

Paris Olympics: ಕ್ರೀಡಾಪಟುಗಳು ರತಿ ಕ್ರೀಡೆ ನಡೆಸಿದರೆ ಮಂಚ ಮುರಿದೇ ಹೋಗುತ್ತೆ! ಏನಿದು ‘ಆ್ಯಂಟಿ ಸೆಕ್ಸ್​ ಬೆಡ್?

Paris Olympics

Paris Olympics: The Paris Olympics "anti-sex" beds aren't what you think

ಪ್ಯಾರಿಸ್​: ಪ್ರಣಯ ನಗರ ಎಂದೇ ಹೆಸರಾದ ಪ್ಯಾರಿಸ್​ನಲ್ಲಿ (Paris Olympics) ನಡೆಯುವ 33ನೇ ಆವೃತ್ತಿಯ ಒಲಿಂಪಿಕ್ಸ್​ ಕ್ರೀಡಾಕೂಟ ಇನ್ನೆರಡು ದಿನದಲ್ಲಿ ಆರಂಭಗೊಳ್ಳಲಿದೆ. ಕ್ರೀಡಾಕೂಟಕ್ಕಿಂತ ಹೆಚ್ಚು ಸುದ್ದಿಯಾಗುತ್ತಿರುವುದು ಮತ್ತು ಕುತೂಹಲ ಮೂಡಿಸಿದ್ದು ಕ್ರೀಡಾಗ್ರಾಮದಲ್ಲಿ ಅಳವಡಿಸಿರುವ ‘ಆ್ಯಂಟಿ ಸೆಕ್ಸ್​ ಬೆಡ್​'(“anti-sex” beds). ಈ ಬೆಡ್​ ಅಳವಡಿಸಲು ಕಾರಣವೇನು? ಎನ್ನುವ ಮಾಹಿತಿ ಇಂತಿದೆ.

ಸಾಮಾನ್ಯವಾಗಿ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಭಾಗಿಯಾಗುವ ಸಾಕಷ್ಟು ಕ್ರೀಡಾಪಟುಗಳು ಲೈಂಗಿಕೆ ಕ್ರಿಯೆ ನಡೆಸುತ್ತಾರೆ. ಇದೇ ಕಾರಣಕ್ಕೆ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ತಾವು ತಂಗುವ ಕ್ರೀಡಾಗ್ರಾಮಕ್ಕೆ ಎಂಟ್ರಿ ಕೊಡುವ ಮುನ್ನವೇ ಕಾಂಡೋಮ್​ಗಳನ್ನು ನೀಡಲಾಗುತ್ತದೆ. ಈ ಬಾರಿ ಒಲಿಂಪಿಕ್ಸ್​ ಇತಿಹಾಸದಲ್ಲೇ ಗರಿಷ್ಠ ಸಂಖ್ಯೆಯ 3 ಲಕ್ಷ ಕಾಂಡೋಮ್​ಗಳನ್ನು ಪೂರೈಕೆ ಮಾಡಲಾಗಿದೆ. ಆದರೆ ಎಷ್ಟೇ ಪ್ರಮಾಣದ ಕಾಂಡೋಮ್​ಗಳನ್ನು ನೀಡಿದರೂ ಕೂಡ ಈ ಬಾರಿ ಅಥ್ಲೀಟ್​ಗಳಿಗೆ ಸೆಕ್ಸ್​ ಮಾಡಲು ಸಾಧ್ಯವಿಲ್ಲ! ಕ್ರೀಡಾಪಟುಗಳು ಲೈಂಗಿಕಾಸಕ್ತಿ ತೊರೆದು ಕೇವಲ ಕ್ರೀಡಾ ಸ್ಪರ್ಧೆಗಳತ್ತ ಗಮನ ಹರಿಸಲಿ ಎಂಬ ಕಾರಣಕ್ಕೆ ಎಲ್ಲ ಕ್ರೀಡಾಳುಗಳಿಗೆ ‘ಆ್ಯಂಟಿ ಸೆಕ್ಸ್​ ಬೆಡ್’ ನೀಡಲಾಗಿದೆ.

