Site icon Vistara News

PBKS vs CSK: ಬ್ಯಾಟಲ್​ ಆಫ್​ ದಿ ಕಿಂಗ್ಸ್​ಗೆ ಚೆನ್ನೈ-ಪಂಜಾಬ್​ ರೆಡಿ; ಗಾಯಕ್ವಾಡ್​ಗೆ ಸೇಡಿನ ಪಂದ್ಯ

PBKS vs CSK

ಧರ್ಮಶಾಲಾ: ಪಂಜಾಬ್​-ಚೆನ್ನೈ(PBKS vs CSK) ನಡುವೆ ನಾಲ್ಕೇ ದಿನಗಳ ಅಂತರದಲ್ಲಿ ದ್ವಿತೀಯ ಸುತ್ತಿನ ಹೋರಾಟಕ್ಕೆ ಸಿದ್ಧವಾಗಿ ನಿಂತಿದೆ. ಭಾನುವಾರದ ಮೊದಲ ಪಂದ್ಯದಲ್ಲಿ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಇತ್ತಂಡಗಳು ಸೆಣಸಾಟಕ್ಕೆ ಇಳಿಯಲಿವೆ. ಇದು ಈ ಆವೃತ್ತಿಯಲ್ಲಿ ಇಲ್ಲಿ ನಡೆಯುವ ಮೊದಲ ಐಪಿಎಲ್(IPL 2024)​ ಪಂದ್ಯವಾಗಿದೆ. ಕಳೆದ ಪಂದ್ಯದಲ್ಲಿ ತವರಿನಲ್ಲೇ 7 ವಿಕೆಟ್​ ಸೋಲಿಗೆ ಪಂಜಾಬ್​ಗೆ ಅವರ ತವರಿನ ಅಂಗಳದಲ್ಲಿ ಸೇಡು ತೀರಿಸಿಕೊಳ್ಳುವುದು ಹಾಲಿ ಚಾಂಪಿಯನ್‌ ಗುರಿಯಾಗಿದೆ.

ಪಿಚ್​ ರಿಪೋರ್ಟ್​

ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ (ಎಚ್‌ಪಿಸಿಎ) ಪ್ರಕೃತಿಯ ಅತ್ಯಂತ ರಮಣೀಯ ಸ್ಟೇಡಿಯಂ ಆಗಿದ್ದು, ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿದೆ. ಸಮುದ್ರ ಮಟ್ಟದಿಂದ 1,317 ಮೀ. ಎತ್ತರದಲ್ಲಿದೆ. ಅಡಿಲೇಡ್‌ ಓವಲ್‌, ನ್ಯೂಜಿಲ್ಯಾಂಡ್​ ಸ್ಟೇಡಿಯಂಗಳಂತೆ ಇದು ಕೂಡ ಚಿತ್ರಸದೃಶವಾಗಿದೆ. 23 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿರುವ ಈ ಸ್ಟೇಡಿಯಂ ಪ್ರಕೃತಿಗೆ ತೆರೆದುಕೊಂಡಿದೆ. ಹೀಗಾಗಿ ಇಲ್ಲಿ ಸದಾ ಗಾಳಿ ಬೀಸುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಇದು ಪೇಸ್‌ ಬೌಲಿಂಗ್‌ ಸ್ವರ್ಗವೆನಿಸಿದೆ.

ಎಚ್‌ಪಿಸಿಎ ಕ್ರಿಕೆಟ್​ ಸ್ಟೇಡಿಯಂನಲ್ಲಿ ಇದುವರೆಗೆ 11 ಐಪಿಎಲ್​ ಪಂದ್ಯಗಳು ನಡೆದಿವೆ. ಈ ಪೈಕಿ 6 ಪಂದ್ಯಗಳನ್ನು ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆದ್ದಿದ್ದರೆ, 5 ಬಾರಿ ಚೇಸಿಂಗ್​ ನಡೆಸಿದ ತಂಡ ಗೆದ್ದಿದೆ. 2 ವಿಕೆಟ್​ಗೆ 232 ರನ್​ ಇಲ್ಲಿ ದಾಖಲಾದ ಅತ್ಯಧಿಕ ರನ್​ ಗಳಿಕೆಯಾಗಿದೆ. 2011ರಲ್ಲಿ ಪಂಜಾಬ್​ ಮತ್ತು ಆರ್​ಸಿಬಿ ನಡುವಿನ ಪಂದ್ಯದಲ್ಲಿ ಈ ಮೊತ್ತ ದಾಖಲಾಗಿತ್ತು. ಚೆನ್ನೈ ಮತ್ತು ಪಂಜಾಬ್​ ಈ ಮೈದಾನದಲ್ಲಿ 2 ಪಂದ್ಯಗಳು ಆಡಿವೆ. ಉಭಯ ತಂಡಗಳು ಕೂಡ ತಲಾ ಒಂದೊಂದು ಪಂದ್ಯ ಗೆದ್ದಿವೆ.

ಇದನ್ನೂ ಓದಿ IPL 2024: ಕೆಎಸ್‌ಸಿಎಗೆ ಮತ್ತೆ ಸಂಕಷ್ಟ; ಚಿನ್ನಸ್ವಾಮಿ ಸ್ಟೇಡಿಯಂನ ಎಲ್ಲ ನೀರಿನ ಮೂಲದ ವಿವರ ಕೇಳಿದ ಎನ್‌ಜಿಟಿ!

