Site icon Vistara News

Paris Olympics 2024 : ನಾಳೆ ಪ್ಯಾರಿಸ್​ ಒಲಿಂಪಿಕ್ಸ್​ ಸಮಾರೋಪ; ಎಲ್ಲಿ ಕಾರ್ಯಕ್ರಮ? ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಎಲ್ಲ ವಿವರ

Parsis Olympics 2024

ಬೆಂಗಳೂರು: ಜುಲೈ 26ರಂದು ಶುಭಾರಂಭಗೊಂಡ ಪ್ಯಾರಿಸ್ ಒಲಿಂಪಿಕ್ಸ್​ (Paris Olympics 2024) ಭಾನುವಾರ ಮುಕ್ತಾಯಗೊಳ್ಳಲಿದೆ. ಲೈವ್ ಸಂಗೀತ ಪ್ರದರ್ಶನಗಳು, ಕಲಾತ್ಮಕ ನೃತ್ಯಗಳು ಮತ್ತು ಸೀನ್ ನದಿಯ ಉದ್ದಕ್ಕೂ ಪ್ರಯಾಣಿಸಿದ ಕ್ರೀಡಾಪಟುಗಳು ಸೇರಿದಂತೆ ಉದ್ಘಾಟನಾ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಅದೇ ರೀತಿಯಲ್ಲಿ ಸಮಾರೋಪದಲ್ಲಿಯೂ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂಬುದಾಗಿ ಪ್ಯಾರಿಸ್ ಒಲಿಂಪಿಕ್ಸ್ ಸಂಘಟನಾ ಸಮಿತಿ ಹೇಳಿದೆ.

ಕಾರ್ಯಕ್ರಮಗಳ ನಿರ್ದಿಷ್ಟ ವಿವರಗಳು ಲಭ್ಯವಿಲ್ಲದಿದ್ದರೂ ಸಮಾರೋಪ ಸಮಾರಂಭದಲ್ಲಿ ಸ್ಟೇಡ್ ಡಿ ಫ್ರಾನ್ಸ್ ನಲ್ಲಿ ನಡೆಯಲಿದೆ ಎಂಬುದು ಖಾತರಿಯಾಗಿದೆ. 100 ಕ್ಕೂ ಹೆಚ್ಚು ಅಕ್ರೋಬ್ಯಾಟ್​ಗಳು ಮತ್ತು ವೈಮಾನಿಕ ಪ್ರದರ್ಶನ ಇದರ ಪ್ರಮುಖ ಹೈಲೈಟ್​. ನಟ ಟಾಮ್ ಕ್ರೂಸ್ 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್​​ ಸಮಾರೋಪದಲ್ಲಿ ಸ್ಕೈಡೈವಿಂಗ್ ಸ್ಟಂಟ್ ಮಾಡಲಿದ್ದಾರೆ ಎಂಬ ವದಂತಿಗಳಿವೆ. ಸಮಾರಂಭದಲ್ಲಿ ಸ್ನೂಪ್ ಡಾಗ್, ಬಿಲ್ಲಿ ಐಲಿಷ್ ಮತ್ತು ರೆಡ್ ಹಾಟ್ ಚಿಲ್ಲಿ ಪೆಪ್ಪರ್ಸ್ ತಂಡಗಳೂ ಕಾಣಿಸಿಕೊಳ್ಳಲಿವೆ ಎಂಬ ವರದಿಗಳು ಹೇಳಿವೆ.

2024ರ ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ.

2024ರ ಒಲಿಂಪಿಕ್ಸ್ ಸಮಾರೋಪ ಸಮಾರಂಭ ಯಾವಾಗ?

ಸಮಾರೋಪ ಸಮಾರಂಭ ಆಗಸ್ಟ್​​​ 11ರಂದು ಭಾನುವಾರ ನಡೆಯಲಿದೆ.

2024 ರ ಒಲಿಂಪಿಕ್ಸ್ ಮುಕ್ತಾಯ ಸಮಾರಂಭದ ಸಮಯವೇನು?

ಪ್ಯಾರಿಸ್​​ನ ಉತ್ತರಕ್ಕಿರುವ ಸ್ಟೇಡ್ ಡಿ ಫ್ರಾನ್ಸ್​ನಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ಪ್ರಾರಂಭವಾಗಲಿದೆ. ಇದು ಸಂಜೆ 5:15 ರವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸಮಾರಂಭ ಎಲ್ಲಿ ನಡೆಯಲಿದೆ?

