Site icon Vistara News

Pat Cummins | ತನ್ನ ಮಗುವಿನ ತಾಯಿಯನ್ನು ಮದುವೆಯಾದ ಆಸ್ಟ್ರೇಲಿಯಾದ ವೇಗಿ!

pat cummins

ಬ್ರಿಸ್ಬೇನ್‌ : ಆಸ್ಟ್ರೇಲಿಯಾ ಟೆಸ್ಟ್‌ ತಂಡದ ನಾಯಕ ಹಾಗೂ ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್‌ ತಮ್ಮ ಬಹುಕಾಲದ ಗೆಳತಿ ಬೆಕಿ ಬಾಸ್ಟನ್‌ ಅವರನ್ನು ವಿವಾಹವಾಗಿದ್ದಾರೆ. ತಮ್ಮ ಮದುವೆಯ ಚಿತ್ರವನ್ನು ಕಮಿನ್ಸ್‌ ಟ್ವಿಟರ್‌ನಲ್ಲಿ ಹಾಗೂ ಬೆಕಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇವರಿಬ್ಬರೂ ಬಹುಕಾಲದ ಗೆಳೆಯರಿದ್ದು, ಈ ಜೋಡಿಗೆ ೯ ತಿಂಗಳ ಮಗುವೂ ಇದೆ. ಆದರೆ, ಇದೀಗ ಅವರು ಅದ್ಧೂರಿ ಕಾರ್ಯಕ್ರಮದಲ್ಲಿ ಮದುವೆಯಾಗಿದ್ದಾರೆ.

ತಾವಿಬ್ಬರು ಜುಲೈ ೩೦ರಂದು ವಿವಾಹವಾಗಿರುವ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದು, ಬೈರಾನ್‌ ಬೆನಲ್ಲಿ ವಿವಾಹವಾಗಿರುವುದಾಗಿ ತಿಳಿಸಿದ್ದಾರೆ. ಕುಟುಂಬ ಸದಸ್ಯರು ಹಾಗೂ ಅವರಿಬ್ಬರ ಆಪ್ತ ಬಳಗ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಜೋಡಿಯು ೨೦೧೩ರಲ್ಲಿ ಪರಸ್ಪರ ಭೇಟಿಯಾಗಿತ್ತು ಹಾಗೂ ೨೦೨೦ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.

ಪ್ಯಾಟ್‌ ಕಮಿನ್ಸ್ ಹಾಗೂ ಬೆಕಿ ಬಾಸ್ಟನ್‌ ಅವರು ೨೦೨೦ರಲ್ಲೇ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಕೊರೊನಾ ಸೋಂಕು ತುರ್ತುಪರಿಸ್ಥಿತಿಯಲ್ಲಿ ಅವರಿಗೆ ಕಾರ್ಯಕ್ರಮ ಅಯೋಜಿಸಲು ಸಾಧ್ಯವಾಗಿರಲಿಲ್ಲ. ಏತನ್ಮಧ್ಯೆ, ಈ ಜೋಡಿಗೆ ೨೦೨೧ರಲ್ಲಿ ಮಗುವಾಗಿದ್ದು, ಆಲ್ಬಿ ಎಂದು ಹೆಸರಿಡಲಾಗಿದೆ. ಈಗ ಕೊರೊನಾ ಸೋಂಕಿ ಪ್ರಕರಣಗಳು ಕಡಿಮೆಯಾಗಿರುವ ಕಾರಣ ಅವರಿಬ್ಬರು ಮದುವೆಯಾಗಿದ್ದಾರೆ.

ಗಡಿ ಮೀರಿದ ಪ್ರೀತಿ

ಪ್ಯಾಟ್‌ ಕಮಿನ್ಸ್‌ ಹಾಗೂ ಬೆಕಿ ಬಾಸ್ಟನ್‌ ಅವರದ್ದು ಗಡಿ ಮೀರಿದ ಪ್ರೀತಿ. ಕಮಿನ್ಸ್‌ ಆಸ್ಟ್ರೇಲಿಯಾದವರಾದರೆ ಬೆಕಿ ಇಂಗ್ಲೆಂಡ್‌ನವರು. ಇಂಟೀರಿಯರ್‌ ಡಿಸೈನ್‌ ಸಂಸ್ಥೆಯನ್ನು ಹೊಂದಿರುವ ಬೆಕಿ ಅವರು ಇಂಗ್ಲೆಂಡ್‌ನಲ್ಲಿ ೨೦೧೩ರಲ್ಲಿ ಕಮಿನ್ಸ್‌ಗೆ ಪರಿಚವಾಗಿದ್ದರು. ಅಲ್ಲಿಂದ ಬೆಳೆದ ಪ್ರೀತಿ ಮಗು ಮತ್ತು ಮದುವೆಯಲ್ಲಿ ಕೊನೆಯಾಗಿದೆ.

Exit mobile version