Site icon Vistara News

Parul Chaudhary : ಸ್ಟೀಪಲ್​ ಚೇಸ್​​ ಫೈನಲ್​ಗೆ ಅರ್ಹತೆ ಪಡೆಯಲು ಪಾರುಲ್ ಚೌಧರಿ ವಿಫಲ

Parul Chaudhary

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​​ನ (Paris Olympics 2024) ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್​ ಸ್ಪರ್ಧೆಯಲ್ಲಿ ಪಾರುಲ್ ಚೌಧರಿ (Parul Chaudhary) ವಿಫಲರಾಗಿದ್ದು ಫೈನಲ್​ಗೆ ಅರ್ಹತೆ ಪಡೆಯಲಿಲ್ಲ. ರಾಷ್ಟ್ರೀಯ ದಾಖಲೆ ಹೊಂದಿರುವ aವರು ಭಾನುವಾರ ಹೀಟ್ ರೇಸ್ ನಲ್ಲಿ ಎಂಟನೇ ಸ್ಥಾನ ಪಡೆದ ನಂತರ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾದರು. ಕ್ರೀಡಾಕೂಟಕ್ಕೆ ಮುಂಚಿತವಾಗಿ ಕೆಲವು ತಿಂಗಳುಗಳ ಕಾಲ ಯುಎಸ್ಎಯಲ್ಲಿ ತರಬೇತಿ ಪಡೆದ 29 ವರ್ಷದ ಪಾರುಲ್ ಒಟ್ಟು ದೂರವನ್ನು 9 ನಿಮಿಷ 23.39 ಸೆಕೆಂಡುಗಳಲ್ಲಿ ಓಡಿದರು. ಇದು ಅವರ ಋತುವಿನ ಅತ್ಯುತ್ತಮ ಆದರೆ 2023 ರ ಬುಡಾಪೆಸ್ಟ್ ವಿಶ್ವ ಚಾಂಪಿಯನ್​​ಶಿಪ್​ನ ಸಾಧನೆಯಾಗಿರುವ 9: 15.31 ಕ್ಕಿಂತ ಕಡಿಮೆಯಾಗಿದೆ. ಮೂರು ಹೀಟ್ ರೇಸ್ ಗಳಲ್ಲಿ ಅಗ್ರ ಐದು ಸ್ಥಾನ ಪಡೆಯುವ ತಂಡಗಳು ಫೈನಲ್ ಗೆ ಅರ್ಹತೆ ಪಡೆಯುತ್ತವೆ.

ಹಾಲಿ ಒಲಿಂಪಿಕ್ ಚಾಂಪಿಯನ್ ಉಗಾಂಡಾದ ಪೆರುತ್ ಚೆಮುಟೈ (9:10.51) ಹೀಟ್ ನಂಬರ್ ಒನ್ ಸ್ಥಾನ ಪಡೆದರೆ, ಕೀನ್ಯಾದ ಫೇತ್ ಚೆರೊಟಿಚ್ (9:10.57) ಮತ್ತು ಜರ್ಮನಿಯ ಗೆಸಾ ಫೆಲಿಸಿಟಿಸ್ ಕ್ರೌಸ್ (9:10.68) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ಅಂಕಿತಾ ಧ್ಯಾನಿ ಅವರೊಂದಿಗೆ ಮಹಿಳೆಯರ 5000 ಮೀಟರ್ ಓಟಕ್ಕೆ ಅರ್ಹತೆ ಪಡೆಯಲು ವಿಫಲರಾಗಿದ್ದ ಪಾರುಲ್ ಅವರ ಅಭಿಯಾನವನ್ನು ಇದು ಕೊನೆಗೊಂಡಿತು. ಪಾರುಲ್ 3000 ಮೀಟರ್ ಸ್ಟೀಪಲ್​ಚೇಸ್​ 9:23.00 ಪ್ರವೇಶ ಮಾನದಂಡ ಮೀದಿದ್ದ ನಂತರ ನೇರ ಅರ್ಹತೆ ಪಡೆದಿದ್ದರು.

