Site icon Vistara News

ICC World Cup 2023 : ಪಿಚ್ ವರ್ತನೆ ಕುರಿತು ವಿವರ ನೀಡಿದ ಆಸ್ಟ್ರೇಲಿಯಾ ತಂಡದ ನಾಯಕ

Mitchel Strac

ಅಹಮದಾಬಾದ್​​: 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ (ICC World Cup 2023) ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ನವೆಂಬರ್ 19ರ ಭಾನುವಾರ ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಯಾವ ತಂಡವು ಅಗ್ರಸ್ಥಾನಕ್ಕೇರಿ ಮತ್ತೊಮ್ಮೆ ವಿಶ್ವ ಪ್ರಶಸ್ತಿಯನ್ನು ಎತ್ತಿಹಿಡಿಯಲಿದೆ ಎಂಬುದು ಕೌತುಕದ ವಿಷಯವಾಗಿದೆ.

ಪಂದ್ಯ ಸಮೀಪಿಸುತ್ತಿದ್ದಂತೆ, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಪಂದ್ಯ ನಡೆಯುವ ನರೇಂದ್ರ ಮೋದಿ ಸ್ಟೇಡಿಯಮ್​ನ ಪಿಚ್ ಹೇಗಿರಲಿದೆ ಎಂಬ ಚರ್ಚೆ ಶುರುವಾಗಿದೆ. ಅಂತೆಯೇ ಮೆನ್ ಇನ್ ಯೆಲ್ಲೋ ತಂಡದ ನಾಯಕ ಪ್ಯಾಟ್ ಕಮಿನ್ಸ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಜರಿದ್ದು ಅಲ್ಲಿ ಪಿಚ್ ಅನ್ನು ವೀಕ್ಷಿಸಿದ್ದಾರೆ.

ತಾವು ಉತ್ತಮ ಪಿಚ್ ರೀಡರ್ ಅಲ್ಲ ಎಂದು ಕಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಅವರು ಪಿಚ್​ ಸ್ಪರ್ಧಾತ್ಮಕವಾಗಿತ್ತು ಹಾಗೂ ಸಮತೋಲಿತ ಆಟ ನಡೆಯಲಿದೆ ಎಂದು ಹೇಳಿದ್ದಾರೆ. ಪಿಚ್​ಗೆ ನೀರು ಹಾಕಲಾಗಿದ್ದು ಒಣಗಲು ಒಂದು ದಿನ ಕಾಯಬೇಕಾಗಿದೆ. ಹೀಗಾಗಿ ಸದ್ಯಕ್ಕೆ ಎಲ್ಲವನ್ನೂ ಹೇಳುವುದು ಅಸಾಧ್ಯ ಎಂಬುದಾಗಿ ನುಡಿದಿದ್ದಾರೆ.

“ನಾನು ಉತ್ತಮ ಪಿಚ್ ರೀಡರ್ ಅಲ್ಲ, ಆದರೆ ನರೇಂದ್ರ ಮೋದಿ ಸ್ಟೇಡಿಯಮ್​ ಪಿಚ್​ ತುಂಬಾ ಸಮತೋಲಿತವಾಗಿ ಕಾಣುತ್ತದೆ. ಅವರು ಅದಕ್ಕೆ ಕೇವಲ ನೀರು ಹಾಕಿದ್ದಾರೆ, ಆದ್ದರಿಂದ ಹೌದು, ಇನ್ನೂ 24 ಗಂಟೆಗಳ ಕಾಲಾವಕಾಶ ಪಡೆದು ಮತ್ತೊಮ್ಮೆ ನೋಡಬೇಕಾಗಿದೆ. ಆದರೆ ಇದು ಉತ್ತಮ ವಿಕೆಟ್​ನಿಂದ ಕಾಣುತ್ತದೆ,” ಎಂದು ಕಮಿನ್ಸ್ ಹೇಳಿದ್ದಾರೆ.

ಉತ್ತಮ ಪ್ರದರ್ಶನದ ಭರವಸೆ: ಕಮಿನ್ಸ್

ಭಾರತೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಲ್ಲಿ ಆಸ್ಟ್ರೇಲಿಯಾ ತಂಡವು ಹೇಗೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಮತ್ತು ವಿವಿಧ ಎಸೆತಗಳನ್ನು ಚೆನ್ನಾಗಿ ಬಳಸುವ ನಡುವೆ ತಂಡವು ಹೇಗೆ ಸಮತೋಲನವನ್ನು ಸಾಧಿಸಿದೆ ಎಂಬುದನ್ನು ಕಮಿನ್ಸ್ ವಿವರಿಸಿದ್ದಾರೆ.

“ಭಾರತದಲ್ಲಿ ಬಳಸುವ ಕೆಲವು ಚೆಂಡುಗಳು, ನಿಧಾನಗತಿಯ ಚೆಂಡುಗಳಾಗಿವೆ. ಬೌನ್ಸರ್​ ಹಾಕಲು ಧೈರ್ಯ ಮಾಡಬೇಕು. ಆಟದಲ್ಲಿ ಸಮತೋಲನವನ್ನು ಕಂಡುಕೊಳ್ಳಬೇಕು. ನಾವು ಆ ಸಮತೋಲನವನ್ನು ಚೆನ್ನಾಗಿ ಸಾಧಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ. ಭಾರತದಲ್ಲಿ, ಇನ್ನಿಂಗ್ಸ್ ಅಂತ್ಯದ ವೇಳೆಗೆ ಸಾಕಷ್ಟು ಬಾರಿ, ಕಟ್ಟರ್​ಗಳು ವಿಶ್ವದ ಬೇರೆಡೆಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಕಮಿನ್ಸ್ ಹೇಳಿಕೊಂಡರು.

ಇದಲ್ಲದೆ, ಫೈನಲ್ನಲ್ಲಿ ಭಾರತೀಯ ತಂಡಕ್ಕೆ ತವರಿನಲ್ಲಿ ಎಷ್ಟು ಅನುಕೂಲವಿದೆ ಎಂಬ ಬಗ್ಗೆಯೂ ಆಸೀಸ್ ನಾಯಕನನ್ನು ಕೇಳಲಾಯಿತು. ಪರಿಸ್ಥಿತಿ ಎರಡೂ ಕಡೆಯವರಿಗೆ ಸಮಾನವಾಗಿರಬಹುದು ಎಂದು ಕಮಿನ್ಸ್ ಹೇಳಿಕೊಂಡಿದ್ದಾರೆ.

“ಹೌದು, ನನ್ನ ಪ್ರಕಾರ, ಅದನ್ನು ಹೇಳುವುದು ಕಷ್ಟ; ಇದು ನಿಸ್ಸಂಶಯವಾಗಿ ಎರಡೂ ತಂಡಗಳಿಗೆ ಒಂದೇ ಆಗಿರುತ್ತದೆ . ನಿಸ್ಸಂದೇಹವಾಗಿ, ನಿಮ್ಮ ಸ್ವಂತ ದೇಶದಲ್ಲಿ ನಿಮ್ಮ ಸ್ವಂತ ಪಿಚ್​ನಲ್ಲಿ ಆಡುವುದರಿಂದ ಕೆಲವು ಅನುಕೂಲಗಳಿವೆ. ಆದರೆ ನಾವು ಇಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ, “ಎಂದು ಕಮಿನ್ಸ್ ಹೇಳಿದರು.

Exit mobile version