Site icon Vistara News

Ind vs Pak : ಸೋತರೂ ಬಿಡದ ಹುಂಬತನ; ಭಾರತ ವಿರುದ್ಧವೇ ದೂರು ನೀಡಿದ ಪಾಕಿಸ್ತಾನ

Pakistan Cricket team

ಬೆಂಗಳೂರು: ಅಹಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಕಪ್ (Ind vs Pak) ಪಂದ್ಯದಲ್ಲಿ ಪಾಕಿಸ್ತಾನ ತಂಡ ಹೀನಾಯ ಸೋಲಿಗೆ ಒಳಗಾಗಿದೆ. ಆದಾಗ್ಯೂ ಆ ದೇಶದ ಜಂಬಕ್ಕೆ ಕೊರತೆಯಾಗಿಲ್ಲ. ಕುಣಿಯಲು ಬಾರದವನು ನೆಲ ಡೊಂಕು ಎಂದು ಹೇಳಿದಂತೆ, ಇದೀಗ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿಗೆ ದೂರು ನೀಡಿದೆ. ಪಂದ್ಯ ನಡೆದ ಜಾಗ ನಮ್ಮ ತಂಡಕ್ಕೆ ಪೂರಕವಾಗಿರಲಿಲ್ಲ ಎಂದು ಕಣ್ಣೀರು ಹಾಕಲು ಶುರು ಮಾಡಿದೆ. ಭಾರತ ಮತ್ತು ಪಾಕಿಸ್ತಾನ ವಿಶ್ವಕಪ್ 2023 ಪಂದ್ಯದ ಸಮಯದಲ್ಲಿ ಪಾಕಿಸ್ತಾನ ತಂಡವನ್ನು ಗುರಿಯಾಗಿಸಿಕೊಂಡು ಅನುಚಿತ ತೋರಲಾಗಿದೆ ಎಂಬುದಾಗಿಯೂ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ಅಧಿಕೃತ ದೂರು ಸಲ್ಲಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಂಗಳವಾರ (ಅಕ್ಟೋಬರ್ 17) ಈ ಮಾಹಿತಿಯನ್ನು ದೃಢಪಡಿಸಿದೆ.

ಪಂದ್ಯದ ವೇಳೆ ಪಾಕಿಸ್ತಾನವು ಭಾರತದ ವಿರುದ್ಧ ಏಳು ವಿಕೆಟ್​​ಗಳ ಅವಮಾನಕರ ಸೋಲನ್ನು ಅನುಭವಿಸಿದ ಘಟನೆಯ ನಿಖರ ಸ್ವರೂಪವನ್ನು ಪಿಸಿಬಿ ಉಲ್ಲೇಖಿಸಿಲ್ಲ. ಆದರೆ ಪಾಕಿಸ್ತಾನಿ ಪತ್ರಕರ್ತರಿಗೆ ವೀಸಾ ವಿಳಂಬ ಮತ್ತು ಪಾಕಿಸ್ತಾನ ಅಭಿಮಾನಿಗಳಿಗೆ ವೀಸಾ ನೀಡದ ಬಗ್ಗೆ ಬಗ್ಗೆ ‘ಔಪಚಾರಿಕ ಪ್ರತಿಭಟನೆ’ ದಾಖಲಿಸಿರುವುದಾಗಿ ಪಿಸಿಬಿ ಹೇಳಿದೆ.

ಪಾಕಿಸ್ತಾನಿ ಪತ್ರಕರ್ತರಿಗೆ ವೀಸಾ ನೀಡುವಲ್ಲಿ ವಿಳಂಬ ಮತ್ತು 2023 ರ ವಿಶ್ವಕಪ್​​ಗೆ ಪಾಕಿಸ್ತಾನದ ಅಭಿಮಾನಿಗಳಿಗೆ ಅನುಸರಿಸಲಾದ ವೀಸಾ ನೀತಿಯ ಅನುಪಸ್ಥಿತಿಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿಗೆ ಮತ್ತೊಂದು ಔಪಚಾರಿಕ ಪ್ರತಿಭಟನೆಯನ್ನು ದಾಖಲಿಸಿದೆ” ಎಂದು ಪಿಸಿಬಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದೆ.