ಲಲಿತಾ ಬಾಬರ್ 2016 ರ ರಿಯೋ ಒಲಿಂಪಿಕ್ಸ್​​ನಲ್ಲಿ ಅಂತಿಮ ಸುತ್ತಿಗೆ ಅರ್ಹತೆ ಪಡೆದ ಏಕೈಕ ಭಾರತೀಯ ಮಹಿಳೆ ಹಾಗಿದ್ದಾರೆ 3000 ಮೀಟರ್ ಸ್ಟೀಪಲ್​ಚೇಸ್​ನಲ್ಲಿ ಅವರು ಅಂತಿಮವಾಗಿ 10 ನೇ ಸ್ಥಾನ ಪಡೆದಿದ್ದರು.

ಲಕ್ಷ್ಯ ಸೇನ್​ಗೆ ಸೋಲು

ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌(Paris Olympics) ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಭಾರತದ ಕೊನೆಯ ಭರವಸೆಯಾಗಿ ಉಳಿದಿರುವ ಲಕ್ಷ್ಯ ಸೇನ್‌(Lakshya Sen) ಭಾನುವಾರ ನಡೆದ ಹೈವೋಲ್ಟೇಜ್​ ಸೆಮಿಫೈನಲ್‌ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ವಿಶ್ವದ ಖ್ಯಾತ ಶಟ್ಲರ್​ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌(Viktor Axelsen) ವಿರುದ್ಧ 20-22 21-14 ನೇರ ಗೇಮ್​ಗಳ ಅಂತರದಿಂದ ಸೋಲು ಕಂಡು ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರೂ ಕೂಡ ಕಂಚಿನ ಪದಕ ಸ್ಪರ್ಧೆಯಲ್ಲಿ ಆಡಲಿದ್ದಾರೆ.​

ಇದನ್ನೂ ಓದಿ: Priyanka Goswami : ರೀಲ್ಸ್​ ಮಾಡೋದಲ್ಲ, ಸ್ಪರ್ಧೆಯಲ್ಲಿ ಓಡಿ ಪದಕ ಗೆಲ್ಲು; ಪ್ರಿಯಾಂಕ ಗೋಸ್ವಾಮಿಗೆ ನೆಟ್ಟಿಗರ ತಪರಾಕಿ

ಅತ್ಯಂತ ಜಿದ್ದಾಜಿದ್ದಿನಿಂದ ಸಾಗಿದ ಈ ಪಂದ್ಯದ ಮೊದಲ ಗೇಮ್​ನಲ್ಲಿ ಎದುರಾಳಿ ವಿಕ್ಟರ್‌ ಅಕ್ಸೆಲ್ಸೆನ್‌ 2 ಅಂಕಗಳಿಸಿದರೂ ಖಾತೆ ತೆರೆಯದ ಲಕ್ಷ್ಯ ಸೇನ್‌ ಆ ಬಳಿಕ ಫಿನಿಕ್ಸ್​ನಂತೆ ಎದ್ದು ಬಂದು ಮುನ್ನಡೆ ಸಾಧಿಸಿದರು. 8 ಅಂಕ ಗಳಿಸುವ ತನಕ ಉಭಯ ಆಟಗಾರರು ಸಮಾನವಾಗಿ ಸಾಗಿದರು. ಈ ವೇಳೆ ಸೇನ್​ ಸತತವಾಗಿ ಅಂಕಗಳಿಸಿ ಇನ್ನೇನು ಒಂದು ಗೆಲುವು ಸಾಧಿಸುತ್ತಾರೆ ಎನುವಷ್ಟರಲ್ಲಿ 3 ಅಂಕ ಹಿನ್ನಡೆಯಲ್ಲಿದ್ದ ಅಕ್ಸೆಲ್ಸೆನ್‌ ಆಕ್ರಮಣಕಾರಿ ಆಟದ ಮೂಲಕ ಗೆಲುವು ಸಾಧಿಸಿದರು. ಗೆಲುವಿನ ಅಂತರ 22-20.

Exit mobile version