ಆ್ಯಂಟಿ ಸೆಕ್ಸ್​ ಬೆಡ್​ನ ವಿಶೇಷತೆ ಏನು?

ಆ್ಯಂಟಿ ಸೆಕ್ಸ್​ ಬೆಡ್ ಎಂದರೆ ಒಬ್ಬ ವ್ಯಕ್ತಿ ಮಾತ್ರ ಮಲಗಬಹುದಾದ ಹಾಸಿಗೆ ಇದಾಗಿದೆ. ಇದನ್ನು ಮರುಬಳಕೆಯ ಕಾರ್ಡ್‌ಬೋರ್ಡ್‌ನಿಂದ ತಯಾರಿಸಲಾಗಿದೆ. ಈ ಬೆಡ್​ ಒಬ್ಬರ ತೂಕವನ್ನು ಹೊರುವ ಸಾಮರ್ಥ್ಯವನ್ನು ಮಾತ್ರ ಹೊಂದಿದೆ ಎನ್ನಲಾಗಿದೆ. ಬೇರೊಬ್ಬರು ಸೇರಿದಂತೆ ಅಥವಾ ಯಾವುದೇ ಹಠಾತ್ ಚಲನೆಗಳುಂಟಾದರೆ ಈ ಬೆಡ್ ಮುರಿದೇ ಹೋಗುತ್ತದೆ! ಹಾಗಾಗಿ ಈ ಬಾರಿಯ ಒಲಿಂಪಿಕ್‌ನಲ್ಲಿ ಕ್ರೀಡಾಳುಗಳಿಗೆ ಪ್ರಣಯಿಸಲು ಕಷ್ಟವಾಗಲಿದೆ.


ಟೋಕಿಯೊ ಒಲಿಂಪಿಕ್ಸ್​ನಲ್ಲಿ ಜಾರಿ


‘ಆ್ಯಂಟಿ ಸೆಕ್ಸ್​ ಬೆಡ್’ ಪರಿಕಲ್ಪನೆ ಮೊದಲ ಬಾರಿಗೆ ಜಾರಿಗೆ ಬಂದದ್ದು ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ. ಕೊರೊನಾ ಹಾವಳಿ ಇದ್ದ ಕಾರಣದಿಂದಾಗಿ ​ಲೈಂಗಿಕ ಕ್ರಿಯೆ ಮತ್ತು ದೈಹಿಕ ಅಂತರವನ್ನು ಅನುಸರಿಸುವ ನಿಟ್ಟಿನಲ್ಲಿ ಈ ಬೆಡ್​ ಅನ್ನು ತಯಾರಿಸಲಾಗಿತ್ತು. ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿಯೂ ಇದನ್ನು ಮುಂದುವರಿಸಲಾಗಿದೆ. ಈ ಹಾಸಿಗೆಯನ್ನು ಏರ್‌ವೇವ್ ಸಂಸ್ಥೆ ತಯಾರಿಸಿದ್ದು, ಇದು ಗರಿಷ್ಠ 200 ಕಿಲೊ ತೂಕವನ್ನು ಹೊರುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.

ಇದನ್ನೂ ಓದಿ Paris Olympics: ಒಲಿಂಪಿಕ್ಸ್​ ನೋಡಲು ಬಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಸಿಸಿಟಿವಿಯಲ್ಲಿ ಭಯಾನಕ ವಿಡಿಯೊ ಸೆರೆ

ಕ್ರೀಡಾಪಟುಗಳಿಂದ ವಿರೋಧ


ಕಾರ್ಡ್‌ಬೋರ್ಡ್​ನಿಂದ ತಯಾರಿಸಲಾದ ಈ ಬೆಡ್​ ಬಗ್ಗೆ ಟೋಕಿಯೊ ಒಲಿಂಪಿಕ್ಸ್​ ವೇಳೆಯೇ ಹಲವು ಕ್ರೀಡಾಳುಗಳು ಅಸಮಾಧಾನ ಹೊರಹಾಕಿದ್ದರು. ಈ ಬೆಡ್​ ಉತ್ತಮ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಅನುಕೂಲಕರ ವಾಗಿಲ್ಲವೆಂದು ಸಂಘಟಕರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಪ್ಯಾರಿಸ್​ನಲ್ಲಿಯೂ ಈ ನಿಯಮವನ್ನು ಜಾರಿಗೆ ತಂದಿರುವ ಬಗ್ಗೆ ಅಥ್ಲೀಟ್​ಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮರ್ಥ್ಯ ಪರೀಕ್ಷೆ ನಡೆಸಿದರೂ ಮುರಿಯದ ಬೆಡ್​!


