ಅಹಮದಾಬಾದ್: ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ 2023 ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ (ICC World Cup 2023) ಅದ್ಭುತ ಪ್ರದರ್ಶನ ನೀಡಿ ಟ್ರೋಫಿ ಗೆದ್ದುಕೊಂಡಿತು. ಫೈನಲ್ ಮುಖಾಮುಖಿಯಲ್ಲಿ ಭಾರತದ ಮೆನ್ ಇನ್ ಬ್ಲೂ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು. ಬಳಿಕ ಟ್ರೋಫಿ ಗೆದ್ದ ಸಂಭ್ರಮಿಸಿತು. ವಿಶ್ವಕಪ್ ಗೆಲುವಿನ ನಂತರ, ಇಡೀ ತಂಡವು ತಮ್ಮ ವಿಶ್ವಕಪ್ ವಿಜೇತ ಅಭಿಯಾನವನ್ನು ಆಚರಿಸಲು ಸಬರಮತಿ ನದಿ ಕ್ರೂಸ್ನಲ್ಲಿ ಸವಾರಿ ಮಾಡಿತು. ಆಟಗಾರರು ಕ್ರೂಸ್ನಲ್ಲಿ ಪ್ರಯಾಣ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ.
#WATCH | Gujarat: Australian Cricket team captain Pat Cummins poses with the ICC World Cup trophy on a Sabarmati river cruise boat in Ahmedabad. pic.twitter.com/WgZG2mrenk
— ANI (@ANI) November 20, 2023
ಪಾಕ್ ಆಟಗಾರನ ಬ್ಯಾಟ್ನಿಂದ ಭಾರತದ ವಿಶ್ವಕಪ್ ಗೆಲುವು ಕಸಿದ ಟ್ರಾವಿಸ್ ಹೆಡ್!
ಅಹಮದಾಬಾದ್: ಭಾನುವಾರ ನರೇಂದ್ರ ಮೋದಿ ಕ್ರಿಕೆಟ್ ಸ್ಟಡಿಯಂನಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ (IND vs AUS Final) ಭಾರತದ ವಿಶ್ವಕಪ್ ಟ್ರೋಫಿ ಕನಸಿಗೆ ಕೊಳ್ಳಿ ಇಟ್ಟ ಟ್ರಾವಿಸ್ ಹೆಡ್(travis head) ಅವರು ಬಳಸಿದ್ದು ಪಾಕಿಸ್ತಾನ ಆಟಗಾರ ನೀಡಿದ ಬ್ಯಾಟ್ನಿಂದ ಎಂದು ತಿಳಿದುಬಂದಿದೆ.
ಇದನ್ನೂ ಓದಿ : Mohammed Shami : ಪ್ರಧಾನಿ ಮೋದಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದ ಮೊಹಮ್ಮದ್ ಶಮಿ
ಹೌದು, ಟ್ರಾವಿಸ್ ಹೆಟ್ ಅವರು ಬಳಸಿದ್ದು ಪಾಕ್ ತಂಡದ ಮಾಜಿ ನಾಯಕ ಬಾಬರ್ ಅಜಂ(babar azam) ಅವರ ಬ್ಯಾಟ್. ಇದಕ್ಕೆ ಸಂಬಂಧಿಸಿದ ವಿಡಿಯೊವೊಂದು ಈಗ ವೈರಲ್ ಆಗಿದೆ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯ ವೇಳೆ ಬಾಬರ್ ಅಜಂ ಅವರು ತಮ್ಮ ಬ್ಯಾಟ್ ಒಂದನ್ನು ಟ್ರಾವಿಸ್ ಹೆಡ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಇದೇ ಬ್ಯಾಟ್ನಲ್ಲಿ ಹೆಡ್ ಅವರು ಫೈನಲ್ ಆಡಿ ಭಾರತದ ವಿಶ್ವಕಪ್ ಗೆಲುವುನ್ನು ಕಸಿದರು ಎನ್ನುವುದು ಕೆಲ ಪಾಕ್ ನೆಟ್ಟಿಗರು ಸಂಭ್ರಮ ಪಡುತ್ತಿದ್ದಾರೆ.
2 ವಿಶ್ವಕಪ್ನಲ್ಲಿ ಕಂಟಕವಾದ ಹೆಡ್
ಟ್ರಾವಿಸ್ ಹೆಡ್ ಅವರು ಭಾರತಕ್ಕೆ ಕಂಟಕವಾಗಿ ಪರಿಣಮಿಸಿದ್ದು ಇದು ಇರಡನೇ ನಿದರ್ಶನ. ನಾಲ್ಕು ತಿಂಗಳ ಹಿಂದಷ್ಟೇ ಲಂಡನ್ನಲ್ಲಿ ನಡೆದಿದ್ದ ವಿಶ್ವಕಪ್ ಟೆಸ್ಟ್ ಫೈನಲ್ ಪಂದ್ಯದಲ್ಲಿಯೂ ಭಾರತ ವಿರುದ್ಧ ಶತಕ ಬಾರಿಸಿ ಸೋಲುಣಿಸಿದ್ದರು. ಇದೀಗ ಏಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿಯೂ ಅವರು ಶತಕ ಬಾರಿಸಿ ಮತ್ತೊಮ್ಮೆ ಭಾರತದ ಟ್ರೋಫಿ ಗೆಲುವಿಗೆ ಅಡ್ಡಗಾಲಿಟ್ಟರು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲೂ ಅವರು ಬಾಬರ್ ನೀಡಿದ ಬ್ಯಾಟ್ನಿಂದಲೇ ಶತಕ ಬಾರಿಸಿ ಮಿಂಚಿದ್ದರು. ಅಲ್ಲದೆ ಭಾರತಕ್ಕೆ ಸೋಲು ಕಾಣುವಂತೆ ಮಾಡಿದ್ದರು. ಇದೀಗ ಏಕದಿನದಲ್ಲೂ ಬಾಬರ್ ಅವರ ಬ್ಯಾಟ್ನಿಂದಲೇ ಶತಕ ಬಾರಿಸಿದ್ದಾರೆ ಎನ್ನಲಾಗಿದೆ.
ಟ್ರಾವಿಸ್ ಹೆಡ್ ಅವರು ಫೈನಲ್ ಪಂದ್ಯದಲ್ಲಿ ಭಾರತೀಯ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು 15 ಮನಮೋಹಕ ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 120 ಎಸೆತಗಳಲ್ಲಿ 137 ರನ್ ಬಾರಿಸಿ ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ಈ ಅಸಾಮಾನ್ಯ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಇದು ಹೆಡ್ ಅವರ 2ನೇ ವಿಶ್ವಕಪ್ ಶತಕವಾಗಿದೆ. ಮೊದಲ ಶತಕ ಇದೇ ಆವೃತ್ತಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ದಾಖಲಿಸಿದ್ದರು.