ಅಹಮದಾಬಾದ್: ನವೆಂಬರ್ 19 ರಂದು ಅಹಮದಾಬಾದ್ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ 2023 ರ (ICC World Cup 2023) ಫೈನಲ್ ಪಂದ್ಯಕ್ಕೂ (India vs Australia Final)) ಮೊದಲ ದಿನವಾದ ಶನಿವಾರ (ನವೆಂಬರ್18) ಎರಡೂ ತಂಡಗಳ ನಾಯಕರಾದ ರೋಹಿತ್ ಶರ್ಮಾ ಮತ್ತು ಪ್ಯಾಟ್ ಕಮಿನ್ಸ್ ಪಂದ್ಯದ ಫೋಟೊ ಸೆಷನ್ನಲ್ಲಿ ಪಾಲ್ಗೊಂಡರು. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಾಯಕರಾದ ರೋಹಿತ್ ಶರ್ಮಾ ಹಾಗೂ ಕಮಿನ್ಸ್ ಕ್ರಮವಾಗಿ ಟ್ರೋಫಿಯೊಂದಿಗೆ ಪೋಸ್ ನೀಡಿದರು. ಈ ಮೂಲಕ ಭಾನುವಾರ ನಡೆಯಲಿರುವ ಅಂತಿಮ ಮುಖಾಮುಖಿಯ ನಿರೀಕ್ಷೆಯನ್ನು ಹೆಚ್ಚಿಸಿದರು.
ಐತಿಹಾಸಿಕ ಹಜರತ್ ಬಾಯಿ ಹರಿರ್ ನಿ ವಾವ್ನಲ್ಲಿ ಫೋಟೋಶೂಟ್ ನಡೆಸಲಾಯಿತು. ಐತಿಹಾಸಿಕ ಆಕರ್ಷಣೆಯು ಐದು ಹಂತದ ಕಲ್ಲಿನ ಕೆತ್ತನೆಯ ಕಂಬಗಳಿಂದ ಆಕರ್ಷಕವಾಗಿದೆ. ಇದು ಈಗ ಒಣಗಿದ ಎರಡು ಬಾವಿಗಳಿವೆ. ಸುಡುವ ತಾಪಮಾನದಲ್ಲಿಯೂ ಸಹ, ಅದರ ತಳಭಾಗವು ತಂಪಾಗಿರುತ್ತದೆ. ಇದು ಆಕರ್ಷಣೆ ವಾತಾವರಣವನ್ನು ಉಂಟುಮಾಡುತ್ತದೆ.
ಇದನ್ನೂ ಓದಿ : ICC World Cup 2023 : 12 ವರ್ಷಗಳ ಐಸಿಸಿ ಪ್ರಶಸ್ತಿ ಬರ ನೀಗಿಸುವುದೇ ಭಾರತ?
2003ರ ವಿಶ್ವಕಪ್ಗೂ 2023ಕ್ಕೂ ಇದೆ ಹಲವು ಸಾಮ್ಯತೆ; ಭಾರತ ಕಪ್ ಗೆಲ್ಲುವುದು ನಿಶ್ಚಿತ!
ಭಾರತ ಮತ್ತು ಆಸ್ಟ್ರೇಲಿಯಾ(India vs Australia Final) ತಂಡಗಳು ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ 20 ವರ್ಷಗಳ ಬಳಿಕ ಮುಖಾಮುಖಿಯಾಗುತ್ತಿದೆ. ಇತ್ತಂಡಗಳ ಈ ಫೈನಲ್ ಕಾದಾಟ ಭಾನುವಾರ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಈ ಪಂದ್ಯಕ್ಕೆ ಉಭಯ ತಂಡಗಳ ಆಟಗಾರರು ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಭಾರತ ತಂಡ 2003ರ ವಿಶ್ವಕಪ್ ಫೈನಲ್(India vs Australia Final 2003) ಸೋಲಿಗೆ ಈ ಬಾರಿ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಅಂದಿನ ಟೂರ್ನಿಗೂ ಈ ಬಾರಿಯ ಟೂರ್ನಿಯೂ ಕೆಲ ಸಾಮ್ಯತೆಗಳಿವೆ.
It all comes down to 𝙊𝙣𝙚 𝘿𝙖𝙮 🤩#CWC23 #INDvAUS pic.twitter.com/yCJAxRoDCK
— ICC (@ICC) November 18, 2023
ಸತತ 10 ಪಂದ್ಯ ಗೆದ್ದಿದ್ದ ಆಸ್ಟ್ರೇಲಿಯಾ
2003ರ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಸತತ 10 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದೊಂದಿಗೆ ಫೈನಲ್‌ಗೇರಿತ್ತು. ಭಾರತ ತಂಡ 8 ಪಂದ್ಯ ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸಿತ್ತು. ಈ ಬಾರಿಯ ವಿಶ್ವಕಪ್ನಲ್ಲಿ ಭಾರತ ತಂಡ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್‌ಗೇರಿದೆ. ಆಸ್ಟ್ರೇಲಿಯಾ 8 ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ. ಇನ್ನೊಂದು ಅಚ್ಚರಿ ಏನೆಂದರೆ 2003ರಲ್ಲಿ ಗೆದ್ದ ಟ್ರೋಫಿ ಆಸ್ಟ್ರೇಲಿಯಾ ಪಾಲಿಗೆ 3ನೇ ವಿಶ್ವಕಪ್ ಆಗಿತ್ತು. ಈ ಬಾರಿ ಭಾರತವೂ 3ನೇ ಟ್ರೋಫಿ ಗೆಲ್ಲುವ ಹಾದಿಯಲ್ಲಿದೆ. ಹಿಂದಿನ ಸಾಮತ್ಯೆಯ ಭವಿಷ್ಯವನ್ನು ನೋಡುವಾಗ ಭಾರತವೇ ಚಾಂಪಿಯನ್ ಆಗುವ ಎಲ್ಲ ಸಾಧ್ಯತೆ ಇದೆ.
2 ಸೋಲಿಗೆ ಭಾರತ ಸೇಡು ತೀರಿಸಬೇಕಿದೆ
ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 2 ಫೈನಲ್ ಸೋಲಿನ ಸೇಡನ್ನು ತೀರಿಸಿಕೊಳ್ಳಬೇಕಿದೆ. ಒಂದು 2003ರ ಏಕದಿನ ವಿಶ್ವಕಪ್ ಮತ್ತೊಂದು ಈ ವರ್ಷ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸೋಲು. ಎರಡನ್ನೂ ಸೇರಿಸಿ ಭಾರತ ಈ ಪಂದ್ಯದಲ್ಲಿ ಲೆಕ್ಕ ಚುಕ್ತ ಮಾಡಬಹುದು.