Site icon Vistara News

Pat Cummins : ಆಸೀಸ್ ನಾಯಕನ ಫೈನಲ್​ ಗೆಲುವಿನ ಓಟ ಬಂದ್​!

Pat cummins

ಚೆನ್ನೈ,: ಇಲ್ಲಿನ ಎಂ ಎ ಚಿದಂಬರಂ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಭಾನುವಾರ ನಡೆದ ಐಪಿಎಲ್ 2024ರ (iPL 2024) ಫೈನಲ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ (Pat Cummins) ನೇತೃತ್ವದ ಎಸ್​ಆರ್​​ಎಚ್​ ತಂಡ ಹೀನಾಯ ವಿಕೆಟ್​ ಸೋಲಿಗೆ ಒಳಗಾಯಿತು. ಕೆಕೆಆರ್​ ತಂಡ ಸುಲಭವಾಗಿ ಟ್ರೋಫಿ ಗೆದ್ದುಕೊಂಡಿತು. ಈ ಮೂಲಕ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್​ ಕಮಿನ್ಸ್​ ಅವರ ಫೈನಲ್ ಗೆಲುವಿನ ಓಟ ಕೊನೆಗೊಂಡಿತು. ಕಳೆದ ವರ್ಷ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಮತ್ತು ಏಕದಿನ ವಿಶ್ವಕಪ್​​ನಲ್ಲಿ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಭಾರತವನ್ನು ಎರಡೂ ಬಾರಿ ಸೋಲಿಸಿ ಟ್ರೋಫಿ ಗೆದ್ದುಕೊಂಡಿತ್ತು. ಹೀಗಾಗಿ ಕಮಿನ್ಸ್​ ಅವರನ್ನು ಫೈನಲ್​ ಗೆಲುವಿನ ಸರದಾರ ಎಂದೇ ಕರೆಯಲಾಗಿತ್ತು. ಆದರೆ ಈ ಬಾರಿ ಅದೇ ಅದೃಷ್ಟ ಅವರ ಪಾಲಿಗೆ ಸಿಗಲಿಲ್ಲ.

ಐಪಿಎಲ್ 2024 ರ ಫೈನಲ್​​ನಗೆ ಮೊದಲು ಕಮಿನ್ಸ್ ಮತ್ತೊಂದು ಬಾರಿ ಟ್ರೋಫಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಅವರ ಓಟ ನಿಂತು ಹೋಯಿತು.

ಐಪಿಎಲ್ ಫೈನಲ್​​ನಲ್ಲಿ ಕಡಿಮೆ ಸ್ಕೋರ್​ನ ಕಳಪೆ ದಾಖಲೆ ಬರೆದ ಸನ್​ರೈಸರ್ಸ್​ ಹೈದರಾಬಾದ್​​
ಚೆನ್ನೈ: ಐಪಿಎಲ್​ 2024ರ ಫೈನಲ್ ಪಂದ್ಯದಲ್ಲಿ (IPL 2024 Final) ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್​ ಹೈದರಾಬಾದ್ ತಂಡ 113 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್​ನಲ್ಲಿ ಅತ್ಯಂತ ಕಡಿಮೆ ಸ್ಕೋರ್ ಗಳಿಸಿದ ಕಳಪೆ ದಾಖಲೆಯನ್ನು ಬರೆಯಿತು. ಅಲ್ಲದೆ 11 ವರ್ಷಗಳ ಹಿಂದೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಫೈನಲ್​ನಲ್ಲಿ 125ರನ್​ಗಳಿಗೆ 9 ಕಳೆದುಕೊಂಡ ಕಳಪೆ ದಾಖಲೆಯನ್ನು ಮುರಿಯಿತು.

ಬೆಂಗಳೂರು ವಿರುದ್ಧದ ಲೀಗ್ ಪಂದ್ಯದಲ್ಲಿ 3 ವಿಕೆಟ್​ಗೆ 287 ಸ್ಕೋರ್ ಮಾಡುವ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ಮೊತ್ತವನ್ನು ಗಳಿಸಿದ ಎಸ್ಆರ್​ಎಚ್​​ ಬ್ಯಾಟರ್​ಗಳು ಈ ಋತುವಿನ ಅತಿದೊಡ್ಡ ವೇದಿಕೆಯಲ್ಲಿ ಪ್ರದರ್ಶನ ನೀಡಲು ವಿಫಲರಾದರು ಮತ್ತು ಕಡಿಮೆ ಮೊತ್ತಕ್ಕೆ ಔಟಾದರು. ಕೆಕೆಆರ್ ಪರ ಮಿಚೆಲ್ ಸ್ಟಾರ್ಕ್, ಆಂಡ್ರೆ ರಸೆಲ್ ಹಾಗೂ ಹರ್ಷಿತ್ ರಾಣಾ ಭರ್ಜರಿ ಬೌಲಿಂಗ್​ ಮಾಡಿದರು. ಕುತೂಹಲಕಾರಿ ಸಂಗತಿಯೆಂದರೆ, ಐಪಿಎಲ್ 2024 ಫೈನಲ್​ನಲ್ಲಿ ಕೆಕೆಆರ್​​ ತಂಡ ಎಲ್ಲ ಬೌಲರ್​ಗಳು ವಿಕೆಟ್ ಪಡೆದರು.

ಇದನ್ನೂ ಓದಿ: IPL 2024 : ಚಾಂಪಿಯನ್ ಕೆಕೆಆರ್ ತಂಡ ಗೆದ್ದ ಬಹುಮಾನ ಮೊತ್ತವೆಷ್ಟು? ಆರ್​ಸಿಬಿಗೆ ಸಿಕ್ಕಿದ್ದು ಎಷ್ಟು? ಇಲ್ಲಿದೆ ಎಲ್ಲ ಮಾಹಿತಿ 

ಐಪಿಎಲ್ ಫೈನಲ್​ನಲ್ಲಿ ಕನಿಷ್ಠ ಮೊತ್ತ

2013ರ ಐಪಿಎಲ್ ಫೈನಲ್​ನಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 148 ರನ್​ಗಳ ಗುರಿ ಬೆನ್ನಟ್ಟುವ ಹಾದಿಯಲ್ಲಿ ಚೆನ್ನೈ 23 ಸೋತಿತ್ತು. ಅದೇನೇ ಇದ್ದರೂ, ಕೋಲ್ಕತಾ ತನ್ನ ಮೂರನೇ ಪ್ರಶಸ್ತಿಯನ್ನು ಗೆಲ್ಲಲು 114 ರನ್​​ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಬೇಕಾಗಿದೆ. ಮತ್ತೊಂದೆಡೆ, ಹೈದರಾಬಾದ್ ತಂಡವು ಭಾನುವಾರ ಚೆನ್ನೈನಲ್ಲಿ ಇತಿಹಾಸವನ್ನು ಬರೆಯಲು ಬಯಸಿದರೆ ಪವಾಡದ ಅಗತ್ಯವಿದೆ.

Exit mobile version