Site icon Vistara News

Asia Cup 2023 : ನಮಗೆ ಲಾಸ್ ಆಗಿದೆ; ದುಡ್ಡು ಕೊಡಿ ಎಂದು ಜಯ್​ ಶಾಗೆ ದುಂಬಾಲು ಬಿದ್ದಿದೆ ಪಾಕಿಸ್ತಾನ!

Asia Cup

ಬೆಂಗಳೂರು: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ನಡುವಿನ ಹಗ್ಗಜಗ್ಗಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇತ್ತೀಚಿನ ಹೊಸ ಬೆಳವಣಿಗೆಯಲ್ಲಿ ಝಾಕಾ ಅಶ್ರಫ್ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ 2023ರಲ್ಲಿ (Asia Cup 2023) ತಮಗೆ ಲಾಸ್ ಆಗಿದೆ. ನಷ್ಟ ಪರಿಹಾರ ಮಾಡಿ ಎಂದ ಒತ್ತಾಯ ಮಾಡಲು ಅರಂಭಿಸಿದೆ. ಶ್ರೀಲಂಕಾದಲ್ಲಿ ನಡೆದ ಪಂದ್ಯಗಳಿಗೆ ಮಳೆಯ ಅಡಚಣೆ ಹಾಗೂ ಜನರು ಬರದ ಕಾರಣ ಎಸಿಸಿಯಿಂದ ಪರಿಹಾರ ನೀಡಬೇಕು ಎಂದು ಕೋರಿದೆ.

ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಇಡೀ ಪಂದ್ಯಾವಳಿಯನ್ನು ತಮ್ಮ ಪಾಕಿಸ್ತಾನದ ನೆಲದಲ್ಲಿ ಆಯೋಜಿಸಲು ಬಯಸಿತ್ತು, ಆದರೆ ಬಿಸಿಸಿಐ ಕಾರ್ಯದರ್ಶಿ ಮತ್ತು ಎಸಿಸಿ ಮುಖ್ಯಸ್ಥ ಜಯ್ ಶಾ ಅವರು ಭಾರತೀಯ ತಂಡವು ಅಲ್ಲಿಗೆ ಪ್ರಯಾಣಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತು. ಈ ವಿಚಾರದಲ್ಲಿ ದೊಡ್ಡ ಗೊಂದಲ ನಡೆಯಿತು. ಈ ಬಗ್ಗೆಯೂ ಮಾತನಾಡಿದ್ದ ಎಸಿಸಿ ಅಧ್ಯಕ್ಷ ಜಯ್​ ಶಾ, ಪ್ರಸಾರಕರು ಮತ್ತು ಇತರ ಹೂಡಿಕೆದಾರರು ಪಾಕಿಸ್ತಾನದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಹಿಂಜರಿಯುತ್ತಿದ್ದಾರೆ ಎಂದಿದ್ದರು

ಏತನ್ಮಧ್ಯೆ, ಭಾರತ ಮತ್ತು ನೇಪಾಳ ನಡುವಿನ ಪಂದ್ಯದ ಸಮಯದಲ್ಲಿ ಪಲ್ಲೆಕೆಲೆಯಲ್ಲಿ ಸಾಕಷ್ಟು ಖಾಲಿ ಆಸನಗಳು ಖಾಲಿ ಬಿದ್ದಿದ್ದವು. ಪಂದ್ಯಾವಳಿಯ ಶ್ರೀಲಂಕಾ ಹಂತವು ಇಲ್ಲಿಯವರೆಗೆ ನಿಜವಾಗಿಯೂ ಕಳಪೆ ಪ್ರೇಕ್ಷಕರನ್ನು ಕಂಡಿದೆ. ಹೀಗಾಗಿ, ಪಿಸಿಬಿ ಈ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದೆ. ಇತರ ಸದಸ್ಯರಿಗೆ ತಿಳಿಸದೆ ಕೊನೆಯ ಕ್ಷಣದಲ್ಲಿ ಸ್ಥಳ ಬದಲಾವಣೆಯ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಎಸಿಸಿ ಅನ್ನು ದೂಷಿಸುತ್ತಿದೆ.