ಬೌಲಿಂಗ್​ ಸುಧಾರಣೆ ಅಗತ್ಯ


ಚೆನ್ನೈ(Chennai Super Kings) ತಂಡ ಆರಂಭಿಕ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನದ ಮೂಲಕ ಸತತ ಗೆಲುವು ಸಾಧಿಸಿತ್ತು. ಆದರೆ ಈಗ ಹಿಂದಿನ ಲಯ ಕಳೆದುಕೊಂಡಿದ್ದು ತವರಿನಲ್ಲೇ ಸೋಲಿನ ಅವಮಾನಕ್ಕೆ ಸಿಲುಕಿದೆ. ಬಾಂಗ್ಲಾ ಎಡಗೈ ವೇಗಿ ಮುಸ್ತಫಿಜುರ್​ ರೆಹಮಾನ್​ ಕೂಡ ಟಿ20 ವಿಶ್ವಕಪ್​ಗೆ ಸಿದ್ಧತೆ ನಡೆಸುವ ಸಲುವಾಗಿ ತಂಡ ತೊರೆದಿದ್ದಾರೆ. ಶಾರ್ದೂಲ್​ ಠಾಕೂರ್​ ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ದೀಪಕ್ ಚಹಾರ್, ರಿಚರ್ಡ್ ಗ್ಲೀಸನ್ ಕೂಡ ದುಬಾರಿಯಾಗುತ್ತಿದ್ದಾರೆ. ಜಡೇಜಾ ಕೂಡ ಸ್ಪಿನ್​ ಮಾಡುತಿಲ್ಲ. ಸದ್ಯಕ್ಕೆ ಪತಿರಾಣ ಮಾತ್ರ ಘಾತಕ ಬೌಲಿಂಗ್​ ನಡೆಸುತ್ತಿದ್ದಾರೆ.

ಪಂಜಾಬ್​ಗೆ ಬ್ಯಾಟಿಂಗ್ ಬಲ


ಪಂಜಾಬ್​(Punjab Kings) ತಂಡದಲ್ಲಿ ಅನುಭವಿಗಳಾದ ಕಗಿಸೊ ರಬಾಡ, ಅರ್ಶ್​ದೀಪ್​ ಸಿಂಗ್​, ಹರ್ಷಲ್​ ಪಟೇಲ್ ಅವರಂತಹ ಘಾತಕ ಬೌಲರ್​​ ಇದ್ದರೂ ಕೂಡ ಇವರಿಂದ ಇದುವರೆಗೆ ನಿರೀಕ್ಷಿತ ಮಟ್ಟದ ಬೌಲಿಂಗ್ ಪ್ರದರ್ಶನ ಕಂಡುಬಂದಿಲ್ಲ.​ ಪಂಜಾಬ್​ ಗೆದ್ದಿರುವುದು ಬ್ಯಾಟಿಂಗ್​ ಬಲದಿಂದ. ಹೀಗಾಗಿ ಈ ಪಂದ್ಯದಲ್ಲಿಯೂ ಪಂಜಾಬ್​ ಬ್ಯಾಟಿಂಗ್​ ಬಲವನ್ನೇ ನಂಬಿದೆ. ಕಳೆದೊಂದು ವರ್ಷದಿಂದ ತೀವ್ರ ಬ್ಯಾಟಿಂಗ್​ ಬರ ಎದುರಿಸಿದ್ದ ಜಾನಿ ಬೇರ್​ಸ್ಟೋ ಪ್ರಚಂಡ ಫಾರ್ಮ್​ಗೆ ಮರಳಿದ್ದಾರೆ. ಇದು ಪಂಜಾಬ್​ಗೆ ಆನೆ ಬಲ ಬಂದಂತಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಶಶಾಂಕ್​ ಸಿಂಗ್​ ಮತ್ತು ಅಶುತೋಷ್ ಶರ್ಮಾ ಸಿಡಿಲಬ್ಬರ ಬ್ಯಾಟಿಂಗ್​ ಮೂಲಕ ತಂಡಕ್ಕೆ ನೆರವಾಗಬಲ್ಲರು. ಒಟ್ಟಾರೆಯಾಗಿ ಪಂಜಾಬ್​ಗೆ ಬ್ಯಾಟಿಂಗ್​ಗೇ ಮುಖ್ಯ ಬಲವಾಗಿದೆ.

ಸಂಭಾವ್ಯ ತಂಡಗಳು


ಚೆನ್ನೈ: ಅಜಿಂಕ್ಯ ರಹಾನೆ, ರುತುರಾಜ್ ಗಾಯಕ್ವಾಡ್ (ನಾಯಕ), ಡೆರಿಲ್ ಮಿಚೆಲ್, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆ), ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ರಿಚರ್ಡ್ ಗ್ಲೀಸನ್, ಮತೀಶ ಪತಿರಾಣ.

ಪಂಜಾಬ್​ ಕಿಂಗ್ಸ್​: ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್ (ನಾಯಕ), ರಿಲೀ ರೊಸೊ, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ (ವಿಕೆ), ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್

Exit mobile version