ಮುಂಬಯಿ: ವಿವಾದಾತ್ಮಕ ಬಹುಭಾಷಾ ನಟಿ ಪಾಯಲ್ ಘೋಷ್ (Payal Ghosh) ಮತ್ತೆ ಸುದ್ದಿಯಾಗಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ(mohammed shami) ಅವರನ್ನು ಮದುವೆಯಾಗಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಆದರೆ ಒಂದು ಷರತ್ತನ್ನು ಕೂಡ ವಿಧಿಸಿದ್ದಾರೆ.
ಹೌದು, ನಟಿ ಪಾಯಲ್ ಘೋಷ್ ಅವರು, ಮೊಹಮ್ಮದ್ ಶಮಿಯ ಬಗ್ಗೆ ಅವರು ಮೆಚ್ಚುಗೆ ಸೂಚಿಸಿ ಮದುವೆಯ ಪ್ರಸ್ತಾವ ಇಟ್ಟಿದ್ದಾರೆ. ‘ಶಮಿ ನೀವು ಇಂಗ್ಲಿಷ್ ಕಲಿತರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧ’ ಎಂದು ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ಸಕತ್ ವೈರಲ್ ಆಗಿದೆ. ಇದರ ಜತೆಗೆ ಇನ್ನೊಂದು ಪೋಸ್ಟ್ನಲ್ಲಿ, ‘ಶಮಿ ಅವರೇ ನೀವು ಸೆಮಿಫೈನಲ್‌ನಲ್ಲಿ ಹೀರೋ ಆಗುವುದನ್ನು ನಾನು ನೋಡಬೇಕು’ ಎಂದಿದ್ದಾರೆ.
#Shami Tum apna English sudharlo, I’m ready to marry you 🤣🤣
— Payal Ghoshॐ (@iampayalghosh) November 2, 2023
ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ
ಪಾಯಲ್ ಘೋಷ್ ಅವರು ಮೀ ಟೂ ಅಭಿಯಾನದ ಮೂಲಕ ಸಾಕಷ್ಟು ಸದ್ದು ಮಾಡಿದ್ದರು. ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. 2014-15ರಲ್ಲಿ ತಾವು ಅನುರಾಗ್ ಭೇಟಿ ಮಡಿದ್ದೆ. ಈ ವೇಳೆ ಮದ್ಯದ ಅಮಲಿನಲ್ಲಿ ಅವರು ಅನುಚಿತವಾಗಿ ವರ್ತಿಸಿದ್ದರು. ಬಳಿಕ ತಮ್ಮ ಮನೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದರು ಎಂದು ಆರೋಪಿಸಿದ್ದರು.
ಇದನ್ನೂ ಓದಿ Mohammed Shami : ಮೈದಾನದಲ್ಲೇ ನಮಾಜ್ ಮಾಡಲು ಹೋಗಿ ಅರ್ಧಕ್ಕೆ ನಿಲ್ಲಿಸಿದರೇ ಶಮಿ?
ಶಮಿಯ ಯಶಸ್ಸಿನ ಬಗ್ಗೆ ವಿಲಕ್ಷಣ ಹೇಳಿಕೆ ನೀಡಿದ ವಿಚ್ಛೇದಿತ ಪತ್ನಿ
ಶಮಿ ಅವರ ಅಸಾಧಾರಣ ಪ್ರದರ್ಶನದ ಬಗ್ಗೆ ಇಡೀ ಕ್ರಿಕೆಟ್ ಕ್ಷೇತ್ರವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ ಅವರ ವಿಚ್ಛೇದಿತ ಪತ್ನಿ ಹಸೀನ್ ಜಹಾನ್ ತಮ್ಮ ಪತಿಯ ಯಶಸ್ಸಿನ ಬಗ್ಗೆ ವಿಲಕ್ಷಣ ಹೇಳಿಕೆ ನೀಡಿದ್ದಾರೆ.
ನ್ಯೂಸ್ ನೇಷನ್ಗೆ ನೀಡಿದ ಸಂದರ್ಶನದಲ್ಲಿ, ಹಸೀನ್ ಜಹಾನ್ ಅವರನ್ನು ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ನಲ್ಲಿ ಶಮಿ ಮತ್ತು ಟೀಮ್ ಇಂಡಿಯಾದ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆರಂಭದಲ್ಲಿ, ಜಹಾನ್ ಅವರು ಕ್ರಿಕೆಟ್ ಮತ್ತು ಕ್ರಿಕೆಟಿಗರ ಅಭಿಮಾನಿಯಲ್ಲ ಎಂದು ಹೇಳಿಕೊಂಡರು. ಆದಾಗ್ಯೂ, ಶಮಿ ಉತ್ತಮ ಪ್ರದರ್ಶನ ನೀಡಿದರೆ, ಭಾರತೀಯ ತಂಡದಲ್ಲಿ ಉಳಿಯುತ್ತಾರೆ. ಅವರು ಉತ್ತಮವಾಗಿ ಸಂಪಾದಿಸುತ್ತಾರೆ. ಅದು ಕುಟುಂಬದ ಭವಿಷ್ಯಕ್ಕೆ ಒಳ್ಳೆಯದು ಎಂದು ವಿಭಿನ್ನ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ.
Vo zyada kamayega to hamara bhavishya secure hoga. Team India ko best wishes de sakti hu #shami ko nahi de sakti…..
— Deepika Narayan Bhardwaj (@DeepikaBhardwaj) November 7, 2023
Paisa le rahi hain madam lekin beti se Milne bhi nahi deti. Crazy how some women use children as a pawn so happily pic.twitter.com/QKMlvGDbFa
“ಕುಚ್ ಭಿ ಹೈ, ಅಚ್ಚಾ ಪರ್ಫಾರ್ಮ್ ಕೆರ್ ರಾ ಹೈ, ಅಚ್ಚಾ ಖೇಲೆಗಾ, ಟೀಮ್ ಮೇನ್ ಬಿನಾ ರೇಗಾ, ಅಚ್ಚಾ ಕಾಮಯೇಗಾ ತೋ ಹುಮಾರಾ ಭಾವಿಶ್ಯ ಸೆಕ್ಯೂರ್ ರೇಗಾ” (ಅದೇನೇ ಇರಲಿ, ಶಮಿ ಉತ್ತಮ ಪ್ರದರ್ಶನ ನೀಡಿದರೆ, ಅವರು ಭಾರತೀಯ ತಂಡದಲ್ಲಿ ಉಳಿಯುತ್ತಾರೆ. ಉತ್ತಮವಾಗಿ ಸಂಪಾದಿಸುತ್ತಾರೆ, ಅದು ನಮ್ಮ ಭವಿಷ್ಯವನ್ನು ಭದ್ರಪಡಿಸುತ್ತಾರೆ” ಎಂದು ಜಹಾನ್ ಸಂದರ್ಶನದಲ್ಲಿ ಹೇಳಿದ್ದಾರೆ. ಮಾರ್ಚ್ 8, 2018 ರಂದು, ಜಹಾನ್ ತನ್ನ ಪತಿಯ ವಿರುದ್ಧ ಬೆದರಿಕೆ, ದಾಂಪತ್ಯ ದ್ರೋಹ ಮತ್ತು ವರದಕ್ಷಿಣೆ ಬೇಡಿಕೆಯ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದರು. ದಂಪತಿಗಳು 2018 ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.