ಸಮಾರೋಪ ಸಮಾರಂಭವು ಪ್ಯಾರಿಸ್ ನ ಸ್ಟೇಡ್ ಡಿ ಫ್ರಾನ್ಸ್ ಒಳಗೆ ನಡೆಯಲಿದೆ.

ಸಮಾರಂಭದ ಆತಿಥ್ಯ ವಹಿಸುವವರು ಯಾರು?

“ದಿ ಟುನೈಟ್ ಶೋ” ನಿರೂಪಕ ಜಿಮ್ಮಿ ಫಾಲನ್ ಮತ್ತು ದೀರ್ಘಕಾಲದ ಕ್ರೀಡಾ ನಿರೂಪಕ ಮೈಕ್ ಟಿರಿಕೊ ಈ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಏನೇನಿವೆ?

ಸಮಾರೋಪ ಸಮಾರಂಭವು ಆಯಾ ದೇಶಗಳ ಧ್ವಜಗಳ ಪರೇಡ್​ನೊಂದಿಗೆ ಪ್ರಾರಂಭವಾಗುತ್ತದೆ. ಇದರಲ್ಲಿ ಪ್ರತಿ ರಾಷ್ಟ್ರದ ಕ್ರೀಡಾಪಟುಗಳು ತಮ್ಮ ಧ್ವಜದೊಂದಿಗೆ ಕ್ರೀಡಾಂಗಣಕ್ಕೆ ಬರಲಿದ್ದಾರೆ. ಒಲಿಂಪಿಕ್ಸ್ ಗ್ರೀಸ್​ನಲ್ಲಿ ಹುಟ್ಟಿಕೊಂಡಿದ್ದರಿಂದ, ಗ್ರೀಕ್ ಧ್ವಜವು ಮೆರವಣಿಗೆಯನ್ನು ಮುನ್ನಡೆಸಲಿದೆ. ಆತಿಥೇಯ ದೇಶವು ಕೊನೆಯಲ್ಲಿ ಸಾಗಲಿದೆ ಅಂತಾರರಾಷ್ಟ್ರೀಯ ಒಲಿಂಪಿಕ್ ಸಮಿತಿ ತಿಳಿಸಿದೆ. ಪ್ಯಾರಿಸ್ ನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇಟಿ ಲೆಡೆಕಿ ಮತ್ತು ನಿಕ್ ಮೀಡ್ ಅಮೆರಿಕದ ಧ್ವಜ ಹೊತ್ತೊಯ್ಯಲಿದ್ದಾರೆ.

ಇದನ್ನೂ ಓದಿ: Vinesh Phogat : ವಿನೇಶ್​ ಫೋಗಟ್​ಗೆ ಅನ್ಯಾಯವಾಗಿದೆ ಎಂದ ಆರ್​. ಅಶ್ವಿನ್​; ಅಥ್ಲೀಟ್​ಗಳ ಸಮಸ್ಯೆ ವಿವರಿಸಿದ ಸ್ಪಿನ್ನರ್​

ಭಾರತದ ಧ್ವಜಧಾರಿಗಳು ಯಾರು?

ಪ್ಯಾರಿಸ್ ಒಲಿಂಪಿಕ್ಸ್ 2024 ರ ಸಮಾರೋಪ ಸಮಾರಂಭದಲ್ಲಿ ಪಿ.ಆರ್.ಶ್ರೀಜೇಶ್ ಮತ್ತು ಶೂಟರ್ ಮನು ಭಾಕರ್ ಅವರು ಭಾರತದ ಧ್ವಜ ಹೊತ್ತೊಯ್ಯಲಿದ್ದಾರೆ ಎಂದು ಟೀಮ್ ಇಂಡಿಯಾದ ಇತ್ತೀಚಿನ ಪ್ರಕಟಣೆ ತಿಳಿಸಿದೆ.

