ಬೆಂಗಳೂರು: ಇತ್ತೀಚೆಗೆ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್ (ICC World Cup 2023) ಪಂದ್ಯಕ್ಕಿಂತ ಮೊದಲು ಆಸ್ಟ್ರೇಲಿಯಾ ತಂಡ ನಾಯಕ ಪ್ಯಾಟ್ ಕಮಿನ್ಸ್ ಮಾತನಾಡಿ ನಿಮ್ಮ 1.3 ಲಕ್ಷ ಅಭಿಮಾನಿಗಳು ಮೌನಕ್ಕೆ ಶರಣಾಗುವಂತೆ ಮಾಡುತ್ತೇವೆ ಎಂದು ಹೇಳಿದ್ದರು. ಅದನ್ನು ಅವರ ತಂಡ ಮಾಡಿ ತೋರಿಸಿತ್ತು. ಭಾರತ ತಂಡ ಆರು ವಿಕೆಟ್ಗಳಿಂದ ಫೈನಲ್ನಲ್ಲಿ ಸೊಲುವ ಮೂಲಕ ಟ್ರೋಫಿ ಗೆಲ್ಲುವ ಅವಕಾಶ ನಷ್ಟ ಮಾಡಿಕೊಂಡಿತ್ತು. ಆಸೀಸ್ ಬಳಗಕ್ಕೆ ಆರನೇ ಏಕ ದಿನ ವಿಶ್ವ ಕಪ್ ಪ್ರಶಸ್ತಿ ದೊರಕಿತ್ತು.
ಅಲ್ಲಿಯವರೆಗೆ ಪಂದ್ಯಾವಳಿಯಲ್ಲಿ ಅಜೇಯವಾಗಿದ್ದರೂ, ಟ್ರಾವಿಸ್ ಹೆಡ್ ಅವರ ಅದ್ಭುತ ಶತಕವು ಆಸ್ಟ್ರೇಲಿಯಾಕ್ಕೆ ಗೆಲುವು ತಂದುಕೊಟ್ಟಿತು. 241 ರನ್ಗಳ ಗುರಿಯನ್ನು ಆರು ವಿಕೆಟ್ಗಳು ಬಾಕಿ ಇರುವಾಗ ಬೆನ್ನಟ್ಟಲು ಅವರ ತಂಡಕ್ಕೆ ಸಹಾಯ ಮಾಡಿತ್ತು. ಇದೀಗ ವಿಶ್ವ ಕಪ್ ವಿಜೇತ ತಂಡ ನಾಯಕ ಪ್ಯಾಟ್ ಕಮಿನ್ಸ್ ಭಾರತ ತಂಡದ ಆಟಗಾರರನ್ನು ಲೇವಡಿ ಮಾಡುವ ವಿಡಿಯೊವೊಂದನ್ನು ಶೇರ್ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಚಾಂಪಿಯನ್ ತಂಡದ ಆಟಗಾರರ ಮನೋವರ್ತನೆಗೆ ನೈಜ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ ಗೆಲುವಿನ ನಂತರ, ಆಸ್ಟ್ರೇಲಿಯಾದ ಮಾಧ್ಯಮವೊಂದು ಟೀಮ್ ಇಂಡಿಯಾದ ಬಗ್ಗೆ ಅವಹೇಳನಕಾರಿ ಮತ್ತು ಆಕ್ರಮಣಕಾರಿ ಕಾಮೆಂಟ್ ಅನ್ನು ಪೋಸ್ಟ್ ಮಾಡಿತ್ತು. ‘ದಕ್ಷಿಣ ಆಸ್ಟ್ರೇಲಿಯಾದ ವ್ಯಕ್ತಿ ವಿಶ್ವ ದಾಖಲೆಯ 11 ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾನೆ’ ಎಂಬ ಶೀರ್ಷಿಕೆಯನ್ನು ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ ಅನ್ನು ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಆರೋನ್ ಫಿಂಚ್ ಲೈಕ್ ಮಾಡಿದ್ದಾರೆ ಅದಕ್ಕೆ ಮೊದಲು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಅದನ್ನು ಲೈಕ್ ಮಾಡಿದ್ದರು. ಆದರೆ, ವಿವಾದ ಸೃಷ್ಟಿಯಾದ ಬಳಿಕ ಅವರು ವಾಪಸ್ ಹೋಗಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಭಾರತೀಯ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಭಾರತ ವಿರುದ್ಧದ ವಿಶ್ವಕಪ್ 2023 ರ ಫೈನಲ್ಗೆ ಮುಂಚಿತವಾಗಿ, ಪ್ಯಾಟ್ ಕಮಿನ್ಸ್ ಅವರು ಭಾರತೀಯ ಪ್ರೇಕ್ಷಕರನ್ನು ಮೌನಗೊಳಿಸಬೇಕೆಂದು ತಮಾಷೆಯಾಗಿ ಸಲಹೆ ಕೊಟ್ಟಿದ್ದರು ಮತ್ತು ಅದೇ ಆಯಿತ್ತು. ಭಾರತವು ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್ಗಳ ಸೋಲನ್ನು ಅನುಭವಿಸಿದ್ದರಿಂದ ಇಡೀ ಕ್ರೀಡಾಂಗಣವು ಶಾಂತವಾಗಿತ್ತು. ಆದರೆ, ಆಸೀಸ್ ಆಟಗಾರರ ವರ್ತನೆ ಭಾರತೀಯರ ಮನಕ್ಕೆ ನಾಟಿದೆ. ಅವರಿನ್ನು ಶಾಂತವಾಗಿ ಇರುವುದಿಲ್ಲ. ತಿರುಗೇಟು ಕೊಡುವುದು ಖಾತರಿ.
ಇದನ್ನೂ ಓದಿ : IPL 2023 : ಕೊಹ್ಲಿ ಎಂದು ಕಿಚಾಯಿಸಿದ ಅಭಿಮಾನಿಗಳಿಗೆ ಬಾಯ್ಮುಚ್ಚು ಎಂದು ಸನ್ನೆ ಮಾಡಿದ ನವಿನ್ ಉಲ್ ಹಕ್!
ಆಸೀಸ್ ನೆಲದಲ್ಲಿ ಸಂಭ್ರಮಾಚರಣೆ
ಆಸ್ಟ್ರೇಲಿಯಾ ತಂಡವು ತನ್ನ ಆರನೇ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುತ್ತಿದ್ದಂತೆ, ತವರಿಗೆ ಮರಳುವ ಸಂಭ್ರಮಾಚರಣೆಗಳು ಭರದಿಂದ ಸಾಗಿವೆ. ದುರದೃಷ್ಟವಶಾತ್, ಆಸ್ಟ್ರೇಲಿಯಾದ ಪ್ರಸಿದ್ಧ ದಿನಪತ್ರಿಕೆ ದಿ ಬೆಟೂಟಾ ಅಡ್ವೊಕೇಟ್ ಭಾರತೀಯ ತಂಡದ ಆಟಗಾರರನ್ನು ಶಿಶುಗಳಂತೆ ಚಿತ್ರಿಸಿ ಅಣಕಿಸಿತ್ತು. ಫೈನಲ್ನಲ್ಲಿ ಶತಕ ಬಾರಿಸಿದ ಟ್ರಾವಿಸ್ ಹೆಡ್ ಅವರನ್ನು ಭಾರತ ತಂಡದ ಆಟಗಾರರ ‘ತಂದೆ’ ಎಂದು ಚಿತ್ರಿಸಲಾಗಿತ್ತು.
ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಈ ಪೋಸ್ಟ್ಗೆ ಪ್ರತಿಕ್ರಿಯಿಸಿ ನಗುವ ಪ್ರತಿಕ್ರಿಯೆಯನ್ನು ನೀಡಿದ್ದರು. ಇದು ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ 70 ರನ್ಗಳ ಗೆಲುವು ಸೇರಿದಂತೆ ಒಂಬತ್ತು ಗುಂಪು ಹಂತದ ಗೆಲುವುಗಳಿಂದ ಅಜೇಯ ದಾಖಲೆಯೊಂದಿಗೆ ಭಾರತ ಫೈನಲ್ಗೆ ಪ್ರವೇಶಿಸಿತ್ತು. ದುರದೃಷ್ಟವಶಾತ್, ಆಸ್ಟ್ರೇಲಿಯಾ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಭಾರತ ಹಿನ್ನಡೆ ಅನುಭವಿಸಿತು.