ಈ ಸುದ್ದಿಗಳನ್ನೂ ಓದಿ
Shikhar Dhawan : ಡೈವೋರ್ಸ್ ಬಳಿಕ ಮಗನೊಂದಿಗೆ ವಿಡಿಯೊ ಕಾಲ್​ ಮಾಡಿ ಭಾವುಕರಾದ ಧವನ್​​
Rohit Sharma : ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಬೌಲಿಂಗ್ ಮಾಡ್ತಾರಾ ರೋಹಿತ್​?
ICC World Cup 2023 : ಭಾರತ ವಿರುದ್ಧ ಸೋತು ಕಂಗೆಟ್ಟ ಪಾಕ್​ ತಂಡಕ್ಕೆ ಜ್ವರದ ಬಾಧೆ!

“2023 ರ ಅಕ್ಟೋಬರ್ 14 ರಂದು ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಸಮಯದಲ್ಲಿ ಪಾಕಿಸ್ತಾನ ತಂಡವನ್ನು ಗುರಿಯಾಗಿಸಿಕೊಂಡು ಅನುಚಿತ ವರ್ತನೆಯ ಬಗ್ಗೆ ಪಿಸಿಬಿ ದೂರು ದಾಖಲಿಸಿದೆ” ಎಂದು ಆಡಳಿತ ಮಂಡಳಿ ಹೇಳಿದೆ.

ಅಹ್ಮದಾಬಾದ್​​ನಲ್ಲಿ ನಡೆದ ಪಂದ್ಯದಲ್ಲಿ ಭಾಗವಹಿಸಿದ್ದ ಪಿಸಿಬಿಯ ನಿರ್ವಹಣಾ ಸಮಿತಿ ಅಧ್ಯಕ್ಷ ಝಾಕಾ ಅಶ್ರಫ್ ಅವರು ತಮ್ಮ ಭಾರತ ಭೇಟಿಯ ಬಗ್ಗೆ ಚರ್ಚಿಸಲು ಪಿಸಿಬಿಯ ಹಿರಿಯ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. “ಭಾರತ ವಿರುದ್ಧದ ಪಂದ್ಯದ ವೇಳೆ ಝಾಕಾ ಅಶ್ರಫ್ ಸ್ವತಃ ಅಹಮದಾಬಾದ್​ನಲ್ಲಿ ಹಾಜರಿದ್ದರು. ಅವರು ಕೆಲವು ಘಟನೆಗಳಿಗೆ ಸಾಕ್ಷಿಯಾಗಿದ್ದಾರೆ. ಅವರು ಅಲ್ಲಿದ್ದಾಗ ಭಾರತೀಯ ಕ್ರಿಕೆಟ್ ಅಧಿಕಾರಿಗಳ ಆತಿಥ್ಯದ ಹೊರತಾಗಿಯೂ ಅವರು ಅಸಮಾಧಾನಗೊಂಡಿದ್ದಾರೆ” ಎಂದು ಮೂಲವನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಅಧ್ಯಕ್ಷರು ಪ್ರಸ್ತುತ ತಮ್ಮ ಭೇಟಿಯ ಬಗ್ಗೆ ತಮ್ಮ ಹಿರಿಯ ಸಹಾಯಕರೊಂದಿಗೆ ಮಾತ್ರ ಚರ್ಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತ ವಿರುದ್ಧದ ಪಂದ್ಯದ ನಂತರ, ಪಾಕಿಸ್ತಾನ ತಂಡದ ನಿರ್ದೇಶಕ ಮಿಕಿ ಆರ್ಥರ್ ಪ್ರೇಕ್ಷಕರ ನಡವಳಿಕೆ ಮತ್ತು ತಮ್ಮ ತಂಡದ ಮೇಲೆ ಅದರ ಪರಿಣಾಮದ ಬಗ್ಗೆ ಮಾತನಾಡಿದ್ದರು. ಇದು ಐಸಿಸಿ ಕಾರ್ಯಕ್ರಮಕ್ಕಿಂತ ಹೆಚ್ಚಾಗಿ ಬಿಸಿಸಿಐ ಆಯೋಜಿಸಿದ ದ್ವಿಪಕ್ಷೀಯ ಸರಣಿ ಪಂದ್ಯದಂತೆ ಭಾಸವಾಯಿತು ಎಂದು ಅವರು ಹೇಳಿಕೆ ನೀಡಿದ್ದರು.

ಭಾರತದ ವಿರುದ್ಧ ತಂಡದ ಕಳಪೆ ಪ್ರದರ್ಶನದಿಂದ ಝಾಕಾ ಅಶ್ರಫ್ ಸಂಪೂರ್ಣವಾಗಿ ನಿರಾಶೆಗೊಂಡಿದ್ದಾರೆ ಮತ್ತು ಅಹಮದಾಬಾದ್ ಸೋಲನ್ನು ಮರೆಯುವಂತೆ ಆಟಗಾರರಿಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Exit mobile version