ಶ್ರೀಜೇಶ್ ಹಾಕಿ ತಂಡ ಕಂಚು ಗೆಲ್ಲುವಲ್ಲಿ ನಿರ್ಣಾಯಕರು. ಪ್ಯಾರಿಸ್​​ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದ ಮನು ಭಾಕರ್ ಈಗ ಧ್ವಜವನ್ನು ಹೊತ್ತೊಯ್ಯಲು ಆಯ್ಕೆಯಾಗಿದ್ದಾರೆ.

ಪದಕಗಳ ಪ್ರಧಾನ

ಭಾನುವಾರ ತಮ್ಮ ಸ್ಪರ್ಧೆಗಳನ್ನು ಮುಕ್ತಾಯಗೊಳಿಸುವ ಕ್ರೀಡಾಪಟುಗಳಿಗೆ ಸಮಾರೋಪ ಸಮಾರಂಭದಲ್ಲಿಯೇ ಅಂತಿಮ ಪದಕ ಪ್ರದಾನ ನಡೆಯಲಿದೆ. ಮಹಿಳೆಯರ ಮ್ಯಾರಥಾನ್, ಪುರುಷರ ಹ್ಯಾಂಡ್ಬಾಲ್, ಪುರುಷರ ವಾಟರ್ ಪೋಲೊ, ಪುರುಷರ ಮತ್ತು ಮಹಿಳೆಯರ ವೇಟ್ಲಿಫ್ಟಿಂಗ್, ಪುರುಷರ ಮತ್ತು ಮಹಿಳೆಯರ ಕುಸ್ತಿ, ಮಹಿಳಾ ಬ್ಯಾಸ್ಕೆಟ್​​ಬಾ ಲ್, ಮಹಿಳಾ ಪೆಂಟಾಥ್ಲಾನ್, ಮಹಿಳಾ ವಾಲಿಬಾಲ್ ಮತ್ತು ಪುರುಷರ ಮತ್ತು ಮಹಿಳೆಯರ ಸೈಕ್ಲಿಂಗ್ ಫೈನಲ್​ಗಳು ಭಾನುವಾರ ಕೊನೆಗೊಳ್ಳಲಿವೆ.

ಇದನ್ನೂ ಓದಿ: Smriti Mandhana : ವಿರಾಟ್​ ಕೊಹ್ಲಿ ಜತೆ ನನ್ನನ್ನು ಹೋಲಿಕೆ ಮಾಡಬೇಡಿ; ಸ್ಮೃತಿ ಮಂದಾನ ಮನವಿ

ಒಲಿಂಪಿಕ್​​ ಧ್ವಜ ಹಸ್ತಾಂತರ

ಬೇಸಿಗೆ ಕ್ರೀಡಾಕೂಟದ ಪ್ರಸ್ತುತ ಆತಿಥೇಯ ನಗರದ ಮೇಯರ್ ಒಲಿಂಪಿಕ್ ಧ್ವಜವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರಿಗೆ ಹಸ್ತಾಂತರ ಮಾಡಲಿದ್ದಾರೆ. ಅವರು ಅದನ್ನು ಮುಂದಿನ ಆತಿಥೇಯ ನಗರದ ಮೇಯರ್ ನೀಡುತ್ತಾರೆ. ಪ್ಯಾರಿಸ್ ಮೇಯರ್ ಅನ್ನೆ ಹಿಡಾಲ್ಗೊ ಒಲಿಂಪಿಕ್ ಧ್ವಜವನ್ನು ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಅವರಿಗೆ ಹಸ್ತಾಂತರಿಸಲಿದ್ದಾರೆ. ನಂತರ ಅದನ್ನು ಲಾಸ್ ಏಂಜಲೀಸ್ ಮೇಯರ್ ಕರೆನ್ ಬಾಸ್ ಅವರಿಗೆ ನೀಡಲಿದ್ದಾರೆ.

2028 ರ ಬೇಸಿಗೆ ಕ್ರೀಡಾಕೂಟದ ಪೂರ್ವವೀಕ್ಷಣೆಯ ನಂತರ, ಒಲಿಂಪಿಕ್ ಜ್ವಾಲೆ ನಂದಿಸಲಾಗುವುದು. ಇದು 2024 ರ ಪ್ಯಾರಿಸ್ ಬೇಸಿಗೆ ಒಲಿಂಪಿಕ್ಸ್​ನ ಅಂತ್ಯವನ್ನು ಸೂಚಿಸುತ್ತದೆ.

Exit mobile version