Site icon Vistara News

ಕೆಲವೇ ದಿನಗಳಲ್ಲಿ ನಿರುದ್ಯೋಗಿಗಳಾಗಲಿದ್ದಾರೆ ಪಾಕಿಸ್ತಾನ ಕ್ರಿಕೆಟಿಗರು!

pakistan cricket team

#image_title

ಲಾಹೋರ್​: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಂಬರುವ 2023-2024 ಋತುವಿಗೆ ಆಟಗಾರರ ಕೇಂದ್ರ ಒಪ್ಪಂದಗಳನ್ನು ಪರಿಷ್ಕರಿಸಲು ಮುಂದಾಗಿದೆ. ಆಟಗಾರರ ಹಾಲಿ ಕೇಂದ್ರ ಒಪ್ಪಂದಗಳು ಜೂನ್ 30ರಂದು ಕೊನೆಗೊಳ್ಳಲಿವೆ. ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಹೊಸ ಮುಖಗಳನ್ನು ಗುತ್ತಿಗೆಯಡಿ ತರಲು ಮುಂದಾಗಿದೆ. ಹೀಗಾಗಿ ಹಲವಾರು ಪಾಕಿಸ್ತಾನದ ಹಲವಾರು ಕ್ರಿಕೆಟಿಗರು ನಿರುದ್ಯೋಗಿಗಳಾಗಬಹುದು ಎಂದು ಹೇಳಲಾಗುತ್ತಿದೆ!

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಮತ್ತು ಇತರ ಹಿರಿಯ ಕ್ರಿಕೆಟಿಗರೊಂದಿಗೆ ಮಾತುಕತೆ ನಡೆಸಿದ ಬಳಿಕ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹಲವಾರು ಆಟಗಾರರ ಬಡ್ತಿ ನೀಡಲು ಹಾಗೂ ಇನ್ನೂ ಕೆಲವರಿಗೆ ಹಿಂಬಡ್ತಿ ನೀಡಲು ಉದ್ದೇಶಿಸಿದೆ ಎಂದು ಹೇಳಲಾಗಿದೆ.

ಒಪ್ಪಂದಗಳಲ್ಲಿನ ಮಾರ್ಪಾಡುಗಳು ಆಟಗಾರರ ವೇತನ ಹೆಚ್ಚಳಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ಒಪ್ಪಂದದಲ್ಲಿರುವ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿ ನಜಾಮ್ ಸೇಥಿ ನೇತೃತ್ವದ ಪಿಸಿಬಿ ನಿರ್ವಹಣಾ ಸಮಿತಿಗೆ ನೀಡಲಾಗಿದೆ. ರೆಡ್-ಬಾಲ್ ಮತ್ತು ವೈಟ್-ಬಾಲ್ ಕ್ರಿಕೆಟ್​​​ಗೆ ಪ್ರತ್ಯೇಕ ಒಪ್ಪಂದಗಳನ್ನು ಮಾಡಿಕೊಳ್ಳುವ ಸಾಧ್ಯತೆಗಳಿವೆ. ಬಿಸಿಸಿಐ ಮಾದರಿಯಲ್ಲೇ ಒಪ್ಪಂದಗಳನ್ನು ಎ, ಬಿ ಮತ್ತು ಸಿ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಅನುಭವಿ ಬ್ಯಾಟ್ಸ್​​ಮನ್​ ಅಜರ್​ ಅಲಿ ನಿವೃತ್ತಿಯ ಘೋಷಿಸಿರುವ ಕಾರಣ ಇನ್ನು ಮುಂದೆ ಕೇಂದ್ರ ಗುತ್ತಿಗೆ ಆಟಗಾರರ ಪಟ್ಟಿಯಲ್ಲಿ ಇರುವುದಿಲ್ಲ. ಇದಲ್ಲದೆ, ಫವಾದ್ ಆಲಂ, ಹೈದರ್ ಅಲಿ, ಅಬಿದ್ ಅಲಿ, ಯಾಸಿರ್ ಶಾ, ನೌಮನ್ ಅಲಿ, ಖುಶ್ದಿಲ್ ಶಾ, ಉಸ್ಮಾನ್ ಖಾದಿರ್ ಮತ್ತು ಜಾಹಿದ್ ಮೆಹಮೂದ್ ಅವರಂತಹ ಆಟಗಾರರು ಗುತ್ತಿಗೆಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಇವೆರೆಲ್ಲರೂ ಅವಕಾಶ ವಂಚಿತರಾಗಲಿದ್ದಾರೆ.

ಇದನ್ನೂ ಓದಿ : Asia Cup 2023 : ಪಾಕಿಸ್ತಾನ ತಂಡವನ್ನು ಹೊರಗಿಟ್ಟು ಏಷ್ಯಾ ಕಪ್​ ಆಯೋಜಿಸಲು ಜಯ್​ ಶಾ ಯೋಜನೆ

ಶದಾಬ್ ಖಾನ್, ಫಖರ್ ಜಮಾನ್, ಮೊಹಮ್ಮದ್ ರಿಜ್ವಾನ್, ಶಾಹೀನ್ ಅಫ್ರಿದಿ ಮತ್ತು ಬಾಬರ್ ಅಜಮ್ ಎ ವಿಭಾಗದಲ್ಲಿ ಉಳಿಯುವ ನಿರೀಕ್ಷೆಯಿದೆ. ವೇಗದ ಬೌಲರ್​ಗಳಾದ ನಸೀಮ್ ಶಾ ಮತ್ತು ಹ್ಯಾರಿಸ್ ರವೂಫ್ ಅವರಿಗೆ ಬಡ್ತಿ ನೀಡುವ ನಿರೀಕ್ಷೆಯಿದೆ. ನಸೀಮ್ ಶಾ ಅವರು ಟೆಸ್ಟ್​ ಮತ್ತು ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಅವಕಾಶ ಪಡೆಯಲಿದ್ದಾರೆ. ಇಫ್ತಿಕರ್ ಅಹ್ಮದ್, ಸೈಮ್ ಅಯೂಬ್, ಇಹ್ಸಾನುಲ್ಲಾ, ಉಸಾಮಾ ಮಿರ್, ಮೊಹಮ್ಮದ್ ಹ್ಯಾರಿಸ್ ಮತ್ತು ಜಮಾನ್ ಖಾನ್ ಗುತ್ತಿಗೆ ಪಟ್ಟಿಯಲ್ಲಿದ್ದಾರೆ. ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಕೂಡ ಸೀಮಿತ ಓವರ್​​ಗಳ ಕ್ರಿಕೆಟ್​​ನಲ್ಲಿ ಗುತ್ತಿಗೆ ಕಳೆದುಕೊಳ್ಳಲಿದ್ದಾರೆ.

Exit mobile version