ಮುಂಬಯಿ: ಐಪಿಎಲ್ ಬ್ಯಾಟಿಂಗ್ ಹೀರೊ ಪಾಲ್ ವಲ್ತಾಟಿ(Paul Valthaty) ಅವರು ಪ್ರಥಮ ದರ್ಜೆ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. 2006ರಲ್ಲಿ ಮುಂಬಯಿ ಪರ ಲಿಸ್ಟ್ ಎ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದ ವಾಲ್ತಾಟಿ ಬಳಿಕ ಹಿಮಾಚಲ ಪ್ರದೇಶವನ್ನು ಪ್ರತಿನಿಧಿಸಿ 5 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು.
ಆರಂಭಿಕ ಬ್ಯಾಟರ್ ಆಗಿದ್ದ ಪಾಲ್ ವಲ್ತಾಟಿ ಬೆಳಕಿಗೆ ಬಂದಿದ್ದು 2011ರ ಐಪಿಎಲ್‌ನಲ್ಲಿ. ಕಿಂಗ್ಸ್ ಇಲೆವೆನ್ ಪಂಜಾಬ್(kings 11 punjab) ಪರ ಆಡುತ್ತಿದ್ದ ಅವರು ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ವಿರುದ್ಧದ ಪಂದ್ಯದಲ್ಲಿ 189 ರನ್ ಚೇಸ್ ಮಾಡುವ ವೇಳೆ ವಲ್ತಾಟಿ ಆಕರ್ಷಕ ಶತಕ ಬಾರಿಸಿ ತಂಡಕ್ಕೆ 6 ವಿಕೆಟ್ ಜಯ ತಂದುಕೊಟ್ಟಿದ್ದರು. ಗಿಲ್‌ಕ್ರಿಸ್ಟ್ ಜತೆ ಆರಂಭಿಕನಾಗಿ ಅವರು 63 ಎಸೆತಗಳಿಂದ ಅಜೇಯ 120(19 ಬೌಂಡರಿ ಹಾಗೂ 2 ಸಿಕ್ಸರ್) ರನ್ ಬಾರಿಸಿ ಮಿಂಚಿದರು.
ವಾಲ್ತಾಟಿ ಶತಕ ಬಾರಿಸಿ ಮಿಂಚಿದರೂ ದುರಾದೃಷ್ಟವಶಾತ್ ಅವರಿಗೆ ಅದೃಷ್ಟ ಕೈಹಿಡಿಯಲಿಲ್ಲ. 2013ರ ಬಳಿಕ ಇವರನ್ನು ಯಾವುದೇ ತಂಡ ಖರೀದಿ ಮಾಡಲು ಮುಂದಾಗಲಿಲ್ಲ. ಹೀಗಾಗಿ ಅವರು ಐಪಿಎಲ್ನಿಂದ ತೆರೆಮರೆಗೆ ಸರಿದಿದರು.
2002ರ ಅಂಡರ್-19 ವಿಶ್ವಕಪ್ ತಂಡದಲ್ಲಿಯೂ ಅವರು ಆಡಿದ್ದರು. 2006ರಲ್ಲಿ ಮುಂಬಯಿ ಪರ ಲಿಸ್ಟ್ ಎ ಪಂದ್ಯ ಆಡುವ ಮೂಲಕ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಒಟ್ಟು 23 ಐಪಿಎಲ್ ಪಂದ್ಯ ಆಡಿದ ವಾಲ್ತಾಟಿ 505 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 2 ಅರ್ಧಶತಕ ಸೇರಿದೆ. ರಾಜಸ್ತಾನ್ ತಂಡದ ಪರ ಆಡುವ ಮೂಲಕ ಐಪಿಎಲ್ಗೆ ಕಾಲಿಟ್ಟಿದ್ದರು.
ಇದನ್ನೂ ಓದಿ IPL 2023 : ಸಿಎಸ್ಕೆ ಐಪಿಎಲ್ನ ಅತ್ಯಂತ ಮೌಲ್ಯಯುತ ತಂಡ, ಆರ್ಸಿಬಿಗೆ ಎಷ್ಟನೇ ಸ್ಥಾನ?
“ನಾನು ಪ್ರಥಮ ದರ್ಜೆ ಕ್ರಿಕೆಟಿಗೆ ವಿದಾಯ ಹೇಳುತಿದ್ದೇನೆ. ನನ್ನ ಕ್ರಿಕೆಟ್ ಪಯಣದಲ್ಲಿ ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಐಪಿಎಲ್‌ನಲ್ಲಿ ಅವಕಾಶ ನೀಡಿದ ಫ್ರಾಂಚೈಸಿ ಮತ್ತು ತಂಡದ ಸದ್ಯರಿಗೂ ಧನ್ಯವಾದ ಅರ್ಪಿಸುತ್ತೇನೆ” ಎಂದು 39 ವರ್ಷದ ವಾಲ್ತಾಟಿ ಹೇಳಿದ್ದಾರೆ.
ವಾರ್ನರ್ ಟೆಸ್ಟ್ ಕ್ರಿಕೆಟ್ ನಿವೃತ್ತಿಯ ಸುಳಿವು ನೀಡಿದ ಪತ್ನಿ ಕ್ಯಾಂಡಿಸ್
ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್(David Warner) ಅವರು ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೂ ಮುನ್ನವೇ ಕ್ರಿಕೆಟ್ ವಿದಾಯದ ಕುರಿತು ಮಹತ್ವದ ಹೇಳಿಕೆ ನೀಡಿದ್ದರು. ಆದರೆ ಇದೀಗ ಅವರ ಪತ್ನಿ ಕ್ಯಾಂಡಿಸ್ ವಾರ್ನರ್(Candice Warner) ಮಾಡಿರುವ ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
“ಟೆಸ್ಟ್ ಕ್ರಿಕೆಟ್ ಜತೆ ಪ್ರವಾಸ ಮಾಡುವ ನಮ್ಮ ಒಂದು ದಶಕದ ಪ್ರಯಾಣ ಅಂತ್ಯವಾಗಿದೆ. ಇದು ಮೋಜಿನಿಂದ ಕೂಡಿತ್ತು. ನಿಮ್ಮಗೆ ಅಪಾರ ಅಭಿಮಾನಿಗಳ ಬೆಂಬಲವಿದೆ. ನಿಮ್ಮನ್ನು ಪ್ರೀತಿಸುತ್ತೇನೆ ವಾರ್ನರ್” ಎಂದು ಕ್ಯಾಂಡಿಸ್ ವಾರ್ನರ್ ಮತ್ತು ತಮ್ಮ ಮೂರು ಮಕ್ಕಳೊಂದಿಗಿನ ಫೋಟೊ ಹಂಚಿಕೊಂಡು ಈ ಶಿರ್ಷಿಕೆ ಬರೆದಿದ್ದಾರೆ. ಈ ಪೋಸ್ಟ್ ಗಮನಿಸುವಾಗ ವಾರ್ನರ್ ಅವರು ನಾಲ್ಕನೇ ಆ್ಯಶಸ್ ಪಂದ್ಯಕ್ಕೂ ಮುನ್ನವೇ ಟೆಸ್ಟ್ ಕ್ರಿಕೆಟ್ಗೆ(Test format) ವಿದಾಯ ಹೇಳುವ ಸಾಧ್ಯತೆಯೊಂದು ದಟ್ಟವಾಗಿದೆ.