Site icon Vistara News

IPL 2023: ಚಿರತೆಯಂತೆ ಜಿಗಿದು ಕ್ಯಾಚ್​ ಪಡೆದ ಶಿಖರ್​ ಧವನ್​; ವಿಡಿಯೊ ವೈರಲ್​

Dhawan Takes Stunning Diving Catch

ಧರ್ಮಶಾಲಾ: ಡೆಲ್ಲಿ ಕ್ಯಾಪಿಟಲ್ಸ್​​ ವಿರುದ್ಧ ಪಂಜಾಬ್​ ಕಿಂಗ್ಸ್​ ಸೋಲು ಕಂಡರೂ, ಪಂಜಾಬ್​ ತಂಡದ ನಾಯಕ ಶಿಖರ್​ ಧವನ್​ ಅವರು ಹಿಡಿದ ಕ್ಯಾಚ್​ವೊಂದರ ವಿಡಿಯೊ ಭಾರಿ ವೈರಲ್ ಆಗಿದೆ.​ ಕ್ಯಾಚ್​ ಪಡೆದ ಬಳಿಕ ಅವರು ತೊಡೆ ತಟ್ಟಿ ಸಂಭ್ರಮಾಚರಿಸಿದ್ದಾರೆ.

ಧರ್ಮಶಾಲದಲ್ಲಿ ಬುಧವಾರ ನಡೆದಿದ್ದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ 2 ವಿಕೆಟ್​ಗೆ 213 ರನ್​ ರಾಶಿ ಹಾಕಿತು. ಬೃಹತ್​ ಮೊತ್ತವನ್ನು ದಿಟ್ಟ ರೀತಿಯಲ್ಲೇ ಬೆನ್ನಟ್ಟಿದ ಪಂಜಾಬ್​ ಗೆಲುವಿನ ಅಂಚಿನ ವರೆಗೆ ಬಂದು ಸಣ್ಣ ಅಂತರದಿಂದ ಸೋಲು ಕಂಡಿತು. ಈ ಸೋಲಿನಿಂದ ಪ್ಲೇ ಆಫ್​ ಕನಸು ಅರ್ಧದಷ್ಟು ಕಮರಿಹೋಯಿತು.

ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಪರ ನಾಯಕ ವಾರ್ನರ್​ ಅವರು ಪೃಥ್ವಿ ಶಾ ಜತೆಗೂಡಿ ಉತ್ತಮ ಇನಿಂಗ್ಸ್​ ಕಟ್ಟಿದರು. ಬಿರುಸಿನ ಬ್ಯಾಟಿಂಗ್​ ನೆಡೆಸುತ್ತಿದ್ದ ಅವರು 41 ರನ್​ ಗಳಿಸಿದ್ದ ವೇಳೆ ರಾಹುಲ್​ ಚಹರ್​ ಅವರಿಂದ ಜೀವದಾನ ಪಡೆದರು. ಆದರೆ ಈ ಅವಕಾಶವನ್ನು ಅವರು ಹೆಚ್ಚು ಕಾಲ ಬಳಸಿಕೊಳ್ಳುವಲ್ಲಿ ವಿಫಲರಾದರು. ಮುಂದಿನ 5 ರನ್​ ಅಂತರದಲ್ಲಿ ಅವರು ವಿಕೆಟ್​ ಕೈ ಚೆಲ್ಲಿದರು. ಅಸಾಧ್ಯವಾದ ಕ್ಯಾಚ್​ ಒಂದನ್ನು ಚಿರತೆ ವೇಗದಲ್ಲಿ ಓಡಿ ಕ್ಯಾಚ್​ ಹಿಡಿಯುವ ಮೂಲಕ ಶಿಖರ್​ ಧವನ್​ ಅವರು ವಾರ್ನರ್​ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಈ ಕ್ಯಾಚ್​ ಕಂಡು ವಾರ್ನರ್​ ಒಂದು ಕ್ಷಣ ದಂಗಾದರು.

ಇದನ್ನೂ ಓದಿ IPL 2023: ಪಂಜಾಬ್​-ರಾಜಸ್ಥಾನ್​ ಮಧ್ಯೆ ಕಾದಾಟ; ಸೋತ ತಂಡ ಮನೆಗೆ

ಚೇಸಿಂಗ್​ ವೇಳೆ ಧವನ್​ ಅವರು ತಾವು ಎದರಿಸಿದ ಮೊದಲ ಎಸೆತದಲ್ಲೇ ಕ್ಯಾಚ್​ ನೀಡಿ ಗೋಲ್ಡನ್​ ಡಕ್​ ಆಗುವ ಮೂಲಕ ನಿರಾಸೆ ಮೂಡಿಸಿದರು. ಒಂದೊಮ್ಮೆ ಧವನ್​ ಅವರು ಪ್ರತಿ ಪಂದ್ಯದಲ್ಲಿಯೂ ಸಿಡಿಯುತ್ತಿದ್ದ ಹಾಗೆ ಈ ಪಂದ್ಯದಲ್ಲಿಯೂ ರನ್​ ಗಳಿಸುತ್ತಿದ್ದರೆ ತಂಡ ಗೆಲುವು ಸಾಧಿಸುತ್ತಿತ್ತು.

Exit mobile version