ಬೆಡ್‌ಗಳ ಬಗ್ಗೆ ಕ್ರೀಡಾಪಟುಗಳು, ಕ್ರೀಡಾಪ್ರೇಮಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಲವು ತಮಾಷೆಯ ಕಾಮೆಂಟ್‌ಗಳೂ ಕೂಡ ಹರಿದುಬರುತ್ತಿವೆ. ಈ ಮಧ್ಯೆ ಆಸ್ಟ್ರೇಲಿಯಾದ ಟೆನಿಸ್ ತಾರೆಯರಾದ ಡೇರಿಯ ಸಾವಿಲ್ಲೆ ಮತ್ತು ಎಲೆನ್ ಪೆರೆಜ್‌ ಜತೆಯಾಗಿ ‘ಆ್ಯಂಟಿ ಸೆಕ್ಸ್‌ ಬೆಡ್‌’ಗಳ ಕ್ವಾಲಿಟಿ ಟೆಸ್ಟ್ ಮಾಡಿದ ವಿಡಿಯೊ ಕೂಡ ವೈರಲ್​ ಆಗಿದೆ. ಈ ಬೆಡ್‌ನ ಮೇಲೆ ಈ ಜೋಡಿ ವಾಲಿ ಪ್ರಾಕ್ಟೀಸ್, ಸ್ಕ್ವಾಟ್‌ ಜಂಪ್ಸ್‌, ಸ್ಟೆಪ್‌-ಅಪ್ಸ್ ಸೇರಿದಂತೆ ಹಲವು ಅಭ್ಯಾಸಗಳನ್ನು ನಡೆಸಿದ್ದಾರೆ. ಹಾಸಿಗೆಯನ್ನು ತಯಾರಿಸಿ ಏರ್‌ವೇವ್ ಸಂಸ್ಥೆ ಹೇಳಿದ ಪ್ರಕಾರ ಹಠಾತ್ ಚಲನೆಗಳುಂಟಾದರೆ ಬೆಡ್​ ಮುರಿಯಬೇಕಿತ್ತು. ಆದರೆ, ಎಷ್ಟೇ ಮೇಲಿನಿಂದ ಜಿಗಿದರೂ ಕೂಡ ಈ ಬೆಡ್​ ಮುರಿಯಲಿಲ್ಲ. ಹೀಗಾಗಿ ಕೆಲವು ನೆಟ್ಟಿಗರು ಈ ಬೆಡ್​ನಲ್ಲಿ ಆರಾಮವಾಗಿ ಲೈಂಗಿಕೆ ಕ್ರಿಯೆ ನಡೆಸಬಹುದು ಎಂದು ಹಾಸ್ಯಾಸ್ಪದವಾಗಿ ಕಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು, ಇವರೆಂಥ ಮೂರ್ಖರು? ಸೆಕ್ಸ್‌ ಮಾಡಲು ಮಂಚ ಯಾಕೆ? ವಾತ್ಸಾಯನನ ಕಾಮಸೂತ್ರದಲ್ಲಿ ಎಷ್ಟೊಂದು ಭಂಗಿಗಳಿವೆ? ಕ್ರೀಡಾ ಪಟುಗಳೇನು ಮಂಚ ಇಲ್ಲದೆಯೂ ಸೆಕ್ಸ್‌ ಮಾಡಲು ಬರದಷ್ಟು ದಡ್ಡರೇ ಎಂದು ಪ್ರಶ್ನಿಸಿದ್ದಾರೆ!

Exit mobile version