ಮಂಡಳಿ ಸದಸ್ಯರ ಸಭೆ

ನೇಪಾಳ ವಿರುದ್ಧದ ಭಾರತದ ಪಂದ್ಯದ ನಂತರ ಬಿಸಿಸಿಐ, ಎಸ್ಎಸ್​ಸಿ ಮತ್ತು ಪಿಸಿಬಿ ಸದಸ್ಯರ ನಡುವೆ ಸಭೆ ನಡೆಯಿತು ಎಂದು ಅಶ್ರಫ್ ಹೇಳಿದ್ದಾರೆ . ಕೊಲಂಬೊದಿಂದ ಹಂಬಂಟೋಟಕ್ಕೆ ಪಂದ್ಯಗಳನ್ನು ಸ್ಥಳಾಂತರಿಸುವ ಆಲೋಚನೆ ಇತ್ತು. ಎಸಿಸಿ ಇತರರನ್ನು ಸಂಪರ್ಕಿಸದೆ ನಿರ್ಧಾರ ಬದಲಾಯಿಸಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Asia Cup: ಮಾರ್ಗದರ್ಶನ ಕೊರತೆಯಿಂದ ಸೋಲು ಕಂಡ ಅಫಘಾನಿಸ್ತಾನ

ಹಂಬಂಟೋಟ ಒಣ ಪ್ರದೇಶ ಎಂಬ ಮುನ್ಸೂಚನೆ ಇರುವುದರಿಂದ ಕೊಲಂಬೊದಲ್ಲಿನ ಪಂದ್ಯಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಒಪ್ಪಲಾಯಿತು ಎಂದು ಅಶ್ರಫ್ ಪತ್ರದಲ್ಲಿ ಹೇಳಿದ್ದಾರೆ. ಅದರೆ, ಎಸಿಸಿ ಒಪ್ಪಿಲ್ಲ ಎಂದಿದ್ದಾರೆ.

ಪಂದ್ಯಾವಳಿ ಮತ್ತು ಸ್ಥಳಗಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪಾಕಿಸ್ತಾನವನ್ನು ನಡೆಸಿಕೊಳ್ಳುವ ಮತ್ತು ನಿರ್ಲಕ್ಷಿಸಿದ ವಿಧಾನದ ಬಗ್ಗೆ ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ನಿರ್ಧಾರ ಕೈಗೊಳ್ಳುವ ವೇಳೆ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇದರಿಂದ ನಮ್ಮ ಮಂಡಳಿಗೆ ಹಿನ್ನಡೆಯಾಗುತ್ತಿದೆ. ಏಕ ಪಕ್ಷೀಯ ನಿರ್ಧಾರದಿಂದ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ.

ಬಾಂಗ್ಲಾ ವಿರುದ್ಧ ಪಾಕ್​ಗೆ ಜಯ

ಲಾಹೋರ್​: ಏಷ್ಯಾ ಕಪ್ 2023ರಲ್ಲಿ ಭಾರತ ವಿರುದ್ಧದ ಹೈ ವೋಲ್ಟೇಜ್ ಪಂದ್ಯಕ್ಕೆ ಮುಂಚಿತವಾಗಿ ಆತಿಥೇಯ ಪಾಕಿಸ್ತಾನ ತಂಡ ಭರ್ಜರಿ ಜಯವೊಂದನ್ನು ಸಾಧಿಸಿದೆ. ಟೂರ್ನಿಯ ಮೊದಲ ಸೂಪರ್ ಫೋರ್ ಮುಖಾಮುಖಿಯಲ್ಲಿ ಬಾಂಗ್ಲಾದೇಶವನ್ನು 7 ವಿಕೆಟ್​ಗಳಿಂದ ಸೋಲಿಸಿದೆ. ಈ ಮೂಲಕ ಭಾರತ ವಿರುದ್ಧದ ಪಂದ್ಯಕ್ಕೆ ಮೊದಲು ಡ್ರೆಸ್ ರಿಹರ್ಸಲ್ ಸಿಕ್ಕಂತಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡವು 38.4 ಓವರ್​ಗಳಲ್ಲಿ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಾಕಿಸ್ತಾನ ತಂಡ 39.3 ಓವರ್​ಗಳಲ್ಲಿ 194 ರನ್ ಗಳಿಸಿ ಜಯ ಸಾಧಿಸಿತು.a

Exit mobile version